ಪೋಲಿಯೋ ಬಾಧಿತ ಈಗ ಟ್ರಾಫಿಕ್ ವಾರ್ಡನ್..!

ಎನ್​ಎಸ್​ಆರ್​

ಪೋಲಿಯೋ ಬಾಧಿತ ಈಗ ಟ್ರಾಫಿಕ್ ವಾರ್ಡನ್..!

Sunday April 03, 2016,

2 min Read

ಏನಾದ್ರು ಮಾಡಬೇಕೆಂಬ ಛಲವಿದ್ದರೆ, ಏನ್ ಬೇಕಾದ್ರು ಮಾಡಬಹುದು. ಎಲ್ಲರು ಕನಸು ಕಾಣುತ್ತಾರೆ. ಆದರೆ ಎಲ್ಲರು ಕಂಡ ಕನಸುಗಳು ನನಸಾಗಿಸಿಕೊಳ್ಳುವುದಿಲ್ಲ. ಆದರೆ ಇಲ್ಲೋರ್ವ ಅದ್ಭುತ ವ್ಯಕ್ತಿಯಿದ್ದಾರೆ. ದುರ್ಬಲ ದೇಹವನ್ನು ಮೆಟ್ಟಿ ನಿಂತ ಗಟ್ಟಿ ಮನಸ್ಸಿನ ಕಥೆಯಿದು. ಪೋಲಿಯೋ ಬಾಧಿತನಾದ್ರು, ಟ್ರಾಫಿಕ್ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಈ ವ್ಯಕ್ತಿ ಸದ್ಯ ಅನೇಕರಿಗೂ ಸ್ಫೂರ್ತಿಯಾಗಿದ್ದಾರೆ. ತಮ್ಮ ಕಾಯಕದ ಮೂಲಕ ಎಲ್ಲರ ಗಮನಸೆಳೆದಿದ್ದಾರೆ, ಬೆಂಗಳೂರಿನ ಮೊಹ್ಮದ್ ಸಲ್ಮಾನ್.

ಇದನ್ನು ಓದಿ: ಸಾವಾಧಾನವಾಗಿ ಊಟ ಮಾಡಿ...ಹೊಟ್ಟೆ ತುಂಬಿಸಿಕೊಂಡ ಸಂತೋಷವಾಗಿರಿ...!

ಬೆಂಗಳೂರು ನಿವಾಸಿ ಮೊಹಮ್ಮದ್ ಸಲ್ಮಾನ್, ಬಾಲ್ಯದಿಂದಲೇ ಪೊಲೀಸ್ ಆಗಬೇಕೆಂಬ ಕನಸು ಕಂಡವನು. ಪ್ರತಿ ಸಲ ಪೊಲೀಸರನ್ನು ನೋಡುವಾಗ, ಟ್ರಾಫಿಕ್ ಪೊಲೀಸರು ಸಂಚಾರ ನಿಯಂತ್ರಣ ಮಾಡುವಾಗಲೆಲ್ಲಾ ಅವರನ್ನು ನೋಡಿ ಮುಂದೊಂದು ದಿನ ತಾನು ಕೂಡಾ ಇದೇ ಸ್ಥಾನದಲ್ಲಿರುತ್ತೇನೆಂದು, ಬಾಲಕ ಸಲ್ಮಾನ್ ಕನಸು ಕಾಣುತ್ತಿದ್ದ. ಆದರೆ ವಿಧಿ ಬರಹ ಬೇರೆಯೇ ಆಗಿತ್ತು. ಸಲ್ಮಾನ್​​ ಎಂದೂ ಕಂಡರಿಯಾದಂತಹ ಅಘಾತಕ್ಕೆ ಒಳಗಾದ. ಹದಿಹರೆಯದಲ್ಲಿ ಈತನಿಗೆ ಪೋಲಿಯೋ ಬಾಧಿಸಿ ಕಾಲುಗಳು ಶಕ್ತಿ ಕಳೆದುಕೊಂಡವು. ಪೊಲೀಸ್ ಆಗಬೇಕೆಂಬ ಆತನ ಆಸೆಗೆ ಪೋಲಿಯೋ ಹೊಡೆತ ನೀಡಿತ್ತು. ಆದರೆ ಸಲ್ಮಾನ್ ಮಾತ್ರ ಇವ್ಯಾವುದನ್ನು ಲೆಕ್ಕಿಸದೆ, ಮತ್ತೇ ಫೀನಿಕ್ಸ್​​ನಂತೆ ಎದ್ದು ನಿಂತ.

