ಆಪ್ ವೈರಾಲಿಟಿ : ಒಂದು ವರ್ಷ, 100+ ಮೊಬೈಲ್ ಉದ್ಯಮ ಗ್ರಾಹಕರು ಮತ್ತು 5 ಅಂಕಿಯ ಆದಾಯ

ಟೀಮ್​ ವೈ.ಎಸ್​​

ಆಪ್ ವೈರಾಲಿಟಿ : ಒಂದು ವರ್ಷ, 100+ ಮೊಬೈಲ್ ಉದ್ಯಮ ಗ್ರಾಹಕರು ಮತ್ತು 5 ಅಂಕಿಯ ಆದಾಯ

Friday September 18, 2015,

3 min Read

ರಾಮ್ ಪಾಪಿನೇನಿಯವರು, ತಂತ್ರಜ್ಞಾನ ಮತ್ತು ಅಪ್ಲಿಕೇಶನ್ ಗಳನ್ನು ನಿರ್ಮಿಸುವ ಆಸಕ್ತಿಯುಳ್ಳ ಮನುಷ್ಯ. ಕೆಲವು ವರ್ಷಗಳ ಹಿಂದೆ ರಾಮ್ ಅವರು, ರೈಲ್ವೇ ಪ್ರಯಾಣಿಕರ ಬದುಕನ್ನು ಸರಳಗೊಳಿಸುವ ಕೆಲವು ಅಪ್ಲಿಕೇಶನ್‍ಗಳನ್ನು ಅಭಿವೃದ್ಧಿಪಡಿಸಿದ್ದರು.

ಈ ಪೈಕಿ ಎಂಎಂಟಿಎಸ್ ಟ್ರೈನ್ ಟೈಮಿಂಗ್ಸ್ ಕೂಡಾ ಒಂದು. ಈ ಅಪ್ಲಿಕೇಶನ್ ಹೈದ್ರಾಬಾದ್‍ನ ಸ್ಥಳೀಯ ರೈಲುಗಳ ಪ್ರಯಾಣಿಕರಿಗೆ ರೈಲಿನ ಸಮಯ ಮತ್ತು ತಾವಿರುವ ಸ್ಥಳದ ನಡುವಿನ ಅಂತರವನ್ನು ಕರಾರುವಕ್ಕಾಗಿ ತೋರಿಸುತ್ತಿತ್ತು. ಇದು ಹೈದ್ರಾಬಾದ್‍ನಲ್ಲಿ ಸ್ಥಳೀಯ ರೈಲು ಪ್ರಯಾಣಿಕರಿಗಾಗಿ ಆರಂಭಿಸಲ್ಪಟ್ಟ ಚೊಚ್ಚಲ ಅಪ್ಲಿಕೇಶನ್ ಆಗಿತ್ತು. ಸ್ಥಳೀಯ ರೈಲುಗಳ ಆಗಮನ-ನಿರ್ಗಮನದ ಸಮಯ ಸೂಚಿಸುತ್ತಿದ್ದ ಈ ಅಪ್ಲಿಕೇಶನ್‍ಅನ್ನು ಸುಮಾರು 20 ಸಾವಿರ ಪ್ರಯಾಣಿಕರು ಪ್ರತಿದಿನ ಬಳಸುತ್ತಿದ್ದರು. ಪ್ಲೇಸ್ಟೋರ್‍ನಲ್ಲಿ 4.4 ರೇಟಿಂಗ್ಸ್ ಲಭ್ಯವಾಗಿತ್ತು.

