ಬೇಡವಾದ ಬೂದಿಯಿಂದ ಸಿಲಿಕಾ ಉತ್ಪಾದನೆ- ತಂತ್ರಜ್ಞಾನದಲ್ಲಿ ಬ್ರಿಡ್ಜ್​​​​ಡಾಟ್ಸ್ ಅಲೆ

ಟೀಮ್​​ ವೈ.ಎಸ್​​.

0

ಕಸದಿಂದ ರಸ ಅನ್ನೋ ಮಾತೇ ಇದೆ. ಹಾಗೇ ತ್ಯಾಜ್ಯದಿಂದಲೇ ಲಾಭದಾಯಕ ಉದ್ದಿಮೆ ಆರಂಭಿಸಿದವರ ಯಶೋಗಾಥೆ ಇದು. ಭತ್ತದ ಬೂದಿಯಿಂದ ಸಿಲಿಕಾ ಉತ್ಪಾದಿಸಿದ ಸಾಹಸಗಾಥೆ. ಕೈಗಾರಿಗೆ ಹಾಗೂ ಅಕಾಡೆಮಿಗಳ ಮಧ್ಯೆ ಅವಿನಾಭಾವ ಸಂಬಂಧವಿದೆ. ಆದ್ರೆ ಅದಕ್ಕೊಂದು ಸ್ಪಷ್ಟ ರೂಪ ಸಿಕ್ಕಿರಲಿಲ್ಲ. ವಿವಿಧ ಸಂಘ ಸಂಸ್ಥೆಗಳು ಹೊಸ ತಂತ್ರಜ್ಞಾನಗಳಿಗಾಗಿ ಸಂಪರ್ಕಿಸಿದಾಗಲೆಲ್ಲ ತೃಪ್ತಿಕರ ಫಲಿತಾಂಶ ಸಿಗುತ್ತಿರಲಿಲ್ಲ. 2011ರಲ್ಲಿ ತನ್ಮಯ್ ಪಾಂಡೆ ಹಾಗೂ ನಿಖರ್ ಜೈನ್ ಜೊತೆಯಾಗಿ ಇದಕ್ಕೊಂದು ಪರಿಹಾರ ಹುಡುಕಿದ್ದಾರೆ. ನೂತನ ತಂತ್ರಜ್ಞಾನಗಳ ಆವಿಷ್ಕಾರಕ್ಕಾಗಿ ಕೈಗಾರಿಕೆ ಹಾಗೂ ಅಕಾಡೆಮಿಗಳ ನಡುವಣ ಸಂಪರ್ಕ ಸೇತುವೆಯಂತೆ ಬ್ರಿಡ್ಜ್​​ ಡಾಟ್ಸ್​​​ನ್ನು ಆರಂಭಿಸಿದ್ದಾರೆ. ಪ್ರೊಫೆಸರ್‍ಗಳು ಹಾಗೂ ಸಂಶೋಧನಾ ವಿಜ್ಞಾನಿಗಳ ನೆರವಿನಿಂದ ಕೈಗಾರಿಕೆಗಳಲ್ಲಿನ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕಾರ್ಯವನ್ನು ಬ್ರಿಡ್ಜ್​​​ಡಾಟ್ಸ್ ಮಾಡುತ್ತಿದೆ.

ರಾಸಾಯನಿಕಗಳು ಹಾಗೂ ತ್ಯಾಜ್ಯಗಳ ಬಗ್ಗೆ ಬ್ರಿಡ್ಜ್​​​ಡಾಟ್ಸ್ ಹೆಚ್ಚಿನ ಗಮನಹರಿಸುತ್ತಿದೆ. ಬ್ರಿಡ್ಜ್​​ಡಾಟ್ಸ್ ಪ್ರೊಫೆಸರ್‍ಗಳು ಹಾಗೂ ವಿಜ್ಞಾನಿಗಳನ್ನು ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳುತ್ತದೆ. ಅದೇ ಆಧಾರದ ಮೇಲೆ ವೇತನವನ್ನೂ ನಿಗದಿ ಮಾಡುತ್ತದೆ. ಬ್ರಿಡ್ಜ್​​ ಡಾಟ್ಸ್​​ನ ಸಂಸ್ಥಾಪಕ ತನ್ಮಯ್ ವಾರಣಾಸಿಯ ಐಐಟಿ ಬಿಎಚ್‍ಯುನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಬಿಟೆಕ್ ಪದವಿ ಪಡೆದಿದ್ದಾರೆ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಸುಮಾರು 500ಕ್ಕೂ ಹೆಚ್ಚು ಕಂಪನಿಗಳಿಗೆ ತನ್ಮಯ್ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.

ಬ್ರಿಡ್ಜ್​​​ಡಾಟ್ಸ್ ಬೆಳೆದು ಬಂದ ಹಾದಿ..

