ಭಾರತದಲ್ಲಿ ಹೆಚ್ಚುತ್ತಿದೆ ತೋಟಗಾರಿಕೆಗೆ ಬೆಲೆ

ಆರಾಧ್ಯ

0

ದೇಶದಲ್ಲಿ ತರಕಾರಿಗಳ ಉತ್ಪಾದನೆಗಿಂತ ಹಣ್ಣುಗಳ ಉತ್ಪಾದನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 1970ರ ದಶಕದಲ್ಲಿ ಹಸಿರು ಕ್ರಾಂತಿ ಮೂಲಕ ಜಗತ್ತಿನ ಕಣ್ಣು ತನ್ನತ್ತ ತಿರುಗುವಂತೆ ಮಾಡಿದ್ದ ಭಾರತ ಕೃಷಿ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡಿದೆ. ದೇಶದಲ್ಲಿ ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆ ಗಣನೀಯವಾಗಿ ಹೆಚ್ಚಿದ್ದು, ಹಣ್ಣುಗಳ ಉತ್ಪಾದನೆಯಲ್ಲಿ ಭಾರತ ಚೀನಾ ನಂತರ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ.

ಹೌದು ಹಣ್ಣುಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಭಾರತ 2ನೇ ಸ್ಥಾನದಲ್ಲಿದೆ. ಕೃಷಿ ಸಚಿವಾಲಯದ 2015ರ ತೋಟಗಾರಿಕಾ ಅಂಕಿಅಂಶದ ಮುನ್ನೋಟದ ಪ್ರಕಾರ ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.

ಕೃಷಿ ವಲಯದಲ್ಲಿ ತೋಟಗಾರಿಕೆ ಉತ್ಪನ್ನಗಳ ಕೊಡುಗೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ದೇಶದಲ್ಲಿ ಉತ್ಕೃಷ್ಟ ದರ್ಜೆಯ ಹಣ್ಣುಗಳ ಉತ್ಪಾದನೆ ಹೆಚ್ಚಿರುವುದು ಕೃಷಿ ತಜ್ಞರ ಗಮನ ಸೆಳೆಯುತ್ತಿದೆ. ಎಲ್ಲಾ ಹಣ್ಣುಗಳ ಪೈಕಿ ದ್ರಾಕ್ಷಿಗೆ ಅಗ್ರಸ್ಥಾನ ದೊರೆತಿದೆ. 2014-15ನೇ ಸಾಲಿನಲ್ಲಿ ಭಾರತ 107.3 ಸಾವಿರ ಟನ್ ದ್ರಾಕ್ಷಿ ರಫ್ತು ಮಾಡಿದೆ. ಬಾಳೆಹಣ್ಣು ಮತ್ತು ಮಾವಿನ ಹಣ್ಣು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ ಎಂದು ಕೃಷಿ ಸಚಿವಾಲಯದಿಂದ ಮಾಹಿತಿ ಸಿಕ್ಕಿದೆ. ‘

ಇದನ್ನು ಓದಿ

ಬ್ಯೂಟಿ ಕ್ವೀನ್ ಆದಳು, ಚಿಂದಿ ಆಯುವವಳ ಮಗಳು..!

ಕೃಷಿ ಸಚಿವಾಲಯದ 2015ರ ತೋಟಗಾರಿಕಾ ಅಂಕಿಅಂಶದ ಪ್ರಕಾರ ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.. ಹಣ್ಣುಗಳ ಉತ್ಪಾದನೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ದೇಶೀಯವಾಗಿ ಉತ್ತಮ ಬೇಡಿಕೆ ಸೃಷ್ಟಿಯಾಗಿರುವುದು ಪ್ರಮುಖ ಕಾರಣ. ಹಾಗಾಗಿ, ತೋಟಗಾರಿಕಾ ವಲಯ ಮತ್ತಷ್ಟು ಪ್ರಗತಿ ಕಾಣಲು ಎಲ್ಲಾ ಅವಕಾಶಗಳು ಸೃಷ್ಟಿಯಾಗಿದೆ.

