ತಿಂಗಳ ಪಾಸ್, ಇಬ್ಬರು ಹುಡುಗರು ಮತ್ತು "ಹಾಬಿಕ್ಸ್" ಜಿಮ್

ಟೀಮ್​ ವೈ.ಎಸ್​​.

ತಿಂಗಳ ಪಾಸ್, ಇಬ್ಬರು ಹುಡುಗರು ಮತ್ತು  "ಹಾಬಿಕ್ಸ್" ಜಿಮ್

Saturday October 10, 2015,

3 min Read

ರಜತ್ ಅಭ್ಯಾಸ ಮಾಡುತ್ತಿದ್ದ ವಾರ್ಷಿಕ ಜಿಮ್​​ನ ಸದಸ್ಯತ್ವದ ಅವಧಿ ಮುಗಿದಿತ್ತು. ಹೊಸ ವರ್ಷದ ರೆಸಲ್ಯೂಷನ್​ಗೆ ಹೊಸ ಜಿಮ್​​ನ ಅನ್ವೆಷಣೆಯಲ್ಲಿದ್ದ ರಜತ್​​ಗೆ ಹಳೆ ಜಿಮ್​​ನ ಕಾರ್ಡ್​ ರಿನಿವಲ್​ ಮಾಡಿಸುವ ಆಸಕ್ತಿ ಇರಲಿಲ್ಲ.

"ವಾರ್ಷಿಕ ಸದಸ್ಯತ್ವದ ಜಿಮ್​​ನಲ್ಲಿ ಕೇವಲ 2 ತಿಂಗಳು ಸದುಪಯೋಗ ಪಡೆದುಕೊಳ್ಳುವುದು ನನಗಿಷ್ಟವಿರಲಿಲ್ಲ. ಅಷ್ಟೇಅಲ್ಲ, ಜಿಮ್​​​ ಟ್ರೈನರ್​​​ ಆರಂಭದ ದಿನಗಳಲ್ಲಿ ಮಾತ್ರ ಚೆನ್ನಾಗಿ ಹೇಳಿಕೊಡುತ್ತಿದ್ರು. ನಂತರದ ದಿನಗಳಲ್ಲಿ ಅವರ ನಿರಾಸಕ್ತಿ , ಅಭ್ಯಾಸದಲ್ಲಿ ಅನಾಸಕ್ತಿ ನನಗೆ ಹಿಡಿಸಲಿಲ್ಲ" ಎನ್ನುತ್ತಾರೆ ರಜತ್.

image


ರಜತ್​​ ಅವರಿಗೆ ಅತೀ ಕಡಿಮೆ ಬೆಲೆಯ ಮತ್ತು ಸ್ಪೂರ್ತಿದಾಯಕ ಜಿಮ್​​ನ ಅಗತ್ಯವಿತ್ತು. ಜಸ್ಟ್​ ಡಯಲ್​ ಮೂಲಕ ಕೊಂಡಾಪುರದ ಸುತ್ತಮುತ್ತಲಿನ ಜಿಮ್​ಗಾಗಿ ಅಪ್ಲಿಕೇಷನ್​​ ಕೊಟ್ಟರು. ಕೆಲ ಗಂಟೆಗಳ ನಂತರ ಅವರಿಗೆ ಹಾಬಿಕ್ಸ್​​ ಜಿಮ್​​ನ ಮುಖ್ಯಸ್ಥರಾದ ಜತಿನ್​​ ಬನ್ಸಾಲ್​​ರಿಂದ ಕರೆಬಂತು. ಒಂದು ತಿಂಗಳ ಫಿಟ್ನೆಸ್​​, ಸ್ಪಾ, ಸೌಲಭ್ಯ ಮತ್ತು ಅದನ್ನು ನಗರದ 120 ಫಿಟ್ನೆಸ್​​ ಸೆಂಟರ್​​ಗಳಲ್ಲಿ ಬಳಸುವ ಸದವಕಾಶವನ್ನು ಆಫರ್​​ ಮಾಡಿದ್ರು. ರಜತ್​​ ಸಂತೋದಿಂದ ಒಪ್ಪಿಕೊಂಡ್ರು.

" ಓಮೈಗಾಡ್, ನಾನುಕೇವಲ 2,000 ರೂಪಾಯಿ ಕೊಟ್ಟು ನಂಬಲಿಕ್ಕಾಗದಷ್ಟು ಹೊಸ ಹೊಸ ಫಿಟ್ನೆಸ್ ಆಕ್ಟಿವಿಟಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಅಷ್ಟೇ ಅಲ್ಲ ಝುಂಬಾ ಮತ್ತು ಸ್ವಿಮ್ಮಿಂಗ್ ಅಭ್ಯಾಸ ಮಾಡ್ತಿದ್ದೀನಿ ಅಂದರೆ ಅನ್ಬಿಲಿವಬಲ್" ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ ರಜತ್.

