ಮಹಿಳಾ ಸುರಕ್ಷತೆಗಾಗಿ ಐವರು ಐಐಟಿ ವಿಧ್ಯಾರ್ಥಿಗಳಿಂದ "ಸೇಫರ್" ಆ್ಯಪ್..!

ನೀಲಾ ಶಾಲು

0

ಮೂರು ವರ್ಷಗಳ ಹಿಂದೆ ದೆಹಲಿಯಲ್ಲಿ ನಿರ್ಭಯಾಳ ಮೇಲೆ ದುಷ್ಕರ್ಮಿಗಳ ತಂಡ ಅತ್ಯಂತ ಹೀನವಾಗಿ ಅತ್ಯಾಚಾರ ನಡೆಸಿತ್ತು. ಕೊನೆಗೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ನಿರ್ಭಯಾ ಉಸಿರು ಚೆಲ್ಲಿದ್ದರು. ಆಗ ದೆಹಲಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿತ್ತು. ಇಡೀ ದೆಹಲಿಗೆ ದೆಹಲಿಯೇ ಬೀದಿಗಿಳಿದು ನಿರ್ಭಯಾ ಅತ್ಯಾಚಾರಿಗಳನ್ನು ನೇಣಿಗೇರಿಸಬೇಕು ಎಂದು ಆಗ್ರಹಿಸಿತ್ತು. ಇಂತಹದೊಂದು ಭೀಕರ ಘಟನೆ ನಡೆದ ನಂತರ ದೆಹಲಿಯ ಐವರು ಐಐಟಿಯ ಐವರು ವಿಧ್ಯಾರ್ಥಿಗಳ ತಂಡ ಪ್ರತಿಭಟನೆ ಮಾಡಲು ಮುಂದಾಗಲಿಲ್ಲ. ಬದಲಾಗಿ ಇಂತಹ ಘಟನೆ ಮತ್ತೆ ನಮ್ಮ ದೇಶದಲ್ಲಿ ನಡೆಯಬಾರದು ಅಂದ್ರೆ ಏನು ಮಾಡಬಹುದು ಎಂಬ ಯೋಚನೆಯಲ್ಲಿ ಮುಳುಗಿತು. ಹಾಗೆ ಸಿದ್ದವಾಗಿದ್ದೇ ಲೀಫ್ ಇನ್ನೋವೇಷನ್ಸ್ ಪ್ರೈವೇಟ್ ಲಿಮಿಟೆಡ್ ಅನ್ನೋ ಕಂಪನಿ. ಈ ಸ್ಟಾರ್ಟಪ್ ಮೂಲಕ ಸೇಫರ್ ಅನ್ನೋ ಸುರಕ್ಷತಾ ಆ್ಯಪ್ ಅನ್ನು ಐಐಟಿ ವಿಧ್ಯಾರ್ಥಿಗಳು ಅಭಿವೃದ್ದಿಪಡಿಸಿದ್ದಾರೆ.

ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿವೆ. ಸರ್ಕಾರ ಅತ್ಯಾಚಾರ ತಡೆಗೆ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆಯಾದರೂ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ದೆಹಲಿ ಐಐಟಿಯ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಅವಿನಾಶ್‌, ಆಯುಶ್‌, ಚಿರಾಗ್‌, ಮಾಣಿಕ್‌ ಮತ್ತು ಪರಾಸ್‌ ಮಹಿಳೆಯರ ಸುರಕ್ಷತೆಗಾಗಿ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಮಹಿಳೆಯರು ಅಪಾಯದಲ್ಲಿದ್ದಾಗ ಪಾರು ಮಾಡುವ ಸಾಧನವಿದು. ಇದರ ಹೆಸರು ಸೇಫರ್. ಇದು ಟ್ರಾನ್‌ಸಿಸ್ಟರ್‌ ಮತ್ತು ಆ್ಯಪ್‌ ತಂತ್ರಜ್ಞಾನದ ಸಾಧನ. ಆಭರಣಗಳೂ ಅಂದ್ರೆ ನಮ್ಮ ಭಾರತೀಯ ಮಹಿಳೆಯರಿಗೆ ಪಂಚ ಪ್ರಾಣ ಅಲ್ವಾ. ಇದನ್ನು ಮನಸ್ಸಿನಲ್ಲಿಟ್ಟುಕೊಂಡೇ ವಿಧ್ಯಾರ್ಥಿಗಳು ಈ ಆ್ಯಪ್ ಅಭಿವೃದ್ದಿನ ಪಡಿಸಿದ್ದಾರೆ. ಕೊರಳಿಗೆ ಹಾಕುವ ಪೆಂಡೆಂಟ್ ಮತ್ತು ಮೊಬೈಲ್ ಆ್ಯಪ್ ಅನ್ನು ಈ ಸಾಧನ ಒಳಗೊಂಡಿದೆ.

