ಯಾದಗಿರಿ ಹೂಡಿಕೆ ಸಮಾವೇಶದ ಸಮರ್ಥ ತಾಣ

Team YS

0

• 45 ಸರ್ಕಾರಿ ಮಂಜೂರಾತಿ ಯೋಜನೆಗಳು

• 13,500 ಕೋಟಿ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮತಿ

ಬೆಂಗಳೂರು: ಭವಿಷ್ಯದಲ್ಲಿ ಉತ್ತರ ಕರ್ನಾಟಕ ಕೈಗಾರಿಕಾ ಕಾಶಿಯಾಗಿ ಅಭಿವೃಧಿಯಾಗಲಿದೆ. ಅದರ ಮುನ್ನುಡಿಯೇ ಈ ಬಾರಿಯ ಇನ್ವೆಸ್ಟ್ ಕರ್ನಾಟಕ. ಸಮಗ್ರ ಅಭಿವೃದ್ಧಿ ಮತ್ತು ಒತ್ತಡ ನಿವಾರಣೆಗಾಗಿ ರಾಜಧಾನಿ ಬೆಂಗಳೂರಿನಿಂದ ಕೈಗಾರಿಕ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ಬಂಡವಾಳ ಹೂಡಿಕೆದಾರರನ್ನು ಇಡೀ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಉತ್ತೇಜಿಸಲಾಗುತ್ತಿದೆ. ಇಡೀ ರಾಜ್ಯದ ಅಭಿವೃದ್ಧಿಗಾಗಿ ಎರಡನೇ ಮತ್ತು ಮೂರನೇ ವಲಯದ ನಗರಗಳ ಅಭಿವೃದ್ಧಿ ಮತ್ತು ಹೂಡಿಕೆಗಾಗಿ ಆಯ್ಕೆ ಮಾಡಲಾಗುತ್ತಿದೆ.

ಬೆಂಗಳೂರು ಮಾತ್ರವಲ್ಲದೇ ಚಿತ್ರದುರ್ಗ-ದಾವಣಗೆರೆ, ಹುಬ್ಬಳಿ-ಧಾರವಾಡ, ಮತ್ತು ಬೆಳಗಾವಿ ಜಿಲ್ಲೆಗಳನ್ನು ಮುಂಬೈ ಕೈಗಾರಿಕಾ ಕಾರಿಡಾರ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ. ಇದಕ್ಕಾಗಿ ಉತ್ತರ ಕರ್ನಾಟಕದ ಯಾದಗಿರಿಯಲ್ಲಿ ಸರ್ಕಾರ 3232 ಎಕರೆ ಜಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಜಾಗದಲ್ಲಿ 1000 ಎಕರೆಯಲ್ಲಿ ಜವಳಿ ಉದ್ಯಮ ಪಾರ್ಕ್, ಮತ್ತು 500 ಎಕರೆಯಲ್ಲಿ ಔಷಧಿ ಉದ್ಯಮದ ಕೈಗಾರಿಕೆಗಳ ಸ್ಥಾಪನೆಗೆ ಮೀಸಲಿರಿಸಲಾಗಿದೆ.

ಈ ಎಲ್ಲ ಸಕಾರಾಕತ್ಮಕ ನಡೆ ಹೂಡಿಕೆದಾರರನ್ನು ಇನ್ನಿಲ್ಲದಂತೆ ಭಾರೀ ಪ್ರಮಾಣದಲ್ಲಿ ಸೆಳೆಯುತ್ತಿದೆ. ಪೂರಕವಾಗಿ ಸ್ಪಂದಿಸಿರುವ ಸರ್ಕಾರ 13,500 ಕೋಟಿ ಮೌಲ್ಯದ ಬೃಹತ್ ಯೋಜನೆಗಳಿಗೆ ಒಪ್ಪಿಗೆ ನೀಡಿದೆ. ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಆರಂಭವಾಗಿವೆ.

