ಬಂಡವಾಳ ಹೂಡಿಕೆ ಮರೆತುಬಿಡಿ. 3ಡಿ ಪ್ರಿಂಟಿಂಗ್‍ಗೆ ಭಾರತ ಸರ್ಕಾರ ಹಣಕಾಸು ಸಹಾಯ ಮಾಡಲಿದೆ

ಟೀಮ್​​ ವೈ.ಎಸ್​. ಕನ್ನಡ

0

ಹೆಚ್ಚಿನ ಸ್ಟಾರ್ಟ್‍ಅಪ್‍ಗಳು ಹೆಚ್ಚು ಮೊತ್ತದ ಬಂಡವಾಳ ಹೂಡಿಕೆ ಎದುರುನೋಡುತ್ತಿರುತ್ತದೆ. ಇವರ ಮಧ್ಯದಲ್ಲಿ ಡಿಎಫ್3ಡಿ ಬೇರೆಯದ್ದಾಗಿಯೇ ನಿಲ್ಲುತ್ತದೆ. 2014ರ ಟೆಕ್ ಸ್ಪಾರ್ಕ್‍ನಲ್ಲಿ ಪ್ರಾರಂಭಗೊಂಡ 30 ಸ್ಟಾರ್ಟ್‍ಅಪ್‍ಗಳಲ್ಲಿ ಬೆಂಗಳೂರು ಮೂಲದ ಡಿಸೈನ್ ಫ್ಯಾಕ್ಟರಿ ಫಾರ್ 3ಡಿ ಪ್ರಿಂಟಿಂಗ್ ಸಹ ಒಂದು. ಒಂದು ವರ್ಷದ ನಂತ್ರ ವಿಶ್ವಕ್ಕೆ ಡಿಎಫ್3ಡಿ ವಿಶೇಷ ಕತೆಯೊಂದನ್ನು ಹೇಳುತ್ತಿದೆ. ಡಿಎಫ್3ಡಿ ಗೆ ಭಾರತ ಸರ್ಕಾರ ಬೆಂಬಲಿಸಿದೆ.

24ವರ್ಷಗಳ ಹಿಂದೆಯೇ ಅಮೆರಿಕಾದಲ್ಲಿ 3ಡಿ ಪ್ರಿಂಟಿಂಗ್ ಪ್ರಾರಂಭವಾಗಿದೆ. ಭಾರತದಲ್ಲೂ ಇದು ಹೊಸದಲ್ಲ. ಆದ್ರೆ ಜನರು ಈ ಕಲ್ಪನೆಗೆ ಸ್ವಾಗತ ಕೋರಿರಲಿಲ್ಲ. ಬಿ2ಸಿನಲ್ಲಿ ಮೊದಲ ಮಾರ್ಕೆಟ್ ಸ್ಥಳವಾಗಿ ಶುರುವಾದ ಸಂಸ್ಥೆ ಹೆಚ್ಚಿನ ಬಂಡವಾಳ ನಿರೀಕ್ಷೆಯಲ್ಲಿ ಆರು ತಿಂಗಳಲ್ಲಿ ಬಿ2ಬಿ ಆಗಿ ಪರಿವರ್ತನೆಗೊಂಡಿತು ಎನ್ನುತ್ತಾರೆ ಡಿಎಫ್3ಡಿ ಸ್ಥಾಪಕ ಉದ್ಯಮಿ ದೀಪಕ್ ರಾಜ್. ಜಿಇ ಸಾಫ್ಟ್​​​ ವೇರ್ಸ್‍ನ ಮಾಜಿ ಉದ್ಯೋಗಿ ದೀಪಕ್‍ಗೆ ಸಾಫ್ಟ್​​​ವೇರ್ ಮತ್ತದರ ಮಾರುಕಟ್ಟೆಯಲ್ಲಿ 22 ವರ್ಷಗಳ ಅನುಭವವಿದೆ. ಮುಂದೊಂದು ದಿನ ಪ್ರಿಂಟಿಂಗ್ ಅನ್ನೋದು ಅಗತ್ಯ ಸರಕಾಗುತ್ತದೆ ಎಂದು ದೀಪಕ್ ತಿಳಿದಿದ್ದರು.

