ಟೀಮ್ ವೈ.ಎಸ್. ಕನ್ನಡ
ಟೊಮ್ಯಾಟೋ ಹಣ್ಣನ್ನು ಏನಕ್ಕೆಲ್ಲಾ ಬಳಸಿಕೊಳ್ಳಬಹುದು. ರಸಂ ಮಾಡೋದಿಕ್ಕೆ, ಸಾಂಬಾರ್ ಮಾಡೋದಿಕ್ಕೆ ಅಥವಾ ಇನ್ಯಾವೊದೋ ಅಡುಗೆ ವಿಚಾರಕ್ಕೆ ಇದು ಬೇಕೆ ಬೇಕು. ಎಲ್ಲಾ ಋತುಗಳಲ್ಲೂ ಸುಲಭವಾಗಿ ಸಿಗುವ ತರಕಾರಿಯೂ ಇದೇ ಆಗಿದೆ. ಹೀಗಾಗಿ ಅಡುಗೆ ಮನೆಯಲ್ಲಿ ಟೊಮ್ಯಾಟೋ ಹಣ್ಣಿಗೆ ಭಾರೀ ಬೇಡಿಕೆ ಇದೆ.
ಇಲ್ಲಿ ತನಕ ನೀವು ಟೊಮ್ಯಾಟೋವನ್ನು ಜಸ್ಟ್ ಅಡುಗೆಗೆ ಮಾತ್ರ ಉಪಯೋಗಿಸಿಕೊಳ್ತಾ ಇದ್ರು. ಆದ್ರೆ ಇನ್ನು ಮುಂದೆ ನೀವು ಟೊಮೇಟೊವನ್ನು ಗಿಫ್ಟ್ ಕೊಡಬಹುದು. ಅದರಲ್ಲೂ ನಿಮ್ಮ ಪ್ರೀತಿ ಪಾತ್ರರಿಗೆ, ಗರ್ಲ್ಫ್ರೆಂಡ್ಗೆ ಹಾರ್ಟ್ ಶೇಪ್ನಲ್ಲಿರುವ ಟೊಮೇಟೊವನ್ನು ಕೊಟ್ಟು ನಿಮ್ಮ ಪ್ರೀತಿಯನ್ನು ಹಿಮ್ಮಡಿಗೊಳಿಸಬಹುದು. ಅರೇ ಹಾರ್ಟ್ಶೇಪ್ನಲ್ಲಿ ಟೊಮ್ಯಾಟೋ ಇದೆಯಾ ಅನ್ನೋ ಅಚ್ಚರಿ ನಿಮಗಾಗಬಹುದು. ಆದ್ರೆ ಈಗ ಇಂತಹದ್ದೇ ಟೊಮ್ಯಾಟೋಗೆ ಭಾರೀ ಬೇಡಿಗೆ ಇದೆ.
" ಇದೊಂದು ವಿಶಿಷ್ಟ ತಳಿ ನೋಡಿದ ತಕ್ಷಣ ನನ್ನ ಗಮನ ಸೆಳೆಯಿತು. ವಿವರ ಹುಡುಕಿದಾಗ ಇದರ ಮೂಲ ಜಪಾನ್ ಎಂದು ತಿಳಿದು ಬಂತು. ಕಂಪನಿಯೊಂದಿಗೆ ಮಾತನಾಡಿ ಇದರ ಬೀಜವನ್ನು ತರಿಸಿಕೊಂಡು ಇಲ್ಲಿ ಬೆಳೆದಿದ್ದೇವೆ."
