"ಗೈಡ್​" ಟೆನ್ಷನ್​ ಬಿಟ್ಟುಬಿಡಿ- ವಸ್ತುಸಂಗ್ರಹಾಲಯದ ಮಾಹಿತಿ ನೀಡುವ ಆ್ಯಪ್​ ಡೌನ್​ಲೋಡ್​ ಮಾಡಿ..!

ಟೀಮ್​ ವೈ.ಎಸ್​.ಕನ್ನಡ

"ಗೈಡ್​" ಟೆನ್ಷನ್​ ಬಿಟ್ಟುಬಿಡಿ- ವಸ್ತುಸಂಗ್ರಹಾಲಯದ ಮಾಹಿತಿ ನೀಡುವ ಆ್ಯಪ್​ ಡೌನ್​ಲೋಡ್​ ಮಾಡಿ..!

Thursday September 01, 2016,

2 min Read

ಸಿಲಿಕಾನ್ ಸಿಟಿ ಬೆಂಗಳೂರಿನ ಹೃದಯಭಾಗದಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ಮತ್ತು ಕೈಗಾರಿಕಾ ವಸ್ತು ಸಂಗ್ರಹಾಲಯ ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಇಲ್ಲಿಗೆ ದಿನಕ್ಕೆ ನೂರಾರು ಜನ ಭೇಟಿ ನೀಡುತ್ತಾರೆ. ಶಾಲಾಕಾಲೇಜುಗಳ ಪ್ರವಾಸದ ಸಮಯದಲ್ಲಿ ಇಲ್ಲಿಗೆ ದಿನವೊಂದಕ್ಕೆ ಸಾವಿರಾರು ಮಕ್ಕಳು ಭೇಟಿ ನೀಡುತ್ತಾರೆ. ಆದರೆ ಇಲ್ಲಿ ಕೆಲವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ ಅಂತವರಿಗಾಗಿ ವಿಶ್ವೇಶ್ವರಯ್ಯ ತಾಂತ್ರಿಕ ಮತ್ತು ಕೈಗಾರಿಕಾ ವಸ್ತು ಸಂಗ್ರಹಾಲಯದ ವತಿಯಿಂದ ವಿಐಟಿಎಂ ಎಕ್ಸಿಬಿಟ್ ಕನೆಕ್ಟ್ ಎಂಬ ನೂತನ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

image


ವೀಕ್ಷಕಣೆಗೆ ಬರುವವರಿಗೆ ಅನುಕೂಲ

ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವವರಿಗೆ ವಸ್ತುಪ್ರದರ್ಶನ ಸುಲಭವಾಗಿ ಅರ್ಥವಾಗಲಿ ಎಂಬ ಕಾರಣಕ್ಕೆ ಸಂಗ್ರಹಾಲಯವು ಈ ಆ್ಯಪ್​ನ್ನು ಡೆವಲಪ್​ ಮಾಡಿದೆ. ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಅಂತಹವರು ಈ ಆ್ಯಪ್ ಹಾಕಿಕೊಂಡರೆ ಅವರಿಗೆ ಎಲ್ಲದರ ಮಾಹಿತಿ ಸಿಗುತ್ತದೆ. ಪ್ರಮುಖವಾಗಿ ಶಾಲಾ ವಿದ್ಯಾರ್ಥಿಗಳಿಗೆ, ಐಟಿ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಡಿಜಿಟಲ್ ಇಂಡಿಯಾ ಗಮನದಲ್ಲಿಟ್ಟುಕೊಂಡು ಈ ಆ್ಯಪ್ ಸಿದ್ಧಪಡಿಸಲಾಗಿದೆ.