“3ಡಿ ಪ್ರಿಂಟಿಂಗ್‍ನಲ್ಲಿ ಸುಮಾರು 25 ಆಟಗಾರರು ಭಾರತದಲ್ಲಿದ್ದಾರೆ. ಇವರು ಉತ್ಪಾದನೆ ಮತ್ತು ಮೆಕಾಟ್ರಾನಿಕ್ಸ್​​​ನೆಡೆ ಗಮನ ಕೇಂದ್ರೀಕರಿಸಿದ್ದಾರೆ. ನಾವು ವಿನ್ಯಾಸ ಮತ್ತು ಮಾದರಿ ವಸ್ತು ಉತ್ಪಾದನೆಗೆ ಸಾಫ್ಟ್​​​ವೇರ್ ಹಾಗೂ ಗ್ರಾಹಕರ ಸ್ವ-ಇಚ್ಛೆಯುಳ್ಳ ವಸ್ತುಗಳ ಅಭಿವೃದ್ಧಿ ಕಡೆ ಗಮನ ಹರಿಸಿದ್ದೇವೆ” ಎನ್ನುತ್ತಾರೆ ದೀಪಕ್. ಇವರಿಗೆ ಬಾಹ್ಯ ಹೂಡಿಕೆ ಇಲ್ಲದಿದ್ದರೂ, ಬಿ2ಬಿಗೆ ಬದಲಾದ ಕೆಲವೇ ತಿಂಗಳಲ್ಲಿ ತಮಗೆ ತಾವೇ ಹೂಡಿಕೆ ಸೃಷ್ಟಿಸಲು ಸಾಧ್ಯವಾಯಿತು. ನಂತ್ರ ಶಸ್ತ್ರಚಿಕಿತ್ಸೆಗೆ 3ಡಿ ಪ್ರಿಂಟಿಂಗ್ ಮಾಡಿಕೊಡೋ ಓಸ್ಟೆಯೋ3ಡಿ ಕಂಪನಿಯನ್ನು ಡಿಎಫ್3ಡಿ ಪ್ರಾರಂಭಿಸಿದರು. 2015 ಮಾರ್ಚ್‍ನಲ್ಲಿ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ವಿಭಾಗಡಿ ಎಫ್3ಡಿಗೆ 50ಲಕ್ಷ ಅನುದಾನ ಕೊಟ್ಟಾಗ ಇದು ಬೆಳಕಿಗೆ ಬಂತು.

ಓಸ್ಟೆಯೋ3ಡಿಗೆ ಈಗಾಗಲೇ 38 ಪ್ರಕರಣಗಳಿಗೆ ಸಂಬಂಧಿಸಿದ ಕೆಲಸಗಳು ಇದೆ. ತಲೆಬುರುಡೆ, ಅಸ್ಥಿ ಚಿಕಿತ್ಸೆ, ಮುಖದ ಸುರೂಪ ಚಿಕಿತ್ಸೆಯ ಕಾರ್ಯವಿಧಾನಕ್ಕೆ ಇವರು 3ಡಿ ಪ್ರಿಂಟಿಂಗ್ ಕೊಡುತ್ತಿದ್ದಾರೆ. ಉದಾಹರಣೆಗೆ ದವಡೆ ಮೂಳೆ ಚಿಕಿತ್ಸೆಯಲ್ಲಿ ಸರಿಯಾದ ವಿನ್ಯಾಸದ ಮಾದರಿಯನ್ನು ಓಸ್ಟೆಯೋ3ಡಿ ಪ್ರಿಂಟ್ ಮಾಡಿಕೊಟ್ಟಾಗ, ಅದನ್ನು ಶಸ್ತ್ರಚಿಕಿತ್ಸಕರು ದವಡೆಯ ಸ್ಥಾನದಲ್ಲಿಟ್ಟು ಪರೀಕ್ಷಿಸುತ್ತಾರೆ. ಇಂತಹ ಮಾದರಿಗಳಿಗೆ ವಿದೇಶದಲ್ಲಿ 1.20 ಲಕ್ಷ ಬೆಲೆಯಾದ್ರೆ, ಓಸ್ಟೆಯೋ3ಡಿ ಇದನ್ನು 30 ಸಾವಿರಕ್ಕೆ ಮಾಡುತ್ತದೆ. ಇದರ ಬೆಲೆಯನ್ನು ಮತ್ತಷ್ಟು ತಗ್ಗಿಸೋ ಯೋಜನೆಯೂ ಇದೆ ಎನ್ನುತ್ತಾರೆ ದೀಪಕ್. ಅವರ ಮಾತಿನಂತೆ ತಲೆಬುರುಡೆ ಮತ್ತು ಮೂಳೆಗೆ ಓಸ್ಟೆಯೋ3ಡಿ ವಿಶ್ವದ ಮೊದಲ ಇ ಕಾಮರ್ಸ್ ಮಾರ್ಕೆಟ್ ಸ್ಥಳವಾಗಿದೆ.

