ಜೀವನದಲ್ಲಿ ಜಿಗುಪ್ಸೆ ಬಂದಿದೆಯೇ..? ಈ ಸೈಟ್ ನಿಮ್ಮ ದುಖಕ್ಕೆ ಹೇಳಲಿದೆ ಗುಡ್ ಬೈ..!

ಟೀಮ್​ ವೈ.ಎಸ್​. ಕನ್ನಡ

0

ನಾವು ಪ್ರತಿಯೊಬ್ಬರೂ ಒಂದೇ ರೀತಿ ಆಲೋಚಿಸುತ್ತೇವೆ. ಹಲವು ಬಾರಿ ಜೀವನ ಏನೂ ಪ್ರಯೋಜನವಿಲ್ಲ. ಯಾವ ಕೆಲಸ ಕೂಡ ನೆಟ್ಟಗಾಗ್ತಾ ಇಲ್ಲ ಎಂದು ಪರಿತಪಿಸುತ್ತಿರುತ್ತೇವೆ. ಇದು ಮನುಷ್ಯ ಸಹಜ ಗುಣ. ಇದಕ್ಕೆಲ್ಲ ಪರಿಹಾರ ಹುಡುಕುವ ಪ್ರಯತ್ನ ಇಲ್ಲಿದೆ. ಇದು ಎಲ್ಲ ಸಮಸ್ಯೆಗಳಿಗೆ ರಾಮ ಬಾಣವಲ್ಲ. ಆದರೂ ಒಂದಂತೂ ಸತ್ಯ.. ನಿರಾಶೆಯ ಮಡುವಿನಲ್ಲಿ ಇದು ಖಂಡಿತವಾಗಿಯೂ ಭರವಸೆಯ ಬೆಳಕಾಗಲಿದೆ. ಅದು ಸತ್ಯ..whysoserious.co.in ಈ ಸೈಟ್ ಗೆ ಒಮ್ಮೆ ಭೇಟಿ ನೀಡಿ. ನಿಮ್ಮಲ್ಲಿ ಮನೆ ಮಾಡಿದ್ದ ನಿರಾಶೆ ಕರಗಿ ಆಶಾ ಭಾವನೆ ಬಲಗೊಳ್ಳಲಿದೆ.

ವೈ ಸೋ ಸೀರಿಯಸ್​ ಅಂದ್ರೇನು..?

ವೈ ಸೋ ಸೀರಿಯಸ್ ವೆಬ್ ಸೈಟ್ ಖುಷ್ ಬೂ ಬಿಸ್ತ್ ಅವರ ಸೃಷ್ಟಿ. ಇವರೇ ಅದರ ಶಿಲ್ಪಿ. ಇದು ಈಗಾಗಲೇ ಜನಮೆಚ್ಚುಗೆ ಗಳಿಸಿದೆ ಎನ್ನುತ್ತಾರೆ ಬಿಸ್ತ್. ಆರಂಭದಲ್ಲಿ ಸ್ವಲ್ಪ ಅಂಜಿಕೆ ಯಿತ್ತು. ಆತಂಕ ಮನೆ ಮಾಡಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ ಎನ್ನುತ್ತಾರೆ ಖುಷ್ ಬೂ. ಈ ವೆಬ್ ಸೈಟ್ ನಲ್ಲಿರುವ ಉತ್ಪನ್ನಗಳನ್ನು ಸ್ವತಂತ್ರ ಡಿಸೈನರ್ ಸಿದ್ಧಪಡಿಸಿರುತ್ತಾರೆ. ಇದಲ್ಲದೆ ಈಗಾಗಲೇ ಜನಪ್ರಿಯವಾಗಿರುವ ಪ್ರೆಡ್ಸ್ ಮತ್ತು ಸೆಬಾಸ್ಟಿಯನ್ ಸರಕು ಇದರಲ್ಲಿ ಸೇರಿದೆ ಎನ್ನುತ್ತಾರೆ ಖುಷ್ ಬೂ.

ಎಲ್ಲರನ್ನು ನಗಿಸುವ, ಚಿಂತೆ ದೂರ ಮಾಡುವ ಮಾಹಿತಿ, ಹಾಗೂ ಕಚಗುಳಿ ಇಡುವ ಫೀಚರ್ ಗಳನ್ನು ಕಲೆ ಹಾಕುವುದು ಸವಾಲಿನ ಕೆಲಸ. ಆದರೂ ಇಲ್ಲಿ ಸವಾಲಿದೆ. ಸವಾಲಿನ ಜೊತೆ ಜೊತೆಗೆ ಚಿಂತೆ ದೂರ ಮಾಡಿದ ಸಂತೃಪ್ತಿ ಇದೆ ಎನ್ನುತ್ತಾರೆ ಖುಷ್ ಬೂ.

