ಆನ್​​ಲೈನ್​ ಶಾಪಿಂಗ್​ ಚಿಂತೆ ಯಾಕೆ..? ಇಲ್ಲಿ ಒಂದೇ ಸೂರಿನಡಿಯಲ್ಲಿ ಎಲ್ಲವೂ ಲಭ್ಯ..!

ಟೀಮ್​​ ವೈ.ಎಸ್​. ಕನ್ನಡ

0

ಸ್ವಾತಿ ಗೌಬಾ, ಮಹತ್ವಾಂಕ್ಷೆಯ ಯುವತಿ. ಕನಸುಗಳ ಬೆನ್ನೇರಿ ಹೋಗುವ ಛಲಗಾತಿ. ಉದ್ಯಮಿಗಳ ಕುಟುಂಬದಲ್ಲಿ ಬೆಳೆದು ಬಂದ ಸ್ವಾತಿಗೆ ಚಿಕ್ಕಂದಿನಿಂದಲೂ ಹೊಸ ಕನಸುಗಳನ್ನು ಈಡೇರಿಸುವ ತವಕ. ಅಂತಿಮವಾಗಿ ಈ ಕಾರ್ಮಸ್ ತನಕ ಈ ಹವ್ಯಾಸ , ಅಭಿರುಚಿ ಬೆಳೆದು ಬಂತು.

ಒಂದು ವೆಬ್​​​ ಸೈಟನ್ನು ಪದೇ ಪದೇ ಅವಲೋಕಿಸಿದಾಗ ಸ್ವಾತಿಗೆ ಒಂದು ವಿಷಯ ಸ್ಪಷ್ಟವಾಯಿತು. ಈ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ಅಗತ್ಯ ಇದೆ ಎಂದು ಕಂಡುಕೊಂಡರು. ಹೋಟೆಲ್ ಬಗ್ಗೆ ಮಾಹಿತಿ ನೀಡುವ ಝೋಮಾಟೋ ವೆಬ್ ಸೈಟ್ ಮಾದರಿಯಲ್ಲಿ ವ್ಯವಸ್ಥಿತವಾಗಿ ವೆಬ್ ಸೈಟ್ ಮಾಹಿತಿ ದೊರೆಯಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ತಿಳಿದುಕೊಂಡರು. ಈ ರೀತಿಯ ವ್ಯವಸ್ಥೆ ಅಳವಡಿಸಿಕೊಳ್ಳುವುದರಿಂದ ಸಮಗ್ರ ಮಾಹಿತಿ ದೊರೆಯಲಿದೆ ಎಂಬುದು ಸ್ವಾತಿ ವಾದ.

ಈ ಕನಸು ಹೊತ್ತುಕೊಂಡು ಕೆಲಸ ನಿರ್ವಹಿಸುತ್ತಿದ್ದಾಗ ಅವರಿಗೆ ಜೊತೆಯಾದವರು ಮಯೂರ್. ಡಿಜಿಟಲ್ ಏಜೆನ್ಸಿ ಹೊಂದಿದ್ದ ಮಯೂರ್ ಪಟೇಲ್ ಈ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದರು. ಮಾಧ್ಯಮ ಮತ್ತು ಇಲೆಕ್ಟ್ರಾನಿಕ್ ಮೀಡಿಯಾದಲ್ಲಿ ಹೊಂದಿರುವ ಅನುಭವದ ಹಿನ್ನೆಲೆಯಲ್ಲಿ ಕನಸಿಗೆ ಜೀವ ತುಂಬಿದರು. ಅದನ್ನು ಹೋಪಿಂಗೋ( hoppingo) ಎಂದೇ ಗುರುತಿಸುವಂತಾಯಿತು.

ಹೋಪಿಂಗೋದಲ್ಲಿ ಏನೇನಿದೆ..?