image


ರಾಮ್ ಅವರು ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುವಾಗ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಒಂದೋ ತಮ್ಮದೇ ಸ್ವಂತ ಸಾಮಥ್ರ್ಯದಲ್ಲಿ ಅಪ್ಲಿಕೇಶನ್ ಅಭಿವೃದ್ಧಿಪಡಿಸಬೇಕಿತ್ತು ಅಥವಾ ಹಲವು ಎಸ್‍ಡಿಕೆಗಳ ನೆರವನ್ನು ಪಡೆಯಬೇಕಿತ್ತು. ಇಲ್ಲದಿದ್ದರೆ, ಬೆಳವಣಿಗೆ ಸಾಧ್ಯವಾಗುತ್ತಿರಲಿಲ್ಲ. ತಮ್ಮ ಸಹೋದರ ಲಕ್ಷ್ಮಣ್ ಪಾಪಿನೇನಿಯವರ ಜೊತೆ ತಮ್ಮ ಚಿಂತನೆ ಕುರಿತು ಚರ್ಚಿಸಿದರು. ಅಂತಿಮವಾಗಿ ಆಪ್ ವೈರಾಲಿಟಿ ನೆರವು ಪಡೆಯಲು ನಿರ್ಧರಿಸಿದರು. ಕಳೆದ ವರ್ಷ ಅವರು ಅಪ್ಲಿಕೇಶನ್ ಆರಂಭಿಸಿದ ಬಳಿಕ ಇನ್ಮೊಬಿ ಸಹ ಸಂಸ್ಥಾಪಕ ರಾಜನ್ ಆನಂದನ್ ಮತ್ತಿತರರಿಂದ ಹಣಕಾಸಿನ ಹೂಡಿಕೆ ಪಡೆಯಲು ಸಫಲರಾದರು. ಲಕ್ಷ್ಮಣ್ ಅವರ ಜೊತೆ ಯುವರ್ ಸ್ಟೋರಿ ಪಡೆದುಕೊಂಡ ಅವರ ಜೀವನ ಪಯಣದ ಮಾಹಿತಿ ಇಲ್ಲಿದೆ.

ಯುವರ್ ಸ್ಟೋರಿ : ನಿಮ್ಮ ಆರಂಭಿಕ ದಿನಗಳು ಹೇಗಿದ್ದವು? ನೀವು ಹೇಗೆ ಲಾಂಚ್ ಮಾಡಿದ್ದೀರಿ?

ಲಕ್ಷ್ಮಣ್ : ನಾವು ಐಡಿಯಾ ಮಾಡಿದ ಬಳಿಕ, ಹಲವು ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿದಾರರನ್ನು ಸಂಪರ್ಕಿಸಿದೆವು. ಆಪ್ ಡೆವಲಪರ್ಸ್‍ಗೆ ಪ್ಲಗ್ ಅಂಡ್ ಪ್ಲೇ ಗ್ರೋತ್ ಹ್ಯಾಕಿಂಗ್ ಕಿಟ್‍ನ ಅಗತ್ಯವಿದೆ ಎಂಬುದು ನಮಗೆ ಮನವರಿಕೆಯಾಯಿತು. ಇದರಿಂದ ಉದ್ಯಮ ಬೆಳೆಸಲು ಅವಕಾಶವಿದೆ ಎಂದು ಅರಿತುಕೊಂಡೆವು. ಇದು ನಿಜಕ್ಕೂ ನಮ್ಮ ಕಣ್ಣು ತೆರೆಯಿಸಿತು. ಹೀಗಾಗಿ ನಾವು ಅಪ್ಲಿಕೇಶನ್ ಡೆವಲಪರ್ಸ್‍ಗಾಗಿಯೇ ಸಹಾಯಕ ಉತ್ಪನ್ನವೊಂದನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಿದೆವು. ಇದರಿಂದ ಕೆಲವೇ ನಿಮಿಷಗಳಲ್ಲಿ ಸರಿಯಾದ ನಿರ್ಧಾರ ಮತ್ತು ಅನುಷ್ಠಾನ ಯೋಜನೆಗಳನ್ನು ಕಾರ್ಯಗತಗೊಳಿಸಲು ನೆರವಾಗುತ್ತಿತ್ತು. 'ಡು ಇಟ್ ಯುವರ್‍ಸೆಲ್ಫ್ ಡ್ಯಾಶ್‍ಬೋರ್ಡ್ ಆರಂಭಿಸಿದೆವು. ಇದು ವಿನೂತನ ಯೋಚನೆಯಾಗಿದ್ದಯ ಪ್ಲೇ/ಆಪ್ಸ್ ಸ್ಟೋರ್‍ಗಳಲ್ಲಿ ಯಾವುದೇ ಕೋಡಿಂಗ್ ಅಥವಾ ಅಪ್‍ಡೇಟ್‍ನ ಅವಶ್ಯಕತೆ ಇರಲಿಲ್ಲ.

ಯುವರ್ ಸ್ಟೋರಿ : ಸಧ್ಯಕ್ಕೆ ನೀವು ಏನನ್ನು ಒದಗಿಸುತ್ತಿದ್ದೀರಿ? ನೀವು ಆರಂಭಿಸಿದ ಮಾದರಿ ಇದೇನಾ?

