ವಿಶ್ವಮಟ್ಟದಲ್ಲಿ ಡಾ. ರಾಜ್​​ಕುಮಾರ್...

ಪೂರ್ವಿಕಾ

0

ವಿಶ್ವಕ್ಕೆ ತಲುಪಲು ಸಿದ್ದವಾಗಿದೆ ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದನ ಜೀವನಚರಿತ್ರೆ. 2148 ಪುಟಗಳಲ್ಲಿ ಸೆರೆಯಾಯ್ತು ಅಣ್ಣಾವ್ರ ಸಂಪೂರ್ಣಕತೆ. ಇಂದೆಲ್ಲೂ ಕಾಣದ ಅಪರೂಪ ಚಿತ್ರಗಳನ್ನ ಕಾಣೋ ಅವಕಾಶ ಡಾರಾಜ್ ಅಭಿಮಾನಿಗಳದ್ದು. ಇದು ಈ ವರ್ಷದ ರಾಜ್ಯೋತ್ಸವಕ್ಕೆ ಸಿನಿಮಾ ವರದಿಗಾರ ಹಾಗೂ ಬರಹಗಾರ ಡೊಡ್ಡಹುಲ್ಲೂರು ರುಕ್ಕೋಜಿಯವರಿಂದ ರಾಜ್ಯಕ್ಕೆ ಸಿಗುತ್ತಿರೋ ಅದ್ಬುತ ಕೊಡುಗೆ.

ಡಾ. ರಾಜ್​​ಕುಮಾರ್‍ ಕನ್ನಡ ಸಿನಿಮಾ ರಂಗ ಕಂಡಂತ ಮೇರು ನಟ. ಈ ನಟನ ಬಗ್ಗೆ ಈಗಾಗಲೇ ಸಾಕಷ್ಟು ಪುಸ್ತಗಳು ಬಿಡುಗಡೆಯಾಗಿದೆ..ಆದ್ರೆ ಇಲ್ಲೋಬ್ಬ ಬರಹಗಾರ ಸತತ ಹದಿನೈದು ವರ್ಷಗಳ ಕಾಲ ತನ್ನ ಇಡೀ ಸರ್ವಸ್ವವನ್ನಅಣ್ಣಾವ್ರಿಗಾಗಿ ಮುಡಿಪಾಗಿಸಿ ಈಗ ಅದರ ಪಲವಾಗಿ ದೇಶದ ಜನತೆಗೆ ಅದ್ಬುತವಾದ ಪುಸ್ತಕವಾಗಿ ನೀಡಲಿದ್ದಾರೆ. ಡಾ. ರಾಜ್​​ಕುಮಾರ್ ಬಗ್ಗೆ ಎಲ್ಲೂ ಕೇಳಿರದ ಕಂಡಿರದ ಅದೆಷ್ಟೋ ವಿಚಾರಗಳು ಈ ಪುಸ್ತಕದಲ್ಲಿ ಓದಲು ನಿಮಗೆ ಸಿಗಲಿದೆ. 15 ವರ್ಷದಲ್ಲಿ ದೇಶದ ನಾನಾ ಮೂಲೆಗಳಲ್ಲಿ ಸುತ್ತಿ ರಾಜ್​​ಕುಮಾರ್ ಬಗೆಗಿನ ವಿಚಾರವನ್ನ ಕಲೆಹಾಕಿದ್ದಾರೆ ರುಕ್ಕೋಜಿ. ಸ್ವಂತ ಅನುಭವ ಒಂದಿಷ್ಟು ಹಾಗೂ ಸಂಶೋಧನೆ ಸೇರಿ ಇಂದು ಡಾ.ರಾಜ್​​ಕುಮಾರ್ ಸಮಗ್ರ ಚರಿತ್ರೆ ಅನ್ನೋ ಎರಡು ಪುಸ್ತಕಗಳು ತಯಾರಾಗಿದೆ.