ಯುರೇಕಾ..ಯುರೇಕಾ.. !

ಕೆಲ ವರ್ಷಗಳ ಹಿಂದೆ ಜತಿನ್​​ ಕೂಡ ರಜತ್​ರಂತೆ ಬೇಸತ್ತಿದ್ದರು. ವಾರ್ಷಿಕ ಸದಸ್ಯತ್ವದ ಜಿಮ್​​ ಮೂಲಕ ಹೆಚ್ಚು ಹಣವ್ಯಯಿಸಿದ್ರೂ ಅದರ ಸದುಪಯೋಗ ಪಡೆದುಕೊಳ್ಳಲಾಗುತ್ತಿರಲಿಲ್ಲ.

"ಅಮೇರಿಕಾದಲ್ಲಿನ ಕ್ಲಾಸ್​​ ಸ್ಪಾದ ಬಗ್ಗೆ ನಾನು ಕೇಳಿದ್ದೆ, ಅಲ್ಲಿ ಈ ರೀತಿ ಫಿಟ್​​ನೆಸ್​​ ಸ್ಪಾದ ವ್ಯವಸ್ಥೆ ಇದ್ದು, ಒಂದು ನಿರ್ದಿಷ್ಟ ದಿನಗಳು ಮಾತ್ರ ಅದನ್ನು ಬಳಸಿಕೊಳ್ಳಬಹುದಾಗಿತ್ತು. ಭಾರತದಲ್ಲಿ ಈ ಮಾದರಿಯ ಅನಿವಾರ್ಯತೆ ಇದ್ದದರಿಂದ ಭಾರತದಲ್ಲಿ ಇದನ್ನು ಆರಂಭಿಸೋ ಆಸೆಯಾಯಿತು. ಅದಕ್ಕಾಗಿ ಈ ಪ್ರಾಜೆಕ್ಟನ್ನು ಕೈಗೆತ್ತಿಕೊಂಡೆ ಎನ್ನುತ್ತಾರೆ ಜತಿನ್.

ಕನಸು ಕಟ್ಟಿದ ದಿನಗಳು..

ಅದು 2014 , ದೆಹಲಿ ಐಐಟಿಯ ಪದವೀಧರ ಜತಿನ್​ ಮತ್ತು ಗೆಳೆಯ ಕುರುಕ್ಷೇತ್ರದ ಎನ್ಐಟಿಯ ಪದವೀಧರ ಅಭಿಷೇಕ್, ಇಬ್ಬರು ಹಾಬಿಕ್ಸ್​​​ ಫಿಟ್​ನೆಸ್​​​​ ಸೆಂಟರ್​​ನಲ್ಲಿ ಪಾರ್ಟ್​ಟೈಮ್​​ ಕೆಲಸಕ್ಕಿದ್ದರು. ನಂತರದ ದಿನಗಳಲ್ಲಿ ಅವಕಾಶಗಳನ್ನು ಪಡೆಯಲು ಮತ್ತು ಬದುಕಿನಲ್ಲಿ ಮುಂದೆಬರಲು ನಿರ್ಧರಿಸಿದರು. ಎಸ್ ..! ಆ ಯೋಚನೆ ಬದುಕು ಬದಲಿಸಿತ್ತು.

ಇಬ್ಬರು ಗೆಳೆಯರು ಜಿಮ್​​ ಬಗ್ಗೆ ಲೆಕ್ಕಚಾರ ಆರಂಭಿಸಿದರು. ವಾರ್ಷಿಕ ಸದಸ್ಯತ್ವ ಹೊಂದಿದ್ದ ಸದಸ್ಯರಲ್ಲಿ ಕೇವಲ 23-30 ಪರ್ಸೆಂಟ್​​ ಸದಸ್ಯರು ಮಾತ್ರ ಅದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಬಹುಷ ಈ ಕಾರಣದಿಂದಲೇ 1000 ಸದಸ್ಯರನ್ನಷ್ಟೇ ಒಳಗೊಂಡಿರಬೇಕಾದ ಸಂಸ್ಥೆ 4,000 ಸದಸ್ಯರಿಗೆ ಅವಕಾಶ ನೀಡಿದೆ ಅನ್ನುವ ಅಂಶ ತಿಳಿಯಿತು. ಯುವಕರಲ್ಲಿ ಹೊಸ ಆತ್ಮ ವಿಶ್ವಾಸವನ್ನೇ ಮೂಡಿಸಿತ್ತು. ಬದಲಾವಣೆಗೆ ಮುನ್ನುಡಿ ಬರೆದಿತ್ತು.