“ರೋಗಿಯಜೀವನ ಮಾಹಿತಿಯಲ್ಲಿ ತಲೆಬುಡುರುಡೆಯ ಯಾವ ಭಾಗದಲ್ಲಿ ತೊಂದ್ರೆ ಇದೆಯೊಂದು ಕಂಡುಹಿಡಿಯಬಹುದು. ಅಲ್ಲದೇ ನಮ್ಮಲ್ಲಿ ಇದಕ್ಕೆ 150 ಮಾದರಿಗಳಿವೆ” ಎನ್ನುತ್ತಾರೆ ದೀಪಕ್.ಹುಟ್ಟುವ ಪ್ರತಿ 2ಸಾವಿರಕ್ಕೆ ಒಂದು ಮಗುವಿನ ತಲೆಬುರುಡೆ ಸರಿಯಾಗಿ ಇರುವುದಿಲ್ಲ. ಇದರಿಂದ ಅವರ ಮೆದುಳು ಬೆಳವಣಿಗೆಸಮಸ್ಯೆಯಾಗಿ ಮಕ್ಕಳು ವಿಕಲಾಂಗರಾಗುತ್ತಾರೆ. ಇದಕ್ಕೆ ಓಸ್ಟೆಯೋ3ಡಿನ 3ಡಿ ಪ್ರಿಂಟೆಡ್ ಹೆಲ್ಮೆಟ್‍ಸರಿಯಾದ ಭಾಗದಲ್ಲಿ ಒತ್ತಡ ಹಾಕಿ ತಲೆಬುರುಡೆ ಸರಿಯಾಗಿ ಬೆಳೆಯಲು ಸಹಾಯಮಾಡುತ್ತದೆ.

ಆದ್ರೆ ಈ ಬಗ್ಗೆ ಹೆಚ್ಚಿನ ಅರಿವಿಲ್ಲದೇ ಇರೋದು ಸಹ ಸಮಸ್ಯೆಯೇ. ಭಾರತದಲ್ಲಿ ಈ ಬಗ್ಗೆ ಚಿಕಿತ್ಸೆಗಳನ್ನು ಸಾಮಾನ್ಯವಾಗಿ ಮಾಡುವುದಿಲ್ಲವಾದ್ದರಿಂದ ಕೆಲ ವೈದ್ಯರೂ ಈ ತಂತ್ರಜ್ಞಾನವನ್ನು ಇಷ್ಟಪಡುತ್ತಿಲ್ಲ. ಆದ್ರೆ ಈ ಆಲೋಚನೆಯನ್ನು ಒಂದಲ್ಲಾ ಒಂದು ದಿನ ಖಂಡಿತವಾಗಿಯೂ ಸ್ವಾಗತಿಸುತ್ತಾರೆ. ಓಸ್ಟೆಯೋ3ಡಿ ಸಲಹಾ ಮಂಡಳಿಯಲ್ಲಿ ಮೂರು ವೈದ್ಯರಿದ್ದಾರೆ. ಜತೆಗೆ ಏಮ್ಸ್ ವೈದ್ಯರನ್ನು ಸೇರಿದಂತೆ ಸುಮಾರು 25 ವೈದ್ಯರೊಂದಿಗೆ ಸಹಭಾಗಿತ್ವ ಹೊಂದಿದೆ.