ವಿಶೇಷ ಅಂದ್ರೆ ಡಾ. ರಾಜ್​​ಕುಮಾರ್ ಸಮಗ್ರ ಚರಿತ್ರೆ 2148 ಪುಟಗಳನ್ನ ಹೊಂದಿರುವ ಪುಸ್ತಕ. ಡಾ. ರಾಜ್​ಕುಮಾರ್‍ ಅವ್ರ ಜೀವನಚರಿತ್ರೆಯನ್ನ ಹೇಳಿದ್ರೆ ಇನ್ನೊಂದು ಪುಸ್ತಕ ಅವ್ರ ಸಮಗ್ರ ಸಿನಿಮಾ ಪ್ರಯಾಣ ಹೋರಾಟವನ್ನ ತಿಳಿಸುತ್ತೆ. ಮೊದಲಿಗೆ ಡಾ. ರಾಜ್‍ಕುಮಾರ್‍ ಅವ್ರ ಸಿನಿಮಾಗಳ ಬಗ್ಗೆ ಪಿ. ಹೆಚ್. ಡಿ. ಮಾಡಲು ಹೊರಟ ರುಕ್ಕೋಜಿ ಸಮಯ ಕಡಿಮೆ ಅನ್ನೋ ಉದ್ದೇಶದಿಂದ ಈ ಸಮಗ್ರ ಚರಿತ್ರೆ ಬರೆಯೋದಕ್ಕೆ ಶುರು ಮಾಡಿದ್ರು. ಡಾ. ರಾಜ್​​ಕುಮಾರ್‍ ಕುಟುಂಬ ಹಾಗೂ ಸಿನಿಮಾ ಬಗ್ಗೆ ವಿಶೇಷವಾದದನ್ನ ಜನರಿಗೆ ತಿಳಿಸಬೇಕು ಅನ್ನೋ ಉದ್ದೇಶದಿಂದ ಅವರ ಸ್ವಂತ ಊರು ಗಾಜನೂರಿನಿಂದ ಹಿಡಿದು ಮದರಾಸಿನವರೆಗೂ ಎಲ್ಲಾ ಕಡೆಯಲ್ಲೂ ಅವ್ರ ಸ್ನೇಹಿತರು ಸಂಬಂಧಿಕರನ್ನ ಬೇಟಿ ಮಾಡಿ ವಿಚಾರಗಳನ್ನ ಕಲೆಯಾಕಿದ್ದಾರೆ.

ಪುಸ್ತಕದಲ್ಲಿದೆ 142 ಜನರ ಸಂದರ್ಶನ

ಹೌದು ಈ ಹೊತ್ತಿಕೆಯಲ್ಲಿ ಡಾ.ರಾಜ್‍ ಅವ್ರನ್ನ ಹತ್ತಿರದಿಂದ ಕಂಡಿರೋ ಹಾಗೂ ಕುಟುಂಬದದವರನ್ನ ಸೇರಿ ಒಟ್ಟು 142 ಜನರ ಸಂದರ್ಶನವನ್ನ ಒಳಗೊಂಡಿದೆ. ಅವರವರ ಕಣ್ಣಲ್ಲಿ ಡಾ.ರಾಜ್‍ ಅಂದ್ರೆ ಹೇಗೆ ಅನ್ನೋದನ್ನ ಬರೆದಿದ್ದು ನಿರ್ಮಾಪಕರಿಂದ ಹಿಡಿದು ಲೈಟ್ ಬಾಯ್ ವರೆಗೂ ಹಲವರ ಸಂದರ್ಶನವಿದೆ. ಈ 142 ಜನರಲ್ಲಿ ಈಗಾಗಲೇ ಇಪತ್ತಕ್ಕೂ ಹೆಚ್ಚು ಜನರು ಸಾವನಪ್ಪಿದ್ದಾರೆ. ಪದಗಳು ಹೇಳದ ಅದೆಷ್ಟೋ ವಿಷಯವನ್ನ ಒಂದು ಛಾಯಾಚಿತ್ರ ಹೇಳುತ್ತೆ ಅನ್ನೋ ಮಾತು ಸತ್ಯಅನ್ನೋದು ಎಲ್ಲರೂ ಒಪ್ಪಿರೋ ಮಾತು. ಅದರಂತೆ ಈ ಪುಸ್ತಕದಲ್ಲಿ 8700 ಚಿತ್ರಗಳನ್ನ ಬಳಸಲಾಗಿದೆ. ಡಾ.ರಾಜ್​​ಕುಮಾರ್‍ಅವ್ರ ವಂಶಸ್ಥರು ಹಾಗೂ ಸಿನಿಮಾರಂಗದ ಅಪರೂಪದ ಚಿತ್ರಣಗಳನ್ನ ನೀವು ಈ ಪುಸ್ತಕದಲ್ಲಿ ನೋಡಬಹುದು. ವಿಶೇಷ ಅಂದ್ರೆ ಈ ಎರಡು ಪುಸ್ತಕದಲ್ಲಿರೋ ಕೇವಲ ಫೋಟೋಗಳನ್ನು ನೋಡಲು ಕನಿಷ್ಠ ಅಂದ್ರೂ ಆರೂವರೆ ಗಂಟೆಗಳು ಬೇಕು .