ಬ್ರಿಡ್ಜ್​​​ಡಾಟ್ಸ್ ತಂತ್ರಜ್ಞಾನ ಉದ್ಯಮಕ್ಕೆ ಕಾಲಿಟ್ಟಿದ್ದು ಐಐಟಿ ಬಿಎಚ್‍ಯು ಮೂಲಕ ಅಂತಾನೇ ಹೇಳಬಹುದು. ಯಾಕಂದ್ರೆ ಬ್ರಿಡ್ಜ್​​​ಡಾಟ್ಸ್ಗೆ ಐಐಟಿ ಬಿಎಚ್‍ಯು 14 ಲಕ್ಷ ರೂಪಾಯಿ ನೆರವು ನೀಡಿದೆ. ಸದ್ಯ ಬ್ರಿಡ್ಜ್​​​ಡಾಟ್ಸ್ 2 ಕಚೇರಿಗಳು ಹಾಗೂ ಪ್ರಯೋಗಾಲಯಗಳನ್ನು ಹೊಂದಿದೆ. ಭಾರತ, ಅಮೆರಿಕ, ಯುರೋಪ್, ಮಧ್ಯಪ್ರಾಚ್ಯ ರಾಷ್ಟ್ರಗಳು ಹಾಗೂ ಆಸ್ಟ್ರೇಲಿಯಾದ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. ಬ್ರಿಡ್ಜ್​​​ಡಾಟ್ಸ್ನ ಪ್ರಮುಖವಾಗಿ ತ್ಯಾಜ್ಯ, ರಾಸಾಯನಿಕ ವಸ್ತುಗಳು ಮತ್ತು ಸೌಂದರ್ಯ ವರ್ಧಕಗಳತ್ತ ಚಿತ್ತ ನೆಟ್ಟಿದೆ. ಕಳೆದ 4 ವರ್ಷಗಳಲ್ಲಿ ಹಲವು ಉತ್ಪನ್ನಗಳನ್ನು ತಯಾರಿಸಿದೆ. ಬ್ರಿಡ್ಜ್​​​ಡಾಟ್ಸ್ ವೆಬ್‍ನಲ್ಲಿರುವ ಅದೆಷ್ಟೋ ಉತ್ಪನ್ನಗಳು ಮನೆಯಲ್ಲೇ ತಯಾರಾಗಿದ್ದು ಅನ್ನೋದು ವಿಶೇಷ. ಐಐಟಿಯಲ್ಲಿ ಓದಿರುವ ಐದಾರು ಮಂದಿ ಬ್ರಿಡ್ಜ್​​​ಡಾಟ್ಸ್ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. 4 ವರ್ಷಗಳಲ್ಲಿ 10 ಉತ್ಪನ್ನಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಂಶೋಧಿಸಿದ್ದಾರೆ. ಈ ತಂತ್ರಜ್ಞಾನಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಒಂದು ಯೋಜನೆ ಪೂರ್ಣಗೊಳ್ಳಲು 300ರಿಂದ 1000 ಗಂಟೆಗಳು ಬೇಕು. ಸುಮಾರು 3 ರಿಂದ 10 ಲಕ್ಷ ರೂಪಾಯಿ ವೆಚ್ಚವಾಗುತ್ತದೆ.

ಉತ್ಪನ್ನಗಳ ಆವಿಷ್ಕಾರ..

ಆರ್ & ಡಿ ಸೇವೆಯೇ ನಮ್ಮ ಪ್ರಮುಖ ಉದ್ದೇಶವಲ್ಲ ಎನ್ನುತ್ತಾರೆ ತನ್ಮಯ್. ತ್ಯಾಜ್ಯ ಮರುಬಳಕೆಯಲ್ಲಿ ಬ್ರಿಡ್ಜ್​​​ಡಾಟ್ಸ್ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಭತ್ತದ ಹೊಟ್ಟಿನ ಬೂದಿಯಿಂದ ಸಿಲಿಕಾ ಮೆಟಲ್ ಅನ್ನು ಉತ್ಪಾದಿಸುತ್ತಿದೆ. ಭತ್ತದ ಹೊಟ್ಟನ್ನು ಬಾಯ್ಲರ್‍ಗಳಲ್ಲಿ ಇಂಧನವಾಗಿ ಬಳಸಲಾಗುತ್ತದೆ. ಪ್ರತಿ ವರ್ಷ ಸುಮಾರು 500 ಮಿಲಿಯನ್ ಟನ್ ಭತ್ತ ಉತ್ಪಾದನೆಯಾದ್ರೆ, ಅದರಿಂದ ಸಿಗುವ ಹೊಟ್ಟು 100 ಮಿಲಿಯನ್ ಟನ್. ಭತ್ತದ ಹೊಟ್ಟಿಗೆ ಹೇಳಿಕೊಳ್ಳುವಂಥ ಬೇಡಿಕೆಯಿಲ್ಲ. ಬೆಲೆಯೂ ಕಡಿಮೆ. ಹಾಗಾಗಿ ಬಾಯ್ಲರ್‍ಗಳಲ್ಲಿ ಮಾತ್ರ ಬಳಸ್ತಾರೆ. ಅದರಿಂದ ಬಂದ ಬೂದಿಯನ್ನು ಖಾಲಿ ಜಾಗಗಳಲ್ಲಿ ಗುಡ್ಡೆ ಹಾಕುತ್ತಾರೆ. ಇದರಿಂದ ಪರಿಸರಕ್ಕೆ ಹಾನಿ ತಪ್ಪಿದ್ದಲ್ಲ. ಆ ಬೂದಿಯನ್ನೇ ಮರುಬಳಕೆ ಮಾಡಿಕೊಂಡು ಬ್ರಿಡ್ಜ್​​​ಡಾಟ್ಸ್ ಸಿಲಿಕಾವನ್ನು ತಯಾರಿಸುತ್ತಿದೆ.