ಕೆಲವೇ ಕೆಲವು ಪೂರೈಕೆದಾರರನ್ನು ನಂಬಿ ಕುಳಿತುಕೊಳ್ಳುವ ಹಾಗಿಲ್ಲ. ಗುಣಮಟ್ಟದಲ್ಲಿ ರಾಜೀ ಮಾಡಿಕೊಳ್ಳದೆ ಇತರ ಪೂರೈಕೆದಾರರತ್ತ ಕೂಡ ಗಮನ ಹರಿಸಬೇಕಾಗಿದೆ. ಇದು ಅನಿವಾರ್ಯ ಎನ್ನುತ್ತಾರೆ ಖುಷ್ ಬೂ. ಗುಣಮಟ್ಟದಲ್ಲಿ ರಾಜಿ ಇಲ್ಲ ಎನ್ನುವ ಖುಷ್ ಬೂ, ಬಳಕೆದಾರರು ಇಚ್ಚಿಸುವ ವಸ್ತುಗಳನ್ನು ಪೂರೈಸಲು ಶ್ರಮಿಸುತ್ತೇವೆ. ಅವರ ಸಂತೃಪ್ತಿಯೇ ನಮ್ಮ ಕಾಳಜಿ ಎನ್ನುತ್ತಾರೆ.

ತಮ್ಮ ಉತ್ಪನ್ನಗಳ ಮಾರಾಟದ ಬಗ್ಗೆ ಖುಷ್ ಬೂ ಈ ರೀತಿ ಹೇಳುತ್ತಾರೆ. ಮುಖ್ಯವಾಗಿ ಬ್ಯಾಟ್ ಮನ್ ಗೆ ಸಂಬಂಧಿಸಿದ ವಸ್ತುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.ಟೆಟ್ರಿಸ್ ಲ್ಯಾಂಪ್, ಬಿಗ್ ಬ್ಯಾಂಗ್ ಥಿಯರಿಗೆ ಸಂಬಂಧಿಸಿದ ಸರಕುಗಳು ಮೊದಲ ಸ್ಥಾನ ಪಡೆದಿವೆ. ಮಹಿಳೆಯರು, ಪುರುಷರಿಗಾಗಿ ಉತ್ಪನ್ನಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಖುಷ್ ಬೂ.. ಭಾರತೀಯರ ಅಭಿರುಚಿಗೆ ತಕ್ಕಂತೆ ಡಿಸೈನ್​​​​​​ಗಳನ್ನು ಸಿದ್ಧಪಡಿಸಲಾಗುತ್ತಿದೆ. ಇದು ಅಂತಿಮ ಹಂತದಲ್ಲಿದೆ. ಆದರೂ ಮುಂದಿನ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎನ್ನುತ್ತಾರೆ ಖುಷ್ ಬೂ.

ವೈ ಸೋ ಸೀರಿಯಸ್​ನಲ್ಲಿ ಯಾರಿದ್ದಾರೆ..?

ವೈ ಸೋ ಸೀರಿಯಸ್ ಅತ್ಯಂತ ಕ್ರಿಯಾಶೀಲ ಸದಸ್ಯರನ್ನು ಹೊಂದಿದೆ. ಐಟಿ ಪರಿಣಿತರು ಇದರ ಭಾಗವಾಗಿದ್ದಾರೆ. ಜಾಹೀರಾತಿಗಾಗಿ ಹೆಚ್ಚಿನ ಹಣ ಖರ್ಚು ಮಾಡಲ್ಲ. ಆನ್ ಲೈನ್ ಜಾಹೀರಾತನ್ನು ನೆಚ್ಚಿಕೊಂಡಿದ್ದೇವೆ. ಉತ್ಪನ್ನಗಳ ಗುಣಮಟ್ಟ ಚೆನ್ನಾಗಿದ್ದರೆ ಜನಪ್ರಿಯತೆ ತನ್ನಿಂದ ತಾನೇ ಬರುತ್ತದೆ. ಬಾಯಿ ಮಾತಿನ ಪ್ರಚಾರ ಮುಖ್ಯ ಪಾತ್ರ ವಹಿಸುತ್ತದೆ.. ಇದುವರೆಗೂ ಇದೇ ತಂತ್ರ ನಮ್ಮ ಕೈ ಹಿಡಿದಿದೆ. ಮುಂದಿನ ದಿನಗಳಲ್ಲೂ ಅದೃಷ್ಟ ಮರುಕಳಿಸಲಿದೆ ಎಂದು ಆತ್ಮ ವಿಶ್ವಾಸದಿಂದ ನುಡಿಯುತ್ತಾರೆ ಖುಷ್ ಬೂ.