ಜನರಿಗೆ ಏನಾದ್ರು ವಿಶೇಷವಾಗಿ ನೀಡಬೇಕು ಅನ್ನೋ ಉದ್ದೇಶದಿಂದ ಸಿದ್ದಮಾಡಿದ ಪುಸ್ತಕ ಡಾ. ರಾಜ್​​ಕುಮಾರ್ ಸಮಗ್ರ ಚರಿತ್ರೆ. ಪುಸ್ತಕ ಸಂಪೂರ್ಣ ಮುಗಿದ ನಂತ್ರ ಇದು ಎಷ್ಟು ವಿಶೇಷ ಅನ್ನೋದನ್ನ ತಿಳಿಯೋದಕ್ಕಾಗಿ ಸಾಂಸ್ಕೃತಿಕ ಲೋಕದಲ್ಲಿ 40ಕ್ಕೂ ಹೆಚ್ಚು ಮಂದಿಗಳಿಗೆ ಹಾಗೂ 12 ಮಂದಿ ವಿದ್ವಾಂಸರಿಗೆ ಮತ್ತು ನಾಡಿನ ವಿವಿಧ ಜಿಲ್ಲೆಯಲ್ಲಿ 20 ಆಯಾಕ್ಷೇತ್ರದ ದಿಗ್ಗಜರಿಗೆ ನೀಡಲಾಯ್ತು. ಕೆಲವರು ಎರಡು ತಿಂಗಳು ಈ ಪುಸ್ತಕವನ್ನ ಓದಿದ್ರೆ ಇನ್ನು ಕೆಲವರು 25 ದಿನಗಳಲ್ಲಿ ಪುಸ್ತಕವನ್ನ ಓದಿ ತಮ್ಮಅಭಿಪ್ರಾಯವನ್ನ ತಿಳಿಸಿದ್ದಾರೆ. 12 ಮಂದಿ ಈ ರೀತಿಯ ಪುಸ್ತಕ ಭಾರತದಲ್ಲೇ ಮೊದಲು ಅಂತ ಅಭಿಪ್ರಾಯ ತಿಳಿಸಿದ್ರೆ ಇನ್ನೂ 5 ಮಂದಿ ವಿಶ್ವದಲ್ಲೇ ಇಂತಹ ಪುಸ್ತಕ ಎಲ್ಲೂ ಇಲ್ಲ ಅನ್ನೋದನ್ನ ತಿಳಿಸಿದ್ದಾರೆ. ಒಟ್ಟಾರೆ ಈ ಪುಸ್ತಕ ಮೂಲಕ ಡಾ.ರಾಜ್​​ಕುಮಾರ್‍ ಜನರಿಗೆ ಮತ್ತಷ್ಟು ಹತ್ತಿರವಾಗೋದಷ್ಟೆಅಲ್ಲದೆ ವಿಶ್ವಮಟ್ಟದಲ್ಲಿ ಪುಸ್ತಕದ ರೂಪದಲ್ಲಿ ತಲುಪುತಿರೋ ಏಕೈಕ ವ್ಯಕ್ತಿಯಾಗಲಿದ್ದಾರೆ . ಕನ್ನಡ ಪುಸ್ತಕ ಪ್ರಪಂಚದ ಇತಿಹಾಸದಲ್ಲೇ ಅತೀ ಹೆಚ್ಚು ನಿರ್ಮಾಣ ವೆಚ್ಚದ (87 ಲಕ್ಷ) ಏಕೈಕ ಪುಸ್ತಕ ಡಾ.ರಾಜ್​​ಕುಮಾರ್ ಸಮಗ್ರ ಚರಿತ್ರೆ ಅನ್ನೊದಾಖಲೆ ಸೃಷ್ಠಿಸಿದ್ದು, ಎರಡು ಪುಸ್ತಕಗಳನ್ನ ಸಿದ್ದ ಪಡಿಸೋದ್ರಲ್ಲಿ 87 ಲಕ್ಷ ವೆಚ್ಚಮಾಡಲಾಗಿದೆ. ತೂಕದ ವಿಚಾರದಲ್ಲೂ ಕೂಡ(10 ಕಿಲೋಗ್ರಾಂ) ಅತೀ ಹೆಚ್ಚು ತೂಕ ಹೊಂದಿರೋ ಏಕೈಕ ಪುಸ್ತಕ ಇದಾಗಿದೆ.

