ಕುವೈಟ್​ನ ಮಹಿಳೆಯಿಂದ ನಾವು ಕಲಿಯುವುದು ಬಹಳಷ್ಟಿದೆ..!

ಟೀಮ್​ ವೈ.ಎಸ್. ಕನ್ನಡ

ಕುವೈಟ್​ನ ಮಹಿಳೆಯಿಂದ ನಾವು ಕಲಿಯುವುದು ಬಹಳಷ್ಟಿದೆ..!

Friday March 10, 2017,

2 min Read

ಮನೆಯಿಲ್ಲದೆ ಬೀದಿಬದಿಯಲ್ಲೇ ಜೀವನ ಕಳೆಯುವವರನ್ನು ನಾವೆಷ್ಟು ನೋಡಿಲ್ಲ. ಭಾರತದ ಚಿಕ್ಕ ಹಳ್ಳಿಯಿಂದ ಹಿಡಿದು, ರಾಜಧಾನಿ ದೆಹಲಿ ತನಕ ಇಂತಹವರು ನಮನೆ ಸಿಕ್ಕೇ ಸಿಗುತ್ತಾರೆ. ಆದ್ರೆ ಮನೆಯಿಲ್ಲದವರು ನಮ್ಮ ಕಣ್ಣಿಗೆ ಬಿದ್ದರೂ ನಾವು ಕರುಡರಂತೆ ಮುಂದೆ ಸಾಗುತ್ತೇವೆ. ಅವರ ಬಗ್ಗೆ ಯೋಚನೆ ಮಾಡುವಷ್ಟು ಮನುಷ್ಯತ್ವ ಕೂಡ ನಮಲ್ಲಿಲ್ಲ. ಆದ್ರೆ ಶಹೀನಾ ಸಯ್ಯದ್ ನಮ್ಮೆಲ್ಲರಿಗಿಂತ ವಿಭಿನ್ನ. ಶಹೀನಾ ಮೂಲತಃ ಕವೈಟ್​ನವರಾಗಿದ್ದರೂ ಭಾರತದ ಬೀದಿಯಲ್ಲಿ ವಾಸಮಾಡುವವರ ನೆರವಿಗೆ ನಿಂತಿದ್ದಾರೆ. ಮುಂಬೈನಲ್ಲಿ ಶಹೀನಾ ಸಾಮಾಜಿಕ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.

image


ಇತ್ತೀಚೆಗೆ ಕುವೈಟ್​ನಿಂದ ಮುಂಬೈಗೆ ಬಂದ ಶಹೀನಾ ಆಟೋ ಒಂದರಲ್ಲಿ ತನ್ನ ಮಗಳ ಜೊತೆ ಮಲಾಡ್​ನಿಂದ ಮೀರಾ ರೋಡ್ ತನಕ ಪ್ರಯಾಣ ಮಾಡುತ್ತಿದ್ದರು. ಪ್ರಯಾಣದ ವೇಳೆ ಬೊರಿವಿಲಿಯ ಸಿಗ್ನಲ್ ಒಂದರ ಬಳಿ ಫುಟ್​ಪಾತ್​ನಲ್ಲಿ ಒಬ್ಬ ವ್ಯಕ್ತಿ ಮಲಗಿರುವುದು ಶಹೀನಾ ಕಣ್ಣಿಗೆ ಕಾಣಿಸಿತ್ತು. ತೆಂಗಿನ ಕಾಯಿ ಚಿಪ್ಪು ತಿನ್ನುತ್ತಿದ್ದ ಆತನ ಸ್ಥಿತಿ ದಯನೀಯವಾಗಿತ್ತು. ಈ ದೃಶ್ಯ ಶಹೀನಾ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡಿತ್ತು. ರಾತ್ರಿಯಿಡೀ ಮನೆಯಿಲ್ಲದವರಿಗೆ ಮುಂಬೈನಲ್ಲಿ ಯಾವ ಸ್ಥಳದಲ್ಲಿ ವಾಸಮಾಡಲು ಅವಕಾಶವಿದೆ ಅನ್ನುವ ಬಗ್ಗೆ ಯೋಚನೆ ಮಾಡಿದ್ರು. ಯಾರೋ ಒಬ್ಬರ ಸಲಹೆ ಮೇರೆ 108ಕ್ಕೆ ಕರೆಮಾಡಿ ಸ್ಥಿತಿಯನ್ನು ವಿವರಿಸಿದ್ರು.

