ಪ್ರತಿಭಾನ್ವಿತ ಯುವ ಹುಡುಗಿಯರ ಕಲ್ಪನಾ ಲಹರಿ

ಆರ್​​.ಪಿ.

0

ಫ್ರಾನ್ಜ್ ಗ್ಯಾಸ್ಟರ್​​​ನಿಂದ 2009ರಲ್ಲಿ ಶುರುವಾದ "ಯುವ" ಜಾರ್ಖಂಡ್ ರಾಜ್ಯದ ರಾಂಚಿಯ ಹುತುಪ್ ಎಂಬ ಗ್ರಾಮದಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಫುಟ್‍ಬಾಲ್ ಮತ್ತು ಶಿಕ್ಷಣವನ್ನು ಬಳಸಿಕೊಂಡು ಗ್ರಾಮದ ಬಾಲಕಿಯರ ಜೀವನದಲ್ಲಿ ಬದಲಾವಣೆ ತರುವ ಆಶಯದೊಂದಿದೆ ಈ ಎನ್‍ಜಿಒ ಆರಂಭವಾಯಿತು. ಹಳ್ಳಿಗಾಡುಗಳಲ್ಲಿ ಸಾಮಾನ್ಯವಾಗಿ ಕಾಡುವ ಬಾಲ್ಯವಿವಾಹ, ಅನಕ್ಷರತೆ ಮತ್ತು ಮಾನವ ಕಳ್ಳಸಾಗಣೆಯಂತಹ ಅನಿಷ್ಟ ಪದ್ಧತಿ ವಿರುದ್ಧ ಹೋರಾಡಲು "ಯುವ" ಒಂದು ಉತ್ತಮ ವೇದಿಕೆಯಾಗಿದೆ. ಜಾರ್ಖಂಡ್‍ನಲ್ಲಿ 10 ರಲ್ಲಿ 6 ಬಾಲಕಿಯರು ಒತ್ತಾಯ ಪೂರ್ವಕವಾಗಿ ಶಾಲೆಯನ್ನು ತೊರೆದು ಬಾಲ್ಯವಿವಾಹಕ್ಕೆ ಈಡಾಗುತ್ತಿದ್ದಾರೆ. "ಯುವ" ವಕ್ತಾರರು ಹೇಳುವಂತೆ “ಯುವತಿಯರು ಹೊಂದಿಕೊಂಡು ಬಾಳೋದನ್ನು ಸಮಾಜ ಅಪೇಕ್ಷಿಸುತ್ತೆ, ನಾವು ಆಕೆಯನ್ನು ಗಮನ ಸೆಳೆಯುವ ವ್ಯಕ್ತಿಯಾಗಿಸುವಲ್ಲಿ ಉತ್ಸಾಹ ತುಂಬುತ್ತೇವೆ”.

2013ರಲ್ಲಿ ಸ್ಪೇನ್​​ನಲ್ಲಿ ನಡೆದ ಗಾಸ್ಟೇಜ್ ಕಪ್​​ನಲ್ಲಿ ಕಂಚಿನ ಪದಕ ಗೆದ್ದಾಗ "ಯುವ" ಬಾಲಕಿಯರು ರಾಷ್ಟ್ರಮಟ್ಟದಲ್ಲಿ ಸುದ್ದಿಮಾಡಿದರು. 2014ರಲ್ಲಿ ಇದೇ ಬಾಲಕಿಯರಿಗೆ ಯುಎಸ್ ಕಪ್‍ನಲ್ಲಿ ಆಡಲು ಆಹ್ವಾನ ನೀಡಲಾಯಿತು. ಆದ್ರೆ ಅವರಿಗೆ ಪ್ರಾಯೋಜಕರು ಇರಲಿಲ್ಲ. ಇದೇ ಸಮಯದಲ್ಲಿ ಲೆನೊವೊ ಬಾಲಕಿಯರಿಗೆ ಪ್ರಾಯೋಜಕತ್ವ ನೀಡಿ ಅವರ ಸ್ಫೂರ್ತಿದಾಯಕ ಪ್ರಯಾಣಕ್ಕೆ ಮುನ್ನುಡಿ ಹಾಡಿತು. ವಿಶಿಷ್ಟ ಯೋಚನೆ ಮತ್ತು ಶ್ರೇಷ್ಠವಾದುದನ್ನು ಪಡೆಯಲು ಪಟ್ಟುಹಿಡಿಯುವವರಿಗೆ ಕಂಪನಿ ಸದಾ ಬೆನ್ನೆಲುಬಾಗಿರುತ್ತೆ ಎನ್ನತ್ತಾರೆ ಲೆನೊವೊ ವಕ್ತಾರರು. "ಯುವ"ದ ಬಾಲಕಿಯರಿಗೂ ಸಹಾಯ ಮಾಡುವಲ್ಲಿ ಇದೇ ಕಾರಣವಾಗಿದೆ.