ವಿಷಯದಲ್ಲಿ ಅದ್ದೂರಿತನವನ್ನ ಹೊಂದಿರೋ ಈ ಸಮಗ್ರ ಚರಿತ್ರೆ ಪುಸ್ತಕ ನೋಡಲು ಕೂಡ ಅಷ್ಟೇ ಆಕರ್ಷಣೆ ಹೊಂದಿದೆ . ಎರಡು ವರ್ಷ ಸತತವಾಗಿ ಪುಸ್ತಕದ ಪುಟ ವಿನ್ಯಾಸಕ್ಕಾಗಿ ಸಮಯವನ್ನ ಮುಡಿಪಾಗಿಸಲಾಗಿದೆ. ಇನ್ನೂ ಕೆಲ ರೇಖಾಚಿತ್ರವನ್ನ ಪುಸ್ತಕದಲ್ಲಿ ಬಳಸಿಕೊಂಡಿದ್ದು ರಾಜ್ಯದ ಮೂರು ಪ್ರಸಿದ್ದಿ ಕಲಾವಿದರು ಈ ಪುಸ್ತಕದ ರೇಖಾಚಿತ್ರ ಬರೆದುಕೊಟ್ಟಿದ್ದಾರೆ.

ಡಾ. ರಾಜ್​​ಕುಮಾರ್ ಸಮಗ್ರ ಚರಿತ್ರೆಯಲ್ಲಿ ಕಾಣಬಹುದಾದ ಮುಖ್ಯ ಅಂಶಗಳು ಈ ರೀತಿ ಇವೆ. ವೃತ್ತಿರಂಗಭೂಮಿ , ಡಾ. ರಾಜ್ ಪೂರ್ವಿಕರು ,ಚಲನಚಿತ್ರ ಸಂಚಯ,ರಾಜ್ ಸಂಗೀತ ಸಾಧನೆ, ಭಕ್ತಿ, ಆಧ್ಯಾತ್ಮಿಕ, ಯೋಗ, ಗೌರವ ಪುರಸ್ಕಾರ, ಅಭಿಮಾನಿ, ಮಹಾ ಕುಟುಂಬ, ವನವಾಸ, ವಿದಾಯ, ಡಾ.ರಾಜ್ ಚಿತ್ರಗಳು , ಮಾನವಿಯ ಪ್ರಸಂಗ ಇತರೆ ಮಾಹಿತಿ, ವ್ಯಕ್ತಿ ಪರಿಚಯ ಹೀಗೆ ಇನ್ನೂ ಅನೇಕ ಮಾಹಿತಿಗಳು ಪುಸ್ತಕದಲ್ಲಿವೆ. ಎರಡು ಪುಸ್ತಕ ಸೇರಿ 7500 ರೂಪಾಯಿಗಳನ್ನ ನಿಗಧಿ ಮಾಡಲಾಗಿದೆ. ಒಟ್ಟಾರೆ ರುಕ್ಕೋಜಿ ಅವ್ರ ಹದಿನೈದು ವರ್ಷದ ಶ್ರಮಕ್ಕೆ ಪಲ ಸಿಗುವ ಸಮಯ ಬಂದಾಗಿದೆ.