ಇದನ್ನು ಓದಿ: ಕೃಷಿಕ ಎಸಿಪಿ ಆಗಿದ್ದು ಹೇಗೆ..? ಧಿಘವ್​​ಕರ್ ಕಥೆ ಕೇಳಿ..!

ಶಾಹೀನಾ ಆ ವ್ಯಕ್ತಿಗೆ ಚಿಕಿತ್ಸೆ ಕೊಡಿಸವ ಮನಸ್ಸಿದ್ದರೂ ಅದು ಸುಲಭವಾಗಿರಲಿಲ್ಲ. ಅದಕ್ಕಾಗಿ ಏನೇನು ಕಷ್ಟಪಟ್ರು ಅನ್ನುವುದುನ್ನು ಅವರ ಫೇಸ್​ಬುಕ್​ನಲ್ಲಿ ಬರೆದಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ಕೆಲಸ ಮಾಡಿದ್ರೂ ಅದಕ್ಕೆ ಸರಕಾರಿ ವೈದ್ಯರಿಂದಲೇ ಪ್ರೋತ್ಸಾಹವಿಲ್ಲ ಅನ್ನುವುದು ಶಾಹೀನಾ ಕಥೆಯ ಮೂಲಕ ಸ್ಪಷ್ಟವಾಗುತ್ತದೆ.

“ ಮನೆಯಿಲ್ಲದೆ, ಮಾನಸಿಕ ಅಸ್ವಸ್ಥನಾಗಿರುವ ವ್ಯಕ್ತಿಯನ್ನು ಕಂಡರೆ ನಾವೇನು ಮಾಡುತ್ತೇವೆ..? ಮುಂಬೈ ನಗರದಲ್ಲಿ ಇಂತಹ ವ್ಯಕ್ತಿಗಳು ಕಂಡುಬಂದರೆ ಅವರಿಗೆ ದುಡ್ಡು ಅಥವಾ ಆಹಾರ ನೀಡಬೇಡಿ. ಬದಲಾಗಿ 108 ನಂಬರ್​ಗೆ ಕರೆಮಾಡಿ ಅವರ ಆರೈಕೆಗೆ ನೆರವು ನೀಡಿ. ನಾನು ಬೊರಿವಿಲಿಯಲ್ಲಿ ಒಬ್ಬ ಮನೆ ಇಲ್ಲದ ವ್ಯಕ್ತಿಯನ್ನು ನೋಡಿದೆ. ಆತ ಸಿಕ್ಕಾಪಟ್ಟೆ ವೀಕ್ ಆಗಿದ್ದ. ಅರೆನಗ್ನನಾಗಿದ್ದು, ತೆಂಗಿನಕಾಯಿಯ ಚಿಪ್ಪುಗಳನ್ನು ತಿನ್ನುತ್ತಿದ್ದ. ಆತನಿಗೆ ಸಹಾಯ ಮಾಡುವ ಮನಸ್ಸಾಗಿತ್ತು. ಮನೆಗೆ ಬಂದು ಮನೆಯಿಲ್ಲದೆ ರಸ್ತೆಯಲ್ಲಿ ವಾಸಮಾಡುವವರಿಗೆ ಮುಂಬೈನಲ್ಲಿ ಹೇಗೆ ನೆರವು ನೀಡಬಹುದು ಅನ್ನುವುದನ್ನು ಗೂಗಲ್ ಮಾಡಿದೆ. ಸರ್ಚ್ ರಿಸಲ್ಟ್​ನಲ್ಲಿ ಅಭಿಷೇಕ್ ಭಾರಾಧ್ವಾಜ್ ಅನ್ನುವವರಿಂದ 108 ನಂಬರ್​ಗೆ ಕರೆಮಾಡುವಂತೆ ಸಲಹೆ ಬಂತು. ನಾನು ಕರೆ ಮಾಡಿದೆ. ಡಾಕ್ಟರ್ ಶಿಖಾ ನೇತೃತ್ವದಲ್ಲಿ ಅಂಬ್ಯಲೆನ್ಸ್ ಬಂತು. ಆದರೆ ಅವರು ನಮಗೆ ಆ ವ್ಯಕ್ತಿ ಸಿಕ್ಕಿಲ್ಲ ಅಂತ ತಿಳಿಸಿದ್ರು. ಡಾ. ಶಿಖಾ ಜೊತೆ ಮಾತಿನ ಚಕಮಕಿಯೂ ನಡೆಯಿತು. ಮಗ ಸಾಹಿಕ್ ಸಯೀದ್ ನೆರವಿನಿಂದ ಆ ವ್ಯಕ್ತಿಯನ್ನು ಮತ್ತೆ ಹುಡುಕಿದೆ. ನೆರವು ನೀಡಬೇಕು ಎಂದು ನಿರ್ಧರಿಸಿದೆ. ಮತ್ತೊಮ್ಮೆ 108ಕ್ಕೆ ಕರೆಮಾಡಿದೆ. ಸುಮಾರು ಗಂಟೆಗಳ ಕಾಯುವಿಕೆಯ ಬಳಿಕ ಅಂಬ್ಯುಲೆನ್ಸ್ ಆಗಮಿಸಿತ್ತು. ಪೊಲೀಸರ ನೆರವು ಕೂಡ ಪಡೆದೆವು. ಕಾಂಡಿವಲಿಯಲ್ಲಿದ್ದ ಆಸ್ಪತ್ರೆಗೆ ಆತನನ್ನು ದಾಖಲು ಮಾಡಿದೆವು. ಈಗ ಆತ ಬೇರೊಂದು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ. ಆ ವ್ಯಕ್ತಿಯ ಆರೋಗ್ಯ ಈಗ ಸ್ಥಿರವಾಗಿದೆ.”

