ಮುಂಬೈನಲ್ಲಿ ಈಗ ಮಹಿಳೆಯರು ಕೂಡ ಆಟೋ ಓಡಿಸ್ತಾರೆ..!

ಟೀಮ್​ ವೈ.ಎಸ್​. ಕನ್ನಡ

1

ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರ ಸರಕಾರವಂತೂ ಮಹಿಳೆಯರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಎಲ್ಲಾ ರಾಜ್ಯಗಳಲ್ಲೂ ಮಹಿಳಾ ಸಬಲೀಕರಣಕ್ಕೆ ವಿವಿಧ ರೀತಿಯ ಪ್ರಾಜೆಕ್ಟ್​ಗಳಿವೆ. ಆದ್ರೆ ಮಹಾರಾಷ್ಟ್ರ ಸರಕಾರವಂತೂ ಮಹಿಳಾ ಸಬಲೀಕರಣಕ್ಕೆ ಎಲ್ಲಾ ರಾಜ್ಯಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಮುಂಬೈನಲ್ಲಿ ಆಟೋ ರಿಕ್ಷಾಗಳಿಗೆ ನೀಡುವ ಪರ್ಮಿಟ್​ನಲ್ಲಿ ಶೇಕಡಾ 5ರಷ್ಟನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಹೀಗಾಗಿ ಈಗ ಮುಂಬೈ ಮಹಾನಗರಗಳಲ್ಲಿ ಮಹಿಳಾ ಆಟೋ ಡ್ರೈವರ್​ಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಒಂದು ತಿಂಗಳಿನಿಂದ ಮಹಿಳಾ ಆಟೋವಾಲಾಗಳು ನಗರದಲ್ಲಿ ದೊಡ್ಡ ಸುದ್ದಿ ಆಗ್ತಿದ್ದಾರೆ.

ಮಹಿಳಾ ಸಬಲೀಕರಣಕ್ಕಾಗಿ ಹೊಸ ನಿಯಮ ಜಾರಿಗೆ ಬಂದ ಕೂಡಲೇ ಸುಮಾರು 465 ಮಹಿಳಾ ಆಟೋ ಡ್ರೈವರ್​ಗಳು ಮುಂಬೈನಲ್ಲಿ ಆಟೋ ಓಡಿಸಲು ಪರವಾನಗಿ ಪಡೆಯುವ ನಿರೀಕ್ಷೆ ಇದೆ. ಈಗಾಗಲೇ ಸುಮಾರು 19 ಮಹಿಳಾ ಮಣಿಗಳು ಆಟೋ ಓಡಿಸುವ ಕೆಲಸವನ್ನು ಕೂಡ ಆರಂಭಿಸಿದ್ದಾರೆ. ಮುಂಬೈನ ಥಾಣೆಯಲ್ಲಿ ಕಳೆದ ವರ್ಷವೇ ಮಹಿಳೆಯೊಬ್ಬಳು ಆಟೋ ರಿಕ್ಷಾ ಓಡಿಸಲು ಆರಂಭಿಸಿದ್ದರು. ಈ ಮೂಲಕ ಹಲವು ಮಹಿಳೆಯರಿಗೆ ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಅವಕಾಶ ಸಿಕ್ಕಿದೆ. ಮಹಿಳೆಯರು ಕೂಡ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ತನ್ನ ಕೈಯಿಂದ ಆಗುವ ಸಹಾಯವನ್ನು ಮಾಡಬಹುದು. ಅಷ್ಟೇ ಅಲ್ಲ ರಿಕ್ಷಾ ಓಡಿಸುವುದನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವೂ ಸಿಗುತ್ತಿದೆ.

“ ರಿಕ್ಷಾ ಓಡಿಸುವ ಕೆಲಸ ಮನೆಕೆಲಸ ಮಾಡುವುದಕ್ಕಿಂತ ಉತ್ತಮವಾಗಿದೆ. ಇದು ನನಗೆ ಹೆಚ್ಚು ಹಣ ಸಂಪಾದಿಸಲು ಅವಕಾಶ ಕೊಡುತ್ತಿದೆ, ನನ್ನ ಭವಿಷ್ಯವನ್ನು ಬದಲಿಸಿಕೊಳ್ಳಲು ಅವಕಾಶ ನೀಡುತ್ತಿದೆ. ನನಗೆ ಸೈಕಲ್ ಓಡಿಸಲು ಕೂಡ ಬರುತ್ತಿರಲಿಲ್ಲ. ಈಗ ರಿಕ್ಷಾವನ್ನು ಓಡಿಸುತ್ತಿದ್ದೇನೆ, ಅಷ್ಟೇ ಅಲ್ಲ ನಾನೀಗ ಸ್ವತಂತ್ರಳು. ಅದನ್ನು ಅನುಭವಿಸುತ್ತಿದ್ದೇನೆ ”
- ಚಾಯಾ, ಮೋಹಿತೆ, ರಿಕ್ಷಾ ಓಡಿಸುವ ಮಹಿಳೆ