ಮುಂದಿನ ಯೋಜನೆ ಕನಸುಗಳ ಬಗ್ಗೆಯೂ ಖುಷ್ ಬೂ ಬೆಳಕು ಚೆಲ್ಲಿದ್ದಾರೆ. ಇನ್ನಷ್ಟು ಕ್ರೇಜಿ ಉತ್ಪನ್ನ ಅಥವಾ ಸರಕು ಬಳಕೆದಾರರಿಗೆ ದೊರೆಯುವಂತಾಗಬೇಕು. ಇದು ನಮ್ಮ ಆಶಯ. ಈ ಹಿನ್ನೆಲೆಯಲ್ಲಿ ಪ್ರತಿವಾರ ಮೂರರಿಂದ ನಾಲ್ಕು ಡಿಸೈನರ್ ಗಳನ್ನು ಸೇರ್ಪಡೆಗೊಳಿಸುತ್ತಿದ್ದೇವೆ. ಇದರ ಜೊತೆಗೆ ಇನ್ನಷ್ಟು ಕ್ರಿಯಾ ಶೀಲತೆಯನ್ನು ಅಳವ಼ಡಿಸಲು ನಾವು ಮನಸ್ಸು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕೇವಲ ಉತ್ಪನ್ನಗಳನ್ನು ಪರಿಚಯಿಸಲು ಮಾತ್ರ ಸೀಮಿತಗೊಳ್ಳದೆ, ಇನ್ನಷ್ಟು ಕಾರ್ಯವ್ಯಾಪ್ತಿ ವಿಸ್ತರಣೆಗೆ ಚಿಂತಿಸಿದ್ದೇವೆ.

ತಮ್ಮ ಕನಸುಗಳನ್ನು ಹಂಚಿಕೊಂಡಿರುವ ಖುಷ್ ಬೂ ಇದರ ಜೊತೆಗೆ ಒಂದು ಆತಂಕದ ಬಗ್ಗೆ ಕೂಡ ಪ್ರಸ್ತಾಪಿಸಿದ್ದಾರೆ.

ಖೂಷ್​ಬೂ ಆತಂಕ ಏನು..?

ಕೊರಿಯರ್ ಸರ್ವಿಸ್ ಗುಣಮಟ್ಟದಿಂದ ಕೂಡಿಲ್ಲ ಎನ್ನುವುದು ಅವರ ದೂರು. ಇದರಿಂದ ಸಮಸ್ಯೆ ಎದುರಾಗುತ್ತಿದೆ . ಇದು ಖುಷ್ ಬೂ ಅಳಲು. ಇದರಿಂದಾಗಿ ನಿಗದಿತ ಸಮಯಕ್ಕೆ ಉತ್ಪನ್ನ ತಲುಪಿಸಲು ಸಾಧ್ಯವಾಗುತ್ತಿಲ್ಲ .. ಹೀಗಂತಾ ಅಳಲು ತೋಡಿಕೊಂಡಿದ್ದಾರೆ ಖುಷ್ ಬೂ.

ತಮ್ಮಲ್ಲಿರುವ ಹಣವನ್ನೇ ನಂಬಿ ಖುಷ್ ಬೂ ಈ ಉದ್ಯಮ ವಿನೂತನ ಯೋಜನೆ ಆರಂಭಿಸಿದ್ದಾರೆ. ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇತರ ಮೂಲಗಳಿಂದ ಆರ್ಥಿಕ ಸಹಾಯ ಒದಗಿ ಬಂದರೆ ಅದನ್ನು ಸ್ವಾಗತಿಸುವುದಾಗಿ ಖುಷ್ ಬೂ ಹೇಳಿದ್ದಾರೆ.

ಲೇಖಕರು : ಪ್ರೀತಿ ಚಾಮಿಕುಟ್ಟಿ
ಅನುವಾದಕರು : ಎಸ್​.ಡಿ.

Related Stories

Stories by YourStory Kannada