ಲಕ್ಷ್ಮಣ್ : ಹೌದು, ನಾವು ಆರಂಭಿಸಿದ ಮಾದರಿಯನ್ನೇ ಈಗಲೂ ಬಳಸುತ್ತಿದ್ದೇವೆ. ಆದಾಗ್ಯೂ ನಾವು ಆಗಿಂದಾಗ್ಗೆ ಗ್ರಾಹಕರ ಅಭಿಪ್ರಾಯ ಆಧರಿಸಿ,ಅಪ್ಲಿಕೇಶನ್ ಅನ್ನು ಅಪ್‍ಡೇಟ್ ಮಾಡುತ್ತಿರುತ್ತೇವೆ. ಪ್ರಸಕ್ತ ಆಪ್ ವೈರಾಲಿಟಿಯು, ಅಪ್ಲಿಕೇಶನ್ ಡೆವಲಪರ್ಸ್‍ಗಳಿಗಾಗಿ ಅಭಿವೃದ್ಧಿಯ ತಾಂತ್ರಿಕತೆಯನ್ನು ಒದಗಿಸುತ್ತಿದೆ... ಅವೆಂದರೆ..

ಪರ್ಸನಲೈಸ್ಡ್ ಇನ್-ಆಪ್ ರೆಫರೆಲ್ಸ್

ಸ್ವಿಪ್‍ಸ್ಟೇಕ್ಸ್

ಸ್ಮಾರ್ಟ್ ಸಾಮಾಜಿಕ ಹಂಚಿಕೆ

ನಾನು ಆಗಲೇ ಹೇಳಿದ ಹಾಗೆ, ಡಿಐವೈ ಎಂಬ ವೆಬ್‍ಸೈಟ್ ಡ್ಯಾಶ್‍ಬೋರ್ಡ್‍ನಿಂದ ಅಪ್ಲಿಕೇಶನ್ ಡೆವಲಪರ್‍ಗಳು ನೇರವಾಗಿ ಅಪ್ಲಿಕೇಶನ್ ರಚಿಸಬಹುದು. ಅದಕ್ಕಾಗಿ ಅವರು ಯಾವುದೋ ಕೋಡ್ ಬಳಸುವ ಅವಶ್ಯಕತೆ ಇಲ್ಲ. ಪ್ಲೇ/ಆಪ್ ಸ್ಟೋರ್‍ಗಳಲ್ಲಿ ಅಪ್‍ಡೇಟ್ ಮಾಡುವುದೂ ಕೂಡಾ ತುಂಬಾ ಸುಲಭ.

ಯುವರ್ ಸ್ಟೋರಿ : ಆಪ್ ವೈರಾಲಿಟಿ ಬಳಸಿಕೊಂಡು ಇನ್ ಆಪ್ ರೆಫರೆಲ್ಸ್‍ಗಳನ್ನು ಹೇಗೆ ಅನುಷ್ಠಾನಗೊಳಿಸಬಹುದು?

ಲಕ್ಷ್ಮಣ್ : ಇದಕ್ಕೆ ಕೇವಲ 30 ನಿಮಿಷ ಸಾಕು. 25 ಕೆಬಿ ಎಸ್‍ಡಿಕೆ ಮತ್ತು ಡು ಇಟ್ ಯುವರ್‍ಸೆಲ್ಫ್ ಡ್ಯಾಶ್‍ಬೋರ್ಡ್ ಬಳಸಿಕೊಂಡು ನೀವು ಯಾವುದೇ ಅಪ್ಲಿಕೇಶನ್ ಅನ್ನು ತಯಾರಿಸಿ ಬಿಡುಗಡೆ ಮಾಡಬಹುದು. ಆಪ್ ವೈರಾಲಿಟಿಯು, ಬಳಕೆದಾರರ ಪಾಸ್‍ವರ್ಡ್, ಗ್ರಾಹಕರ ರಿವಾಡ್ರ್ಸ್, ಈ ಮೇಲ್, ಪುಷ್ ನೋಟಿಫಿಕೇಶನ್, ಎ/ಬಿ ಪರೀಕ್ಷೆ ಮತ್ತಿತರ ವಿಚಾರಗಳನ್ನು ಆಪ್ ವೈರಾಲಿಟಿಯು ನೋಡಿಕೊಳ್ಳುತ್ತದೆ.