ಈ ಹಿಂದೆ ಮುಂಬೈ ಪಿಂಕ್ ಟ್ಯಾಕ್ಸಿ ಮೂಲಕ ಮಹಿಳೆಯರೇ ಮಹಿಳಾ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಆದ್ರೆ ಮುಂಬೈ ನಗರ ಇಕ್ಕಟ್ಟಿನಿಂದ ಕೂಡಿರುವುದರಿಂದ ಹಲವು ಪ್ರಯಾಣಿಕರು ಆಟೋ ರಿಕ್ಷಾದಲ್ಲೇ ಪ್ರಯಾಣಿಸಲು ಇಚ್ಛಿಸುತ್ತಾರೆ. ಈಗ ಮಹಿಳೆಯರಿಗೆ ಆಟೋ ಓಡಿಸಲು ಅವಕಾಶ ಕೊಟ್ಟಿರುವುದು ಮಹಿಳಾ ಪ್ರಯಾಣಿಕರಿಗೂ ಖುಷಿಕೊಟ್ಟಿದೆ.

ಇದನ್ನು ಓದಿ: ಮನೆ ಬಾಗಿಲಿಗೆ ಮಾವು- ಹಣ್ಣುಗಳ ರಾಜನ ಮಾರಾಟಕ್ಕೆ ಹೊಸ ಪ್ಲಾನ್​ 

ಆಟೋ ರಿಕ್ಷಾ ಓಡಿಸಲು ಪರವಾನಗಿ ನೀಡುವುದರ ಜೊತೆ ವಿಭಿನ್ನವಾದ ಯೂನಿಫಾರ್ಮ್ ಗಳನ್ನು ಮಹಿಳಾ ಆಟೋ ವಾಲಾಗಳಿಗೆ ನಿಗದಿ ಮಾಡಲಾಗಿದೆ. ಈ ಮೂಲಕ ಪುರುಷ ಆಟೋ ರಿಕ್ಷಾ ಡ್ರೈವರ್​ಗಳನ್ನು ಮತ್ತು ಮಹಿಳಾ ಆಟೋ ರಿಕ್ಷಾ ಡ್ರೈವರ್ಗಳನ್ನು ನಾವು ಪತ್ತೆ ಹಚ್ಚಬಹುದಾಗಿದೆ.

ಅಂದಹಾಗೇ ಈ ಎಲ್ಲಾ ಮಹಿಳಾ ಆಟೋ ರಿಕ್ಷಾ ಡ್ರೈವರ್​ಗಳಿಗೆ ಟ್ರೈನಿಂಗ್ ನೀಡಿರೋದು ಸುಧೀರ್ ಧೋಯಿಪೊಡೆ. ಸದ್ಯ 40 ಮಹಿಳೆಯರಿಗೆ ಆಟೋ ಓಡಿಸುವ ಬಗ್ಗೆ ತರಬೇತಿ ನೀಡುತ್ತಿರುವ ಸುಧೀರ್ ಮುಂದಿನ ದಿನಗಳಲ್ಲಿ ಈ ಸಂಖ್ಯೆನ್ನು 500ಕ್ಕೆ ಏರಿಸುವ ಉದ್ದೇಶ ಹೊಂದಿದ್ದಾರೆ. ಒಟ್ಟಿನಲ್ಲಿ ಮಹಿಳಾ ಸಬಲೀಕರಣ ಮಹಿಳೆಯರಿಗೆ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತಿದೆ. 

ಇದನ್ನು ಓದಿ:

1. ಡಾಕ್ಯುಮೆಂಟರಿಯಲ್ಲಿ ಕಾಣಿಸಿಕೊಂಡ ಏಳು ಬೆಟ್ಟಗಳ ಒಡೆಯ- ಹೊಸ ಇತಿಹಾಸ ಬರೆದ ನ್ಯಾಷನಲ್ ಜಿಯೋಗ್ರಫಿ..!

2. ಅಡಕೆ ಕೊಯ್ಲಿನ ಚಿಂತೆ ಬಿಡಿ- ಹೊಸ ಯಂತ್ರದ ಬಗ್ಗೆ ತಿಳಿದುಕೊಳ್ಳಿ..!

3. ವಿಮಾನದಲ್ಲಿ ಪ್ರಯಾಣಿಲು 'ಆಧಾರ್' ಆಧಾರ..!

Related Stories