ಸಿಲಿಕಾವನ್ನು ಟೈರ್‍ಗಳಲ್ಲಿ ಬಳಸಲಾಗುತ್ತದೆ. ಇದರಿಂದ ವಾಹನಗಳಲ್ಲಿ ಇಂಧನ ಬಳಕೆ ಪ್ರಮಾಣ ಶೇಕಡಾ 5 ರಿಂದ 7ರಷ್ಟು ಕಡಿಮೆಯಾಗುತ್ತದೆ. ಟೈರ್‍ಗಳಲ್ಲಿ ಸಿಲಿಕಾ ಬಳಕೆಯಿಂದ ಇಂಧನ ದಕ್ಷತೆ ಹೆಚ್ಚುತ್ತದೆ. ಈ ಪ್ರಕ್ರಿಯೆ ಕೂಡ ಪರಿಸರ ಪ್ರಿಯವಾದದ್ದು. ಜೊತೆಗೆ ಅತ್ಯಂತ ಕಡಿಮೆ ಶಕ್ತಿ ವ್ಯಯವಾಗುತ್ತದೆ. ಹಾಗಾಗಿ ಇಂತಹ ಉತ್ಪನ್ನಗಳು ಲಾಭದಾಯಕ ಅನ್ನೋದು ತನ್ಮಯ್ ಅವರ ಅಭಿಪ್ರಾಯ. ಅವರು ಶೇಕಡಾ 15-20 ರಷ್ಟು ಅಧಿಕ ಲಾಭ ಪಡೆಯುವ ಲೆಕ್ಕಾಚಾರದಲ್ಲಿದ್ದಾರೆ.

ಪ್ರಶಸ್ತಿಗಳ ಸುರಿಮಳೆ..

ಉದ್ಯಮ ಕ್ಷೇತ್ರದಲ್ಲಿ ಬ್ರಿಡ್ಜ್​​​ಡಾಟ್ಸ್ ಹೊಸ ಅಲೆಯೆಬ್ಬಿಸಿದೆ. ಹಲವು ಪುರಸ್ಕಾರಗಳು ಸಂಸ್ಥೆಯನ್ನು ಅರಸಿ ಬಂದಿವೆ. ಶೀಘ್ರದಲ್ಲೇ ಉತ್ಪಾದನಾ ಘಟಕವೊಂದನ್ನು ಮಾಡುವ ಯೋಜನೆಯನ್ನು ತನ್ಮಯ್ ಹಾಕಿಕೊಂಡಿದ್ದಾರೆ. ಇದಕ್ಕಾಗಿ ಬಂಡವಾಳ ಸಂಗ್ರಹಿಸಲು ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತದಾದ್ಯಂದ ಯಂತ್ರೋಪಕರಣ ಸಾಮಾಗ್ರಿ ತಯಾರಿಕಾ ಘಟಕಗಳನ್ನು ತೆರೆದು ಇನ್ನು 3 ವರ್ಷಗಳಲ್ಲಿ ಯಶ ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ಭತ್ತ ಬೆಳೆಯುವ ದೇಶಗಳದ ಕಂಪನಿಗಳೊಂದಿಗೆ ಪಾಲುದಾರರಾಗಿ ಅಲ್ಲಿಯೂ ಘಟಕ ಆರಂಭಿಸುವ ಹುಮ್ಮಸ್ಸಿನಲ್ಲಿದ್ದಾರೆ.

ವಿಶೇಷ ಅಂದ್ರೆ ಬ್ರಿಡ್ಜ್​​​ಡಾಟ್ಸ್ ಸಂಸ್ಥೆಯ ಬೆಳವಣಿಗೆ ದರ ವರ್ಷದಿಂದ ವರ್ಷಕ್ಕೆ ಶೇಕಡಾ ನೂರಕ್ಕಿಂತಲೂ ಅಧಿಕ. ಈ ವರ್ಷ ಕಂಪನಿಯ ಆದಾಯ 60 ಲಕ್ಷಕ್ಕೆ ತಲುಪುವ ಸಾಧ್ಯತೆಯಿದೆ. ಇನ್ನು 3 ವರ್ಷಗಳಲ್ಲಿ 7000 ಟನ್ ಸಿಲಿಕಾ ಉತ್ಪಾದಿಸಿ 50 ಕೋಟಿ ಆದಾಯ ಗಳಿಸುವ ಟಾರ್ಗೆಟ್ ಹಾಕಿಕೊಂಡಿದ್ದಾರೆ ತನ್ಮಯ್.

Related Stories