ವೀಡಿಯೋ ನೋಡಿ ಜಾಹಿರಾತು ಮಾಡಿ; ವೀಕ್ಷಣೆ ಆಧಾರದಲ್ಲಿ ಆದಾಯ ಗಳಿಸಿಕೊಳ್ಳುತ್ತಿದೆ ಆ್ಯಡ್​​ಸ್ಟೋರ್​​ ಆ್ಯಪ್

ಟೀಮ್​ ವೈ.ಎಸ್​​

0

ಭಾರತದಲ್ಲಿ ಸರಿಸುಮಾರು ಮೊಬೈಲ್ ಫೋನ್​ಗಳ ಸಂಖ್ಯೆಯಷ್ಟೇ ಡೆಸ್ಕ್​​ಟಾಪ್ ಹಾಗೂ ಲ್ಯಾಪ್​ಟಾಪ್ ಬಳೆಕೆದಾರರಿದ್ದಾರೆ. ಮೇರಿ ಮೀಕರ್ ಅಂದಾಜಿಸಿರುವ ಪ್ರಕಾರ ಈ ವರ್ಷ ಅತೀ ಹೆಚ್ಚು ಇಂಟರ್​ನೆಟ್ ಬಳಕೆದಾರರನ್ನು ಹೊಂದಿರುವ ರಾಷ್ಟ್ರವೂ ಭಾರತ. ಐಎಎಮ್ಎಐ ಹಾಗೂ ಕೆಪಿಎಂಜಿ ನೀಡಿರುವ ಇನ್ನೊಂದು ವರದಿಯ ಅನ್ವಯ, ಭಾರತ ವಿಶ್ವ ಮಾರುಕಟ್ಟೆಯಲ್ಲಿ ಮೂರನೇ ಒಂದು ಭಾಗದಷ್ಟು ಸ್ಮಾರ್ಟ್​ಫೋನ್​​ ಖರೀದಿ ನಡೆಸಿದೆ. 2017ರ ಅಂತ್ಯದಲ್ಲಿ ಭಾರತ ಒಂದೇ ಸುಮಾರು 314 ಮಿಲಿಯನ್ ಮೊಬೈಲ್ ಇಂಟರ್​​ನೆಟ್​​​ ಬಳಕೆದಾರರನ್ನು ಹೊಂದಲಿದೆ.

ಹೀಗೆ ಜಾಹಿರಾತು ಹಾಗೂ ಬ್ರಾಂಡ್​ಗಳ ಸ್ಥಾಪನೆಗೆ ಮೊಬೈಲ್ ಜಾಹಿರಾತು (ಅಡ್ವಟೈಸಿಂಗ್) ಅತೀ ಮುಖ್ಯ ರಾಜಮಾರ್ಗ ಒದಗಿಸಲಿದೆ. ಬೇರೆ ಮಾರ್ಗದ ಜಾಹಿರಾತುಗಳಿಗಿಂತ ಮೊಬೈಲ್ ಜಾಹಿರಾತು ಬಹಳ ಬೇಗನೆ ಜನತೆ ಹಾಗೂ ಗ್ರಾಹಕರನ್ನು ತಲುಪಲಿದೆ. ಸ್ಥಳೀಯ ಪ್ರಚಾರಗಳಿಗೂ ಇದು ಅತಿ ದೊಡ್ಡ ಅವಕಾಶಗಳನ್ನು ತೆರೆದಿಡಲಿದೆ. ಹಾಗಾಗಿ ಆ್ಯಡ್​​ಸ್ಟೋರ್​​, ಪೂರ್ಣ ಪ್ರಮಾಣದ ಮಾಹಿತಿಯನ್ನು ನೀಡುವ ಮೂಲಕ ಎಲ್ಲಾ ಬ್ರಾಂಡ್​​ಗಳಿಗೂ ಮಾರುಕಟ್ಟೆ ಒದಗಿಸಲಿದೆ.

ಏನಿದು ಆ್ಯಡ್​​ಸ್ಟೋರ್​​?

