‘ಬಿ-ಸೇಫ್’ ಆ್ಯಪ್​ ಬಳಸಿ, ಸುಗಮವಾಗಿ ಆಟೋದಲ್ಲಿ ಪ್ರಯಾಣಿಸಿ

ಟೀಮ್​ ವೈ.ಎಸ್​. ಕನ್ನಡ

0

ಮಹಾನಗರಗಳಲ್ಲಿ ಸುಲಭವಾಗಿ ಓಡಾಡಲು ಸಿಗುವುದು ಆಟೋಗಳು ಮಾತ್ರ. ಬೆಂಗಳೂರಿನಂತಹ ಟ್ರಾಫಿಕ್​​ ಜ್ಯಾಮ್​ ಇರುವಂತಹ ನಗರಗಳಲ್ಲಿ ರಿಕ್ಷಾವಾಲಗಳೇ ಕಾರು, ಬೈಕ್​ಗಳಿಲ್ಲದೆ, ಬಸ್​ನಲ್ಲಿ ಹೋಗೋದಿಕ್ಕೆ ಹಿಂದೆ ಮುಂದೆ ನೋಡುವವರಿಗೆ ಆಶ್ರಯದಾತರು. ಸಿಲಿಕಾನ್​ ಸಿಟಿಯಲ್ಲಂತೂ ಚಿಟಿಕೆ ಹೊಡೆದ್ರೆ ಸಾಕು, ಹತ್ತಾರು ಆಟೋಗಳು ನಿಮ್ಮ ಮುಂದೆ ಬಂದು ನಿಲ್ಲತ್ತದೆ. ಕೆಲವೊಮ್ಮೆ ಮೀಟರ್​ ದರಕ್ಕಿಂತ ಹೆಚ್ಚಿನ ದರಕ್ಕೆ ಬೇಡಿಕೆ ಇಟ್ರೂ, ಪ್ರಯಾಣಿಕರಿಗೆ ಬೇರೆ ದಾರಿ ಇಲ್ಲದೇ ಇರೋದ್ರಿಂದ ಆಟೋ ಹತ್ತಿ ಹೊರಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಆದ್ರೆ ಇತ್ತೀಚೆಗೆ ಆಟೋದಲ್ಲಿ ಪ್ರಯಾಣ ಮಾಡುವುದು ಕೂಡ ಕಷ್ಟವಾಗಿದೆ. ಕೆಲ ದುಷ್ಕರ್ಮಿಗಳು ಆಟೋ ಬಾಡಿಗೆ ಪಡೆದು ಅಥವಾ ಆಟೋ ಚಾಲಕರಾಗಿ, ಪ್ರಯಾಣಿಕರನ್ನು ದೋಚುತ್ತಿರುವ ಉದಾಹರಣೆಗಳಿವೆ.  ಹಲವು ಬಾರಿ ಅನೇಕ ಯುವತಿಯರನ್ನು ರೇಪ್ ಮಾಡಿದಂತಹ ಅನೇಕ ಘಟನೆಗಳು ನಡೆದಿವೆ. ಹಾಗಾಗಿ ಇನ್ಮುಂದೆ ಹೆಂಗಸರು ನಿರಾಯಸವಾಗಿ ಆಟೋ ಪ್ರಯಾಣ ಮಾಡಬಹುದು. ಪ್ರಯಾಣಿಕರ ಸುರಕ್ಷತೆಗಾಗಿಯೇ ಹೊಸ ಆ್ಯಪ್​ವೊಂದನ್ನು ಬೆಂಗಳೂರು ಸಂಚಾರಿ ಪೊಲೀಸರು ಪ್ರಯೋಗಿಸಿ ಲಾಭ ಪಡೆದುಕೊಂಡಿದ್ದಾರೆ.

ಬೆಂಗಳೂರು ಸಂಚಾರಿ ಪೊಲೀಸರು ಆಟೋದಲ್ಲಿ ಸಂಚರಿಸುವ ಜನರಿಗಾಗಿ  ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿತ್ತು. ಆಟೋ ಚಾಲಕರ ದುವರ್ತನೆ ಬಗ್ಗೆ ಜನರು ಈ ಅಪ್ಲಿಕೇಷನ್ ಮೂಲಕ ದೂರು ನೀಡಬಹುದು. ಈ ಆಪ್ಲಿಕೇಷನ್ ಎಲ್ಲ ಆ್ಯಂಡ್ರಾಯ್ಡ್ ಮೊಬೈಲ್​ನಲ್ಲೂ ಡೌನ್ಲೋಡ್ ಮಾಡಿಕೊಳ್ಳಬಹುದು. ಸದ್ಯ ಗೂಗಲ್ ಪ್ಲೇ ಸ್ಟೋರ್​ಗೆ ಹೋಗಿ ‘ಬಿ-ಸೇಫ್’ ಎಂದು ಟೈಪ್ ಮಾಡಿದ್ರೆ ಸಾಕೂ ಈ ಆ್ಯಪ್ ನಿಮ್ಮ ಮೊಬೈಲ್​ನಲ್ಲಿರುತ್ತದೆ..