ರಾಷ್ಟ್ರೀಯ ಮಾಧ್ಯಮಗಳಲ್ಲಿ ಮತ್ತು ಟೆಡ್‍ಎಕ್ಸ್​​ನಲ್ಲಿ ಬಾಲಕಿಯರು ತಮ್ಮ ಜೀವನದ ಬಗ್ಗೆ ಹೇಳಿಕೊಂಡಿದ್ದು ಹಲವರ ಮನ ಮುಟ್ಟಿತ್ತು. ಈ ಬಾರಿ ತಂತ್ರಜ್ಞಾನ ಮತ್ತು ಸ್ಮಾರ್ಟ್ ವಿಶ್ವಕ್ಕೆ ಈ ಬಾಲಕಿಯರನ್ನು ಕರೆದುಕೊಂಡು ಹೋಗುವ ಯೋಜನೆಗೆ ಲೊನೊವೊ ಜತೆಗೂಡಿರೋ "ಯುವ" ಇಂಡಿಯಾ ಟ್ರಸ್ಟ್ ಪಿಚ್ ಟು ಹರ್ ಕಾರ್ಯಕ್ರಮದ ಮೂಲಕ ರಾಷ್ಟ್ರಮಟ್ಟದ ಪ್ರಚಾರ ಕೈಗೊಂಡಿದೆ. ನೈಜ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಭಾರತದ ಬುದ್ಧಿವಂತರಿಗೆ ಕರೆ ಕೊಟ್ಟಿದೆ ಪಿಚ್ ಟು ಹರ್.

ಪಿಚ್ ಟು ಹರ್ (www.pitchtoher.com) ಒಂದು ಸ್ಪರ್ಧೆಯಾಗಿದ್ದು, ಬಾಲಕಿಯರ ಜೀವನ ಸಮಸ್ಯೆ ಸುಧಾರಣೆಗೆ ಮೂಲ ಪರಿಹಾರ ಸೂಚಿಸಬಹುದಾಗಿದೆ. ಗೆದ್ದವರು ಹುತುಪ್ ಗ್ರಾಮಕ್ಕೆ ಭೇಟಿ ಕೊಡೋದರ ಜತೆಗೆ "ಯುವ" ಜತೆ ಲೆನೊವೊ ಪ್ರಾಯೋಜಕತ್ವದ ಕಲಿಕೆಯ ಪ್ರಮಾಣಪತ್ರ ಪಡೆಯಬಹುದು. 4 ರಿಂದ 6 ವಾರಗಳ ಒಳಗೆ ಕಾರ್ಯಗತಗೊಳಿಸಬಹುದಾದ ಪ್ರಾಯೋಗಿಕ ಕಲ್ಪನೆಯನ್ನು ಪಿಚ್ ಟು ಹರ್ ಎದುರುನೋಡುತ್ತದೆ. "ಯುವ" ಬಾಲಕಿಯರ ಜೀವನ ಸುಧಾರಣೆಗೊಳಿಸುವ ಸ್ಮಾರ್ಟ್ ಕಲ್ಪನೆಯನ್ನು ಕಲೆ-ಸಂಗೀತ ಅಥವಾ ವಸ್ತು ವಿನ್ಯಾಸ, ಉಪಯುಕ್ತ ಅಪ್ಲಿಕೇಷನ್ ಮುಖಾಂತರ ಸ್ಪರ್ಧಿಗಳು ಕೊಡಬಹುದಾಗಿದೆ. ಉದಾಹರಣೆಗೆ ಮಳೆಗಾಲದಲ್ಲಿ ಬೋಧನಾ ತರಗತಿಗಳಿಗೆ ಶಬ್ದರಹಿತ ಛಾವಣಿ ಕಲ್ಪನೆ, ಫುಟ್‍ಬಾಲ್ ಆಡುವ ಬಾಲಕಿಯರ ಹಾಜರಾತಿ ಗ್ರಹಿಸಲು ತರಬೇತುದಾರರಿಗೆ ಉಪಯುಕ್ತವಾಗುವ ಮೊಬೈಲ್ ಆ್ಯಪ್, ಬಾಲ್ಯವಿವಾಹ ತಡೆಗಟ್ಟಲು "ಯುವ" ಅಪ್ಲಿಕೇಷನ್ ಗೆ ಹೊಸ ವೈಶಿಷ್ಟ್ಯಗಳ ಅಳವಡಿಕೆ ಇತ್ಯಾದಿ.

