ರೋಟಿ...ಕಪಡಾ ಔರ್ ಮಕನ್-ಉದ್ಯಮ ಆರಂಭದ ಕಹಾನಿ

ಟೀಮ್​​ ವೈ.ಎಸ್​​.

0

ಈಗ ಇ-ರೋಟಿಗಾಗಿ ಸಮರ ಶುರುವಾಗಿದೆ. ಯಾಕಂದ್ರೆ ಗೂಗಲ್ ಈಗ ಆಹಾರ ಉದ್ಯಮಕ್ಕೂ ಕಾಲಿಟ್ಟಿದೆ. ಗೂಗಲ್ ಎಕ್ಸ್​​ಪ್ರೆಸ್ ಮೂಲಕ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತಾಜಾ ತಿನಿಸು ಮತ್ತು ದಿನಸಿಯನ್ನು ವಿತರಿಸ್ತಾ ಇದೆ. ಕೇವಲ್ ಗೂಗಲ್ ಮಾತ್ರವಲ್ಲ ಅಮೇಝಾನ್ ಕೂಡ ಎರಡೇ ಗಂಟೆಗಳಲ್ಲಿ ಊಟ ಹಾಗೂ ತಿನಿಸುಗಳನ್ನು ವಿತರಿಸ್ತಾ ಇದೆ. ಅಮೇಝಾನ್ ಇಂಡಿಯಾದಲ್ಲಿ ದಿನಸಿ ಮಾರಾಟ ಸೇವೆಯೂ ಇದೆ. 2014ರಲ್ಲಿ ಭಾರತದಲ್ಲಿ ಆರಂಭವಾಗಿರುವ 15 ಪ್ರಮುಖ ಇ-ಕಾಮರ್ಸ್ ಉದ್ಯಮಗಳ ಪೈಕಿ 10 ರೋಟಿ-ಕಪಡಾ ಔರ್ ಮಕಾನ್‍ಗೆ ಸೇರಿದ್ದು. ಅರ್ಥಾತ್ ಆಹಾರ, ಬಟ್ಟೆ ಹಾಗೂ ವಸತಿಗೆ ಸಂಬಂಧಿಸಿದ್ದು.

ರೋಟಿ 

ಭಾರತದಲ್ಲಿ ಆಹಾರ ಉದ್ಯಮ ಅತ್ಯಂತ ಜನಪ್ರಿಯವಾಗಿದೆ. ದೇಶದಲ್ಲಿ ಪ್ರತಿವರ್ಷ 700ಕ್ಕೂ ಹೆಚ್ಚು ಆಹಾರ ಉದ್ಯಮಗಳು ಆರಂಭವಾಗುತ್ತವೆ. ಇವುಗಳಲ್ಲಿ ಹೂಡಿಕೆಯಾಗುವ ಬಂಡವಾಳ ಎಷ್ಟು ಗೊತ್ತಾ ಬರೋಬ್ಬರಿ 1.2 ಬಿಲಿಯನ್ ಡಾಲರ್. ಇ-ಕಾಮರ್ಸ್ ಮಾರುಕಟ್ಟೆಯ ಮೌಲ್ಯವೂ 275 ಮಿಲಿಯನ್ ಡಾಲರ್‍ನಷ್ಟಾಗಿದೆ. 2020ರ ವೇಳೆಗೆ ಇ-ರೋಟಿ ಮಾರುಕಟ್ಟೆಯ ಮೌಲ್ಯ 725 ಮಿಲಿಯನ್ ಡಾಲರ್‍ಗೆ ತಲುಪುವ ಸಾಧ್ಯತೆ ಇದೆ. ಇದ್ರಿಂದ ಚೀನಾ ಹಾಗೂ ಅಮೆರಿಕದಲ್ಲಿ 8.5 ಬಿಲಿಯನ್ ಡಾಲರ್ ಆದಾಯ ಸಂಗ್ರಹವಾಗ್ತಿದೆ. ಬಿಗ್‍ಬಾಸ್ಕೆಟ್, ಲೋಕಲ್‍ಬನ್ಯಾ, ಗ್ರೀನ್‍ಟ್ಯಾಪ್‍ನಂತಹ ಹೈಪರ್ ಮಾರ್ಕೆಟ್‍ಗಳಿಗೆ ಕೂಡ ಆನ್‍ಲೈನ್ ವೆಬ್‍ಸೈಟ್‍ಗಳಿಂದ ಡೆಲಿವರಿ ಮಾಡಲಾಗ್ತಿದೆ. ನೆರೆಹೊರೆಯ ಸಣ್ಣಪುಟ್ಟ ಅಂಗಡಿಗಳಿಗೂ ದಿನಸಿ ಪೂರೈಸುವ ಆಹಾರ ಸರಪಳಿಯೇ ನಿರ್ಮಾಣವಾಗಿದೆ.

