ಹೆಸರಲ್ಲೇನಿದೆ ಅಂತಹ ಗುಟ್ಟು..? ವೆಸ್ಟ್​ಬೆಂಗಾಲ್ ಈಗ ಜಸ್ಟ್ “ಬಂಗಾಳ” ಮಾತ್ರ..!

ಟೀಮ್​ ವೈ.ಎಸ್​. ಕನ್ನಡ

0

ಮನುಷ್ಯನಿಗೆ ಗುರುತು ಹೇಳಿಕೊಳ್ಳೋದಿಕ್ಕೆ, ಪರಿಚಯ ಮಾಡಿಕೊಳ್ಳೋದಿಕ್ಕೆ ಹೆಸರು ಅತೀ ಮುಖ್ಯ. ಹೆಸರಿನಿಂದಲೇ ದೇಶಗಳು ಪ್ರಸಿದ್ಧಿ ಪಡೆದ ಉದಾಹರಣೆಗಳಿವೆ. ಭಾರತದಲ್ಲಿ ಹಲವು ರಾಜ್ಯಗಳು ತಮ್ಮ ಹೆಸರುಗಳನ್ನು ಬದಲಿಸಿಕೊಂಡ ಉದಾಹರಣೆಗಳಿವೆ. ತನ್ನ ಸುಪ್ರಸಿದ್ಧ ನಗರಗಳ ಹೆಸರುಗಳನ್ನು ಕೂಡ ಉದಾಹರಣೆಗಳಿವೆ. ಈಗ ಐತಿಹಾಸಿಕ ನಗರ ವೆಸ್ಟ್ ಬೆಂಗಾಲ್ ಹೆಸರು ಬದಲಾವಣೆಗೆ ಸಜ್ಜಾಗಿದೆ. ವೆಸ್ಟ್ ಬೆಂಗಾಲ್​​ ಬದಲು ಇಂಗ್ಲೀಷ್​ನಲ್ಲಿ “ಬೆಂಗಾಲ್” ಮತ್ತು ಬೆಂಗಾಲಿ ಭಾಷೆಯಲ್ಲಿ “ಬಾಂಗ್ಲಾ” ಅಥವಾ ಬಾಂಗೋ ಅಂತ ಮರು ನಾಮಕರಣಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ಭಾರತದಲ್ಲಿ ಈಗಾಗಲೇ ಒರಿಸ್ಸಾ, ಓಡಿಷಾ ಅಂತ ಮರು ನಾಮಕರಣವಾಗಿ ಹಲವು ವರ್ಷಗಳೇ ಕಳೆದಿದೆ. ಮಹಾನಗರಗಳ ಪೈಕಿ ಬಾಂಬೆ ಮುಂಬೈ ಆಗಿ ಬದಲಾಗಿದೆ. ಬ್ಯಾಂಗಲೂರ್​, ಬೆಂಗಳೂರು ಆಗಿಬಿಟ್ಟಿದೆ. ಮದ್ರಾಸ್ ಕೂಡ ಚೆನ್ನೈ ಆಗಿ ಬದಲಾಗಿದೆ. ಈಗ ವೆಸ್ಟ್ ಬೆಂಗಾಲ್ ಸರದಿ. ಅತ್ಯುತ್ತಮ ಸಂಸ್ಕೃತಿಯ ವೈಭವನ್ನು ಹೊಂದಿರುವ ಬಂಗಾಳ ಇದನ್ನೇ ಬಂಡವಾಳ ಮಾಡಿಕೊಂಡು ಜನರನ್ನು ತನ್ನೆಡೆಗೆ ಆಕರ್ಷಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಮೊದಲು ವೆಸ್ಟ್ ಬೆಂಗಾಲ್ ಬದಲು “ಪಶ್ಚಿಮ್ ಬಾಂಗೋ” ಅಂತ ಮರು ನಾಮಕರಣ ಮಾಡೋದಿಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದ್ರೆ ಅದು ಸಫಲವಾಗಿರಲಿಲ್ಲ.

ಇದನ್ನು ಓದಿ: ಬ್ರಿಟಿಷ್ ಕಾಲದ ತಂತ್ರಜ್ಞಾನಕ್ಕೆ ಗುಡ್‍ಬೈ - ಬರ್ತಿದೆ ಹಮಾಮಾನ ಮುನ್ಸೂಚನೆ ನೀಡುವ ಸೂಪರ್ ಕಂಪ್ಯೂಟರ್

ಎಲ್ಲಾ ಅಂದುಕೊಂಡಂತೆ ನಡೆದ್ರ ವೆಸ್ಟ್​ಬೆಂಗಾಲ್ “ಬೆಂಗಾಲ್ ” ಅಂತ ಆಗಸ್ಟ್ 26ರಂದು ಮರುನಾಮಕರಣಗೊಳ್ಳಲಿದೆ. ವೆಸ್ಟ್​ಬೆಂಗಾಲ್ “ಬಂಗಾಳ” ಅಂತ ಯಾಕೆ ಬದಲಾಗುತ್ತಿದೆ ಅಂತ ಕಾರಣ ಕೇಳಿದ್ರೆ ಹಲವು ರೀಸನ್​ಗಳು ಸಿಗುತ್ತವೆ. ಇಂಗ್ಲೀಷ್ ವರ್ಣಮಾಲೆಯ ಪ್ರಕಾರ ವೆಸ್ಟ್ ಬೆಂಗಾಲ್ ಅಕ್ಷರ ಕೊನೆಯಲ್ಲಿ ಬರುತ್ತದೆ. ಹೀಗಾಗಿ ಹಲವು ಸಂದರ್ಭಗಳಲ್ಲಿ ವೆಸ್ಟ್ ಬೆಂಗಾಲ್ ಗಮನ ಸೆಳೆಯುವಲ್ಲಿ ಸಾಕಷ್ಟು ಹಿಂದೆ ಬಿದ್ದಿದೆ. ಹೀಗಾಗಿ ಈಗ ಬೆಂಗಾಲ್ ಆಗಿ ಬದಲಾದ್ರೆ ಇತರರ ಗಮನ ಸೆಳೆಯಬಹುದು ಅನ್ನೋ ಲೆಕ್ಕಾಚಾರವೂ ನಡೆಯುತ್ತಿದೆ. ಒಟ್ಟಿನಲ್ಲಿ ಹೆಸರು ಬದಲಾವಣೆಯಿಂದ ಪಶ್ಚಿಮ ಬಂಗಾಳದಲ್ಲಿ ಅದೇನು ಬದಲಾವಣೆಗಳು ನಡೆಯುತ್ತವೋ ಯಾರಿಗೆ ಗೊತ್ತು..? ಕಾಲವೇ ಉತ್ತರ ಹೇಳಲಿದೆ.

ಇದನ್ನು ಓದಿ:

1. ರೈತರ ಆತ್ಮಹತ್ಯೆ ತಡೆಗೆ ಜಲಜಾಗೃತಿ ಅಭಿಯಾನ : 17 ನದಿಗಳಿಗೆ ಮರುಜೀವ ಕೊಟ್ಟ ಮುಂಬೈ ಯುವಕರು   

2. 'ಮಹಾ' ನದಿಗಳೇಕೆ ಬರಿದಾಗುತ್ತಿವೆ..?

3. ಭಾರತೀಯ ರೈಲ್ವೇಗೆ ಶೀಘ್ರದಲ್ಲೇ ಸಿಗಲಿದೆ “ಹೈ ಸ್ಪೀಡ್” ಟಚ್..!