ನಿಮ್ಮ ಸ್ಮಾರ್ಟ್​ಫೋನ್​ನ್ನು ಕಣ್ಣಿನಿಂದಲೇ ನಿಯಂತ್ರಿಸಿ..!

ಟೀಮ್​ ವೈ.ಎಸ್​. ಕನ್ನಡ

ನಿಮ್ಮ ಸ್ಮಾರ್ಟ್​ಫೋನ್​ನ್ನು ಕಣ್ಣಿನಿಂದಲೇ ನಿಯಂತ್ರಿಸಿ..!

Friday July 08, 2016,

2 min Read

ಮೊಬೈಲ್​ ಫೋನ್​ನ ಆವಿಷ್ಕಾರ ಸಂಹವನ ಶಕ್ತಿಯನ್ನೇ ಬದಲಿಸಿತು. ಆದಾದ ಮೇಲೆ ಸ್ಮಾರ್ಟ್​ಫೋನ್​ ದೂರದಲ್ಲಿರುವವರನ್ನು ಹತ್ತಿರವೇ ಇರುವಂತೆ ಮಾಡಿತು. ಮೊಬೈಲ್​ ಲೋಕದಲ್ಲಿ ನಡೆದಿರುವ ಆವಿಷ್ಕಾರ ಇನ್ನೆಲ್ಲೂ ನಡೆದಿಲ್ಲ ಅಂದ್ರೆ ತಪ್ಪಿಲ್ಲ. ಈಗ ಈ ಸ್ಮಾರ್ಟ್​ಫೋನ್​ ಮತ್ತಷ್ಟು ಸ್ಮಾರ್ಟ್​ ಆಗುತ್ತಿದೆ. ಮುಂದಿನ ದಿನಗಳಲ್ಇ ಅವುಗಳನ್ನು ಬಳಸಿಕೊಳ್ಳಲು ಕೈಗಳೇ ಬೇಕಾಗಿಲ್ಲ. ಕಣ್ಣುಗಳಿಂದಲೇ ಸ್ಮಾರ್ಟ್​ಫೋನ್​ ಕೆಲಸ ಮಾಡುತ್ತೆ ಅನ್ನೋ ಸಂಶೋಧನೆಯೊಂದು ಹೊರಬಿದ್ದಿದೆ.

image


ಅತಿ ಹೆಚ್ಚು ತಾಂತ್ರಿಕ ಅಭಿವೃದ್ಧಿಗೆ ಒಳಗಾಗುತ್ತಿರುವುದು ಮೊಬೈಲ್. ಆವಿಷ್ಕಾರವಾದ ಹೊಸತರಲ್ಲಿ ಕೀಪ್ಯಾಡ್ ಇತ್ತು. ಟೈಪ್ ಮಾಡಲು ಕೀಪ್ಯಾಡ್ ಬಟನ್ ಅನ್ನು ಉಪಯೋಗಿಸಲಾಗುತ್ತಿತ್ತು. ಇದು ಮೊಬೈಲ್ ಬಳಕೆಯ ಮೊದಲನೇ ಹಂತ. ಆನಂತರ ಮೊಬೈಲ್ ಬಳಕೆಯಲ್ಲಿ ನಂಬರ್ ಮತ್ತು ಮೆಸೇಜ್ ಟೈಪ್ ಮಾಡಲು ಟಚ್ ಸ್ಕ್ರೀನ್ ಕೀ ಬೋರ್ಡ್ ಬಂತು. ಸದ್ಯ ಇದೆ ಚಾಲನೆಯಲ್ಲಿರುವುದು.

ಮೊಬೈಲ್​ನಲ್ಲಿ ಟೈಪ್ ಮಾಡಲು, ಮೊಬೈಲ್ ನಿಯಂತ್ರಿಸಲು ಬಟನ್​​ಗಳಿರುವ ಕೀ ಪ್ಯಾಡ್ ಮತ್ತು ಟಚ್ ಸ್ಕ್ರೀನ್ ಇರುವ ಮೊಬೈಲ್​ಗಳನ್ನು ಬಳಸುತ್ತಿದ್ದೇವೆ. ಆದ್ರೆ ಇನ್ನು ಮುಂದೆ ಸ್ಮಾರ್ಟ್​ಫೋನ್ ಅನ್ನು ಕೇವಲ ಕಣ್ಣುಗಳಿಂದ ನಿಯಂತ್ರಿಸಬಹುದು. ಹೌದು, ಅಂತರರಾಷ್ಟ್ರೀಯ ಸಂಶೋಧಕರ ತಂಡವೊಂದು ಸಾಫ್ಟ್​ವೇರ್ ಒಂದನ್ನು ಅಭಿವೃದ್ದಿಪಡಿಸುತ್ತಿದ್ದು, ಅದರ ಸಹಾಯದಿಂದ ಕೇವಲ ಕಣ್ಣುಗಳಿಂದ ನಿಮ್ಮ ಮೊಬೈಲ್ ಆಪರೇಟ್ ಮಾಡಬಹುದು.