image


ಹೇಗಾದ್ರು ಮಾಡಿ ತಾನು ಟ್ರಾಫಿಕ್ ಪೊಲೀಸ್ ಆಗಬೇಕೆಂಬ ಹಾದಿಯಲ್ಲಿ ಮುಂದುವರೆದ ಸಲ್ಮಾನ್. ನಾಲ್ಕು ವರ್ಷದ ಹಿಂದೆ ಈತ ಟ್ರಾಫಿಕ್ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿ ತನ್ನ ಆಸೆಯನ್ನು ಅವರಲ್ಲಿ ಹೇಳಿಕೊಂಡಿದ್ದ. ಜೊತೆಗೆ ತಾನು ಅವರಿಗೆ ಸಹಾಯ ಮಾಡುವ, ತನ್ನ ಕನಸನ್ನು ನನಸಾಗಿಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದ. ಈತನ ಹುಮ್ಮಸ್ಸು ನೋಡಿದ ಪೊಲೀಸ್ ಅಧಿಕಾರಿಗಳು ಈತನಿಗೆ ಟ್ರಾಫಿಕ್ ವಾರ್ಡನ್ ಕೆಲಸ ನೀಡಿದ್ದಾರೆ.

image


ಸದ್ಯ ಸಲ್ಮಾನ್ ಬೆಂಗಳೂರಿನ ಕೋಲ್ಸ್ ಪಾರ್ಕ್​ನ ಹೆನ್ಸ್ ಸರ್ಕಲ್​​ನಲ್ಲಿ ವಾಹನಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. 21ರ ಹರೆಯದ ಸಲ್ಮಾನ್ ಕೆಲಸಕ್ಕೆ ಅನೇಕ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಜೀವನ ಉತ್ಸಾಹ, ಕೆಲಸದ ಮೇಲಿನ ಪ್ರೀತಿಗೆ ಮನಸಾರೆ ಕೊಂಡಾಡಿದ್ದಾರೆ. ಸಲ್ಮಾನ್ ಕಾರ್ಯ ನಿರ್ವಹಿಸುವಾಗ ಅಲ್ಲಿಯೇನಾದರೂ ಸಮಸ್ಯೆ ಕಂಡರೆ ಸಲ್ಮಾನ್ ತಕ್ಷಣವೇ ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಯಾವುದೇ ರೀತಿ ಟ್ರಾಫಿಕ್ ಆಗದಂತೆ ಅತ್ಯಂತ ಚಾಣಾಕ್ಷ ತನದಿಂದ ಸಲ್ಮಾನ್ ಟ್ರಾಫಿಕ್ ನಿಯಂತ್ರಿಸುತ್ತಿದ್ದಾರೆ.

ದುರ್ಬಲ ದೇಹವನ್ನು ಮೆಟ್ಟಿ ನಿಂತ ಗಟ್ಟಿ ಮನಸ್ಸಿನ ಸಲ್ಮಾನ್, ತಮ್ಮ ಕನಸನ್ನು ನನಸು ಮಾಡಿಕೊಂಡ ನಂತರ ತುಂಬಾ ಶ್ರದ್ದೆಯಿಂದ ತಮ್ಮ ಕಾಯಕವನ್ನು ಮಾಡುತ್ತಿದ್ದಾರೆ. ಕಾಯಕವೇ ಕೈಲಾಸ ಎಂದು ಕೊಂಡು ಜೀವನ ಸಾಗಿಸುತ್ತಿರುವ ಮೊಹ್ಮದ್ ಸಲ್ಮಾನ್ ಕೆಲಸವನ್ನು ಪೊಲೀಸರೂ ಕೂಡ ತುಂಬು ಮನಸ್ಸಿನಿಂದ ಶ್ಲಾಘಿಸಿದ್ದಾರೆ. 

ಇದನ್ನು ಓದಿ:

1. ಕೈ ತುಂಬಾ ಸಂಬಳ, ಅತ್ಯುನ್ನತ ವ್ಯಕ್ತಿಗಳೊಡನೆ ನೆಟ್‍ವರ್ಕ್, ಬೆಂಗಳೂರಿನ ಹೈ-ಫೈ ಲೈಫ್​​ ಬಿಟ್ಟು ವಿದ್ಯೆ ಕಲಿಸಲು ಹೊರಟ "ಯುವಸಂತ"

2. ಸಮಯ ಸಾಧಕನಿಗೆ ಈಗ ಲಕ್ಷ ಲಕ್ಷ ರೂಪಾಯಿ..!

3. ಓದಿದ್ದು ಎಂಬಿಎ, ಆಗಿದ್ದು ಕೋಳಿ ಫಾರ್ಮ್ ಮಾಲೀಕ..!