ಯುವರ್ ಸ್ಟೋರಿ: ನೀವು ಆರಂಭದಲ್ಲಿ ಗ್ರಾಹಕರನ್ನು ಹೇಗೆ ಸಂಪಾದಿಸಿದಿರು? ಉಚಿತ ಪೈಲಟ್ ಪರೀಕ್ಷೆಗಳನ್ನು ಏನಾದರೂ ನಡೆಸಿದ್ದೀರಾ?

ಲಕ್ಷ್ಮಣ್ : ಈ ವಿಚಾರದಲ್ಲಿ ನಾವು ತುಂಬಾ ಅದೃಷ್ಟವಂತರು. ನಮ್ಮ ಆರಂಭಿಕ ಗ್ರಾಹಕರು, ನಮಗೆ ಆಸಕ್ತಿ ಜೊತೆಗೆ ಪೂರಕ ಮಾಹಿತಿಗಳನ್ನೂ ಹಂಚಿಕೊಂಡರು. ನಾವು ಮೊದಲು ಎಸ್‍ಎಂಬಿ ಅಪ್ಲಿಕೇಶನ್ ಮೂಲಕ ಆರಂಭಿಸಿ, ಅವರ ಆಸಕ್ತಿಗಳನ್ನು ತಿಳಿದುಕೊಂಡು, ಫಲಿತಾಂಶ ಗಮನಿಸಬೇಕು ಎಂದುಕೊಂಡಿದ್ದೆವು. ಆದರೆ ಅದೃಷ್ಟ ನಮ್ಮ ಜೊತೆಗಿತ್ತು. ನಮ್ಮ ಕೆಲವು ಗ್ರಾಹಕರು ತಮ್ಮ ಅಪ್ಲಿಕೇಶನ್ ಅಭಿವೃದ್ಧಿಯಲ್ಲಿ ನಮ್ಮ ಅಪ್-ರೆಫರಲ್‍ಅನ್ನು ಬಳಸಿಕೊಂಡರು. ಹೀಗೆ.. ಎಲ್ಲವೂ ಆರಂಭವಾಯಿತು.

ಯುವರ್ ಸ್ಟೋರಿ : ಆದಾಯದ ಹಾದಿ ಏನು? ದರ ನಿಗದಿಯನ್ನು ಹೇಗೆ ಮಾಡಿದಿರಿ?

ಲಕ್ಷ್ಮಣ್ : ನಾವಿನ್ನೂ ಸರಿಯಾದ ಬೆಲೆಯನ್ನು ನಿಗದಿ ಮಾಡಿಲ್ಲ. ನಮ್ಮ ಬಳಿಗೆ ಬರುವ ಗ್ರಾಹಕರ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಬೆಲೆ ನಿಗದಿಮಾಡುತ್ತಿದ್ದೇವೆ. ಸಿಪಿಡಿ/ಸಿಪಿಐ (ಕಾಸ್ಟ್ ಪರ್ ಇನ್‍ಸ್ಟಾಲ್/ ಡೌನ್‍ಲೋಡ್) ನಮ್ಮಲ್ಲಿನ ಅತಿ ಜನಪ್ರಿಯ ಉತ್ಪನ್ನವಾಗಿದೆ. ಇದರ ಆದಾಯದಿಂದಾಗಿ ನಾವು ಈಗಾಗಲೇ ಐದಂಕಿಯ ಅಮೆರಿಕನ್ ಡಾಲರ್ ಆದಾಯ ಪಡೆಯುತ್ತಿದ್ದೇವೆ. ಮುಂದಿನ 12 ತಿಂಗಳಲ್ಲಿ 1 ಮಿಲಿಯನ್ ಡಾಲರ್ ಎಆರ್‍ಆರ್ ತಲುಪಲು ಉದ್ದೇಶಿಸಿದ್ದೇವೆ.

ಯುವರ್ ಸ್ಟೋರಿ : ನಿಮ್ಮ ಸಧ್ಯದ ಆಸಕ್ತಿ ಏನು? ಯಾವ ಮಾರುಕಟ್ಟೆಯನ್ನು ನೀವು ಗುರಿಯಾಗಿಸಿಕೊಂಡಿದ್ದೀರಿ?

ಲಕ್ಷ್ಮಣ್ : ಸಧ್ಯಕ್ಕೆ ಭಾರತ, ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಸ್ಪೇನ್ ಸೇರಿದಂತೆ ನಾವು ನೂರಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದೇವೆ. ಭಾರತದಲ್ಲಿ ಯಾತ್ರಾ, ಕ್ವಿಕರ್, ಮೇಕ್‍ಮೈಟ್ರಿಪ್, ಹೆಲ್ತ್ ಕಾರ್ಟ್ ಮತ್ತು ಇಕ್ಸಿಗೋ ಮೊದಲಾದ ಸಂಸ್ಥೆಗಳು ನಮ್ಮ ಗ್ರಾಹಕರಾಗಿದ್ದಾರೆ.