ಆ್ಯಡ್​​ಸ್ಟೋರ್​​ನಲ್ಲಿ ಬಳಕೆದಾರರು ಅಥವಾ ವೀಕ್ಷಕರು ಚಲನಚಿತ್ರಗಳ ಟ್ರೈಲರ್​ಗಳನ್ನು, ಯೂಟ್ಯೂಬ್ ಚಾನಲ್​​ಗಳ ಪ್ರೋಮೋ, ಬೇರೆ ಬೇರೆ ವೆಬ್​​ಸೈಟ್​​ನ ವೀಡಿಯೋಗಳನ್ನು ವೀಕ್ಷಿಸಬಹುದಾಗಿದೆ. ಇಲ್ಲಿ ವೀಡಿಯೋಗಳು ಎರಡರಿಂದ ಮೂರು ನಿಮಿಷಗಳ ಅವಧಿಯದ್ದಾಗಿದ್ದು ವಿಭಿನ್ನ ಕಥಾನಕಗಳನ್ನೂ ಹೊಂದಿರುತ್ತದೆ. ವೀಡಿಯೋ ನೋಡಿದ ನಂತರ ವೀಕ್ಷಕರು ಒಂದು ಸುತ್ತಿನ ಪ್ರಶ್ನೋತ್ತರಗಳಿಗೆ ಉತ್ತರಿಸಬೇಕು. ಆ್ಯಡ್​​ಸ್ಟೋರ್​​ ಇದನ್ನು ಯುಎಸ್​​ಪಿ (USP) ಅಂತ ಕರೆಯುತ್ತದೆ. ಈ ಪ್ರಶ್ನೋತ್ತರ ಮಾಲಿಕೆಗಳನ್ನು ಆ್ಯಡ್​​ಸ್ಟೋರ್​​ ಜಾಹೀರಾತು ನೀಡುವ ಸಂಸ್ಥೆಗಳಿಗೆ ನೀಡುತ್ತದೆ. ಈ ಪ್ರಶ್ನೆಗಳಲ್ಲಿ ಮೌಲ್ಯಯುತವಲ್ಲದ ವಿವರಣೆಗಳಿರುತ್ತವೆ. ಆದರೆ ಈ ಪ್ರಶ್ನೆಗಳಲ್ಲಿ ಬಳಕೆದಾರ ಅಥವಾ ವೀಕ್ಷಕರ ಹವ್ಯಾಸ, ಪ್ರಾಧಾನ್ಯತೆ ಹಾಗೂ ಅವರ ಜೀವನ ಶೈಲಿಗಳ ಬಗ್ಗೆ ಮಾಹಿತಿ ಸಿಗುತ್ತದೆ. ಈ ಮಾಹಿತಿ ಬಳಸಿಕೊಂಡು ಮಾರ್ಕೆಟ್ ರಿಸರ್ಚ್ ಮಾಡಲು ಹಾಗೂ ಗ್ರಾಹಕರ ಅಗತ್ಯತೆಗಳನ್ನು ತಿಳಿದುಕೊಳ್ಳಲು ದೊಡ್ಡ ದೊಡ್ಡ ಕಂಪೆನಿಗಳಿಗೆ ಅನುಕೂಲವಾಗುತ್ತದೆ. ಈ ಪ್ರಶ್ನೋತ್ತರಗಳಿಗೆ ಉತ್ತರಿಸುವ ಬಳಕೆದಾರ ಅಥವಾ ವೀಕ್ಷಕರನ್ನು ಸಂತೋಷ ಪಡಿಸಲು ಆ್ಯಡ್​​ಸ್ಟೋರ್​​ ಫ್ಲಿಫ್​ಕಾರ್ಟ್, ಫ್ರೀಚಾರ್ಜ್ ಹಾಗೂ ಮೆಕ್​​ಡೊನಾಲ್ಡ್​​ನಂತಹ ಪ್ರಸಿದ್ಧ ಸಂಸ್ಥೆಗಳ ಗಿಫ್ಟ್ ವೋಚರ್​ಗಳನ್ನು ಕೊಡುತ್ತದೆ.

