ಪೂಜೆ ಮಾಡೋದು ಮಾತ್ರ ನಿಮ್ಮ ಕೆಲಸ- ವಸ್ತು ತಂದುಕೊಡುವುದು ನಮ್ಮ ಕೆಲಸ..!

ಟೀಮ್​ ವೈ.ಎಸ್​. ಕನ್ನಡ

ಪೂಜೆ ಮಾಡೋದು ಮಾತ್ರ ನಿಮ್ಮ ಕೆಲಸ- ವಸ್ತು ತಂದುಕೊಡುವುದು ನಮ್ಮ ಕೆಲಸ..!

Thursday August 11, 2016,

3 min Read

ವರಮಹಾಲಕ್ಷ್ಮಿ ಹಬ್ಬದ ಸಡಗರ.. ಗಣೇಶ ಹಬ್ಬನೂ ಬಂತು.. ದೀಪಾವಳಿಗೂ ಸಜ್ಜಾಗಬೇಕಿದೆ. ಮನೆಯಲ್ಲಿ ಎಲ್ಲಾ ಪೂಜೆ,ಪುನಸ್ಕಾರಗಳಿಗೆ ಸಜ್ಜಾಗಬೇಕಿದೆ. ಮಾರುಕಟ್ಟೆಯಿಂದ ಹೂ ತರಬೇಕು. ಹಣ್ಣು ಹಂಪಲುಗಳು ಬೇಕು. ಊದುಕಡ್ಡಿ, ದೀಪದ ಎಣ್ಣೆ ಎಲ್ಲಾ ಬೇಕು. ಆದ್ರೆ ನಮ್ಮ ಹತ್ರ ಟೈಮ್​ ಇಲ್ಲ. ಸಿಗೋ ಒಂದು ವಾರದ ರಜೆಯಲ್ಲಿ ಮೈ ಹೊದ್ದು ಕುಳಿತುಕೊಳ್ಳುವಷ್ಟು ಕೆಲಸವಿದೆ. ಆದ್ರೆ ದೇವರ ಕಾರ್ಯವನ್ನು ಬಿಡೋದಿಕ್ಕೆ ಮನಸ್ಸಿಲ್ಲ.

image


ಹೀಗೆಲ್ಲಾ ಯೋಚನೆ ಮಾಡುವರಿಗಾಗೇ ಹುಟ್ಟಿಕೊಂಡಿದ್ದು ಡೈಲಿ ಪೂಜಾ ಡಾಟ್​ ಕಾಮ್​. ಡೈಲಿ ಪೂಜಾ ಡಾಟ್​ ಕಾಮ್​ ನಿಮಗೆ ಅಗತ್ಯವಿರುವ ಎಲ್ಲಾ ಪೂಜಾ ಸಾಮಾಗ್ರಿಗಳನ್ನು ಒಂದೇ ಕ್ಲಿಕ್​ನಲ್ಲಿ ನಿಮ್ಮ ಮನೆಗೆ ತಲುಪಿಸುತ್ತದೆ. ಒಂದು ಕ್ಲಿಕ್​ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಡೈಲಿ ಪೂಜಾ ಡಾಟ್​ ಕಾಂನಿಂದ ನಿಮ್ಮ ಮನಸ್ಸಿನ ನೆಮ್ಮದಿಯ ಜೊತೆಗೆ ದೇವರ ಕೆಲಸ ಕಾರ್ಯಗಳು ಕೂಡ ಸಲೀಸಾಗಿ ನಡೆದುಬಿಡುತ್ತದೆ.