ಮಹಿಳೆಯರು ಅಪಾಯದಲ್ಲಿರುವ ಸ್ಥಳವನ್ನು ನಿಖರವಾಗಿ ಜಿಪಿಆರ್‌ಎಸ್‌ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದು. ಯುವತಿಯರು ತಮ್ಮ ಪೆಂಡೆಂಟ್ ನಲ್ಲಿ ಈ ಸಾಧನವನ್ನು ಅಡಗಿಸಿಟ್ಟುಕೊಳ್ಳುವಷ್ಟು ಚಿಕ್ಕದಾಗಿ ಈ ಸಾಧನವನ್ನು ಅಭಿವೃದ್ದಿಪಡಿಸಲಾಗಿದೆ. ಇದರ ಆ್ಯಪ್‌ ಅನ್ನು ಪೋಷಕರು ಅಥವಾ ಗೆಳೆಯರು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಆ ಸಾಧನಕ್ಕೆ ಸಂಪರ್ಕ ಕಲ್ಪಿಸಿಕೊಂಡಿರಬೇಕು. ಅಪಾಯದಲ್ಲಿರುವವರು ತಮ್ಮ ಆಭರಣಗಳಲ್ಲಿರುವ ಸಾಧನವನ್ನು ಮೂರು ಸೆಕೆಂಡ್‌ ಒತ್ತಿ ಹಿಡಿದರೆ ಆ್ಯಪ್‌ ಮೂಲಕ ಪೋಷಕರು ಹಾಗೂ ಗೆಳೆಯರಿಗೆ ಸಂದೇಶ ರವಾನೆಯಾಗುತ್ತದೆ. ನಂತರ ಆ್ಯಪ್‌ ಮೂಲಕ ಸ್ಥಳವನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಇಂಟರ್ ನೆಟ್ ಸಂಪರ್ಕ ಅಥವಾ ಜಿಪಿಎಸ್ ಸಂಪರ್ಕ ಇಲ್ಲದಿದ್ದಾಗಲೂ ಮೊಬೈಲ್ ನೆಟ್ ವರ್ಕ್ ಆಧಾರದ ಮೇಲೆ ಸಂದೇಶಗಳು ತುರ್ತು ಸಂದರ್ಭಗಳಲ್ಲಿ ಮೊಬೈಲ್ ಮೂಲಕ ರವಾನೆಯಾಗುತ್ತದೆ.

ಈ ಆ್ಯಪ್ ನ ಬೆಲೆ ಕೇವಲ 3.500 ರೂಪಾಯಿ. https://www.leafwearables.com ವೆಬ್ ಸೈಟ್ ಮೂಲಕ ಈ ಸಾಧನ ಮತ್ತು ಆ್ಯಪ್ ಅನ್ನು ಖರೀದಿಸಬಹುದುದಾಗಿದದೆ. ಇಲ್ಲಿಯವರೆಗೆ ಲೀಫ್ ತಂಡ ಸುಮಾರು ಮೂರು ಲಕ್ಷ ಆ್ಯಪ್ ಮತ್ತು ಸಾಧನಗಳನ್ನು ಮಾರಾಟ ಮಾಡಿದೆ. ಕೇವಲ ಮೂರೂವರೆ ಸಾವಿರಕ್ಕೆ ಇಂತದ್ದೊಂದು ಆ್ಯಪ್ ಅಭಿವೃದ್ದಿಪಡಿಸಿ ಮಹಿಳೆಯರ ಪಾಲಿಗೆ ಆಶಾಕಿರಣವಾಗುವಂತಹ ಸಾಧನವನ್ನು ಈ ವಿಧ್ಯುಆರ್ಥಿಗಳು ಅಭಿವೃದ್ದಿಪಡಿಸಿದ್ದಾರೆ.ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಕ್ಕೆ ಕೇಂದ್ರ ತಂತ್ರಜ್ಞಾನ ಇಲಾಖೆ ಅವಿನಾಶ್‌, ಆಯುಶ್‌, ಚಿರಾಗ್‌, ಮಾಣಿಕ್‌ ಮತ್ತು ಪರಾಸ್‌ ಅವರನ್ನು ಗೌರವಿಸಿದೆ. ಇದರ ಜೊತೆಗೆ ಸ್ವೀಡನ್ನಿನ ಟೆಲಿಪೋನ್ ತಯಾರಕ ಕಂಪನಿ ಎರಿಕ್ಸನ್ ಈ ಸಾಧನೆಯನ್ನು ಟಾಪ್ 10 ಇನ್ನೋವೇಶನ್ಸ್ ಪಟ್ಟಿಯಲ್ಲಿ ಸ್ಥಾನ ನೀಡಿದೆ. ಜೊತೆಗೆ ವರ್ಷದ ಆವಷ್ಕಾರ ಪ್ರಶಸ್ತಿಯನ್ನೂ ಪಡೆದಿದೆ. ಇನ್ನು ಲೀಫ್ ಹುಡುಗರ ಸಾಧನೆಯನ್ನು ನೋಡಿದ ಮುಂಬೈನ ಉಧ್ಯಮಿಯೊಬ್ಬರು ಹತ್ತು ಲಕ್ಷ ರೂಪಾಯಿ ಹಣವನ್ನು ಲೀಫ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಹೂಡಿಕೆ ಮಾಡಿದೆ.

