ಸ್ಮಾರ್ಟ್​ಫೋನ್​ ಬಳಕೆ ಸ್ಮಾರ್ಟ್​ ಆಗಿರಲಿ- ಮಕ್ಕಳ ಆರೋಗ್ಯದ ಬಗ್ಗೆ ಗಮನ ಕೂಡ ಇರಲಿ

ಟೀಮ್​ ವೈ.ಎಸ್​. ಕನ್ನಡ

 ಸ್ಮಾರ್ಟ್​ಫೋನ್​ ಬಳಕೆ ಸ್ಮಾರ್ಟ್​ ಆಗಿರಲಿ- ಮಕ್ಕಳ ಆರೋಗ್ಯದ ಬಗ್ಗೆ ಗಮನ ಕೂಡ ಇರಲಿ

Tuesday May 30, 2017,

2 min Read

ಸ್ಮಾರ್ಟ್​ಫೋನ್ ಯುಗದಲ್ಲಿ ಎಲ್ಲವೂ ಅದರಿಂದಲೇ ನಡೆಯುತ್ತಿದೆ. ಎದುರಿಗಿರುವ ವ್ಯಕ್ತಿಯನ್ನು ಬೇಕಾದ್ರೂ ಮರೆಯಬಹುದು, ಆದರೆ ಫೋನ್ ಮಾತ್ರ ಮರೆಯುವ ಹಾಗಿಲ್ಲ. ಫಾಸ್ಟ್ ದುನಿಯಾಕ್ಕೆ ಸ್ಮಾರ್ಟ್ ಫೋನ್ ಅನಿವಾರ್ಯ ಅನ್ನುವಂತಾಗಿದೆ ಅನ್ನುವುದು ಕೂಡ ಸುಳ್ಳಲ್ಲ. ತಿಂಡಿ, ಊಟ ಅಷ್ಟೇ ಅಲ್ಲ ನೆಂಟರಿಷ್ಟರು ಇರುವಾಗಲೂ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗಿಯೇ ಇರುತ್ತದೆ. ಆದ್ರೆ ಅತಿಯಾದ ಫೋನ್ ಬಳಕೆ ಒಳ್ಳೆಯದಲ್ಲ. ನಿಮ್ಮ ಮಗುವಿನ ಆರೈಕೆ ವಿಚಾರದಲ್ಲಂತೂ ಅತಿಯಾದ ಮೊಬೈಲ್ ಫೋನ್ ಬಳಕೆ ದುಷ್ಪರಿಣಾಮ ಬೀರುವುದು ಗ್ಯಾರೆಂಟಿ.

image


ಚೈಲ್ಡ್​ ಡೆವಲಪ್​ಮೆಂಟ್​ ನಡೆಸಿದ ಸರ್ವೆಯೊಂದರ ಪ್ರಕಾರ ಮೊಬೈಲ್ ನಿಂದಾಗಿ, ಪೋಷಕರು ಮಗುವಿನ ಮೇಲೆ ಗಮನ ಕಡಿಮೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಇದರಿಂದ ಮಗುವಿನ ಮಾನಸಿಕ ಬೆಳವಣಿಕೆ ಕುಗ್ಗುತ್ತದೆ. ಮಗು ಓವರ್ ಸೆನ್ಸಿಟಿವಿಟಿ, ಹೈಪರ್ ಆ್ಯಕ್ಟಿವ್ ಅಥವಾ ಮಂದತನದಿಂದ ಕೂಡಬಹುದು. ಹೀಗಂತ ಸರ್ವೆ ಮಾಡಿದ ವರದಿ ಹೇಳುತ್ತದೆ.

“ ನಮ್ಮ ಸರ್ವೇ, ಪೋಷಕರ ಮತ್ತು ಮಕ್ಕಳ ನಡುವಿನ ಅಂತರ ಮೊಬೈಲ್ ಬಳಕೆಯಿಂದ ಹೆಚ್ಚಾಗಿದೆ ಅನ್ನುವುದನ್ನು ಹೇಳುತ್ತದೆ. ಅಷ್ಟೇ ಅಲ್ಲ ಮಗುವಿನ ಬೆಳವಣಿಗೆಯ ಮೇಲೆ ಅತೀಯಾದ ಮೊಬೈಲ್ ಬಳಕೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತದೆ ಅನ್ನುವ ಅಂಶವನ್ನು ತಿಳಿಸಿದೆ. ಬದುಕು ಯಾಂತ್ರಿಕೃತವಾಗುವುದರಲ್ಲಿ ಮೊಬೈಲ್ ಕೊಡುಗೆಯೂ ಇಲ್ಲ ಅಂತ ಹೇಳುವ ಹಾಗಿಲ್ಲ.”
- ಬ್ರೆಂಡನ್ ಟಿ ಮೆಕ್ ಡೆನಿಯಲ್, ಅಸಿಸ್ಟಂಟ್ ಪ್ರೊಫೆಸರ್, ಇಲ್ಲಿಯೊನಿಸ್ ಯೂನಿವರ್ಸಿಟಿ, ಅಮೆರಿಕ

ಪೋಷಕರು ಮೊಬೈಲ್ ಬಳಕೆಯನ್ನು ಹೆಚ್ಚು ಮಾಡಿದಂತೆ ಮಕ್ಕಳ ಗಮನ ಕೂಡ ಆ ಕಡೆ ತಿರುಗುತ್ತದೆ. ಪೋಷಕರ ಗಮನ ಸಹಜವಾಗಿಯೇ ಮಕ್ಕಳಿಂದ ದೂರವಾಗುತ್ತದೆ. ಅಷ್ಟೇ ಅಲ್ಲ ಇದು ಪೋಷಕರ ಮತ್ತು ಮಕ್ಕಳ ನಡುವಿನ ಅಂತರಕ್ಕೆ ಕಾರಣವಾಗುತ್ತದೆ. ಇನ್ನು ಮೊಬೈನಲ್ ಸಿಗ್ನಲ್​ಗಳಿಂದ ಉತ್ಪತ್ತಿಯಾಗುವ ಕ್ಷ ಕಿರಣಗಳು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಈಗಾಗಲೇ ವೈಜ್ಞಾನಿಕವಾಗಿ ಸಾಭೀತಾಗಿದೆ.