"ಭಾರತದಲ್ಲಿ ಎಲ್ಲೂ ವಸ್ತುಸಂಗ್ರಹಲಯಗಳಲ್ಲಿ ಇಂತಹ ಮುಂದುವರಿದ ತಂತ್ರಜ್ಞಾನ ಬಳಸಿ ವೀಕ್ಷಕರಿಗೆ ನೆರವು ನೀಡುವ ಸೌಲಭ್ಯ ಇಲ್ಲ. ಇದೊಂದು ಹೊಸ ಸಾಧನೆಯ ಮೈಲಿಗಲ್ಲು. ಜನರು ಇದನ್ನು ಹೆಚ್ಚೆಚ್ಚು ಬಳಸಿ, ಇರುವ ಸೌಲಭ್ಯ ಉಪಯೋಗಿಸಿಕೊಳ್ಳಬೇಕು. ತಂತ್ರಜ್ಞಾನ ಅಭಿವೃದ್ಧಿ ಹೊಂದುವುದೇ ಜನರ ಅನುಕೂಲಕ್ಕಾಗಿ. "

ಆ್ಯಪ್​ನಲ್ಲಿ ಏನಿದೆ ವಿಶೇಷತೆ..?

ವಿಐಟಿಎಂ ಜತೆ ಅವಯ ಹಾಗೂ ಫ್ಲಿಪ್ ಆರ್ ಎಂಬ ಕಂಪನಿಗಳು ಕೈಜೋಡಿಸಿದ್ದು, ಒಂದು ವರ್ಷ ಶ್ರಮಿಸಿ ಈ ಆ್ಯಪ್ ಸಿದ್ಧಪಡಿಸಲಾಗಿದೆ. ವಸ್ತುಸಂಗ್ರಹಾಲಯ ವೀಕ್ಷಣೆಗೆ ಹೋಗುವವರು ‘ವಿಐಟಿಎಂ ಎಕ್ಸಿಬಿಟ್ ಕನೆಕ್ಟ್’ ಎಂಬ ಆ್ಯಪ್​ನ್ನು ವೈ-ಫೈ ಮೂಲಕ ತಮ್ಮ ಮೊಬೈಲ್​ನಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬೇಕು.ನಂತರ ಅಲ್ಲಿ ‘ಎಕ್ಸಿಬಿಟ್ ಅಟ್ ವಿಐಟಿಎಂ’ ಹಾಗೂ ‘ಗೈಡೆಡ್ ಟೂರ್’ ಎಂಬ ಎರಡು ಆಯ್ಕೆಗಳು ಬರುತ್ತವೆ. ಅಲ್ಲಿ ತಮಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಬೇಕು. ಅಲ್ಲದೆ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಲಭ್ಯವಿದ್ದು, ತಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಂತರ ಅಲ್ಲಿ ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಂಡು ಸಂಬಂಧಪಟ್ಟ ವಿಷಯದ ಬಗ್ಗೆ ಮಾಹಿತಿ ಪಡೆಯಬಹುದು. ಹೆಚ್ಚಿನ ವಿವರ ಬೇಕಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಪುಸ್ತಕ ಹಾಗೂ ವೆಬ್​ಸೈಟ್ ಕೂಡ ಅಲ್ಲಿ ಸಿಗುತ್ತದೆ. ವಸ್ತುಸಂಗ್ರಹಾಲಯದ ಮೊದಲ ಮಹಡಿಯಲ್ಲಿರುವ 7 ವಿಷಯಗಳಿಗೆ ಮಾತ್ರ ಈ ಆ್ಯಪ್ ಸಂಬಂಧಿಸಿದೆ. ಆ್ಯಪ್ ಡೌನ್​ಲೋಡ್​ ಮಾಡಿಕೊಳ್ಳವವರು ಅಲ್ಲಿಯೇ ಕುಳಿತು ಅಗತ್ಯ ಮಾಹಿತಿ ಪಡೆಯಬಹುದು. ಆ ವಿಷಯದ ಬಗ್ಗೆ ಸಣ್ಣದೊಂದು ವಿಡಿಯೋ ಹಾಗೂ ವಿಶ್ಲೇಷಣೆ ಸಹ ಇರುತ್ತದೆ. ಉಳಿದ ಎರಡು ಮಹಡಿಯಲ್ಲಿನ ವಿಷಯಗಳ ಬಗ್ಗೆ ಈ ಆ್ಯಪ್​ನಲ್ಲಿ ಮಾಹಿತಿ ಸಿಗುವುದಿಲ್ಲ.