ದೆಹಲಿಯಲ್ಲಿ ನಿರ್ಭಯಾಳ ಮೇಲೆ ದಾರುಣವಾಗಿ ಅತ್ಯಾಚಾರವಾದಾಗ ನಮಗೆ ಇಂತದ್ದೊಂದು ಆ್ಯಪ್ ಅಭಿವೃದ್ದಿಪಡಿಸುವ ಯೋಜನೆ ರೂಪಿತವಾಯ್ತು. ನಾವು ಐದೂ ಜನ ಸ್ನೇಹಿತರು ಸೇರಿ ಹಲವು ತಿಂಗಳುಗಳ ಕಾಲ ಕೆಲಸ ಮಾಡಿ ಈಗ ಆ್ಯಪ್ ಅನ್ನು ಅಭಿವೃದ್ದಿಪಡಿಸಿದ್ದೇವೆ. ಇಲ್ಲಿಯವರೆಗೆ ಸುಮಾರು ಮೂರು ಲಕ್ಷ ಆ್ಯಪ್ ಮತ್ತು ಸಾಧನಗಳನ್ನು ಮಾರಾಟ ಮಾಡಿದ್ದೇವೆ. ಕಡಿಮೆ ಬೆಲೆಗೆ ಈ ಸಾಧನವನ್ನು ಮಾರಾಟ ಮಾಡುವ ಉದ್ದೇಶ ನಮಗಿತ್ತು. ವ್ಯಾಪಾರೀ ಮನೋಭಾವವನ್ನು ಬಿಟ್ಟು ಕೇವಲ ಮೂರೂವರೆ ಸಾವಿರ ರೂಪಾಯಿಗೆ ನಾವು ಈ ಆ್ಯಪ್ ಅನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತದ್ದೇವೆ. ಈ ಆ್ಯಪ್ ನಿಂದ ದೆಹಲಿ ಸೇರಿದಂತೆ ಭಾರತದ ವಿವಿಧೆಡೆಗಳಲ್ಲಿ ಎಷ್ಟೋ ಮಹಿಳೆಯರನ್ನು ತಮ್ಮನ್ನು ತಾವು ರಕ್ಷಿಸಿಕೊಂಡಿದ್ದಾರೆ ಅಂತಾರೆ ಫರಾಸ್.

ಒಟ್ಟಿನಲ್ಲಿ ದೆಹಲಿಯ ಆ ಹೀನ ಘಟನೆಯನ್ನು ವಿರೋಧಿಸಿ ಎಲ್ಲರೂ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾಗ ಈ ಹುಡುಗರು ಇಂತಹ ಮತ್ತೊಂದು ಘಟನೆ ನಮ್ಮ ದೇಶದಲ್ಲಿ ನಡೆಯಬಾರದು ಅಂತ ಕಾರ್ಯೋನ್ಮುಕರಾದರು. ಹಾಗೆ ಮಹಿಳೆಯರ ರಕ್ಷಣೆ ಉದ್ದೇಶವಿಟ್ಟುಕೊಂಡು ರೂಪಿಸಿರುವ ಈ ಆ್ಯಪ್ ಮಹಿಳೆಯರ ಸುರಕ್ಷತೆಗೆ ರಾಮಬಾಣವಾಗಿದೆ. ಇಂತಹ ಆ್ಯಪ್ ಅಭಿವೃದ್ದಿಪಡಿಸಿರುವ ಐಐಟಿ ವಿಧ್ಯಾರ್ಥಿಗಳಿಗೆ ಹ್ಯಾಟ್ಸ್ ಆಫ್.ಇವರ ಸಾಧನೆ ಇನ್ನಷ್ಟು ವಿಧ್ಯಾರ್ಥಿಗಳಿಗೆ ಖಂಡಿತಾ ಸ್ಪೂರ್ತಿಯಾಗಲಿದೆ.

Related Stories