ಆ್ಯಡ್​​ಸ್ಟೋರ್​​ ಆರಂಭಿಸಿದ್ದು ಇಬ್ಬರು ಹೈಸ್ಕೂಲ್​ನಲ್ಲಿ ಗೆಳೆಯರಾಗಿದ್ದ ಉದ್ಯಮಿಗಳು. ನರೇನ್ ಬುದವಾನಿ(ಸಿಇಓ) ಹಾಗೂ ಪಿಯೂಶ್ ದಖನ್ (ಸಿಓಓ) ಹುಟ್ಟಿದ್ದು ಹಾಗೂ ಬೆಳೆದಿದ್ದು ದುಬೈನಲ್ಲಿ. ನರೇನ್ ತಮ್ಮ ಉನ್ನತ ವ್ಯಾಸಂಗಕ್ಕಾಗಿ ಮುಂಬೈನ ಎನ್ಎಮ್​ಸಿಸಿಯನ್ನು ಆಯ್ಕೆ ಮಾಡಿಕೊಂಡರೆ, ಪಿಯೂಶ್ ಮಿಡಲ್​​ಸೆಕ್ಸ್​​ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಮುಗಿಸಿದರು.

ಯೂನಿವರ್ಸಿಟಿಯಲ್ಲಿ ಹಾಜರಾತಿ ಕಡಿಮೆ ಇದ್ದ ಕಾರಣ ನರೇನ್​​ಗೆ ಮೊದಲ ವರ್ಷದ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಈ ಅವಧಿಯಲ್ಲಿ ಒಂದು ವರ್ಷ ಸುಮ್ಮನೆ ಸೋಮಾರಿಯಾಗಿ ಕಳೆಯುವುದು ಬೇಡವೆಂದು ನರೇನ್ ದುಬೈಗೆ ವಾಪಾಸಾದರು. ಅಲ್ಲಿ ಆಹಾರ ಸಾಮಗ್ರಿಗಳ ವಹಿವಾಟು ನಡೆಸುವ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದರು. ಆ ಸಂಸ್ಥೆ ಪಂಚತಾರಾ ಹೋಟೆಲ್​ಗಳಿಗೆ ಬೇಕರಿ ಉತ್ಪನ್ನಗಳನ್ನು ಒದಗಿಸುತ್ತಿತ್ತು. ಆದರೆ ತಂದೆ-ತಾಯಿಯ ಒತ್ತಡ ಹೆಚ್ಚಾದ ಕಾರಣ ಮುಂಬೈಗೆ ಮರಳಿ ಬಂದು ತಮ್ಮ ಪದವಿ ಕಲಿಕೆ ಮುಂದುವರಿಸಿದರು.

ಪಿಯೂಶ್ ತಮ್ಮ ಕಾಲೇಜು ಕಲಿಕೆಯ ಎರಡನೇ ವರ್ಷದಲ್ಲಿಯೇ ತಮ್ಮ ಸ್ನೇಹಿತನೊಬ್ಬನ ಜೊತೆ ಮೊಬೈಲ್​​ಗೆ ಆನ್​​ಲೈನ್​​ ಪೋರ್ಟಲ್ ಶುರು ಮಾಡಿದ್ದರು. ಆಗ ದುಬೈನಲ್ಲಿ ಇ-ಕಾಮರ್ಸ್​ಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಬಳಿಕ ತಮ್ಮ ಪದವಿ ಕಲಿಕೆ ಮುಗಿಸಿ ನೇರವಾಗಿ ಆ್ಯಡ್​​ಸ್ಟೋರ್​​ ಪ್ರಾರಂಭಿಸಿದರು. ಇಲ್ಲಿ ಪಿಯೂಶ್​ಗೆ ಜೊತೆಯಾಗಿದ್ದು ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿದ್ದ ನರೇನ್. ಈಗ ಸಂಸ್ಥೆಯಲ್ಲಿ 6 ಸದಸ್ಯರಿದ್ದಾರೆ.. ನರೇನ್ ಹಾಗೂ ಮತ್ತೊಬ್ಬರು ಇದರ ತಂತ್ರಜ್ಞಾನವನ್ನು ನಿರ್ವಹಿಸುತ್ತಿದ್ದಾರೆ. ಪಿಯೂಶ್ ಹಾಗೂ ತಂಡ ಸಂಸ್ಥೆಯ ಬೆಳವಣಿಗೆ ಹಾಗೂ ಸಂಪೂರ್ಣ ಅಭಿವೃದ್ಧಿಯ ಕಡೆಗೆ ಗಮನ ಹರಿಸುತ್ತಿದ್ದಾರೆ.

