ಅಂದು ಹೊಟೇಲ್​​ ಕಾರ್ಮಿಕ- ಇಂದು ಜನರ ಹೆಬ್ಬಯಕೆ ತೀರಿಸೋದೇ ದೊಡ್ಡ ಕಾಯಕ- ಇದು ಹೋಳಿಗೆ ಮನೆಯ ಕಥೆ

ಆರಾಧ್ಯ

0

ಹಬ್ಬ ಹರಿದಿನ ಬಂದರೆ ಬಹುತೇಕರ ಮನೆಯ ಊಟದಲ್ಲಿ ಹೋಳಿಗೆ ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ಕೆಲವು ಹೋಟೆಲ್​ಗಳಲ್ಲೂ ಹೋಳಿಗೆ ಊಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಇನ್ನು ಕೆಲವು ಹೋಟೆಲ್​ಗಳು ವಾರದ ಒಂದೆರಡು ದಿನ ಮಾತ್ರ ಹೋಳಿಗೆ ಒದಗಿಸುತ್ತಾರೆ. ಆದ್ರೆ, ಬೆಂಗಳೂರಿನ ಮಲ್ಲೇಶ್ವರಂನ ‘ಹೋಳಿಗೆ ಮನೆ’ಯಲ್ಲಿ ಮಾತ್ರ ಪ್ರತಿದಿನವು ಹೋಳಿಗೆ ಸಿಗುತ್ತದೆ.

ಬೆಂಗಳೂರಿನ ಜನರು ಹೋಳಿಗೆಯನ್ನ ಬಹಳ ಇಷ್ಟ ಪಡ್ತಾರೆ, ಸಿಹಿ ತಿಂಡಿಗಳಲ್ಲಿ ಇದಕ್ಕೆ ಮೊದಲ ಸ್ಥಾನ ಕೊಡ್ತಾರೆ. ಶುಭ ಸಮಾರಂಭಗಳಲ್ಲಿ ಹೋಳಿಗೆ ಊಟ ಹಾಕದೇ ಇದ್ರೆ, ಊಟ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಅದು ಜನಪ್ರಿಯವಾಗಿದೆ. ಈ ಅದ್ಭುತ ರುಚಿಯನ್ನು ಹೊಂದಿರುವ ಸಿಹಿ ಖಾದ್ಯದ ಮನೆಯೇ ಮಲ್ಲೇಶ್ವರಂನಲ್ಲಿದೆ. ಹೆಸರಿಗೆ ತಕ್ಕಂತೆ ‘ಹೋಳಿಗೆ ಮನೆ, ಅಲ್ಲಿ ಹೋಳಿಗೆ ಹೊರತುಪಡಿಸಿದರೆ ಬೇರೆ ಯಾವ ಖಾದ್ಯವೂ ಸಿಗುವುದಿಲ್ಲ.

ವೆರೈಟಿ ವೆರೈಟಿ ಹೋಳಿಗೆ ಲಭ್ಯ

ಈ ಖಾದ್ಯವನ್ನು ಬೇರೆಬೇರೆ ರೀತಿ ತಯಾರಿಸುತ್ತಾರೆ. ಅವುಗಳ ರುಚಿಯೂ ವಿಭಿನ್ನವಾಗಿರುತ್ತದೆ, ಬಾದಾಮಿ ಹೋಳಿಗೆ, ಡ್ರೈ ಫ್ರೂಟ್ಸ್, ಅಂಜೂರ, ಖರ್ಜೂರ, ಕ್ಯಾರೆಟ್, ಖೋವಾ, ಒಣಕೊಬ್ಬರಿ, ಸಕ್ಕರೆ, ಕಡಲೆ ಬೇಳೆ, ಬಿಳಿ ಹೋಳಿಗೆ, ಕಾಯಿ ಹೋಳಿಗೆ, ತೊಗರಿ ಬೇಳೆ ಹೋಳಿಗೆ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಬಗೆಯ ಹೋಳಿಗೆಗಳು ಒಂದೇ ಸೂರಿನಡೆ ದೊರೆಯುತ್ತವೆ. ಡಿಫೆರೆಂಟ್ ಹೋಳಿಗೆ ಮನೆ ಎಂಬ ಈ ಪುಟ್ಟ ಅಂಗಡಿಯಲ್ಲಿ ಬಾದಾಮಿ, ಡ್ರೈ ಫ್ರೂಟ್ಸ್ ಹಾಗೂ ಖರ್ಜೂರದಿಂದ ಮಾಡಲಾಗುವ ಹೋಳಿಗೆಗೆ ಹೆಚ್ಚಿನ ಬೇಡಿಕೆ. ಜೊತೆಗೆ ಖರ್ಜೂರದ ಹೋಳಿಗೆಯಲ್ಲಿ ಹೆಚ್ಚಾಗಿ ಏಲಕ್ಕಿಯನ್ನ ಬಳಕೆ ಮಾಡುವುದರಿಂದ ಮಧುಮೇಹಿಗಳು ಇದನ್ನು ಹೆಚ್ಚು ಇಷ್ಟಪಟ್ಟು ಸವಿಯುತ್ತಾರೆ..