ಕನಸುಗಳನ್ನು ಹೊತ್ತು ನಡೆಯುತ್ತಿದ್ದ ಸಂದರ್ಭದಲ್ಲಿ ಅವರಿಗೆ ಬೆಂಬಲಕ್ಕೆ ಸಿಕ್ಕಿದವರು ಏಂಜೆಲ್ ಇನ್ ವೆಸ್ಟರ್ ಭಾಸ್ಕರ್ ವಿಶ್ವನಾದಂ. ಬಂಡವಾಳ ಹೂಡಿಕೆಗೆ ಮುಂದೆ ಬಂದ ಅವರು ಪೂರ್ಣ ಬೆಂಬಲ ನೀಡಿದರು. ಪಕ್ಷಪಾತವಿಲ್ಲದ ರೀತಿಯಲ್ಲಿ ಮಾಹಿತಿ ನೀಡುವುದಲ್ಲದೆ 700 ಈ ಕಾಮರ್ಸ್ ಸ್ಟೋರ್​​​ಗಳ ಪಟ್ಟಿಯನ್ನೇ ಸ್ವಾತಿ ತಮ್ಮ ವೆಬ್ ಸೈಟ್​​​ನಲ್ಲಿ ಅನಾವರಣಗೊಳಿಸಿದರು. ಇದಲ್ಲದೆ ಉತ್ಪನ್ನಗಳ ಬಗ್ಗೆ ಕಮೆಂಟ್ ಮತ್ತು 16 ವಿಭಾಗಗಳ ಅಡಿಯಲ್ಲಿ ಬಟ್ಟೆ, ಗೃಹಾಲಂಕಾರ ಹೀಗೆ ಎಲ್ಲ ವಸ್ತುಗಳ ಮಾಹಿತಿ ಅಡಕವಾಗಿತ್ತು.

2014 ನವೆಂಬರ್ ತಿಂಗಳಲ್ಲಿ ಕಾರ್ಯಾರಂಭ ಮಾಡಿದ ಈ ವೆಬ್ ಸೈಟ್, ಪ್ರತಿ ದಿನ 500 ಹೊಸ ವಸ್ತುಗಳನ್ನು ಸರಾಸರಿಯಾಗಿ ಪರಿಚಯಿಸುತ್ತಿದೆ. ಯಾವುದೇ ಪೂರ್ವಾಗ್ರಹ ಪೀಡಿತವಾಗಿರದೆ ವಿಶ್ಲೇಷಣೆ ಮಾಡುತ್ತಿರುವುದರಿಂದ ಉತ್ಪನ್ನಗಳ ಶಿಫಾರಸಿಗೆ ಕೂಡ ಇದನ್ನು ಬಳಸಲಾಗುತ್ತಿದೆ.

ಒಂದು ದಿನದ ಯಾವುದೇ ಸಂದರ್ಭದಲ್ಲಿ ಹತ್ತು ಸಾವಿರ ಸಕ್ರಿಯ ಬಳಕೆದಾರರು ಇರುವುದು ಇದರ ಹೆಗ್ಗಳಿಕೆ. ಇದಲ್ಲದೆ ಇದರಲ್ಲಿ ಶೇಕಡಾ 44 ಮಂದಿ ಖಾಯಂ ಬಳಕೆದಾರರು. ಸರಾಸರಿ ಉತ್ಪನ್ನಗಳ ಬಗ್ಗೆ ಮಾಹಿತಿ ಪಡೆಯಲು ಬಳಕೆದಾರರು ಒಂಬತ್ತು ನಿಮಿಷ ವ್ಯಯ ಮಾಡುತ್ತಿರುವುದು ಸಾಬೀತಾಗಿದೆ. ಇದರಲ್ಲಿ ಮುಖ್ಯವಾಗಿ ಮಹಿಳೆಯರ ಉಡುಪಿನ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ಮಾಹಿತಿ ಪಡೆಯುತ್ತಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಿಂದ ಶೇಕಡಾ 500 ಬೆಳವಣಿಗೆ ಈ ವೆಬ್ ಸೈಟ್ ದಾಖಲಿಸಿದೆ ಎನ್ನುತ್ತಾರೆ ಸಂಸ್ಥಾಪಕರು. ಪ್ರತಿದಿನ 400 ರಿಂದ 600 ಸಕ್ರಿಯ ಬಳಕೆದಾರರು ಇದರ ಜೊತೆ ಗುರುತಿಸಿಕೊಂಡಿದ್ದಾರೆ.

ಮೂರು ಮಾರ್ಗಗಳಿಂದ ಸಂಸ್ಥೆ ಆದಾಯ ಗಳಿಸುತ್ತಿದೆ. ಮೊದಲನೆಯದು ಸಾಂಪ್ರದಾಯಿಕ ಜಾಹೀರಾತು. ಎರಡನೆಯದು ಮಾಹಿತಿ ಪ್ರಮೋಷನ್. ಇಲ್ಲಿ ಕೆಲವು ಬ್ರ್ಯಾಂಡ್ ಗಳು ಉತ್ಪನ್ನಗಳ ಜನಪ್ರಿಯತೆಗೆ ಶುಲ್ಕ ಪಾವತಿಸುತ್ತವೆ. ಅಂತಿಮವಾಗಿ ಲೇಖನ. ಈ ಲೇಖನ ಪ್ರಕಟಗೊಳ್ಳಲು ಹಣ ಪಾವತಿಸಲಾಗುತ್ತಿದೆ. ಇದು ಉತ್ಪನ್ನಗಳ ಬಗ್ಗೆ ಸಮಗ್ರ ಮಾಹಿತಿ ನೀಡುತ್ತವೆ.