ಬಿಸಿನೆಸ್ ಮಾದರಿ:

ಆ್ಯಡ್​​ಸ್ಟೋರ್​​ ಬಿಸಿನೆಸ್ ಮಾದರಿ ಸಿಪಿವಿ ಅಥವಾ ಕಾಸ್ಟ್ ಪರ್ ವ್ಯೂವ್ ಅಂದರೆ ವೀಕ್ಷಣೆಯ ಆಧಾರದಲ್ಲಿ ದರ ನಿಗದಿ ಮಾಡುವ ವ್ಯವಸ್ಥೆ ಹೊಂದಿದೆ. ಆ್ಯಪ್​​ನಲ್ಲಿ ಒಂದು ವೀಡಿಯೋ ಅಪ್ಲೋಡ್ ಆಗುವ ಮುನ್ನವೇ ಜಾಹಿರಾತುದಾರರು ಅದರ ನಿಗದಿತ ವೀಕ್ಷಣೆಯ ಪ್ರಮಾಣ ಅಂತಿಮಗೊಳಿಸಿರುತ್ತಾರೆ. ಅಷ್ಟು ಸಂಖ್ಯೆಯ ವೀಕ್ಷಣೆ ಆದ ನಂತರ ಆ ವೀಡಿಯೋ ಆ್ಯಪ್​​ನಿಂದ ಆಟೋಮೆಟಿಕ್​​ ಆಗಿ ಡಿಲೀಟ್ ಆಗುತ್ತದೆ.

ಒಂದು ವೀಕ್ಷಣೆಗೆ 1.5 ರೂಪಾಯಿಯಿಂದ ಸುಮಾರು 7 ರೂಪಾಯಿಯವರೆಗೆ ಚಾರ್ಜ್ ಮಾಡುತ್ತಾರೆ. ಇಲ್ಲಿಯವರೆಗೆ ಆ್ಯಡ್​​ಸ್ಟೋರ್​​ ಪ್ರತೀ ವೀಡಿಯೋಗೂ 3 ಪ್ರಶ್ನೆಗಳನ್ನು ಕೇಳುತ್ತಿದೆ. ಆದರೆ ಆ್ಯಪ್​​ನಲ್ಲಿ ಅಪ್ಲೋಡ್ ಆದ ವೀಡಿಯೋದ ಸಮಯದ ಮೇಲೆ ಪ್ರಶ್ನೆಗಳನ್ನು ಅಂತಿಮಗೊಳಿಸಲಾಗುತ್ತಿದೆ.

ಇಲ್ಲಿಯವರೆಗಿನ ಯಶೋಗಾಥೆ:

ಆ್ಯಡ್​​ಸ್ಟೋರ್​​ ಈಗ ಚೇತರಿಕೆಯ ಹಂತದಲ್ಲಿದ್ದು, ಈಗ ಮುಂದಿನ ಬಂಡವಾಳ ಹೂಡಿಕೆಯತ್ತ ಗಮನ ಹರಿಸುತ್ತಿದೆ. ಸುಮಾರು 8500ಕ್ಕೂ ಅಧಿಕ ನೊಂದಾಯಿತ ಗ್ರಾಹಕರನ್ನು ಕವರ್ ಮಾಡಿರೋದಾಗಿ ಆ್ಯಡ್​​ಸ್ಟೋರ್​​ ಘೋಷಿಸಿಕೊಂಡಿದೆ. ಅದರಲ್ಲಿ ಸರಾಸರಿ ಶೇ 65ರಷ್ಟು ಗ್ರಾಹಕರು ಆ್ಯಕ್ಟೀವ್ ಆಗಿ ಪ್ರತಿಕ್ರಿಯಿಸುತ್ತಿದ್ದು, ವಾರವೊಂದರಲ್ಲಿ ಮೂರು ಬಾರಿ ಆ್ಯಪ್ ಅನ್ನು ವೀಕ್ಷಿಸುತ್ತಿದ್ದಾರೆ ಅಂತ ನರೇನ್ ತಮ್ಮ ಸಾಧನೆಯ ಕುರಿತು ಮಾಹಿತಿ ನೀಡಿದ್ದಾರೆ.

ಆರಂಭಿಕ ಉದ್ಯಮವಾದ ತಮ್ಮ ಸಂಸ್ಥೆಯಲ್ಲಿ ಪ್ರತಿದಿನವೂ ಹೊಸತನ್ನು ಕಲಿಯುತ್ತಿದ್ದೇವೆ. ಕಾಲ ಕಾಲಕ್ಕೆ ತಕ್ಕಂತೆ ವಿಭಿನ್ನ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಪ್ರತಿಭಾವಂತರನ್ನು ಸಂಸ್ಥೆಗೆ ನೇಮಿಸಿಕೊಳ್ಳುವುದು ನಮ್ಮ ಮುಂದಿರುವ ಅತೀ ದೊಡ್ಡ ಸವಾಲಾಗಿದೆ. ಉದ್ಯಮ ಒಂದು ಹಂತಕ್ಕೆ ತಲುಪುವವರೆಗೂ ಉದ್ಯೋಗಿಗಳಿಗೆ ತೃಪ್ತಿಕರವಾದ ಸಂಬಳ ಸೌಕರ್ಯ ಒದಗಿಸುವುದು ನಾವು ಎದುರಿಸುತ್ತಿರುವ ಮಾಮೂಲಿ ಸಮಸ್ಯೆ ಅಂತ ನರೇನ್ ಹೇಳಿದ್ದಾರೆ.

ಆ್ಯಡ್​​ಸ್ಟೋರ್​​ನ ವೀಕ್ಷಕರಲ್ಲಿ ಬಹುತೇಕರು ಸುಮಾರು 16-25ರ ನಡುವಿನ ವಯೋಮಾನದವರು ಅನ್ನುವ ಸಂಗತಿಯನ್ನು ಇದು ಸ್ಪಷ್ಟವಾಗಿ ಗುರುತಿಸಿದೆ. ಹಾಗಾಗಿ ಬೇರೆ ಬೇರೆ ವಯೋಮಾನದ ವೀಕ್ಷಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಜೊತೆಗೆ ಇದರದ್ದೇ ಆದ ಪ್ರತ್ಯೇಕ ಆ್ಯಂಡ್ರಾಯ್ಡ್ ಅಪ್ಲಿಕೇಶನ್ ನಿರ್ಮಿಸಿ ಶೀಘ್ರದಲ್ಲಿಯೇ ಬಿಡುಗಡೆಗೊಳಿಸುವತ್ತ ಗಮನ ನೆಟ್ಟಿದೆ.

ಈ ಕ್ಷೇತ್ರದಲ್ಲಿರುವ ಉಳಿದವರು..?

ಈಗಾಗಲೆ ವೆಬ್ ಕ್ಷೇತ್ರದಲ್ಲಿ ಆಳ್ವಿಕೆ ನಡೆಸಿರುವ ಗೂಗಲ್, ಯಾಹೂನಂತಹ ದೈತ್ಯ ಸಂಸ್ಥೆಗಳೂ ಮೊಬೈಲ್ ಜಾಹಿರಾತಿನಲ್ಲಿ ಈಗ ತಾನೆ ತಮ್ಮ ಆರಂಭಿಕ ಹೆಜ್ಜೆಗಳನ್ನು ಇಡುತ್ತಿದೆ. ಆದರೂ ಗೂಗಲ್ ಸಂಸ್ಥೆ ಒಂದು ಹೆಜ್ಜೆ ಮುಂದಿದೆ.