ಒಮ್ಮೆ ಅಂಗಡಿ ಮುಂದೆ ನಿಂತರೆ ಸುಮಾರು 20 ಬಗೆಯ ಹೋಳಿಗೆಗಳ ಪಟ್ಟಿ ನಿಮಗೆ ಗೋಚರಿಸುತ್ತದೆ. ಜತೆಗೆ ಹೆಂಚಿನ ಮೇಲೆ ಬಿಸಿಬಿಸಿ ಹೋಳಿಗೆಗಳು ತಯಾರಾಗುತ್ತಿರುವುದೂ ಕಾಣಿಸುತ್ತದೆ. ಇದರ ಮತ್ತೊಂದು ವಿಶೇಷತೆಯೇ, ಬೇಡಿಕೆಗೆ ಅನುಗುಣವಾಗಿ ಆಗಿಂದಾಗ್ಗೆ ಒಬ್ಬಟ್ಟು ಮಾಡಿಕೊಡುವುದು. ಬಿಸಿ ಬಿಸಿ ಒಬ್ಬಟ್ಟಿನ ಜೊತೆಗೆ ತುಪ್ಪ ಕೂಡ ಬಡಿಸಲಾಗುತ್ತದೆ. ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಹೋಳಿಗೆಗಳು ಇಲ್ಲಿ ಖರ್ಚಾಗುತ್ತವೆ. ವಾರದ ಕೊನೆಯಲ್ಲಿ ಈ ಸಂಖ್ಯೆ ಏರುತ್ತದೆ. ಕನಿಷ್ಠ ಮೂವತ್ತಕ್ಕಿಂತ ಹೆಚ್ಚು ಒಬ್ಬಟ್ಟಿಗೆ ಬೇಡಿಕೆ ಸಲ್ಲಿಸಿದರೆ ಮಾತ್ರ ಆರ್ಡರ್ ರೂಪದಲ್ಲಿ ಅದನ್ನು ಸ್ವೀಕರಿಸುತ್ತಾರೆ.

ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ ಹೋಳಿಗೆ ಮನೆ

‘ಹೋಳಿಗೆ ಮನೆ’ಯ ಎದುರಿನಿಂದ ಹಾದು ಹೋಗುವವರು ಇಲ್ಲಿನ ಹೋಳಿಗೆಯ ರುಚಿ ನೋಡದೇ ಮುಂದೆ ಹೋಗುವುದಿಲ್ಲ. ಏಕೆಂದರೆ ಅಲ್ಲಿಂದ ಬರುವ ಘಮಘಮ ಸುವಾಸನೆ ಎಂತಹವರನ್ನೂ ಸೆಳೆಯದೇ ಇರದು. ಈ ಎಲ್ಲ ಹೋಳಿಗೆಗಳನ್ನು ಸವಿಯಲು ಎಲ್ಲ ಪ್ರದೇಶದ ಜನರೂ ಇಲ್ಲಿ ಮುಗಿ ಬೀಳುತ್ತಿರುತ್ತಾರೆ.. ಇಲ್ಲಿ ಕೂರಲು ಜಾಗವಿಲ್ಲ. ಆದ್ರೂ, ಹೋಳಿಗೆ ತಿನ್ನಲೇಬೇಕು ಎಂಬ ಹೆಬ್ಬಯಕೆಯಿಂದ ಫುಟ್ಪಾತ್ನಲ್ಲೇ ನಿಂತು, ತಿಂದು ಹೋಗುತ್ತಾರೆ. ಕೆಲವರು ಮನೆಗೆ ಪಾರ್ಸಲ್ ತೆಗೆದುಕೊಂಡು ಹೋಗುತ್ತಾರೆ.