ಈ ಅಪ್ಲಿಕೇಷನ್ ಮೂಲಕ ಜನರು ತಾವು ಪ್ರಯಾಣ ಮಾಡುವ ಮಾರ್ಗದ ಆಟೋ ದರ ಎಷ್ಟಾಗುತ್ತದೆ? ಎಂದು ಮೊದಲೇ ಅಂದಾಜಿಸಬಹುದು. ನಗರ ಸುತ್ತಿಸಿ ಜೇಬಿಗೆ ಕತ್ತರಿ ಹಾಕುವವರಿಗೆ ಈ ಆ್ಯಪ್​ನಿಂದ ಬುದ್ಧಿ ಕಲಿಸ ಬಹುದಾಗಿದೆ. ಜೊತೆಗೆ ಜಿಪಿಎಸ್ ವ್ಯವಸ್ಥೆ ಮೂಲಕ ಮಾರ್ಗವನ್ನು ತಿಳಿದುಕೊಳ್ಳಬಹುದು. ಆಟೋ ಚಾಲಕರ ವರ್ತನೆ ಕುರಿತು ಆಟೋದಿಂದಲೇ ದೂರು ನೀಡಬಹುದು.

ಇದನ್ನು ಓದಿ: ಎಚ್ಚರ..! ಇನ್ನು 10 ವರ್ಷಗಳಲ್ಲಿ ಬಾಳೆಹಣ್ಣು ಸಿಗೋದೇ ಇಲ್ವಂತೆ..!

ಆಟೋ ಚಾಲಕರ ಕಿರುಕುಳವನ್ನು ತಪ್ಪಿಸಲು ಈ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ. ಈ ಅಪ್ಲಿಕೇಶನ್​ನಲ್ಲಿ ಎಸ್‌ಓಎಸ್ ಎಂಬ ಆಯ್ಕೆ ಇದೆ. ಇದರ ಮೂಲಕ ತುರ್ತು ಸಂದರ್ಭದಲ್ಲಿ ಪೊಲೀಸರಿಗೆ ನೇರವಾಗಿ ಮಾಹಿತಿ ರವಾನೆಯಾಗುತ್ತದೆ. ನೀವು ಯಾವ ಸ್ಥಳದಲ್ಲಿ ಸಂಚರಿಸುತ್ತಿರುವಿರೋ ಅಲ್ಲಿಗೆ ಬಂದು ನಿಮ್ಮನು ಟ್ರ್ಯಾಪ್ ಮಾಡುವಂತಹ, ಜಿಪಿಎಸ್ ಮೂಲಕ ಟ್ಯ್ರಾಕ್ ಮಾಡುವಂತಹ ಅದ್ಭುತ ಆ್ಯಪ್ ಇದಾಗಿದೆ.

'ಬಿ-ಸೇಫ್' ಆ್ಯಪ್ ಬಳಸಲು ಗ್ರಾಹಕರು ನೋಂದಣಿ ಮಾಡಿಕೊಳ್ಳಬೇಕಾಗಿರುವುದು ಕಡ್ಡಾಯ. ಅಪ್ಲಿಕೇಷನ್ ಇನ್ಸ್​ಟಾಲ್ ಆದ ಬಳಿಕ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ರೂಪದಲ್ಲಿ ನೋಂದಣಿ ಸಂಖ್ಯೆ ಬರುತ್ತದೆ. ಅದನ್ನು ನಮೂದಿಸಿ ಈ ಆ್ಯಪ್​ನ್ನು ಸ್ಮಾರ್ಟ್ ಜನರು, ಸ್ಮಾರ್ಟ್ ಆಗಿ ಬಳಸಬಹುದಾಗಿದೆ.

ಇದನ್ನು ಓದಿ:

1. ಮಾರುಕಟ್ಟೆಯಲ್ಲಿ ನಿಮ್ಮ ಚಿತ್ರಣ ಸೃಷ್ಟಿಸಿ ಉದ್ಯಮದ ಕಹಳೆ ಮೊಳಗಿಸಿ 

2. ಆಟದಲ್ಲಿ ಬೆಳ್ಳಿ ಗೆದ್ರೂ ಹೃದಯ ಗೆದ್ದ ಭಾರತದ ಬಂಗಾರ..!

3. ಕೌಟುಂಬಿಕ ಜವಾಬ್ಧಾರಿಯಲ್ಲಿ ಸಿಕ್ಕು ಮಹಿಳೆಯರ ಒದ್ದಾಟ : ಜಾಹೀರಾತುಗಳಲ್ಲೂ ಇದೆಂಥಾ ಸಂದೇಶ?