ದುಡ್ಡಿದ್ರೂ ಮಗಳ ಮದುವೆ ಸಿಕ್ಕಾಪಟ್ಟೆ ಸಿಂಪಲ್- ಮದುವೆಗೆ ಎತ್ತಿಟ್ಟಿದ್ದ ಹಣದಿಂದಲೇ ಬಡವರಿಗೆ ಮನೆ ಕಟ್ಟಿಕೊಟ್ಟ ಉದ್ಯಮಿ

ಟೀಮ್​ ವೈ.ಎಸ್​. ಕನ್ನಡ

ದುಡ್ಡಿದ್ರೂ ಮಗಳ ಮದುವೆ ಸಿಕ್ಕಾಪಟ್ಟೆ ಸಿಂಪಲ್-  ಮದುವೆಗೆ ಎತ್ತಿಟ್ಟಿದ್ದ ಹಣದಿಂದಲೇ ಬಡವರಿಗೆ ಮನೆ ಕಟ್ಟಿಕೊಟ್ಟ ಉದ್ಯಮಿ

Thursday December 15, 2016,

1 min Read

ಮನೋಜ್ ಮುನೋತ್, ಔರಾಂಗಬಾದ್​ನ ಉದ್ಯಮಿ. ದುಡ್ಡಿಗೇನು ಕೊರತೆ ಇಲ್ಲ. ಮಗಳ ಮದುವೆಯನ್ನು ತನಗೆ ಇಷ್ಟ ಬಂದಂತೆ ಮಾಡಬಹುದಿತ್ತು. ಆದ್ರೆ ಮನೋಜ್ ಮಗಳ ಮದುವೆಯನ್ನು ಸಿಂಪಲ್ ಆಗಿ ಮಾಡಿ ಮುಗಿಸಿದ್ರು. ಮದುವೆ ಖರ್ಚಿಗೆ ಇಟ್ಟಿದ್ದ ಹಣದಲ್ಲಿ 90 ಮನೆಗಳನ್ನು ಕಟ್ಟಿ ಮನೆ ಇಲ್ಲದವರಿಗೆ ಮನೆ ಕೊಟ್ಟು ಕಲಿಯುಗದ ಕರ್ಣ ಅಂತ ಎನಿಸಿಕೊಂಡಿದ್ದಾರೆ.

image


ಮನೋಜ್ ಮಗಳ ಮದುವೆಗಾಗಿ ಸುಮಾರು 70 ರಿಂದ 80 ಲಕ್ಷ ರೂಪಾಯಿ ಖರ್ಚು ಮಾಡಲು ಪ್ಲಾನ್ ಮಾಡಿಕೊಂಡಿದ್ದರು. ಆದ್ರೆ ಈ ಈ ಉದ್ಯಮಿಗೆ ಸ್ಥಳೀಯ ಶಾಸಕರೊಬ್ಬರು ಮಾದರಿ ಆಗಿದ್ದಾರೆ. ಶಾಸಕರ ಮಾತಿನಿಂದ ಸ್ಫೂರ್ತಿಗೊಂಡ ಮನೋಜ್ ಬಡವರಿಗೆ ಮನೆ ಕಟ್ಟಿಕೊಟ್ಟಿದ್ದಾರೆ. ಈ ಮೂಲದ ಸಮಾಜಕ್ಕೆ ಮಾದರಿ ಆಗಿದ್ದಾರೆ.

“ನಾನು ಮನೆ ಕೆಲಸಗಳನ್ನು ಮಾಡಿಕೊಂಡಿದ್ದೇನೆ. ನನಗೆ ಈಗ ಬಾಡಿಗೆ ಕಟ್ಟುವ ಚಿಂತೆ ಇಲ್ಲ. ನೀರು ಮತ್ತು ವಿದ್ಯುತ್ ಬಗ್ಗೆಯೂ ಚಿಂತೆ ಇಲ್ಲ. ನನ್ನ ಒತ್ತಡಗಳೆಲ್ಲವೂ ಮನೋಜ್ ನೀಡಿರುವ ಮನೆಯಿಂದಾಗಿ ದೂರವಾಗಿದೆ. ”
- ಶಾಬ್ ಆಲಿ ಶೇಕ್, ಮನೆ ಪಡೆದುಕೊಂಡವರು

ಮನೋಜ್ ನೀಡಿರುವ ಮನೆಗಳ ಪೈಕಿ ಸುಮಾರು 40 ಮನೆಗಳಲ್ಲಿ ಹಲವು ಮಂದಿ ವಾಸವಾಗಿದ್ದಾರೆ. ಮನೋಜ್ ಕೆಲಸದಿಂದಾಗಿ ಮಗಳು ಶ್ರೇಯಾ ಕೂಡ ಖುಷಿಯಾಗಿದ್ದಾರೆ. ತನ್ನ ಅಪ್ಪ ನನಗೆ ಅದ್ಭುತ ಉಡುಗೊರೆಯನ್ನೇ ನೀಡಿದ್ದಾರೆ ಅಂತ ಖುಷಿಯಿಂದ ಹೇಳುತ್ತಾರೆ.

ಕಳೆದ ತಿಂಗಳು ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ, ಬೆಂಗಳೂರಿನಲ್ಲಿ ತನ್ನ ಮಗಳ ಮದುವೆಗೆ ಮಾಡಿದ ಖರ್ಚು ಟೀಕೆಗೆ ಗುರಿಯಾಗಿತ್ತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಪುತ್ರಿಯ ವಿವಾಹವೂ ಸಾಕಷ್ಟು ಟೀಕೆಯನ್ನು ಎದುರಿಸಿತ್ತು. ಆದ್ರೆ ಔರಾಂಗಾಬಾದ್​ನ ಉದ್ಯಮಿ ಮನೋಜ್ ಸಾಮಾಜಿಕ ಕಳಕಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನು ಓದಿ:

1. ತ್ಯಾಜ್ಯಕ್ಕಾಗಿ ಸ್ವೀಡನ್ನಲ್ಲಿ ಭಾರೀ ಬೇಡಿಕೆ- ಕಸಕ್ಕಾಗಿ ಅಂಗಲಾಚುತ್ತಿದೆ ಶ್ರೀಮಂತ ದೇಶ..!

2. ಒಂದು ಕೆಲಸ- ಹಲವು ಕನಸು- ಇದು ಸ್ವಚ್ಛಭಾರತದ ಗೆಲುವು

3. ಸಿಎಂ ಭದ್ರತೆಯ ಹೊಣೆ ಹೊತ್ತ ಮೊದಲ ಮಹಿಳಾ ಐಪಿಎಸ್ ಅಧಿಕಾರಿ..