12145 ಉದ್ಯೋಗ ಸೃಷ್ಟಿ

ಅತಿ ಹಿಂದುಳಿದ ಪ್ರದೇಶ ಎಂದೇ ಹೆಸರಾಗಿರುವ ಯಾದಗಿರಿಯಲ್ಲಿ ಜವಳಿ ಉದ್ಯಮದ ಪಾರ್ಕ್ ನಿರ್ಮಾಣವಾಗುತ್ತಿರುವುದರಿಂದ ದುರ್ಬರ ಸ್ಥಿತಿಯಲ್ಲಿರುವ ಹತ್ತಿಬೆಳೆಯುವ ರೈತರಿಗೆ ಮತ್ತು ನೇಕಾರರಿಗೆ ಭಾರೀ ಪ್ರಮಾಣದಲ್ಲಿ ಅನುಕೂಲಕರವಾಗಲಿದೆ. ಈ ಒಂದು ಹೂಡಿಕೆಯಿಂದಲೇ ರಾಜ್ಯದಲ್ಲಿ 12145 ಉದ್ಯೋಗಗಳು ಸೃಷ್ಟಿಯಾಗಲಿವೆ. ಇದೆಲ್ಲದಕ್ಕೂ ಕಳಸಪ್ರಾಯದಲ್ಲಿ ಯಾದಗಿರಿಯಲ್ಲಿ ಭಾರಿ ಪ್ರಮಾಣದ ಹೈ ಟೆಕ್ ಜವಳಿ ತರಬೇತಿ ಕೇಂದ್ರವನ್ನು ಯಾದಗಿರಿ ಜಿಲ್ಲೆಯಲ್ಲಿಯೇ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಈ ಕೇಂದ್ರವನ್ನು ಜಿಲ್ಲೆಯ ಬಂಡಹಳ್ಳಿಯಲ್ಲಿ ಸುಮಾರು 10 ಕೋಟಿ ರೂ ವೆಚ್ಚದಲ್ಲಿ ಐದು ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

ಮಂಜೂರಾಗಿರುವ ಪ್ರಮುಖ ಯೋಜನೆಗಳು:

• ರೈಲು ಬೋಗಿ ನಿರ್ಮಾಣ ಘಟಕ ನಿರ್ಮಾಣ, 150 ಎಕರೆ ಜಾಗ ಹಸ್ತಾಂತರ

• ಹೈದರಾಬಾದ್ ಮೂಲದ 40 ಕ್ಕೂ ಹೆಚ್ಚು ಔಷದಿ ಉದ್ದಿಮೆ ಕಂಪನಿಗಳಿಗೆ ಜಾಗ ನಿಗದಿ

• ಹಿಂದೂಸ್ಥಾನ್ ಕೋಕಾಕೋಲ ಕಂಪನಿಯ ಯೋಜನೆಗೆ 250 ಎಕರೆ ಜಾಗ ನಿಗದಿ ಮಂಜೂರು

• ಎಂಫೈನಟ್ ಸಲ್ಯೂಷನ್ಸ್ (ಪೆಟ್ ಬಾಟಲ್ ಉತ್ಪಾದನೆಗಾರರು) ಕಂಪನಿ 490 ಕೋಟಿ ಹೂಡಿಕೆ ಮಾಡಲಿದೆ. 125 ಎಕರೆ ಜಾಗ ನೀಡಲಾಗಿದೆ

• ಹೈಗ್ರೋ ಕೆಮಿಕಲ್ಸ್ ಕಂಪನಿಗೆ 10 ಎಕರೆ ಜಾಗ ನಿಗದಿ ಪಡಿಸಲಾಗಿದೆ

• ಫುಡ್‍ಪಾರ್ಕ್‍ನಲ್ಲಿ ಜ್ಹವಾರ್ ಫುಡ್ಸ್ ಕಂಪನಿಗೆ 100 ಎಕರೆ ಜಾಗ ಮಂಜೂರು ಮಾಡಲಾಗಿದೆ.