ಇದನ್ನು ಓದಿ: ಹೋಟೆಲ್ ಚಿಕ್ಕದಾದ್ರೂ.. ಹೆಸರು ದೊಡ್ಡದು...!

ಭಾರತ ಮೂಲದ ಪದವಿ ವಿದ್ಯಾರ್ಥಿಯೂ ಸೇರಿದಂತೆ ಅಂತರರಾಷ್ಟ್ರೀಯ ಸಂಶೋಧಕರ ತಂಡವು ಸಾಫ್ಟ್​ವೇರ್ ಒಂದನ್ನು ಅಭಿವೃದ್ದಿ ಪಡಿಸುತ್ತಿದೆ. ಈ ಸಾಫ್ಟ್​ವೇರ್​ನ್ನು ಸ್ಮಾರ್ಟ್​ಫೋನ್​ನಲ್ಲಿ ಬಳಸುವ ಸ್ಮಾರ್ಟ್ ಜನರು, ಕೇವಲ ತಮ್ಮ ಕಣ್ಣುಗಳ ಚಲನೆಯಿಂದ ಗೇಮ್ ಆಡಲು, ಆ್ಯಪ್​ಗಳನ್ನು ಓಪನ್ ಮಾಡಲು, ಸಂಪೂರ್ಣ ಮೊಬೈಲ್​ನ್ನು ಕೂಡ ನಿಯಂತ್ರಿಸಬಹುದು.

image


ವ್ಯಕ್ತಿಯು ಮೊಬೈಲ್ ಅನ್ನು ಒಂದು ಮೀಟರ್ ಅಂತರದಿಂದ ಮತ್ತು ಟ್ಯಾಬ್ಲೆಟ್ ಅನ್ನು 1.7 ಮೀಟರ್​ನಿಂದ ನಿಖರವಾಗಿ ನೋಡಿ ನಿಯಂತ್ರಿಸಲು ಅನುಕೂಲವಾಗುವಂತೆ ಸಂಶೋಧನೆ ಮಾಡಿದ್ದಾರೆ. ಹೌದು ಜಾರ್ಜಿಯಾದ ವಿಶ್ವವಿದ್ಯಾಲಯ ಮತ್ತು ಮೆಸ್ಸಾಚೂಸೆಟ್ಸ್​ನ ತಂತ್ರಜ್ಞಾನ ಸಂಸ್ಥೆ (ಎಂಐಟಿ), ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್​ಟಿಟ್ಯೂಟ್ ಫಾರ್ ಇನ್ಫಾರ್ಫೇಟಿಕ್ಸ್'ನ ಸಂಶೋಧಕರು ಒಟ್ಟಿಗೆ ಸೇರೊ ಸಾಫ್ಟ್​ವೇರ್ ಅಭಿವೃದ್ದಿ ಪಡಿಸಿದ್ದಾರೆ.

ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ನೀವು ನೋಡುವುದು, ಫೋನ್​ನ ಮುಂಭಾಗದ ಕ್ಯಾಮೆರಾದಿಂದ ರೆಕಾರ್ಡ್ ಆಗಲಿದ್ದು, ಸ್ಮಾರ್ಟ್​ಫೋನ್​ ಮೇಲಿನ ತೀಕ್ಷ್ಣ ನೋಟವು ಚುಕ್ಕೆಗಳ ಆಧಾರದಲ್ಲಿ ಎಡಭಾಗದಲ್ಲಿ ಅಥವಾ ಬಲಭಾಗದಲ್ಲಿ ನೋಡುತ್ತಿರುವುದರಿಂದ ಸ್ಕ್ರೀನ್ ಮೇಲೆ ಟ್ಯಾಪ್ ಆಗಿ ಅದು ಮೊಬೈಲ್​ಗೆ ಕಾರ್ಯನಿರ್ವಹಿಸುವಂತೆ ಸೂಚನೆ ನೀಡುತ್ತದೆ. ಕಣ್ಣಿನ ಸೂಚನೆ, ಸಂಜ್ಞೆಯಂತೆ ಸ್ಮಾರ್ಟ್​ಫೋನ್​ಗಳು ಕಾರ್ಯನಿರ್ವಹಿಸಲಿವೆ.