-ವಿಜಯ್ ಸಿಂಗ್, ಟೊಮ್ಯಾಟೋ ಬೆಳೆಗಾರ
ತರಕಾರಿ ಅಂಗಡಿಗಳಲ್ಲಿ ಚಿಕ್ಕ ಟೊಮೇಟೊ,ರೌಂಡ್ ಟೊಮೇಟೊ ನೋಡಿರುತ್ತೀರಿ. ಆದ್ರೆ ಇದ್ಯಾವುದು ಹಾರ್ಟ್ ಶೇಪ್ ಟೊಮೇಟೋ ಎಂದು ಅಚ್ಚರಿ ಪಡಬೇಡಿ. ಸಿಲಿಕಾನ್ ಸಿಟಿ ಬೆಂಗಳೂರಿನ ಪಕ್ಕದಲ್ಲೇ ಇರುವ ರಾಜಾನುಕುಂಟೆ ಬಳಿಯ ತೋಟವೊಂದರಲ್ಲಿ ಈ ಹಾರ್ಟ್ ಶೇಪ್ ಟೊಮೇಟೊ ಬೆಳೆದು ನಿಂತಿದೆ. ಬೆಂಗಳೂರಿನ ಉದ್ಯಮಿಗಳಾದ ವಿಜಯ್ ಸಿಂಗ್ ಮತ್ತು ದೇವೆಂದ್ರ ಸಿಂಗ್ ಎಂಬ ಸಹೋದರರ ತೋಟದಲ್ಲಿ ಮನುಷ್ಯನ ಹೃದಯದ ಆಕಾರದಲ್ಲಿರುವ ಟೊಮೇಟೊ ಬೆಳೆದಿದ್ದಾರೆ.
ಇದನ್ನು ಓದಿ: ಸರ್ಕಾರಿ ಕೆಲಸ ಬಿಟ್ಟು ಕೃಷಿಕನಾದ ಎಂಜಿನಿಯರ್ - ಅಲೋವೆರಾ ಬೆಳೆದು ಕೋಟ್ಯಾಧಿಪತಿಯಾದ ಅನ್ನದಾತ
ಜಪಾನ್ನಲ್ಲಿ ಸಾಕಷ್ಟು ಖ್ಯಾತಿ ಪಡೆದಿರುವ ಟೊಕಿಟೋ ಸೀಡ್ಸ್ ಕಂಪನಿ 2008ರಲ್ಲಿ ಅಭಿವೃದ್ಧಿ ಪಡಿಸಿದ ವಿಶಿಷ್ಟ ತಳಿ ಜಪಾನ್ ಬೆರ್ರಿ. ಈ ತಳಿಯ ಟೊಮೇಟೊ ಮನುಷ್ಯನ ಹೃದಾಯಕಾರದಲ್ಲಿದೆ. ಇದೇ ಇದರ ವಿಶೇಷತೆ. ಜಪಾನ್ನಲ್ಲಿ ಸಾಕಷ್ಟು ಯಶಸ್ವಿಯಾಗಿರುವ ಈ ತಳಿಯನ್ನು ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ, ಈ ಸಿಂಗ್ ಬ್ರದರ್ಸ್ ಪರಿಚಯಿಸುತ್ತಿದ್ದಾರೆ.
ಈ ವಿಶಿಷ್ಟ ಟೊಮೇಟೊ ತನ್ನ ಆಕಾರದಿಂದಲೇ ಎಲ್ಲರ ಗಮನ ಸೆಳೆಯುತ್ತದೆ. ಅಷ್ಟೇ ಅಲ್ಲದೇ ಸಕ್ಕರೆ ಅಂಶ ಸ್ವಲ್ಪ ಹೆಚ್ಚಿದ್ದು , ಇದರಿಂದಾಗಿ ರುಚಿ ಬೇರೆ ಟೊಮೇಟೊಗಳಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಅಷ್ಟೇ ಅಲ್ಲದೆ ಆ್ಯಂಟಿ ಅಕ್ಸಿಡೆಂಟ್ ಅಂಶವೂ ಇದರಲ್ಲಿ ಹೆಚ್ಚಾಗಿದ್ದು ಅಮೀನೊ ಆಸಿಡ್ ಸಹ ಹೆಚ್ಚು ಇರುತ್ತದೆ. ಇದರಿಂದ ಮನುಷ್ಯನ ಹೃದ್ರೋಗ ಸಮಸ್ಯೆಗೆ ಸಹಾಯಕಾರಿಯಾಗುತ್ತದೆ. ಸಿಲಿಕಾನ್ ಸಿಟಿ ಬೆಂಗಳೂರಿನಂತಹ ಮೆಟ್ರೋ ಪಾಲಿಟನ್ ನಗರಗಳಲ್ಲಿ ಇದನ್ನು ಆತ್ಮೀಯರಿಗೆ ಉಡುಗೊರೆಯಾಗಿಯೂ ನೀಡಬಹುದು.