ಬೇಡಿಕೆ

ಪೂರೈಕೆಯನ್ನು ಸರಿದೂಗಿಸುವ ಆವಿಷ್ಕಾರಗಳು ಸಫಲವಾಗ್ತಿವೆ. ರೈಲ್ವೆ ಸ್ಟೇಶನ್‍ಗಳಲ್ಲಿ ಬಿಸಿ ಬಿಸಿ ಆಹಾರವನ್ನು ಪ್ರಯಾಣಿಕರಿಗೆ ಪೂರೈಸುತ್ತಿರುವ ಟ್ರಾವೆಲ್‍ಖಾನಾದಂತಹ ಸಂಸ್ಥೆಗಳೇ ಇದಕ್ಕೆ ಸಾಕ್ಷಿ. ಭಾರತದ ರಿಟೇಲ್ ಮಾರುಕಟ್ಟೆಯ ಶೇಕಡಾ 70 ರಷ್ಟು ಅಂದ್ರೆ 500 ಬಿಲಿಯನ್ ವಹಿವಾಟು ಆಹಾರ ಮತ್ತು ದಿನಸಿಯಿಂದ ಆಗ್ತಾ ಇದೆ. ಹಾಗಾಗಿಯೇ ಉದ್ಯಮಿಗಳು ಹಾಗೂ ಹೂಡಿಕೆದಾರರು ಈ ಕ್ಷೇತ್ರದತ್ತ ಆಕರ್ಷಿತರಾಗ್ತಿದ್ದಾರೆ.

ಕಪಡಾ 

ಭಾರತದ ಇ-ಕಾಮರ್ಸ್ ಮಾರುಕಟ್ಟೆಯ ಅತಿ ದೊಡ್ಡ ವಿಭಾಗ ಅಂದ್ರೆ ಬಟ್ಟೆ ಸೌಂದರ್ಯವರ್ಧಕ ವಸ್ತುಗಳು. 2015ರಲ್ಲಿ ಇವುಗಳ ಮೌಲ್ಯ 2.7 ಬಿಲಿಯನ್ ಅಮೆರಿಕನ್ ಡಾಲರ್. 2020ರ ವೇಳೆಗೆ ಇದು 8.6 ಬಿಲಿಯನ್ ಡಾಲರ್‍ಗೆ ತಲುಪಲಿದೆ. ಸುಮಾರು 50 ಮಿಲಿಯನ್ ಗ್ರಾಹಕರು ಆನ್‍ಲೈನ್‍ನಲ್ಲಿ ಬಟ್ಟೆ ಖರೀದಿಸ್ತಿದ್ದಾರೆ. ಇನ್ನೈದು ವರ್ಷಗಳಲ್ಲಿ ಈ ಸಂಖ್ಯೆ ಡಬಲ್ ಆಗಲಿದೆ. ಜಾಗತಿಕ ಮಟ್ಟದಲ್ಲಿ ಹೋಲಿಕೆ ಮಾಡಿದ್ರೆ ಬಟ್ಟೆ ಉದ್ಯಮದಿಂದ 60.3 ಬಿಲಿಯನ್ ಡಾಲರ್ ಆದಾಯ ಗಳಿಸ್ತಾ ಇರೋ ಚೀನಾ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಸುಮಾರು 50 ಬಿಲಿಯನ್ ಡಾಲರ್ ಆದಾಯ ಗಳಿಸ್ತಾ ಇರೋ ಅಮೆರಿಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಮಕಾನ್

ಹೌಸಿಂಗ್ ಡಾಟ್ ಕಾಮ್ ಮೂಲಕ ರಿಯಲ್ ಎಸ್ಟೇಟ್, ಪೀಠೋಪಕರಣ ಮತ್ತು ಗೃಹೋಪಯೋಗಿ ವಸ್ತುಗಳತ್ತಲೂ ಹೂಡಿಕೆದಾರರು ಚಿತ್ತ ನೆಟ್ಟಿದ್ದಾರೆ. ಗೃಹಾಲಂಕಾರ ಹಾಗೂ ಪೀಠೋಪಕರಣಗಳಲ್ಲಿ ಅರ್ಬನ್‍ಲ್ಯಾಡಾರ್ ಮತ್ತು ಹೋಮ್‍ಲೇನ್ ಸಂಸ್ಥೆಗಳು ಈಗಾಗ್ಲೇ ಜನಪ್ರಿಯತೆ ಪಡೆದಿವೆ. ಸದ್ಯ ಪೀಠೋಪಕರಣ ಮತ್ತು ಗೃಹೋಪಯೋಗಿ ವಸ್ತುಗಳಿಂದ ಭಾರತಕ್ಕೆ 1 ಬಿಲಿಯನ್ ಡಾಲರ್ ಆದಾಯ ಬರ್ತಿದೆ. ಇನ್ನು 5 ವರ್ಷಗಳಲ್ಲಿ ಇದು 2.5 ಬಿಲಿಯನ್ ಡಾಲರ್‍ಗೆ ತಲುಪುವ ನಿರೀಕ್ಷೆಯಿದೆ. ಆಸ್ತಿ ಹುಡುಕಾಟದಲ್ಲಿರುವವರಿಗೆ ಕಾಮನ್‍ಫ್ಲೋರ್ ಬಿಡುಗಡೆ ಮಾಡಿರುವ 3ಡಿ ಆ್ಯಪ್ ವರದಾನವಾಗಿದೆ. ಸಾಂಪ್ರದಾಯಿಕ ರಿಯಲ್ ಎಸ್ಟೇಟ್ ಕಂಪನಿಗಳು ಕೂಡ ಇದೇ ಮಾದರಿಯನ್ನು ಅಳವಡಿಸಿಕೊಳ್ಳುತ್ತಿವೆ. ಟಾಟಾ ಹೌಸಿಂಗ್ 50 ಕೋಟಿ ಮೊತ್ತದ ಫ್ಲ್ಯಾಟ್‍ಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಿದೆ.