ಕಳೆದ ಕೆಲ ದಿನಗಳಿಂದ ಏನಾಗುತ್ತದೆ?

ಜಾರ್ಖಂಡ್‍ನ ಹುತುಪ್ ಗ್ರಾಮದಲ್ಲಿರೋ "ಯುವ" ಮನೆಯಿಂದ ನೇರ ಪ್ರಸಾರ ವೀಕ್ಷಿಸಬಹುದಾಗಿದೆ. ಅತ್ಯುನ್ನತ ಕಂಪ್ಯೂಟರ್, ಟ್ಯಾಬ್ಲೆಟ್ ಮತ್ತು ಫೋನ್‍ಗೊಂದಿಗೆ ಲೆನೊವೊ ಲ್ಯಾಬ್ ಆನ್‍ಲೈನ್ ಆಗಿದೆ. ಬಾಲಕಿಯರಿಗೆ ತಮ್ಮ ಸೃಜನಶೀಲತೆ ತೋರಿಸಲು ಲ್ಯಾಬ್​​ನಲ್ಲಿ ಮ್ಯಾಕಿಮ್ಯಾಕಿ ಸಾಧನ ಮತ್ತು ಫಿಟ್‍ಬಿಟ್ ಅಳವಡಿಸಲಾಗಿದೆ. ಕಳೆದ ಹಲವಾರು ದಿನಗಳಲ್ಲಿ ಬಾಲಕಿಯರು ಸಾಕಷ್ಟು ವಿಷಯಗಳನ್ನು ತಿಳಿದುಕೊಂಡು ತಾವೇ ಸ್ವತಃ ಅನೇಕ ಆಸಕ್ತಿದಾಯಕ ವಸ್ತುಗಳನ್ನು ಸೃಷ್ಟಿಸಿದ್ದಾರೆ. ನಾವೆಲ್ಲಿದ್ದೇವೆ ಮತ್ತು ಏನನ್ನು ಇಷ್ಟಪಡುತ್ತೇವೆ ಎಂದು ವಿಶ್ವಕ್ಕೆ ತಿಳಿಸಲು ಛಾಯಾಗ್ರಹಣಕ್ಕೆ ಮೊರೆಹೋಗಿದ್ದಾರೆ. ಗೂಗಲ್ ಮ್ಯಾಪ್ ಸ್ಟ್ರೀಟ್ ನಲ್ಲಿ ತಮ್ಮ ಗ್ರಾಮವನ್ನು ಗುರುತಿಸಲು 360 ಡಿಗ್ರಿ ಕ್ಯಾಮರಾ ಬಳಸುತ್ತಿದ್ದಾರೆ. ಫುಟ್‍ಬಾಲ್ ಪಂದ್ಯಾವಳಿ ಸಮಯದಲ್ಲಿ ಬಲೂನ್ ಗೆ ಗೋಪ್ರೋ ಕ್ಯಾಮರಾ ಕಟ್ಟಿ ಹಾರಿಬಿಡುತ್ತಾರೆ. ಕ್ಯಾಮರಾವನ್ನು ಮೊಬೈಲ್ ಮೂಲಕ ಕಂಟ್ರೋಲ್ ಮಾಡಲು ಮತ್ತು ಪಂದ್ಯದ ಫೊಟೋಗ್ರಾಫಿ ಮಾಡಲು ಲೆನೊವೊ ಸ್ವಯಂಸೇವಕರು ಸಹಾಯ ಮಾಡುತ್ತಿದ್ದಾರೆ.

