ಆನ್​ಲೈನ್​ನಲ್ಲಿ ಬಾಡಿಗೆಗೆ ಕಂಪ್ಯೂಟರ್, ಕ್ಯಾಮೆರಾ, ಬಟ್ಟೆಯೂ ಲಭ್ಯ..!

ಉಷಾ ಹರೀಶ್​​

0

ಈಗಿನ ಯುವ ಜನಾಂಗಕ್ಕೆ ದುಬಾರಿ ಬೈಕ್ ಓಡಿಸಬೇಕೆಂಬ ಕ್ರೇಜ್ ಇರುತ್ತದೆ. ಆದರೆ ಹಣಕಾಸಿನ ಕಾರಣದಿಂದಾಗಿ ಅಷ್ಟ್ರೊಂದು ವೌಲ್ಯದ ಬೈಕ್​​ಗಳನ್ನು ಕೊಂಡುಕೊಳ್ಳಲು ಆಗುವುದಿಲ್ಲ. ಅಂತವರಿಗಾಗಿಯೇ ನಗರದಲ್ಲಿ ಹಲವು ಜಾಲ ತಾಣಗಳು ಕೆಲಸ ಮಾಡುತ್ತಿವೆ. ಅವುಗಳಲ್ಲಿ ಎಲ್ಲಾ ರೀತಿಯ ದುಬಾರಿ ಬೈಕ್​ಗಳು ದಿನದ ಲೆಕ್ಕದಲ್ಲಿ ಬಾಡಿಗೆಗೆ ಸಿಗುತ್ತವೆ. ಹಾರ್ಲೇ ಡೇವಿಡ್ಸನ್​ನಿಂದ ಹಿಡಿದು ಬುಲೆಟ್​ವರೆಗೂ ಇಂತಹ ಜಾಲತಾಣಗಳಲ್ಲಿ ಸಿಗುತ್ತವೆ. ಆದರೆ ರೆಂಟ್ ಆನ್ ಗೋ ಎಂಬ ಜಾಲತಾಣ ಬೈಕ್​ಗಳನ್ನು ಬಾಡಿಗೆ ಕೊಡುವುದು ಮಾತ್ರವಲ್ಲದೆ ಕಂಪ್ಯೂಟರ್, ಕ್ಯಾಮೆರಾ, ಫರ್ನಿಚರ್ಗಳನ್ನು ಬಾಡಿಗೆಗೆ ನೀಡುತ್ತಿದೆ.

ಸಾಮಾನ್ಯ ಬೈಕ್​ಗಳು ಲಭ್ಯ..!

ಕೆಲ ಜಾಲತಾಣಗಳು ದುಬಾರಿ ಮತ್ತು ಐಷರಾಮಿ ಬೈಕ್​ಗಳು ಮತ್ತು ಕಾರುಗಳನ್ನಷ್ಟೆ ಬಾಡಿಗೆಗೆ ಕೊಡುತ್ತವೆ. ಆದರೆ ಈ ರೆಂಟ್ ಆನ್​ಗೋದಲ್ಲಿ ಮಾತ್ರ ಸಾಮಾನ್ಯ ಬೈಕ್​ಗಳು ಬಾಡಿಗೆಗೆ ಸಿಗುತ್ತವೆ. ಹಿರೋಹೊಂಡಾ, ಆಕ್ಟಿವಾಗಳು ಸಹ ಇಲ್ಲಿ ಲಭ್ಯ..!

ಈ ರೆಂಟ್ ಆನ್ ಗೋ ಜಾಲತಾಣಕ್ಕೆ ನೀವು ಲಾಗ್ ಇನ್ ಆದರೆ ಅಲ್ಲಿ ನಿಮಗೆ ಎಂಟು ವಿಭಾಗಗಳು ಡಿಸ್ಪ್ಲೇ ಆಗುತ್ತವೆ. ಒಂದರಲ್ಲಿ ಕಾರುಗಳು, ಮತ್ತೊಂದರಲ್ಲಿ ಬೈಕ್​ಗಳು, ಮತ್ತಿತರ ವಸ್ತುಗಳು ಹೀಗೆ ನಿಮಗೆ ಯಾವ ವಸ್ತು ಬಾಡಿಗೆಗೆ ಬೇಕೋ, ಅದನ್ನು ನೀವು ಸೆಲೆಕ್ಟ್ ಮಾಡಿ, ನಿಮ್ಮ ವಿವರ ನೀಡಿದರೆ ನಿಮಗೆ ಬಾಡಿಗೆಗೆ ನೀವು ಆಯ್ಕೆ ಮಾಡಿದ ವಸ್ತುಗಳು ಲಭ್ಯ.