ಇನ್ಮೊಬಿ ಈ ಕ್ಷೇತ್ರದಲ್ಲಿ ಅತೀ ದೊಡ್ಡ ಸಂಸ್ಥೆ ಅನ್ನಿಸಿಕೊಂಡಿದೆ. ಅದು ಇತ್ತೀಚೆಗಷ್ಟೆ ಎಮ್ಐಐಪಿ ಬಿಡುಗಡೆಗೊಳಿಸಿದೆ. ಇದು ಸಂದರ್ಭೋಚಿತವಾಗಿ ಹಾಗೂ ಸೂಕ್ತವಾದ ಆ್ಯಡ್ ಫಾರ್ಮೆಟ್​​ನೊಂದಿಗೆ ಸಾಂಪ್ರದಾಯಿಕ ಮೊಬೈಲ್ ಜಾಹೀರಾತಿನತ್ತ ಗಮನ ಕ್ರೂಢೀಕರಿಸಿದೆ. ಇನ್ನೊಂದು ಸಂಸ್ಥೆಯಾದ ಏರ್ಲಾಯಲ್ ಜನವರಿ2015ರಿಂದ ಆದಾಯ ಗಳಿಕೆಯಲ್ಲಿ ದೊಡ್ಡ ದೊಡ್ಡ ಹೆಜ್ಜೆಗಳನ್ನಿಟ್ಟು ದಾಪುಗಾಲಿಡುತ್ತಿದೆ.. ತಿಂಗಳಿನಿಂದ ತಿಂಗಳಿಗೆ ಅಭಿವೃದ್ಧಿ ಸಾಧಿಸುತ್ತಿರುವ ಏರ್ಲಾಯಲ್ ಶೇ 240ರಷ್ಟು ಪ್ರಗತಿ ಸಾಧಿಸುತ್ತಿದೆ.

ನರೇನ್ ಹೇಳುವಂತೆ ಆ್ಯಡ್​​ಸ್ಟೋರ್​​ನ ಇನ್ನುಳಿದ ಪ್ರತಿಸ್ಫರ್ಧಿಗಳೆಂದರೆ ಟಾಟಾ ಕಂಪೆನಿಯ ಜಿಇಟಿ , ಮೈಕ್ರೋಮ್ಯಾಕ್ಸ್ ಬಿಡುಗಡೆಗೊಳಿಸಿರುವ ಎಮ್ಎಡಿ.

ನಾವು ಇಷ್ಟಪಡುವ ಸಂಗತಿ..

ಈ ಆ್ಯಪ್ ತನ್ನ ವೀಡಿಯೋಗಳಿಂದ ಬಳಕೆದಾರರನ್ನು ಇ—ಕಾಮರ್ಸ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ಸ್, ಮುಂತಾದ ಕ್ಷೇತ್ರಗಳ ಮುಖೇನ ಸಂವಾದಿಸುತ್ತಿದೆ. ಆ್ಯಪ್​​ನ ಹೋಂ ಪೇಜ್​​ನಲ್ಲಿ ವೀಕ್ಷಕರು ಟಾಪ್ ಪೇಯ್ಡ್ ಹಾಗೂ ಟಾಪ್ ವ್ಯೂವ್ಡ್ ಅನ್ನುವ ಕಾಲಂ ಹೊಂದಿದೆ. ಇನ್ನು ಕೆಲವು ಆಸಕ್ತಿಕರ ವೀಡಿಯೋಗಳನ್ನು ನಂತರ ನೋಡುವ ಆಯ್ಕೆಯೂ ಇದರಲ್ಲಿದೆ.