• ಕಲ್ಯಾಣಿ ಸ್ಟೀಲ್ ಕಂಪನಿಗೆ ಸ್ಟೀಲ್ ಕಾರ್ಖಾನೆಯ 12000 ಕೋಟಿ ಹೂಡಿಕೆಯ ಯೋಜನೆಗೆ ಒಪ್ಪಂದವಾಗಿದೆ.

ಅನುಷ್ಠಾನದ ಹಾದಿಯಲ್ಲಿರುವ ಯೋಜನೆಗಳು

• ಸಿಪೆಟ್ ( ಸೆಂಟರ್ ಫಾರ್ ದಿ ಸೆಂಟ್ರಲ್ ಇನ್ಸ್‍ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಇಂಜನೀಯರಿಂಗ್ ಅಂಡ್ ಟೆಕ್ನಾಲಜಿ ಕರ್ನಾಟಕ ರಸಗೊಬ್ಬರ ತಯಾರಿಕೆ, ಔಷಧಿ ತಯಾರಿಕ ಘಟಕ, ಮತ್ತು ಸಂಶೋಧನಾ ಸಂಸ್ಥೆಯೊಂದನ್ನು ಸ್ಥಾಪಿಸಲು ಉದ್ದೇಶಿಸಿದೆ. ಔಷಧಿ ಘಟಕ ಸ್ಥಾಪನೆಗೆ ಸರ್ಕಾರ ಜಾಗ ನಿಗದಿ ಮಾಡಬೇಕಿದ್ದು, ರಸಗೊಬ್ಬರ ಘಟಕ ಸ್ಥಾಪನೆಗೆ ಜಾಗ ನಿಗದಿ ಪಡಿಸಬೇಕಿದ್ದು, ಯಾದಗಿರಿಯಲ್ಲಿ ಔಷಧಿ ತಯಾರಿಕ ಘಟಕ ಸ್ಥಾಪನೆಗೆ ಹೆಚ್ಚು ಒತ್ತು ನೀಡಲಾಗಿದೆ.

ಹೈದರಾಬಾದ್ ಉತ್ಸುಕ: ಕೈಗಾರಿಕಾ ಸ್ನೇಹಿ ಯಾದಗಿರಿಯಲ್ಲಿ ಬಂಡವಾಳ ಹೂಡಿಕೆ ಮಾಡಲು ಹೈದರಾಬಾದ್ ರಾಜ್ಯ ಹೆಚ್ಚು ಉತ್ಸುಕವಾಗಿದೆ. ಬಹುತೇಕ ಕಂಪನಿಗಳು ಯಾದಗಿರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿವೆ. ಈ ಹೂಡಿಕೆದಾರರಿಗೆ ಕೈಗಾರಿಕೆ ನೀತಿಯ ಮೂಲಕ ರಾಜ್ಯ ಸರ್ಕಾರ ಹೆಚ್ಚು ಪ್ರೋತ್ಸಾಹ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ಸಿಂಗಲ್ ವಿಂಡೋ ಮೂಲಕ ಹೂಡಿಕೆದಾರರಿಗೆ 10 ಇಲಾಖೆಗಳು ಒಂದೇ ಕಡೆ ಇದ್ದು, ಬೇಕಾದ ತಾಂತ್ರಿಕ ನೆರವು ನೀಡಲು ಸೂಚಿಸಿದೆ. ಇದರಿಂದ ಆನ್‍ಲೈನ್‍ನಲ್ಲಿಯೇ ಎಲ್ಲ ಮಂಜೂರಾತಿಗಳು ಹೂಡಿಕೆದಾರರಿಗೆ ನೇರವಾಗಿ ಸಿಗಲಿವೆ. ಕರ್ನಾಟಕ ಕೈಗಾರಿಕ ಅಭಿವೃದ್ಧಿ ಮಂಡಳಿ ವೆಬ್‍ಸೈಟ್ ಆರಂಭಿಸಿದ್ದು, ಎಲ್ಲ ಮಾಹಿತಿಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಕಂಪನಿಗೆಗಳಿಗೆ ಕೊಡಬಹುದಾದ ಜಾಗದ ಸರ್ವೆ ನಂಬರ್ ಸೇರಿ ಎಲ್ಲ ಮಾಹಿತಿಯೂ ಇದರಲ್ಲಿವೆ.