ಈ ವಿಶಿಷ್ಟ ಟೊಮೇಟೊ ಮನುಷ್ಯನ ಹೃದಯಾಕಾರದಲ್ಲಿ ಬೆಳವಣಿಗೆ ಆಗುತ್ತದೆ. ಇದಕ್ಕೆ ಯಾವುದೇ ವಿಶಿಷ್ಟ ಗೊಬ್ಬರ ಬೇಕಾಗಿಲ್ಲ. ಬೇರೆ ಟೊಮೇಟೊ ಬೆಳೆಗೆ ಏನೇನು ಪೋಷಾಕಂಶಗಳನ್ನು ನೀಡಲಾಗುವುದೋ ಅದನ್ನೇ ಇದಕ್ಕೂ ನೀಡಿದರೆ ಸಾಕು. ಸಾಮಾನ್ಯವಾಗಿ ಕೆಂಪು ಮಣ್ಣಿನಲ್ಲಿ ಈ ಬೆಳೆ ಚೆನ್ನಾಗಿ ಬರುತ್ತದೆ.
ಈ ಜಪಾನ್ ತಳಿಯನ್ನು ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಪರಿಚಯಿಸುತ್ತಿರುವ ಈ ಸಿಂಗ್ ಬ್ರದರ್ಸ್, ಇದನ್ನು ಒಂದು ಸೀಡ್ಗೆ ಒಂದು ಡಾಲರ್ ಕೊಟ್ಟು ಸುಮಾರು 500 ಸೀಡ್ಸ್ನ್ನು ಜಪಾನ್ನಿಂದ ಆಮದು ಮಾಡಿಕೊಂಡಿದ್ದರು. ಈ 500 ಗಿಡದಲ್ಲಿರುವ ಎಲ್ಲಾ ಟೊಮೇಟೊಗಳು ಮನುಷ್ಯನ ಹೃದಯಾಕಾರದಲ್ಲಿದೆ. ಒಂದು ಗಿಡದಿಂದ ಒಂದು ಬಾರಿಗೆ ಸುಮಾರು ಆರರಿಂದ ಎಂಟು ಕೆಜಿ ಇಳುವರಿಯನ್ನು ತೆಗೆದುಕೊಳ್ಳಬಹುದು. ಬೇರೆ ತಳಿಗಿಂತ ಇದರಲ್ಲಿ ಅಂಟಿ ಅಕ್ಸಿಡೆಂಟ್ ಅಂಶ ಹೆಚ್ಚಾಗಿರುತ್ತದೆ. ಈ ತಳಿ 2008 ರಲ್ಲಿ ಪ್ರಶಸ್ತಿಯನ್ನು ಕೂಡ ಪಡೆದಿದೆ. ಸರಿ ಸುಮಾರು ಆರು ತಿಂಗಳು ಒಂದು ಗಿಡದಿಂದ ಇಳುವರಿಯನ್ನು ಪಡೆಯಬಹುದು.
" ಈ ಟೊಮ್ಯಾಟೋ ತನ್ನ ವಿಶಿಷ್ಟ ಆಕಾರದಿಂದ ಗಮನ ಸೆಳೆಯುತ್ತದೆ. ಬೀಜವನ್ನು ತರಿಸಿಕೊಂಡಾಗ ಸ್ವಲ್ಪ ಬೆಲೆ ಹೆಚ್ಚಾಯಿತು ಅನ್ನಿಸಿತ್ತು. ಇದು ಮುಂದಿನ ದಿನಗಳಲ್ಲಿ ಒಳ್ಳೆ ಬೆಲೆ ಬರುತ್ತದೆ ಎಂಬ ಉದ್ದೇಶದಿಂದ ಬೆಳೆದಿದ್ದೇವೆ. ಮಕ್ಕಳಂತೂ ಸಾಕಷ್ಟು ಇಷ್ಟಪಡುತ್ತಾರೆ. ಇನ್ನು ನಮ್ಮ ರೈತರಿಗೂ ಇದು ಉತ್ತಮ ಲಾಭ ತರುತ್ತದೆ. ಧೈರ್ಯ ಮಾಡಿ ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು."