ಇದನ್ನು ಓದಿ: ಟೊಮ್ಯಾಟೋ ಬೆಳೆಯಲ್ಲಿ ಹೊಸ ಮ್ಯಾಜಿಕ್​- ಜಪಾನ್​ ತಳಿಯಿಂದ ಲಾಭದ ಕಿಕ್​

ಈಗಿನ ಜೀವನ ಏನಿದ್ರೂ ಯಾಂತ್ರಿಕ ಬದುಕು. ಕುಳಿತಲ್ಲೇಎಲ್ಲವೂ ಲಭ್ಯವಾಗುವಂತ ದಿನವಿದು. ಒಂದು ಕ್ಲಿಕ್ ಮಾಡಿದ್ರೆ ಸಾಕು ಬೇಕಿದ್ದ ಮತ್ತು ಅಗತ್ಯವಿರುವ ವಸ್ತುಗಳು ಥಟ್‍ ಅಂತ ಕಣ್ಣ ಮುಂದೆ ಬಂದು ಬೀಳುತ್ತದೆ. ಈಗಿನ ದುಬಾರಿ ಜೀವನದಲ್ಲಿ ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡಿಕೊಂಡು ಮಾರುಕಟ್ಟೆಗೆ ಹೋಗಿ ಟ್ರಾಫಿಕ್​ನಲ್ಲಿ ಸಿಕ್ಕಿಕೊಂಡು ಶಾಪಿಂಗ್ ಮಾಡುವ ಗೋಜಿಗೆ ಯಾರು ಹೋಗುವುದಿಲ್ಲ. ಈಗಾಗಲೇ ತರಕಾರಿ,ಹಣ್ಣು ,ಮೆಡಿಸಿನ್,ಊಟ-ತಿಂಡಿ, ಬಟ್ಟೆ ಹೀಗೆ ಇನ್ನೂ ಅನೇಕ ವಸ್ತುಗಳನ್ನ ಆನ್​ಲೈನ್ ನಲ್ಲಿ ಬುಕ್ ಮಾಡಿ ಪಡೆದುಕೊಳ್ಳಬಹುದು. ಆದ್ರೆ ಹೂ -ಪೂಜಾ ಸಾಮಾಗ್ರಿ ಅಂದ ತಕ್ಷಣ ಅವು ಫ್ರೆಶ್​ ಆಗಿರಬೇಕು, ಅದನ್ನ ನಾವೇ ಹೋಗಿ ತೆಗೆದುಕೊಂಡು ಬರಬೇಕು ಅನ್ನೋ ರೂಲ್ಸ್ ಈಗ ಇಲ್ಲ. ಅದಕ್ಕೂ ಈಗ ಸಿಕ್ಕಿದೆ ಸುಲಭ ಉಪಾಯ. ಕುಳಿತಲ್ಲೇ ಆರ್ಡರ್ ಮಾಡಿ ನಿಮಗೆ ಬೇಕಿರೋ ಪೂಜಾ ಸಾಮಾಗ್ರಿಗಳನ್ನ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಅದೂ ಕೂಡ ಫ್ರೀ ಡೆಲಿವೆರಿ ಚಾರ್ಜ್ ಮೂಲಕ.

image


ಡೈಲಿ ಪೂಜಾ ಡಾಟ್‍ ಕಾಮ್

ಡೈಲಿ ಪೂಜಾ ಡಾಟ್ ಕಾಮ್​, ಪೂಜಾ ಸಾಮಾಗ್ರಿಗೆ ಬೇಕಿರೋ ಎಲ್ಲಾ ವಸ್ತುಗಳು ಸಿಗೋ ಆನ್ ಲೈನ್ ಸ್ಟೋರ್​. ದಿನ ಬದಲಾದಂತೆ ದಾರಿಯಲ್ಲಿ ಹಾಗೂ ಮನೆ ಮುಂದೆ ಬಂದು ಹೂ ಹಣ್ಣು ಮಾರುವವರ ಸಂಖ್ಯೆಕೂಡ ಕಡಿಮೆ ಆಗುತ್ತಾ ಬಂದಿದೆ. ಇದೇ ಉದ್ದೇಶವನ್ನಿಟ್ಟುಕೊಂಡು ಇಂಥದೆಲ್ಲ ಆನ್​ಲೈನ್​ನಲ್ಲಿ ಲಭ್ಯವಾದ್ರೆ ತುಂಬಾನೇ ಉಪಯೋಗವಾಗುತ್ತೆ ಅಂತ ತಿಳಿದ ಸಚಿನ್ ಈ ಉದ್ಯೋಗಕ್ಕೆ ಕೈ ಹಾಕಿದ್ದಾರೆ. ಹೂ ,ಹಣ್ಣು ,ಪೂಜಾ ಸಾಮಾಗ್ರಿ,ದೇವರ ವಿಗ್ರಹಗಳನ್ನ ನೀವು ಆನ್‍ಲೈನ್ ಮೂಲಕ ಕೊಂಡುಕೊಳ್ಳಬಹುದು. ಇನ್ನೂ ವಿಶೇಷ ಅಂದ್ರೆ ಇಲ್ಲಿ ನಿಮಗೆ ಪುರೋಹಿತರು ಕೂಡ ಲಭ್ಯವಿದ್ದಾರೆ. ಕೆಲವು ವರ್ಷಗಳ ಹಿಂದೆ ಪರಿಚಯಸ್ಥರ ಮೂಲಕ ಪುರೋಹಿತರನ್ನ ಸಂಪರ್ಕ ಮಾಡಬಹುದಿತ್ತು. ಆದ್ರೆ ಇಂದಿನ ದಿನಗಳಲ್ಲಿ ಎಲ್ಲರ ಜೀವನ ಬ್ಯೂಸಿ ಆಗಿರೋದ್ರಿಂದ ಪೂಜೆ ಸಮಾರಂಭಕ್ಕೆ ಪುರೋಹಿತರನ್ನ ಹುಡುಕಿಕೊಳ್ಳೊದೇ ಕಷ್ಟ. ಆದ್ರೆ ಇದಕ್ಕಾಗಿಯೇ ಪೂಜಾಡಾಟ್‍ಕಾಮ್ ನಲ್ಲಿ ಪುರೋಹಿತರುಕೂಡ ಲಭ್ಯವಿದ್ದಾರೆ.

image


ಪೂಜಾ ಡಾಟ್‍ ಕಾಮ್ ಹೇಗೆ ಕೆಲಸ ಮಾಡುತ್ತದೆ..?