ಅಭಿವೃದ್ಧಿಪಡಿಸಬೇಕಿರುವುದೇನು..?

ಹೊಸ ವೀಡಿಯೋ ಅಪ್ಲೋಡ್ ಆದ ಬಳಿಕ ಅದಕ್ಕೆ ಸಂಬಂಧಿಸಿದ ಅಪ್ಡೇಟ್ ಹಾಗೂ ನೋಟಿಫಿಕೇಶನ್​​ಗ ಳನ್ನು ತಿಳಿಸುವಂತಿರಬೇಕು. ವೀಕ್ಷಕರಿಗೆ ನೀಡುವ ವೋಚರ್ಸ್ ಗತಿಯೂ ಲಿಮಿಟೆಡ್ ಆಗಿದೆ. ಅದರಲ್ಲಿ ಕೆಲವು ವೋಚರ್​ಗಳು ಆಫ್​​ಲೈನ್​​ನಲ್ಲಿ ಉಚಿತವಾಗಿ ಸಿಗುವಂತದ್ದೂ ಇಲ್ಲಿದೆ. ಹಾಗಾಗಿ ಇನ್ನಷ್ಟು ಆಸಕ್ತಿಕರ ಗಿಫ್ಟ್ ವೋಚರ್​​ಗಳನ್ನು ನೀಡಿದರೆ ವೀಕ್ಷಕರನ್ನು ಸೆಳೆಯಬಹುದು.

ಜನ ತಾವು ನೋಡಿದ ಉತ್ತಮ ವೀಡಿಯೋಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಉತ್ಸುಕರಾಗಿರುತ್ತಾರೆ. ಹಾಗಾಗಿ ಇಲ್ಲಿ ನೇರವಾಗಿ ವೀಕ್ಷಕರು ಕಾಮೆಂಟ್ ಮಾಡುವ ಸೌಕರ್ಯ ಒದಗಿಸಬೇಕಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್​​ಬುಕ್​​ , ಟ್ವಿಟರ್ ಹಾಗೂ ವಾಟ್ಸ್ಆಪ್​​ಗಳಲ್ಲಿ ನೇರವಾಗಿ ಈ ವೀಡಿಯೋಗಳನ್ನು ಶೇರ್ ಮಾಡುವ ಸೌಕರ್ಯ ಒದಗಿಸುವುದು ಒಳ್ಳೆಯದು.

ಯುವರ್​​ಸ್ಟೋರಿ ಸಲಹೆ ಹಾಗೂ ತೀರ್ಪು:

ವೀಡಿಯೋ ಜಾಹಿರಾತುಗಳನ್ನು ಅನ್ವೇಷಿಸಲು ಆ್ಯಡ್​​ಸ್ಟೋರ್​​ ಅತ್ಯುತ್ತಮ ಹಾಗೂ ಆಸಕ್ತಿಕರ ಪ್ಲಾಟ್​ಫಾ ರಂ. ವೀಕ್ಷಕರು ಟಿವಿ ಹಾಗೂ ಯೂಟ್ಯೂಬ್​ನಲ್ಲಿ ನಿರಂತರವಾಗಿ ಜಾಹೀರಾತು ಬರುತ್ತಿದ್ದರೆ ಅದರಿಂದ ಬೇರೆಡೆಗೆ ಗಮನ ಹೊರಳಿಸುತ್ತಾರೆ. ಹಾಗಾಗಿ ಆ್ಯಡ್​​ಸ್ಟೋರ್​​ ಹೊರಗಿನ ಜಾಹಿರಾತುಗಳನ್ನು ನಿಯಮಿತಗೊಳಿಸಿ ಕೇವಲ ಸ್ಟೋರಿಲೈನ್ ಜಾಹಿರಾತುಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಬೇಕು. ಆಗ ವೀಕ್ಷಕರು ಈ ಆ್ಯಪ್​ನ ವೀಡಿಯೋಗಳ ಗುಣಮಟ್ಟ ಹಾಗೂ ಜಾಹೀರಾತಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

Related Stories