- ದೇವೆಂದ್ರ ಸಿಂಗ್, ಟೊಮ್ಯಾಟೋ ಬೆಳೆಗಾರ
ಈ ಟೊಮ್ಯಾಟೋವನ್ನು ಹಸಿಯಾಗಿಯೂ ತಿನ್ನಬಹುದು. ಯಾಕಂದ್ರೆ ಈ ಟೊಮ್ಯಾಟೋ ಮಾಮೂಲಿ ಟೊಮೇಟೊಗಿಂತ ಸ್ವಲ್ಪ ರುಚಿ ಹೆಚ್ಚಾಗಿದೆ. ಇದನ್ನು ಮಕ್ಕಳು ಕೂಡ ಇಷ್ಟ ಪಡುತ್ತಾರೆ. ಪ್ರಾಯೋಗಿಕವಾಗಿ ಈ ಟೊಮೇಟೊವನ್ನು ತಮ್ಮ ಮನೆ ಹತ್ತಿರದವರಿಗೆ ಕೊಟ್ಟಿರುವ ಸಿಂಗ್ ಸಹೋದರರು ಅವರಿಂದ ಮತ್ತಷ್ಟು ಬೇಡಿಕೆಯನ್ನ ಪಡೆದಿದ್ದಾರೆ.
ಸದ್ಯಕ್ಕೆ ಈ ತಳಿಯ ಬೀಜದ ಮಾರಾಟದ ಹಕ್ಕು ಸಿಂಗ್ ಬ್ರದರ್ಸ್ ಕೈಲ್ಲಿದೆ. ಇದನ್ನು ಬೆಳೆಯುವುದರಿಂದ ನೂರು ರೂಪಾಯಿ ಹೂಡಿಕೆಗೆ ಇನ್ನೂರು ರೂಪಾಯಿ ಲಾಭಗಳಿಸಬಹುದು. ಮಾರುಕಟ್ಟೆಯಲ್ಲಿ ಈ ತಳಿ ಸಿಗುತ್ತಿಲ್ಲ. ಮೊದಲ ಹಂತವಾಗಿ ಬಿಗ್ ಬಜಾರ್ ಜತೆ ಒಪ್ಪಂದ ಮಾಡಿಕೊಂಡಿರುವ ಇವರು ಮುಂದಿನ ದಿನಗಳಲ್ಲಿ ಎಲ್ಲಾ ಮಾರುಕಟ್ಟೆಯಲ್ಲಿ ಇದನ್ನು ಸಿಗುವಂತೆ ಮಾಡಲಾಗುವುದು ಎನ್ನುತ್ತಾರೆ. ಈ ಹಾರ್ಟ್ ಶೇಪ್ ಟೊಮೋಟೊ ಬೆಳೆಯಲಿಚ್ಚಿಸುವವರು ರಾಜಾನುಕುಂಟೆಯಿಂದ ಮಧರೆಗೆ ಹೋಗುವ ದಾರಿಯಲ್ಲಿರುವ ಸಿಂಗ್ ಬ್ರದರ್ಸ್ಫಾರ್ಮ್ ಫ್ರೆಶ್ಗೆ ಹೋದರೆ ಹೆಚ್ಚಿನ ಮಾಹಿತಿ ಪಡೆಯಬಹುದು.
1. ಬ್ಯಾಂಡ್ ಲೋಕದಲ್ಲಿ ವಿಶಿಷ್ಟ“ಧ್ರುವ”ತಾರೆ
2. ಕೆಎಸ್ಆರ್ಟಿಸಿಯಲ್ಲಿ"ಮಿಡಿಬಸ್" ಮ್ಯಾಜಿಕ್- ಸಾರಿಗೆ ಸಂಸ್ಥೆಗೆ ಹೊಸ ಕಿಕ್
3. 24x7 ಆರೋಗ್ಯಕ್ಕಾಗಿ 24x7 ಸೇವೆ ನೀಡುವ ಆ್ಯಪ್..!
Related Stories
March 14, 2017
March 14, 2017
March 14, 2017
March 14, 2017
Stories by YourStory Kannada