ಮೇರಾ ಕಿಚನ್‍ನಂತರ ಚಿಕ್ಕ ಮಳಿಗೆಗಳಿಂದ ಹಿಡಿದು, ಸೆಲ್ಲರ್ ವಕ್ರ್ಸ್, ಒಪಿನಿಯೋ, ರೋಡ್‍ರನ್ನರ್‍ನಂತಹ ಸಂಸ್ಥೆಗಳು ಆನ್‍ಲೈನ್ ಉದ್ಯಮಕ್ಕೆ ಪೂರಕವಾಗಿವೆ. ಅಂತರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದ್ರೆ ರೋಟಿ, ಕಪಡಾ ಔರ್ ಮಕಾನ್‍ನಿಂದ ಭಾರತಕ್ಕೆ ಬರುತ್ತಿರುವ ತಲಾ ಆದಾಯ ಅತ್ಯಂತ ಕಡಿಮೆ. ಇದು 13 ಡಾಲರ್, 55 ಡಾಲರ್ ಮತ್ತು 26 ಡಾಲರ್‍ನಷ್ಟಿದೆ. ಚೀನಾದಲ್ಲಿ ತಲಾ ಆದಾಯ 70ಡಾಲರ್, 150 ಡಾಲರ್ ಮತ್ತು 500 ಡಾಲರ್ ಇದೆ. ಹಾಗಾಗಿ ಭಾರತದ ಆರ್‍ಕೆಎಂ ಮಾರುಕಟ್ಟೆಯಲ್ಲಿ ಆದಾಯ ಸಂಗ್ರಹಕ್ಕೆ ಇನ್ನಷ್ಟು ಆವಿಷ್ಕಾರದ ಅಗತ್ಯವಿದೆ. ಈ ಆ್ಯಪ್ ದುನಿಯಾ ಸಣ್ಣ ಕಿರಾಣಿ ಅಂಗಡಿಗಳ ಅಸ್ತಿತ್ವವನ್ನೇ ಅಲ್ಲಾಡಿಸಬಹುದು. ಸುಸ್ಥಿರ ಆದಾಯ ಹೆಚ್ಚಿಸಬಲ್ಲ ಚಟುವಟಿಕೆಗಳತ್ತ ಉದ್ಯಮಿಗಳು ಗಮನಹರಿಸಬೇಕು.

ಬಹುತೇಕ ಇ-ಕಾಮರ್ಸ್ ಕಂಪನಿಗಳು ಗ್ರಾಹಕರಿಗೆ ರಿಟರ್ನ್ ಹಾಗೂ ರಿಫಂಡ್ ಅವಕಾಶ ಕಲ್ಪಿಸಿವೆ. ಆದ್ರೆ ಇದನ್ನೂ ಹೊರತುಪಡಿಸಿದ ಸೇವೆಯ ಅಗತ್ಯವಿದೆ. ಆ್ಯಪ್ ಮೂಲಕ ಈ ಸೇವೆಯನ್ನು ಪಡೆಯುತ್ತಿರುವವರ ಸಂಖ್ಯೆ ಒಂದು ಮಿಲಿಯನ್‍ನಷ್ಟಿದೆ. ಆದ್ರೆ ಮೊಬೈಲ್ ಬ್ರಾಡ್‍ಬ್ಯಾಂಡ್ ಬಳಕೆದಾರರ ಸಂಖ್ಯೆ 100 ಮಿಲಿಯನ್ ದಾಟಲಿದೆ. ಇದು ಆನ್‍ಲೈನ್ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸಿದೆ. ಆನ್‍ಲೈನ್ ಉದ್ಯಮ ಯಶಸ್ವಿಯಾಗಬೇಕೆಂದ್ರೆ ಗ್ರಾಹಕರ ಅಭಿರುಚಿ, ಅಗತ್ಯಕ್ಕೆ ತಕ್ಕಂತೆ ಉತ್ಪನ್ನಗಳನ್ನು ವಿನ್ಯಾಸ ಮಾಡಿ ಮಾರುಕಟ್ಟೆಗೆ ಪರಿಚಯಿಸಿಬೇಕು. ಕಾಲಕಾಲಕ್ಕೆ ಅದರಲ್ಲಿ ಬದಲಾವಣೆ ಅನಿವಾರ್ಯ.

Related Stories