ಅಗ್ರಸ್ಥಾನದಲ್ಲಿರುವ ಜಿಲ್ಲೆಗಳು ಹಣ್ಣುಗಳು ಟಾಪ್ 5 ರಾಜ್ಯಗಳು

ಚಿತ್ತೂರು ಮಾವು ಆಂಧ್ರ ಪ್ರದೇಶ

ಬಾರಾಮುಲ್ಲಾ ಸೇಬು ಜಮ್ಮು-ಕಾಶ್ಮೀರದ

ಜಲಗಾಂವ್ ಬಾಳೆ ಮಹಾರಾಷ್ಟ್ರ

ನಲ್ಗೊಂಡ ಕಿತ್ತಳೆ ತೆಲಂಗಾಣ

ಸಾಗರ್ ಸೀಬೆ ಮಧ್ಯಪ್ರದೇಶ

ತೋಟಗಾರಿಕಾ ಉತ್ಪಾದನೆಯಲ್ಲಿ ನಮ್ಮ ದೇಶ ಗಣನೀಯವಾಗ ಏರಿಕೆಯಾಗಿದೆ. 2001 – 02 ನೇ ಸಾಲಿನಲ್ಲಿ 145.8 ಮೆಟ್ರಿಕ್​ಟನ್ ಉತ್ಪಾದನೆಯಾಗಿತ್ತು. 2014 – 15 ನೇ ಸಾಲಿನಲ್ಲಿ 283.5 ಮೆಟ್ರಿಕ್​ ಟನ್ ಉತ್ಪಾದನೆಯಾಗಿದೆ..

ಇನ್ನು ಹಣ್ಣುಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸುತ್ತಿರುವ ರಾಷ್ಟ್ರಗಳಲ್ಲಿ ಚೀನಾ, ಇಟಲಿ, ಇಂಡೋನೇಷ್ಯಾ, ಫಿಲಿಪೈನ್ಸ್, ಮತ್ತು ಟರ್ಕಿ ಸ್ಥಾನ ಪಡೆದಿವೆ. ಭಾರತದ ತೋಟಗಾರಿಕೆಯ ಯಶೋಗಾಥೆಗೆ ಸಣ್ಣ ಪಟ್ಟಣಗಳ ಮತ್ತು ಜಿಲ್ಲೆಗಳ ಕೊಡುಗೆಯೇ ನಿರ್ಣಾಯಕ. ಆಂಧ್ತದ ಚಿತ್ತೂರು ಮತ್ತು ಅನಂತಪುರ, ಜಮ್ಮು-ಕಾಶ್ಮೀರದ ಬಾರಾಮುಲ್ಲಾ, ತೆಲಂಗಾಣದ ನೆಲಗೊಂಡ, ಮಧ್ಯ ಪ್ರದೇಶದ ಸಾಗರ್, ಮತ್ತು ಶಹದೋಲ್, ಮಹಾರಾಷ್ಟ್ರದ ಪುಣೆ, ಔರಂಗಾಬಾದ್, ಜಲ್ಗಗಾಂವ್ ಮತ್ತು ಸಾಂಗ್ಲಿ ಪ್ರದೇಶಗಳು 2012-13 ರಲ್ಲಿ ಭಾರತದ ಹಣ್ಣು ಉತ್ಪಾದನೆಯ ಭೂಪಟದಲ್ಲಿ ರಾರಾಜಿಸಿದ್ದವು. ಆದ್ರೆ ಇದೀಗ ಈ ಚಿತ್ರಾಣ ಸಂಪೂರ್ಣವಾಗಿ ಬದಲಾಗಿದೆ.

ಇದನ್ನು ಓದಿ

ಸೆಟ್ ದೋಸೆ ಫ್ಲೇನ್, ಬೆಣ್ಣೆ ದೋಸೆ ಆಯ್ತು..ಈಗ ಸಾಗು ಮಸಾಲೆ ದೋಸೆ...

ಊಟ ಫುಲ್ ಫ್ರೀ ...ಆದ್ರೆ ಟೈಮ್ ಗೆ ದುಡ್ಡು ಕೊಡಬೇಕು.. !

ಸಾಧನೆಗೆ ಅಂಧತ್ವ ಅಡ್ಡಿಯಾಗಲೇ ಇಲ್ಲ..!