ಮೊದಲಿಗೆ ನಾವು ಭಾರತದಲ್ಲೇ ಉದ್ಯಮ ಆರಂಭಿಸಿದೆವು. ಯಾರಿಗೇ ಆದರೂ ತಮ್ಮ ತಾಯ್ನೆಲದಲ್ಲಿ ಗೆಲುವು ಪಡೆಯುವುದು ಮುಖ್ಯವಾಗುತ್ತದೆ. ಆದರೆ, ಈಗಲೂ ನಾವು ಹೊರದೇಶಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದೇವೆ. ಅಲ್ಲಿನ ವಹಿವಾಟು ವೇಗದಲ್ಲಿ ಮುನ್ನುಗ್ಗುತ್ತಿದೆ.

ಯುವರ್ ಸ್ಟೋರಿ : ಅಪ್ಲಿಕೇಶನ್ ಲೋಕವು ಹೇಗೆ ಅಭಿವೃದ್ಧಿಯಾಗುತ್ತಿದೆ? ಆಪ್‍ವೈರಾಲಿಟಿಯು ಯಾವ ಸ್ಥಾನದಲ್ಲಿದೆ.

ಲಕ್ಷ್ಮಣ್ : ಈಗ ಎಲ್ಲರೂ ಅಪ್ಲಿಕೇಶನ್ ಗಳ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ. ಇದರರ್ಥ, ಭವಿಷ್ಯವು ಅಪ್ಲಿಕೇಶನ್‍ಗಳದ್ದೇ ಆಗಿರಲಿದೆ. ಮತ್ತು ಅಪ್ಲಿಕೇಶನ್ನೇ ಆಗಿರಲಿದೆ. ಎಲ್ಲಾ ಅಪ್ಲಿಕೇಶನ್ ಡೆವಲಪರ್‍ಗಳು ವರ್ಷದೊಳಗೆ ಒಂದು ದಶಲಕ್ಷ ಡೌನ್‍ಲೋಡ್ ಗುರಿ ತಲುಪಲು ನಿರ್ಧರಿಸಿರುತ್ತಾರೆ. ಅದನ್ನು ತಲುಪಲು ಎಲ್ಲಾ ಸಾಧ್ಯವಾದ ಹಾದಿಗಳನ್ನು ಬಳಸುತ್ತಾರೆ.

ಅಪ್ಲಿಕೇಶನ್ ಗಳ ಬೆಳವಣಿಗೆಗೆ ಬೇಕಾಗುವ ಪೂರಕ ತಾಂತ್ರಿಕತೆ ಮತ್ತು ಸೇವೆಯನ್ನು ನಾವು ಒದಗಿಸುತ್ತಿದ್ದೇವೆ. ಹೀಗಾಗಿ ಆಪ್‍ವೈರಾಲಿಟಿಯು ಈ ಸನ್ನಿವೇಶಕ್ಕೆ ಹೆಚ್ಚು ಪೂರಕವಾಗಿದೆ. ಗೂಗಲ್ ಅಥವಾ ಇನ್‍ಮೊಬಿಯಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ನೆರವಾಗುತ್ತವೆ. ಯಾವುದೇ ಒಬ್ಬ ಅಪ್ಲಿಕೇಶನ್ ಡೆವಲಪರ್ ತಮ್ಮ ಮೊದಲ ಅಪ್ಲಿಕೇಶನ್ ನಲ್ಲಿ ನಮ್ಮ ಒಂದಾದರೂ ಎಸ್‍ಡಿಕೆ ಹೊಂದಿರಬೇಕು ಎಂದು ನಾವು ಬಯಸುತ್ತೇವೆ. ನಮ್ಮ ಸಾಮಥ್ರ್ಯ ಮತ್ತು ಅನುಭವ ಗಮನಿಸಿದರೆ, ನಾವು ಆ ಗುರಿಯನ್ನು ತಲುಪುವುದು ನಿಶ್ಚಿತ.

ವೆಬ್‍ಸೈಟ್: ಆಪ್‍ವೈರಾಲಿಟಿ