ದೀರ್ಘಾವಧಿಗೆ ಓಸ್ಟೆಯೋ3ಡಿಯನ್ನು ಬೇರೆಯದ್ದೇ ಬ್ರಾಂಡ್ ಮಾಡುವ ಯೋಜನೆಯಲ್ಲಿದ್ದಾರೆ ದೀಪಕ್. ಅಲ್ಲದೇ ಡಿಎಫ್3ಡಿ ಬೆಳವಣಿಗೆ ಬಗ್ಗೆಯೂ ಯೋಜನೆ ರೂಪಿಸಿದ್ದಾರೆ. ಭವಿಷ್ಯದಲ್ಲಿಇ ಕಾಮರ್ಸ್ ಮತ್ತು ಲಾಜಿಸ್ಟಿಕ್‍ಅನ್ನು ಕ್ರಾಂತಿಕಾರಿಗೊಳಿಸುವಲ್ಲಿ 3ಡಿ ಪ್ರಿಂಟಿಂಗ್ ಮಹತ್ವ ಪಡೆದಿದೆ. ವಿದೇಶದಿಂದ ಬಂದ ಒಂದು ಆರ್ಡರ್ ಅನ್ನು ಡಿಜಿಟಲಿ ಉತ್ಪಾದಿಸಿ ಆನ್‍ಲೈನ್ ಪ್ರಿಂಟರ್‍ಗೆ ಕಳಿಸಿದ್ರೆ ಅಲ್ಲಿ ಶಿಪ್ಪಿಂಗ್ ಚಾರ್ಜ್ ಮಾತೇ ಬರೋದಿಲ್ಲ. “ನೀವು ಆರ್ಡರ್ ಕೊಟ್ಟ ನಂತ್ರ ವಸ್ತುವು ಉತ್ಪಾದನೆಗೊಳ್ಳುತ್ತದೆ. ಆದ್ರೆ ವಸ್ತುವನ್ನು ದಾಸ್ತಾನು ಮಾಡಬೇಕಿಲ್ಲ. ಕೊರಿಯರ್ ಕಂಪನಿಗಳಿಗೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಶಾಪವಾದ್ರೆ ಅಚ್ಚರಿಯಿಲ್ಲ. ಅಮೆರಿಕದಿಂದ ಬಂದ ಆರ್ಡರ್‍ಗೂ ನಾವು ವಿನ್ಯಾಸ ಮಾಡಿ ಆನ್‍ಲೈನ್‍ನಲ್ಲೇ ಕಳಿಸಿಬಿಡುತ್ತೇವೆ. ಅವರು ಅಲ್ಲೇ ಅದರ ಉತ್ಪಾದನೆ ಮಾಡಿಕೊಳ್ತಾರೆ” ಎನ್ನುತ್ತಾರೆ ದಿಪಕ್.

3ಡಿ ಪ್ರಿಂಟಿಂಗ್‍ನಲ್ಲಿ ಆನ್‍ಲೈನ್‍ನಲ್ಲೇ ನಿಮಗೆ ವಸ್ತುವಿನ3ಡಿನೋಟ ಸಿಗುತ್ತದೆ. ನಿಮ್ಮ ಅಭಿರುಚಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ನಂತ್ರ ಆರ್ಡರ್ ನೀಡಬಹುದು. 3ಡಿ ಪ್ರಿಂಟಿಂಗ್ ಕಂಪನಿಗಳು ಬಳಸೋ ಸಾಫ್ಟ್‍ವೇರ್ ಪ್ಲಗ್ಗಿನ್‍ಗಳನ್ನುಡಿಎಫ್3ಡಿ ಕೊಡುತ್ತದೆ ಜತೆಗೆ ಬೆಲೆಯನ್ನು ಲೆಕ್ಕ ಹಾಕಲು ಕ್ರಮಾವಳಿಯನ್ನೂ ಪೂರೈಸುತ್ತದೆ.