"ಹೋಳಿಗೆ ಮನೆ ಮುಂದೆ ಹೋಳಿಗೆ ತಿನ್ನುತ್ತಾ ನಿಂತ್ರೆ ಬಾಯಿ ಚಪಲ ಹೆಚ್ಚಾಗುತ್ತಾ ಹೋಗುತ್ತೆ. ಅಷ್ಟರ ಮಟ್ಟಿಗೆ ಇದು ಟೇಸ್ಟಿಯಾಗಿರುತ್ತದೆ. ಒಂದು ಹೋಳಿಗೆ ತಿಂದ್ರೆ ಮತ್ತೊಂದು ತಿನ್ನೋಣ ಅಂತ ಅನಿಸುತ್ತದೆ. ಮಡದಿ ಮಧುಮೇಹದ ಬಗ್ಗೆ ಪದೇ ಪದೇ ನೆನಪಿಸಿದ್ರೂ ಹೋಳಿಗೆ ಮನೆ ಮುಂದೆ ಅವಳ ಎಚ್ಚರಿಕೆ ಕೂಡ ಮರೆತು ಹೋಗುತ್ತದೆ" ಹೀಗಂತ ಹೇಳುತ್ತಾರೆ ಹೋಳಿಗೆ ಮನೆಯ ಮಾಮೂಲಿ ಕಸ್ಟಮರ್​ ಮಂಗಳೂರಿನ ಪ್ರಶಾಂತ್​​.

ಈಗ ‘ಹೋಳಿಗೆ ಮನೆ’ ಕೀರ್ತಿ ಎಷ್ಟುರ ಮಟ್ಟಿಗೆ ಹರಡಿದೆ ಎಂದರೆ ನಗರದಲ್ಲಿ ನಡೆಯುವ ಬಹುತೇಕ ಮದುವೆ–ಮುಂಜಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಇಲ್ಲಿಂದಲೇ ಒಬ್ಬಟ್ಟು ಹೋಗುತ್ತದೆ. ಕುಂದಾಪುರ ಮೂಲದ ಜಯಕರ್ ಶೆಟ್ಟಿ ಹಾಗೂ ಅವರ ಪತ್ನಿ ಸುಜಾತಾ ಶೆಟ್ಟಿ ಅವರು ಕಳೆದ ಒಂದುವರೆ ವರ್ಷದ ಹಿಂದೆ ಈ ಹೋಳಿಗೆ ಮನೆಯನ್ನ ಪ್ರಾರಂಭ ಮಾಡಿದ್ರು. ತಮ್ಮ ಎಂಟು ಜನ ಸಿಬ್ಬಂದಿಗಳ ಸಹಾಯದಲ್ಲಿ ಈ ಹೋಳಿಗೆ ಮನೆಯನ್ನ ನಡೆಸುತ್ತಿದ್ದಾರೆ. ಇನ್ನು ಈ ಹೋಳಿಗೆ ಮನೆ ಬೆಂಗಳೂರಿನಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳಲು ಸಹ ಬಹಳಷ್ಟು ಫೇಮಸ್ ಆಗಿದೆ..

ಬೇರೆ ಹೋಟೆಲ್ ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ ಜಯಕರ್ ಶೆಟ್ಟಿ, ಇನೆಷ್ಟು ದಿನ ಬೇರೆಯವರನ್ನು ಅವಲಂಬಿಸುವುದು ಎಂದು ಯೋಚಿಸಿ ಮಲ್ಲೇಶ್ವರಂ ನಲ್ಲಿ ಈ ಸ್ವಂತ ಹೋಟೆಲ್ ಪ್ರಾರಂಭಿಸಿದ್ರು ಪ್ರಾರಂಭದ ಒಂದೆರಡು ತಿಂಗಳು ಅಷ್ಟೇನೂ ಉತ್ತಮವಾಗಿ ವ್ಯಾಪಾರ ನಡೆಯಲಿಲ್ಲ, ದಿನಕಳೆದಂತೆ ವ್ಯಾಪಾರ ಜೋರಾಗಿ ಇಷ್ಟರ ಮಟ್ಟಿಗೆ ಯಶಸ್ಸು ಕಂಡಿದ್ದಾರೆ ಜಯಕರ್ ಶೆಟ್ಟಿ ದಂಪತಿಗಳ