ಬಾಲಕಿಯರಿಗೆ ಅಚ್ಚರಿ ಪಡಿಸಲು ಹಿಂದಿನ ರಾತ್ರಿ "ಯುವ" ಮನೆಯ ಗೋಡೆಯ ಮೇಲೆ ಟೀಂ ಲೆನೊವೊ ಚಿತ್ರ ಬಿಡಿಸಿದ್ದರು. ಇದನ್ನು ನೋಡಿ ಬಾಲಕಿಯರು ಅತೀವ ಆನಂದ ಪಟ್ಟರು. ಮಕ್ಕಳು ರಚಿಸಿದ್ದ ಅನೇಕ ಗೂಗಲ್ ಡೂಡಲ್‍ಗಳನ್ನು ವೀಕ್ಷಿಸಲು ಬಾಲಕಿಯರು ಲೆನೊವೊ ಲ್ಯಾಬ್ ಒಳಗೆ ಹೋದರು. ತಮ್ಮೊಂದಿಗೇ ಇರೋ ಸಾಧನಗಳೊಂದಿಗೆ ಆಟವಾಡುವುದು ಹೇಗೆಂದು ಇದರಿಂದ ತಿಳಿದುಕೊಂಡರು. ಬಣ್ಣ ಮತ್ತು ಪೇಂಟ್ ಇಲ್ಲದೇ ಟ್ಯಾಬ್‍ನಲ್ಲೇ ಚಿತ್ರ ಬಿಡಿಸುವುದನ್ನು ಮತ್ತು ಬಣ್ಣಹಚ್ಚುವುದನ್ನು ಸ್ವಯಂಸೇವಕರ ಸಹಾಯದಿಂದ ತಿಳಿದುಕೊಂಡರು. ನಂತ್ರ ತಮ್ಮದೇ ಯೋಚನೆಯ ಯುವ ಡೂಡಲ್‍ಗಳನ್ನೂ ರಚಿಸಿದರು.

ಈ ಬಾಲಕಿಯರಿಗಾಗಿ ಹಾಡಲು ಮತ್ತು ಮ್ಯಾಕಿಮ್ಯಾಕಿ ಸಾಧನದಲ್ಲಿ ಸಂಗೀತ ಕಲಿಸಲು ಕೊಲ್ಕೊತ್ತಾದಿಂದ ಖ್ಯಾತ ಸಂಗೀತಗಾರ ಸುರೋಜಿತ್ ಚಟರ್ಜಿ ಬಂದಿದ್ದರು. ದಶಕದ ಹಿಂದೆಯೇ ಬೆಂಗಾಲಿ ಬ್ಯಾಂಡ್ ಭೂಮಿಯನ್ನು ಶುರುಮಾಡಿದ ಸುರೋಜಿತ್ ಸಂಗೀತ ವಲಯದಲ್ಲಿ ಖ್ಯಾತನಾಮರು. ಮಕ್ಕಳು ಮ್ಯಾಕಿಮ್ಯಾಕಿ ಮೂಲಕ ತಮ್ಮದೇ ಸ್ವಂತ ಸಂಗೀತ ರಚನೆಯನ್ನು ಮಾಡಿದರು. ಯುವ ಬಾಲಕಿಯರೊಂದಿಗೆ ಬೆರತದ್ದು ಸುರೋಜಿತ್‍ಗೆ ಖುಷಿ ತಂದಿತ್ತು. ಅವರ ಸಮ್ಮುಖದಲ್ಲಿ ಬಾಲಕಿಯರು ಸಂಗೀತವನ್ನು ಆರಾಧಿಸಿದ್ದರು. ಅದೊಂದು ಸೃಜನಶೀಲ ವಿಷಯಗಳ ವಿನಿಮಯವಾಗಿತ್ತು.

ಅಂದಹಾಗೆ ಹುತುಪ್ ಗ್ರಾಮದ ಬಗ್ಗೆ ಯಾವ ಇಂಟರ್‍ನೆಟ್ ಪೇಜ್‍ನಲ್ಲೂ ಮಾಹಿತಿ ಲಭ್ಯವಿರಲಿಲ್ಲ. ಆದ್ದರಿಂದ ಬಾಲಕಿಯರು ಮೊದಲು ಗ್ರಾಮದ ಹೆಸರಲ್ಲಿ ಒಂದು ವಿಕಿಪೀಡಿಯಾ ಪೇಜ್ ಶುರುಮಾಡಿದರು. ಗ್ರಾಮದ ರಸ್ತೆಗಳಲ್ಲಿ ಸಂಚರಿಸಿ ಪ್ರಮುಖ ಸ್ಥಳಗಳ ಫೋಟೋ ಕ್ಲಿಕ್ಕಿಸಿ ಸವಿವರವಾಗಿ ಮ್ಯಾಪ್ ಸಮೇತವಾಗಿ ಜಿಯೋ ಟ್ಯಾಂಗ್ ಮಾಡಿ ವಿಕಿಪೀಡಿಯಾ ಪುಟಕ್ಕೆ ಹಾಕುತ್ತಿದ್ದಾರೆ. "ಯುವ" ಹುತುಪ್​​ ಗ್ರಾಮವನ್ನು ಮಾದರಿಯನ್ನಾಗಿಸಲು ಟೊಂಕಕಟ್ಟಿ ನಿಂತಿದೆ.

Related Stories

Stories by RP