ಮೂರು ತಿಂಗಳ ಹಿಂದೆ ಡಿಎಫ್3ಡಿ ಬೆಲೆಯನ್ನು ಉಲ್ಲೇಖಿಸುವ ತನ್ನದೇ ಇxಣಡಿuಜ3iಣಆಪ್ ಬಿಡುಗಡೆಗೊಳಿಸಿತು.ಇದು 3ಡಿ ಪ್ರಿಂಟಿಂಗ್‍ನಲ್ಲಿ ವಿಶ್ವದಲ್ಲೇ ಪ್ರಥಮ. ಡಿಎಫ್3ಡಿ ತಂಡದಲ್ಲಿ ಸಧ್ಯ 8 ಜನರಿದ್ದಾರೆ ಮತ್ತು ಪ್ರಪಂಚದಾದ್ಯಂತ ಗ್ರಾಹಕರಿದ್ದಾರೆ.

ಪೇಟೆಂಟ್‍ನ ಗಡುವು ಮುಕ್ತಾಯ, ಹೆಚ್ಚುತ್ತಿರೋ ಜಾಗೃತಿ, ವಸ್ತುಗಳ ಸಂಶೋಧನೆಯಲ್ಲಿ ಪ್ರಗತಿ ಕಾರಣದಿಂದ 3ಡಿ ಪ್ರಿಂಟಿಂಗ್ ಕೊನೆಗೂ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ. 2014ರಲ್ಲಿ ಅಮೆರಿಕ ಮೂಲದ ಆಟೋಡೆಸ್ಕ್ ಕಂಪನಿ 3ಡಿ ಪಿಂ್ರಟಿಂಗ್ ತಂತ್ರಜ್ಞಾನವನ್ನು ಪ್ರೋತ್ಸಾಹಿಸಲು 100 ಮಿಲಿಯನ್ ಡಾಲರ್ ಹಣ ಬಿಡುಗಡೆ ಮಾಡಿತು.6ಡ್ಬ್ಬ್ಲ್ಯೂ ರಿಸರ್ಚ್ ಕನ್ಸಲ್ಟಿಂಗ್ ಫರ್ಮ್‍ನ ಒಂದು ಅಧ್ಯಯನದಂತೆ 2021ರ ವೇಳೆಗೆ ಭಾರತದಲ್ಲಿ 3ಡಿ ಪ್ರಿಂಟಿಂಗ್ ಮಾರುಕಟ್ಟೆ 79ಮಿಲಿಯನ್ ಡಾಲರ್‍ಗೂ ಹೆಚ್ಚಾಗೋ ನಿರೀಕ್ಷೆ ಇದೆ. ಜಾಗತಿಕ ಕಂಪನಿಗಳಾದ 3ಡಿ ಸಿಸ್ಟಮ್ಸ್ ಮತ್ತು ಓಪ್ಟೋಮೆಕ್ ಈಗಾಗಲೇ ಭಾರತಕ್ಕೆ ಕಾಲಿಟ್ಟಿದ್ದಾರೆ. ಇದರೊಟ್ಟಿಗೆ ಭಾರತದ ಸ್ಟಾರ್ಟ್‍ಅಪ್‍ಗಳೂ ಹಿಂದೆಬಿದ್ದಿಲ್ಲ. ಮುಂಬೈ ಮೂಲದ ಮಹೆರ್‍ಸಾಫ್ಟ್, ಜೈಪುರ ಮೂಲದ ಆಹಾ!3ಡಿ ಹಾಗೂ ಬೆಂಗಳೂರಿನ ಫ್ರಾಕ್ತಾಲ್ ಮತ್ತು ಗ್ಲೋಬಲ್ 3ಡಿ ಲ್ಯಾಬ್ಸ್ ಈ ಕ್ಷೇತ್ರದಲ್ಲಿ ಪರಿಣಿತರು. -

ಲೇಖಕರು: ಅತಿರಾ ಎ ನಾಯರ್​​​
ಅನುವಾದಕರು: ಆರ್‍.ಪಿ.

Related Stories