ಡೈಲಿ ಪೂಜಾ ಡಾಟ್‍ಕಾಮ್ ನಲ್ಲಿ ಪೂಜೆಗಾಗಿ ಬೇಕಿರೋ ಎಲ್ಲಾ ರೀತಿಯ ವಸ್ತುಗಳು ಲಭ್ಯವಿದೆ. ಒಮ್ಮೆವೆಬ್ ಸೈಟ್​ಗೆ ಲಾಗಿನ್​ ಆಗಿ ನಿಮಗೆ ಬೇಕಿರೋ ಸಾಮಾಗ್ರಿಗಳನ್ನ ಆಯ್ಕೆ ಮಾಡಿಕೊಳ್ಳಬಹುದು. ಫ್ರೆಶ್‍ ಆಗಿರುವ ಹೂಗಳು ,ಹಣ್ಣುಗಳು ಹಾಗೂ ಇನ್ನೂ ಅನೇಕ ವಸ್ತುಗಳು ನಿಮಗೆ ಕೊಂಡುಕೊಳ್ಳಲು ಲಭ್ಯವಿರುತ್ತೆ. ಇನ್ನೂ ಹೂ ಮತ್ತು ಹಣ್ಣುಗಳು ಇಂದಿನ ಮಾರುಕಟ್ಟೆಯ ದರದ ಬೆಲೆಗೆ ತಕ್ಕಂತೆ ಬೆಲೆಯನ್ನ ನಿಗದೆ ಮಾಡಿರಲಾಗುತ್ತದೆ. ಹಾಗಾಗಿ ನೀವು ಮಾರುಕಟ್ಟೆಗೆ ಹೋಗಿ ಬಾರ್ಗೇನ್ ಮಾಡಿ ಕೊಂಡುಕೊಳ್ಳುವ ಬದಲು ಮನೆಯಲ್ಲೇ ಕುಳಿತು ಆರ್ಡರ್ ಮಾಡಬಹುದು. ಇನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿದ 4 ಗಂಟೆ ಒಳಗೆ ನಿಮ್ಮ ಸಾಮಾಗ್ರಿಗಳು ಮನೆ ಬಾಗಿಲಿಗೆ ಬಂದು ತಲುಪುತ್ತದೆ. ವೆಬ್ ಸೈಟ್ ನಲ್ಲಿ ಲಭ್ಯವಿರುವ ಪಿನ್ ಕೋಡ್ ನಲ್ಲಿ ಮಾತ್ರ ಡೆಲೆವರಿಯನ್ನ ಮಾಡಲಾಗುತ್ತದೆ. ಇನ್ನು ಬುಕ್ ಮಾಡಿದ ನಂತ್ರ ನೀವು ಮನೆಯಲ್ಲಿ ಇರದೆ ಇದ್ರೆ ನಿಮ್ಮ ವಸ್ತು ಅಕ್ಕ ಪಕ್ಕದ ಮನೆಯವ್ರಿಗೆ ಅಥವಾ ನಿಮಗೇ ತಲುಪುವಂತೆ ನಿಮ್ಮ ಮನೆ ಬಳಿ ಕೊಟ್ಟು ಬರಲಾಗುತ್ತೆ. ಒಮ್ಮೆ ಬುಕ್ ಮಾಡಿ ನಂತ್ರ ಅದು ಬೇಡ ಅಂತ ನೀವೇನಾದ್ರು ಬುಕ್ಕಿಂಗ್‍ ಕ್ಯಾನ್ಸೆಲ್ ಮಾಡಿದ್ರೆ 100 ರೂ ಹಣವನ್ನ ಬಿಟ್ಟು ಹೆಚ್ಚುವರಿ ಹಣವನ್ನ ನಿಮಗೆ ವಾಪಸ್ ಮಾಡಲಾಗುತ್ತದೆ. ಒಟ್ಟಿನಲ್ಲಿ ಮಹಿಳೆಯರ ಫ್ರೆಂಡ್ಲಿ ಆಗಿರೋ ಪೂಜಾಡಾಟ್‍ಕಾಮ್‍ ಇತ್ತೀಚಿನ ದಿನಗಳಲ್ಲಿ ಸಖತ್ ಫೇಮಸ್‍ ಆಗಿದೆ.

ಇದನ್ನು ಓದಿ:

1. ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಅಪ್ಪಟ ಕನ್ನಡ ರಂಗಭೂಮಿ ಪ್ರತಿಭೆ

2. 15 ಲಕ್ಷದ ನೌಕರಿ ತೊರೆದು ಹಳೆ ಸೆಲೂನ್ ಗೆ ಹೊಸ ಟಚ್ ನೀಡಿದ ಸ್ನೇಹಿತರು

3. ಸಿನಿಮಾ ತಾರೆಯರಿಗೆಲ್ಲ ಮಾದರಿ ಎವೆಲಿನ್ ಶರ್ಮಾರ ಸಮಾಜ ಸೇವೆ..!