ಮುಂದಿನ ಗುರಿ ಏನು..?

ಮುಂದಿನ ದಿನಗಳಲ್ಲಿ ಡಿಜಿಟಲ್ ಮಾಲ್ ಸ್ಥಾಪಿಸುವುದೇ ಸ್ಟಾರ್ಟ್ ಅಪ್​​ ಯೋಜನೆಯ ಕನಸಾಗಿದೆ. ಬಳಕೆದಾರರು ತಮ್ಮದೇ ಆದ ಸ್ಟೈಲ್ ಸ್ಟೋರ್​​​ಗಳನ್ನು ಸ್ಥಾಪಿಸುವುದೇ ಇದರ ಕನಸಿನ ಭಾಗವಾಗಿದೆ. ಬಳಕೆದಾರರ ಸ್ಟೈಲ್, ಉತ್ಪನ್ನಗಳ ವಿಕ್ರಯಕ್ಕೆ ನೆರವಾದರೆ ಆ ಮೂಲಕ ಆದಾಯ ಗಳಿಸುವುದು ಕೂಡ ಚಿಂತನೆಯಾಗಿದೆ.

ತಮ್ಮ ಯೋಚನೆ ಬಗ್ಗೆ ಮಯೂರ್ ಈ ರೀತಿ ಹೇಳುತ್ತಾರೆ. ತಮ್ಮ ಆದಾಯದಲ್ಲಿ ಶೇಕಡಾ 20 ರಿಂದ 25ನ್ನು ಬಳಕೆದಾರನೊಂದಿಗೆ ಹಂಚಿಕೊಳ್ಳುವ ಚಿಂತನೆ ಇದೆ. ಮುಂದಿನ ಮೂರು ತಿಂಗಳಲ್ಲಿ ಹೋಪಿಂಗೋ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲಿದೆ. ಈ ಮೂಲಕ ಬಳಕೆದಾರರ ಸಂಖ್ಯೆಯನ್ನು ಹತ್ತು ಲಕ್ಷಕ್ಕೆ ವಿಸ್ತರಿಸುವ ಗುರಿ ಹೊಂದಿದೆ. ನೋಂದಾಯಿತ ಬಳಕೆದಾರರ ಸಂಖ್ಯೆಯನ್ನು ಮೂವತ್ತು ಸಾವಿರದಿಂದ ಹಿಡಿದು ಒಂದು ಲಕ್ಷಕ್ಕೆ ಹೆಚ್ಚಳ ಹೀಗೆ ಹತ್ತು ಹಲವು ಮಹತ್ವಾಂಕ್ಷೆ ಗುರಿ ಮುಂದಿದೆ.

ತಮ್ಮ ವಿನೂತನ ಯೋಜನೆ ಸ್ಟಾರ್ಟ್ ಅಪ್​​ ಬಗ್ಗೆ ಮಯೂರ್ ಈ ರೀತಿ ಹೇಳುತ್ತಾರೆ. ಪ್ರತಿ ದಿನ ಕೂಡ ರೋಮಾಂಚಕಾರಿ. ಅಭಿನಂದನೆ, ಟೀಕೆ, ಮಾಹಿತಿ, ಪ್ರೋತ್ಸಾಹದ ನುಡಿ ಹೀಗೆ ಹತ್ತು ಹಲವು ಮಾತು. ಅಂತಿಮವಾಗಿ ಒಂದಂತೂ ಸತ್ಯ. ನಮ್ಮ ಬಳಕೆದಾರರು ನಮ್ಮ ಸೇವೆಯ ಬಗ್ಗೆ ತೃಪ್ತಿ ಹೊಂದಿರಬೇಕು. ಯಾಕೆಂದರೆ ಅವರೇ ನಮ್ಮ ಸಂಸ್ಥೆಯ ಉತ್ಪನ್ನಗಳ ರಾಯಭಾರಿಗಳು. ಇದು ಮಯೂರ್ ಮನದಾಳದ

ಮಾತು.

ಲೇಖಕರು: ತರುಶ್​ ಭಲ್ಲಾ
ಅನುವಾದಕರು: ಎಸ್​​.ಡಿ.

Related Stories

Stories by YourStory Kannada