“ ಇವತ್ತು ಮೊಬೈಲ್ ಕೈಯಲ್ಲಿದ್ದರೆ ಜಗತ್ತೇ ಕೈಯಲ್ಲಿದ್ದ ಹಾಗೇ. ಮಾಹಿತಿಯಿಂದ ಹಿಡಿದು, ನಮ್ಮೆಲ್ಲಾ ಬೇಕು ಬೇಡಗಳನ್ನು ಪೂರೈಸುವ ತಾಕತ್ತು ಅದಕ್ಕಿದೆ. ಆದ್ರೆ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಬಹಳ ದೊಡ್ಡದು. ಹೀಗಾಗಿ ಮಕ್ಕಳ ಜೊತೆಗಿರುವಾಗ ಹೆಚ್ಚು ಬುದ್ಧಿವಂತಿಕೆಯಿಂದ ಮೊಬೈಲ್ ಬಳಸಬೇಕು ”
- ಜೆನ್ನಿ ರೆಡೆಸ್ಕಿ, ಮಕ್ಕಳ ತಜ್ಞ

ಚೈಲ್ಡ್ ಡೆವಲಪ್ ಮೆಂಟ್ ಅನ್ನುವ ಪತ್ರಿಕೆಯೊಂದು ಈ ಸರ್ವೆಯನ್ನು ಮಾಡಿತ್ತು. ಅಷ್ಟೇ ಅಲ್ಲ ಮಕ್ಕಳ ಅಪ್ಪ ಮತ್ತು ಅಮ್ಮಂದಿರ ಸ್ಯಾಂಪಲ್​​ಗಳನ್ನು ಆಧರಿಸಿ ವರದಿ ಪ್ರಕಟಿಸಿದೆ. ಅಧ್ಯಯನದ ವೇಳೆಯಲ್ಲಿ ಶೇಕಡಾ 48ರಷ್ಟು ಪೋಷಕರು ಮೊಬೈಲ್​ನಿಂದ ಮಕ್ಕಳ ಕಡೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಅನ್ನುವ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಶೇಕಡಾ 17ರಷ್ಟು ಪೋಷಕರು ದಿನಕ್ಕೊಮ್ಮೆ ಈ ರೀತಿ ಆಗುತ್ತೆ ಅನ್ನುವುದನ್ನು ಒಪ್ಪಿಕೊಂಡಿದ್ದಾರೆ. ಶೇಕಡಾ 24ರಷ್ಟು ಜನರು ದಿನಕ್ಕೆರಡು ಬಾರಿ ತೊಂದರೆ ಆಗುತ್ತದೆ ಅನ್ನುವುದನ್ನು ಹೇಳಿದ್ದಾರೆ. ಕೇವಲ 11ರಷ್ಟು ಪೋಷಕರು ಮಾತ್ರ ಮೊಬೈಲ್​ನಿಂದ ಯಾವುದೇ ರೀತಿಯ ಸಮಸ್ಯೆ ಆಗುತ್ತಿಲ್ಲ ಅನ್ನುವ ಸತ್ಯವನ್ನು ಹೇಳಿದ್ದಾರೆ. ಒಟ್ಟಿನಲ್ಲಿ ಸ್ಮಾರ್ಟ್​ಫೋನ್ ಬಳಕೆ ಸಾಕಷ್ಟು ಹೆಚ್ಚಾಗುತ್ತಿದೆ. ಅದರ ದುಷ್ಪರಿಣಾಮವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 

ಇದನ್ನು ಓದಿ:

1. ಮರ ಬೆಳೆಸಿ, ಪರಿಸರ ಉಳಿಸಿ- ಸಿಲಿಕಾನ್​ ಸಿಟಿಯಲ್ಲಿ ಪರಿಸರ ಬೆಳೆಸು ಕಾರ್ಯಕ್ಕೆ ಡಿಜಿಟಲ್​ ಟಚ್​​​

2. ಸ್ಮಾರ್ಟ್​ಶಿಫ್ಟ್​​ನಲ್ಲಿದೆ ಭವಿಷ್ಯದ ಕನಸು- ಉದ್ಯಮಿ ಮತ್ತು ಟ್ರಕ್ ಮಾಲೀಕರ ನಡುವಿನ ಸಂಬಂಧಕ್ಕೆ ಹೊಚ ಟಚ್..!

3. ಕಾರ್ಪೋರೇಟ್​ ಕೆಲಸ ಬಿಟ್ಟ ಮಹಿಳೆ- ಪ್ಲಾಸ್ಟಿಕ್​ ವಿರೋಧಿ ಆಂದೋಲನ ಮಾಡುತ್ತಿರುವ "ಬೆಳ್ಳಿ ಕಿರಣ"