"ಅಷ್ಟೇ ಅಲ್ಲದೇ ಅಲ್ಲಿ ಸದಸ್ಯತ್ವ ಪಡೆದಿದ್ದ ಸದಸ್ಯರೊಬ್ಬರು ಪ್ರತಿದಿನ ಒಂದೇ ರೀತಿಯ ಚಟುವಟಿಕೆಗಳಿಂದ ಬೇಸರಗೊಂಡಿದ್ದರು. ಇದನ್ನುಗಮನಿಸಿ ನಾವು ಅಲ್ಲಿ ಲೈವ್ಲಿನೆಸ್, ಮಸ್ತಿ, ತಮಾಷೆ, ಕುತೂಹಲಗಳು, ಹುಟ್ಟುಹಾಕಿದ್ವಿ. ದಿನಾ ದಿನಾ ಚಟುವಟಿಕೆಗಳ ಮೂಲಕ ಹೊಸತನವನ್ನು ತರಲು ಆರಂಭಿಸಿದ್ವಿ. ಮತ್ತದು ವರ್ಕ್ಔಟ್​​​ ಆಯ್ತು ಕೂಡ!" ಅಂತಾ ಜಯದ ನಗೆ ಬೀರುತ್ತಾ ಹೆಗಲು ಕುಣಿಸುತ್ತಾರೆ ಜತಿನ್.

ಅಲ್ಲಿಂದ ಕೆಲವುದಿನಗಳ ನಂತರ ಕೆಲಸ ಬಿಟ್ಟು ಜೂನ್ 19 ರಂದು "ಹಾಬಿಕ್ಸ್" ಫಿಟ್ನೆಸ್ ಆರಂಭಿಸಿದ್ರು.

ಹಾಬಿಕ್ಸ್​​ನ ಸೀಕ್ರೆಟ್​​​​ ಗೊತ್ತಾ..!

ಹಾಬಿಕ್ಸ್ ,ಇದು ಕ್ರೆಡಿಟ್ ಆಧಾರಿತ ಮಾಸಿಕ ಫಿಟ್ನೆಸ್​ ಪಾಸ್. 1,999 ರೂಪಾಯಿ ಕೊಟ್ಟು ಪಾಸ್​ ಪಡೆದರೆ, 30 ಕ್ರೆಡಿಟ್​​ಗ ಳು ಲಭ್ಯವಿರುತ್ತದೆ. ಅಂದರೆ ಹೈದ್ರಾಬಾದ್​​ನ 120 ಜಿಮ್ ಸೆಂಟರ್​​ಗಳಲ್ಲಿ 300 ಬಗೆಯ ಫಿಟ್ನೆಸ್​ ಚಟುವಟಿಕೆಗಳನ್ನು ಮಾಡಬಹುದು.

ಸಾಮಾನ್ಯವಾದ ಜಿಮ್​​ ಚಟುವಟಿಕೆಗಳಿಗೆ ಒಂದು ಕ್ರೆಡಿಟ್​ ಸಾಕು. ಆದರೆ ಟಾಲಿವುಡ್​​ ನಟರು ಬರುವ ಕೆಲವೊಂದು ಎಕ್ಸ್​​ಕ್ಲೂಸಿವ್​​ ಸ್ಟುಡಿಯೋಗಳಲ್ಲಿ 3 ಕ್ರೆಡಿಟ್​​ಗಳನ್ನು ಚಾರ್ಜ್​ ಮಾಡಲಾಗುತ್ತೆ. ನಿಮಗೆ ಇಷ್ಟವಾದ ರೀತಿಯಲ್ಲಿ ನೀವು ಕ್ರೆಡಿಟನ್ನುಬಳಸಬಹುದು. ಅಷ್ಟು ಫ್ಲೆಕ್ಸಿಬಲ್ ಆಗಿದೆ ನಮ್ಮ ಆಫರ್​​ ಅಂತಾರೆ ಜತಿನ್.