image


ಮೊದಲ ಹಂತವಾಗಿ ಗೇಜ್​ಕ್ಯಾಪ್ಚರ್​ನಿಂದ ಸಂಗ್ರಹಿಸಲಾದ ಡಾಟಾ ಮೂಲಕ ಐಟ್ರ್ಯಾಕರ್ (iTracker)' ಸಾಫ್ಟ್​ವೇರ್ ಸಮರ್ಪಕವಾಗಿ ಕೆಲಸ ಮಾಡುವಂತೆ ಅವುಗಳನ್ನು ಸಿದ್ದಪಡಿಸಲಾಗುವುದು. ಜೊತೆಗೆ ಎಲ್ಲಾ ಕಮಾಂಡ್​ಗಳಿಗೆ ತ್ರೀವ್ರವಾಗಿ ಪ್ರತಿಕ್ರಿಯಿಸುವಂತೆ ಸಾಫ್ಟ್​ವೇರ್ ಅಭಿವೃದ್ದಿಪಡಿಸಲಾಗಿದ್ದು, ಕಣ್ಣಿನಿಂದ ನಿಯಂತ್ರಿಸಬಹುದಾದ ಈ ಸಾಫ್ಟ್​ವೇರ್ ಆಂಡ್ರಾಯ್ಡ್ ಮತ್ತು ಐಫೋನ್​ನಲ್ಲೂ ರನ್ ಆಗುತ್ತದೆ ಎನ್ನುತ್ತಾರೆ ಸಾಫ್ಟ್​ವೇರ್ ಅಭಿವೃದ್ದಿಯ ಸಹ ಲೇಖಕರಾದ ಆದಿತ್ಯ ಖೊಸ್ಲಾ.

ಐಟ್ರ್ಯಾಕ್​ನ ನಿಯಮದಂತೆ ಮೊದಲಿಗೆ ಕ್ಯಾಮೆರಾದಲ್ಲಿ ಬಳಕೆದಾರರ ಮುಖವನ್ನು ಕ್ಯಾಪ್ಚರ್ ಮಾಡಲಾಗುತ್ತದೆ. ಸಾಫ್ಟ್​ವೇರ್ ಬಳಕೆದಾರರ ತಲೆಯ ದಿಕ್ಕು-ಸ್ಥಾನ ಮತ್ತು ಕಣ್ಣುಗಳ ನೋಟವನ್ನು ನಿರ್ಧರಿಸಿ ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ. ಹೀಗೆ ತಂತ್ರಜ್ಞಾನ ದಿನ ಕಳೆದಂತೆ ಅಭಿವೃದ್ದಿ ಆಗ್ತಿದೆ. ಮುಂದೊಂದಿನ ಸ್ಮಾರ್ಟ್​ಫೋನ್​ನ್ನು ನಾವು ವಿಭಿನ್ನ ರೀತಿಯಲ್ಲಿ ಬಳಸಿಕೊಂಡ್ರೂ ಅಚ್ಚರಿ ಇಲ್ಲ.

ಇದನ್ನು ಓದಿ:

1. ಮಧುಮೇಹ ರೋಗಿಗಳ ಆಶಾಕಿರಣ ಸ್ಮಾರ್ಟ್ ಸಾಕ್ಸ್..!

2. ರಾಜಸ್ಥಾನಿ ಪುಲ್ಕಾಸ್​​ ಟೇಸ್ಟ್​​ ನೋಡಿ.. ಅಮ್ಮ ಮಗಳ ಕಥೆ ಕೇಳಿ..!

3. ಭವಿಷ್ಯದ ಭಾರತದಲ್ಲಿ ಇ - ಕಾಮರ್ಸ್ ಉದ್ಯಮದ ಕ್ರಾಂತಿ..