ಮುಖ್ಯಾಂಶಗಳು

12145 ಉದ್ಯೋಗ ಸೃಷ್ಟಿಯಾಗಲಿವೆ

ಜವಳಿ ಮತ್ತು ಸಿದ್ಧ ಉಡುಪು ತಯಾರಿಕಾ ಉದ್ದಿಮೆಯಲ್ಲಿ ಪಾರಮ್ಯ ಗುರಿ

ಔಷಧಿ ಮತ್ತು ರಸಗೊಬ್ಬರ ಉತ್ಪಾದನಾ ಘಟಕಗಳೇ ಆದ್ಯತೆ

ನೆರೆಯ ಹೈದರಾಬಾದ್ ರಾಜ್ಯವೇ ಪ್ರಮುಖ ಗುರಿ

ಸಿಂಗಲ್ ವಿಂಡೋ ಮೂಲಕ ಉದ್ದಿಮೆದಾರ ಕಂಪನಿಗಳಿಗೆ ನೆರವು

ಬಾಕ್ಸ್

ಇನ್ವೆಸ್ಟ್ ಕರ್ನಾಟಕ

ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆ ಸಮಾವೇಶವಾಗಿದೆ. ವಿಶ್ವದ ಎಲ್ಲ ಕಡೆಯಿಂದ ಹೂಡಿಕೆದಾರರು ಈ ಸಮಾವೇಶಕ್ಕೆ ಬರಲಿದ್ದಾರೆ. ತಮ್ಮ ಹೂಡಿಕೆಗೆ ಇರುವ ಸಮರ್ಥ ಶಕ್ತಿ, ಪ್ರಮಾಣ, ಅವಕಾಶಗಳು,ಮತ್ತು ವಲಯಗಳು,ವಿಭಾಗಗಳು ಕುರಿತಂತೆ ಸಮಗ್ರವಾಗಿ ಇಲ್ಲಿ ಪ್ರದರ್ಶನ ಮಾಡಲಿದ್ದಾರೆ. ಇವರೊಂದಿಗೆ ಸರ್ಕಾರದ ಸಹಭಾಗಿತ್ವ, ಹೂಡಿಕೆ ಒಪ್ಪಂದಗಳ ಅವಕಾಶಗಳು, ಪರಸ್ಪರ ವಿನಿಮಯವಾಗಲಿವೆ. ಈಗಾಗಲೆ ಹೂಡಿಕೆ ಸಮಾವೇಶ ಹೂಡಿಕೆದಾರರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಅವರಿಗೆ ಅನುಕೂಲವಾಗಲೆಂದೇ ವೆಬ್‍ಸೈಟ್, ಲೋಗೋವನ್ನು ಪೂರ್ವಭಾವಿಯಾಗಿ ಬಿಡುಗಡೆ ಮಾಡಲಾಗಿದೆ. ಗುಂಪು, ಮತ್ತು ವೈಯಕ್ತಿಕ ಚರ್ಚೆಗಳು, ಸಭೆಗಳು, ರಸ್ತೆ ಮೆರವಣಿಗೆಗಳನ್ನು ಮಾಡಿ ಎಲ್ಲರಲ್ಲಿ ಸಮಾವೇಶದ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸಲಾಗಿದೆ. ಇದು ಕರ್ನಾಟಕವನ್ನು ಸಮರ್ಥ ಹೂಡಿಕೆಯ ತಾಣವಾಗಿ ಬಿಂಬಿಸಲು ಯಶಸ್ವಿಯಾಗಿದೆ.