ಸದಸ್ಯರು ತಮ್ಮ ಕ್ರೆಡಿಟ್​​ ಪಡೆದ ನಂತರ, ಆನ್​ಲೈನ್​ ಮೂಲಕ ತಮಗೆ ಬೇಕಾದ ಕ್ಲಾಸ್​​ಗಳನ್ನು ಬುಕ್​​ ಮಾಡ ಬಹುದು. ಬುಕಿಂಗ್​​ ಕನ್​​ಫರ್ಮ್ ಆದ ಕೂಡಲೇ ಆ ಸದಸ್ಯರ ಮೆಚ್ಚಿನ ಕ್ಲಾಸ್​ಗಳ ಬಗ್ಗೆ ಜಿಮ್ ಇನ್ಸಟ್ರಕ್ಟರ್​ಗೆ ಮೇಸೆಜ್​​ ತಲುಪುತ್ತೆ. ಈ ಬುಕಿಂಗ್​​ ಕ್ಲಾಸ್​​ಗಳನ್ನು ತರಗತಿ ಆರಂಭವಾಗುವ 5 ನಿಮಿಷ ಮುಂಚೆಯೂ ಮಾಡಬಹುದು. ಸದಸ್ಯರು ಯೋಗ, ಜಿಮ್, ಸ್ವಿಮ್ಮಿಂಗ್, ಡ್ಯಾನ್ಸ್​​ ಮತ್ತು ಬಾಕ್ಸಿಂಗ್​​ ಆಕ್ಟಿವಿಟಿಯನ್ನು ಬೇಕಾದರೂ ಆಯ್ಕೆಮಾಡಿಕೊಳ್ಳಬಹುದು.

ಪ್ರತಿದಿನ ಒಂದೇ ರೀತಿಯ ಜಿಮ್​ ಮಾಡಿ ಬೋರ್​​ ಆಗಿರುವವರು ಇದನ್ನು ಪ್ರಯತ್ನಿಸಬಹುದು ಎನ್ನುತ್ತಾರೆ ಜತಿನ್, ಅಷ್ಟೇ ಅಲ್ಲದೇ ಒಂದು ದಿನದ ಪಾಸ್​​ ಸೌಲಭ್ಯವೂ ಇಲ್ಲಿದೆ.

ಮಾರುಕಟ್ಟೆ ಮತ್ತು ಸ್ಪರ್ಧಿಗಳು

ಭಾರತದ ಫಿಟ್ನೆಸ್​​ ಮಾರುಕಟ್ಟೆ ಮೌಲ್ಯ 2015ರಲ್ಲಿ 100 ಬಿಲಿಯನ್​​ಗಿಂತಲೂ ಹೆಚ್ಚಿದೆ. ಸಿಎಜಿಯ ಪ್ರಕಾರ ಪ್ರತೀ ವರ್ಷವೂ 20-25 ಶೆಕಡಾ ಮಾರುಕಟ್ಟೆ ಹೆಚ್ಚುತ್ತಿದೆ. ಕಡಿಮೆ ಗ್ರಾಹಕ ಧಾರಣೆ ಮತ್ತು ಸರಿಯಾಗಿ ಸಂಘಟನೆಯಾಗದಿರುವುದು ಒಂದು ಸಮಸ್ಯೆಯಾಗಿದೆ.

ಭವಿಷ್ಯದಬೆಳಕಿದು

ಒಂದು ತಿಂಗಳಲ್ಲಿ , 700 ಕ್ಲಾಸ್​​ಗಳು ಬುಕ್ ಆಗಿದ್ದು, ಹಾಬಿಕ್ಸ್​​ನ ಈ ಬೆಳವಣಿಗೆ ಹೊಸ ಭರವಸೆ ಹುಟ್ಟುಹಾಕಿದೆ. " ಭವಿಷ್ಯದಲ್ಲಿ ಹೈದ್ರಾಬಾದ್​​ನಲ್ಲಿ ನಮ್ಮ ನೆಟ್​ವರ್ಕ್ ಅಭಿವೃದ್ಧಿ ಮಾಡಲಾಗುತ್ತದೆ. ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಮೆಟ್ರೋ ನಗರದಲ್ಲೂ ಇದನ್ನು ತರುತ್ತೇವೆ. ಇಲ್ಲಿ ಸಂಗೀತ, ಫೋಟೋಗ್ರಫಿ, ಅಡುಗೆ ಮತ್ತು ಡ್ಯಾನ್ಸ್​​ಗಳನ್ನು ಹೇಳಕೊಡಲಾಗುತ್ತದೆ ಎನ್ನುತ್ತಾರೆ ಜತಿನ್.

ಒಟ್ಟಿನಲ್ಲಿ ಕಡಿಮೆ ಪ್ಯಾಕೇಜ್​​ನಲ್ಲಿ ಕಂಪ್ಲೀಟ್​​​ ಮ್ಯಾನ್​​ ಆಗೋಕೆ ಹಾಬಿಕ್ಸ್​​ ಜಿಮ್​​ ಸಾಕಷ್ಟು ನೆರವಾಗೋದರಲ್ಲಿ ಅನುಮಾನವೇ ಇಲ್ಲ.