image


"ವಸ್ತು ಸಂಗ್ರಹಾಲಯದ ಮಾಹಿತಿ ನೀಡುವ ಆ್ಯಪ್​ ನಿಜಕ್ಕೂ ವಿಶೇಷತೆಗಳಿಂದ ಕೂಡಿದೆ. ಈ ಆ್ಯಪ್​ ಬಳಕೆಯಿಂದ ಕಿರಿಕಿರಿ ನೀಡುವ ಗೈಡ್​ಗಳಿಂದಲೂ ಮುಕ್ತಿ ಪಡೆಯಬಹುದು. ಆ್ಯಪ್​ ಬಳಕೆ ಸುಲಭವಾಗಿದ್ದು, ಹೆಚ್ಚು ಅನುಕೂಲಕರ ವಿಷಯಗಳನ್ನು ಹೊಂದಿದೆ. ವಸ್ತು ಸಂಗ್ರಹಾಲಯದ ತಾಂತ್ರಿಕ ವಿಷಯಗಳು ಕೂಡ ಸಲಭವಾಗಿ ಅರ್ಥವಾಗುವ ರೀತಿಯಲ್ಲಿ ಈ ಆ್ಯಪ್​ ಮೂಲಕ ಡಿಸೈನ್​ ಮಾಡಲಾಗಿದೆ."
- ಗಾಯತ್ರಿ, ವಸ್ತು ಸಂಗ್ರಹಾಲಯ ವೀಕ್ಷಕಿ 

ಆಟೋಮೆಟಿಕ್ ಡಿಲೀಟ್

ಈ ಆ್ಯಪ್​ನ ವಿಶೇಷತೆ ಎಂದರೆ ಇದನ್ನು ಡೌನ್​ಲೋಡ್ ಮಾಡಿಕೊಂಡ 8 ಗಂಟೆ ನಂತರ ಅದು ತನ್ನಿಂದ ತಾನೇ ಮೊಬೈಲ್​ನಿಂದ ಡಿಲೀಟ್ ಆಗುತ್ತದೆ. ಮತ್ತೆ ವಸ್ತುಸಂಗ್ರಹಾಲಯಕ್ಕೆ ಬಂದರೆ ಪುನಃ ಡೌನ್​ಲೋಡ್ ಮಾಡಿಕೊಂಡು ಉಪಯೋಗಿಸಬಹುದು. ಮುಂದಿನ ದಿನಗಳಲ್ಲಿ ಸಂಗ್ರಹಾಲಯದ ಎಲ್ಲಾ ಮಹಡಿಯಲ್ಲೂ ಇಂತಹ ಆ್ಯಪ್ ಬಳಸಲು ಚಿಂತಿಸಲಾಗಿದೆ. ಒಟ್ಟಿನಲ್ಲಿ ಆ್ಯಪ್​ನ ಉಪಯೋಗ ಎಲ್ಲಾ ಕಡೆಯೂ ಡಿಜಿಟಲೀಕರಣ ಮಾಡುವುದಕ್ಕೆ ಸಾಕಷ್ಟು ಸಹಾಯ ನೀಡುತ್ತಿದೆ.

ಇದನ್ನು ಓದಿ:

1. ಆರೋಗ್ಯದ ಹಿಂದಿದೆ ಮೇಕೆ ಹಾಲಿನ ರಹಸ್ಯ..!

2. ಹಸಿವಿನ ಬಗ್ಗೆ ಚಿಂತೆ ಬಿಡಿ- 7thಸಿನ್ ​ಫುಡ್​ಟ್ರಕ್​ಗೆ ವಿಸಿಟ್​ ಕೊಡಿ

3. ಸಿನೆಮಾ ನೋಡೋದಿಕ್ಕೆ ಟೈಮ್​ ಇಲ್ಲ- ಕಿರು ಚಿತ್ರಗಳ ಬಗ್ಗೆ ಬೇಜಾರಿಲ್ಲ..!