ಕೆಲ ತಾಣಗಳಲ್ಲಿ ಕಾರ್ ಬುಕ್ ಮಾಡಿದರೆ ಆ ತಾಣದ ವತಿಯಿಂದಲೇ ಕಾರ್ ನೀಡುತ್ತಾರೆ. ಆದರೆ ರೆಂಟ್ ಆನ್​ಗೋದಲ್ಲಿ ಮಾತ್ರ ನಿಮಗೆ ಬಾಡಿಗೆ ಕೊಡುವ ವ್ಯಕ್ತಿಯ ಮೂಲಕವೇ ನಿಮಗೆ ವಸ್ತುಗಳನ್ನು ಬಾಡಿಗೆ ಕೊಡಿಸುತ್ತಾರೆ.

ಫರ್ನಿಚರ್, ಬೈಸಿಕಲ್, ಕ್ಯಾಸ್ಟೂಮ್ಸ್..!

ಈ ರೆಂಟ್ ಆನ್ ಗೋ ತಾಣದಲ್ಲಿ ಬೈಕ್ ಕಾರು ಮಾತ್ರವಲ್ಲದೇ ಮನೆ ಬಳಕೆಗೆ ಬೇಕಾಗು ಸೋಪಾ, ಟಿಪಾಯಿ, ಡೈನಿಂಗ್ ಟೇಬಲ್​​ಗಳು, ಲಭ್ಯವಿವೆ. ಇನ್ನೂ ವಿಶೇಷವೆಂದರೆ ಇಲ್ಲಿ ಸೈಕಲ್ ಕೂಡಾ ಬಾಡಿಗೆಗೆ ದೊರೆಯುತ್ತದೆ. ಸಾಮಾನ್ಯವಾಗಿ ಕ್ಯಾಮೆರಾ ಬೇಕು ಎಂದರೆ ಜೊತೆಗೆ ಕ್ಯಾಮೆರಾಮನ್ ಬರುತ್ತಾರೆ. ಆದರೆ ರೆಂಟ್ ಆನ್ ಗೋದಲ್ಲಿ ಮಾತ್ರ ಕ್ಯಾಮೆರಾಗಳು ನಿಮಗೆ ಬಾಡಿಗೆಗೆ ಸಿಗುತ್ತವೆ. ಅಷ್ಟೇ ಅಲ್ಲದೇ ನಿಮಗೆ ಯಾವುದಾದರೂ ಪಾರ್ಟಿಗೆ ಹೋಗಾಬೇಕಾದರೆ ಅಥವಾ ನಿಮ್ಮ ಮಕ್ಕಳಿಗೆ ಯಾವುದಾದರೂ ಕಾರ್ಯಕ್ರಮಗಳಿಗೆ ವಿಶೇಷ ಉಡುಪಿನ ಅವಶ್ಯಕತೆ ಇದ್ದರೆ ಅದನ್ನು ಕೂಡಾ ರೆಂಟ್ ಆನ್ ಗೋ ನಿಮಗೆ ಬಾಡಿಗೆಗೆ ಸಿಗುವಂತೆ ಮಾಡುತ್ತದೆ.

ಕಂಪ್ಯೂಟರ್​​ಗಳು ಲಭ್ಯ

ಈ ರೆಂಟ್ ಆನ್​ಗೋದ ವಿಶೇಷವೆಂದರೆ ಈ ತಾಣದಲ್ಲಿ ದಿನದ ಬಾಡಿಗೆ ಲೆಕ್ಕದಲ್ಲಿ ಇಲ್ಲಿ ಕಂಪ್ಯೂಟರ್ ಕೂಡಾ ಲಭ್ಯ. ನಿಮಗೆ ಒಂದು ದಿನದ ಮಟ್ಟಿಗೆ ಕಂಪ್ಯೂಟರ್ ಬೇಕೆಂದು ಮನವಿ ಮಾಡಿದರೆ ನಿಮ್ಮ ವಿಳಾಸದ ಹತ್ತಿರ ಯಾರಲ್ಲಾದರೂ ಕಂಪ್ಯೂಟರ್ ಬಾಡಿಗೆಗೆ ಸಿಕ್ಕರೆ ಅದನ್ನು ರೆಂಟ್ ಆನ್ ಗೋ ತಿಳಿಸುತ್ತದೆ. ನಿಮಗೆ ಒಪ್ಪಿಗೆಯಾದರೆ ಅದನ್ನು ಪಡೆಯಬಹುದು . ಒಟ್ಟಿನಲ್ಲಿ ಈ ಡಿಜಿಟಿಲ್ ಯುಗದಲ್ಲಿ ಕಂಪ್ಯೂಟರ್​ನಲ್ಲಿ ಇಂಟರ್ನೆಟ್ ಒಂದಿದ್ದರೆ ಸಾಕು ಏನನ್ನು ಬೇಕಾದರೂ ಬಾಡಿಗೆ ಸಿಗುತ್ತದೆ ಎನ್ನುವುದಕ್ಕೆ ರೆಂಟ್ ಆನ್ ಗೋ ಸಾಕ್ಷಿ. ಸದ್ಯಕ್ಕೆ ಇದು ಬೆಂಗಳೂರು, ಮುಂಬೈ, ಪುಣೆ, ಹೈದ್ರಾಬಾದ್​ಗಳಲ್ಲಿ ತನ್ನ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ.


Related Stories

Stories by usha harish