ಶಾಹೀನಾ ಆ ವ್ಯಕ್ತಿಗೆ ಚಿಕಿತ್ಸೆ ಕೊಡಿಸಲು ನೆರವಾದ ಡಾ. ಅಬ್ದುಲ್ ಲತೀಫ್, ಪೊಲೀಸ್ ಕಾನ್ಸ್ಟೇಬಲ್ ಜೆ.ಬಿ. ರಾಣಾ ಮತ್ತು ಅಮಿತಾಬ್ ಪರಾಬ್​ಗೆ ಧನ್ಯವಾದ ಹೇಳುತ್ತಾರೆ. ಆದ್ರೆ ವಿಷಯ ಅದಲ್ಲ. ಭಿಕ್ಷುಕರನ್ನು ಕಂಡರೆ ಮೈಲುದ್ದ ದೂರ ಓಡುವ ನಾವು ಶಾಹೀನಾ ಕಥೆಯಿಂದ ಸಾಕಷ್ಟು ತಿಳಿಬೇಕಿದೆ. ಮನುಷ್ಯತ್ವ ಅಂದ್ರೆ ಏನು ಅನ್ನುವ ಬಗ್ಗೆ ಅರಿಯಬೇಕಿದೆ.

ಇದನ್ನು ಓದಿ: 

1. ರಂಗಭೂಮಿಯಲ್ಲಿ ಪ್ರಯೋಗದ ಕಿಕ್​​- "ವಿ ಮೂವ್"​ನಿಂದ ಹೊಸತನದ ಟಚ್​

2. ಭಾರತ ಶ್ರೀಮಂತವಾಗುತ್ತಿದೆ- ಯಾಕೆ ಅಂತೀರಾ.. ಇದನ್ನು ಓದಿ..!

3. ತಿಂಡಿ ಉಚಿತ-ಟೈಮ್​ಗೆ ದುಡ್ಡು..! ಇದು ಬೆಂಗಳೂರಿನ ಸ್ಪೆಷಲ್​ ಹೊಟೇಲ್​​​