ಬಿಯರ್ ಕುಡಿದು ಬೋರ್ ಆಗಿದ್ರೆ ಬಿಯರ್ ಕೇಕ್ ತಿನ್ನಿ.. 

ಆರಾಧ್ಯ 

0

ಕೇಕ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದ್ರಲ್ಲೂ ಮಕ್ಕಳಿಗೆ ಕೇಕ್ ಅಂದ್ರೆ ಪಂಚಪ್ರಾಣ. ಈಗ ನಾನಾ ವೈರಟಿ ಕೇಕ್ ಗಳು ಲಭ್ಯ.. ಕಪ್ ಕೇಕ್, ಹನಿ ಕೇಕ್, ಪ್ಲಮ್​ ಕೇಕ್, ಆ್ಯಪಲ್ ಕೇಕ್ ಹೀಗೆ ವಿವಿಧ ಬಗೆಯ ಕೇಕ್​ಗಳು ಬಾಯಲ್ಲಿ ನೀರೂರಿಸುತ್ತವೆ. ಅದ್ರಲ್ಲೂ ಪೇಸ್ಟ್ರೀಸ್ ಅಂದ್ರೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಫೇವರಿಟ್​. ಈಗ ಇವುಗಳ ಸರದಿಗೆ ಮತ್ತೊಂದು ಸೂಪರ್ ಸ್ಪೆಷಲ್​ ಕೇಕ್ ಸೇರ್ಪಡೆಯಾಗಿದೆ.ಅದರ ಹೆಸರು ಚಿಲ್ಡ್ ಬಿಯರ್ ಕೇಕ್. 

ಚಿಲ್ಡ್ ಬಿಯರ್ ಕೇಕ್ ಅನ್ನೋ ಹೆಸರು ಕೇಳಿ ಭಯಪಡಬೇಡಿ. ಈ ಕೇಕ್ ನಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಆಲ್ಕೋಹಾಲ್ ಅಂಶ ಇರುತ್ತೆ. ಪೇಸ್ಟ್ರೀಸ್ ಕೇಕ್, ನಾರ್ಮಲ್ ಕೇಕ್ ತಿಂದು ಬೋರ್ ಆಗಿದ್ರೆ ನೀವು ಕೂಡ ಈ ಚಿಲ್ಡ್ ಬಿಯರ್ ಕೇಕ್ ಅನ್ನು ಒಂದು ಸಾರಿ ಟ್ರೈ ಮಾಡಬಹುದು.. ಇದನ್ನ ತಿನ್ನಬೇಕು ಅಂದ್ರೆ ಮಿರಾಸ್-ಡಯಲ್ ಎ ಕೇಕ್' ಶಾಪ್ ಗೆ ಜಸ್ಟ್ ಒಂದು ಕಾಲ್ ಮಾಡಿದ್ರೆ ಸಾಕು ನಿಮ್ಮ ಮನೆಗೆ ಬಿಯರ್ ಕೇಕ್ ಬಂದು ಬಿಡುತ್ತೆ..

ಇದನ್ನೂ ಓದಿ...

ಕಿರಾಣಿ ಅಂಗಡಿಯಿಂದ ರಿಂಗಿಂಗ್ ಬೆಲ್ಸ್ ಕಟ್ಟಿದ ಮೋಹಿತ್ ಗೋಯೆಲ್

ಹೌದು ಬಗೆಬಗೆಯ ಕೇಕ್ ತಯಾರಿಕೆಯಲ್ಲಿ ಹೆಸರಾಗಿರುವ ಬನಶಂಕರಿಯ ಮಿರಾಸ್ ನಲ್ಲಿ ಇತ್ತೀಚಿಗೆ ಬಿಯರ್ ಕೇಕ್ ಗೆ ಬೇಡಿಕೆ ಹೆಚ್ಚಿದೆ.. ಈ ಕೇಕ್​ನಲ್ಲಿ ಆಲ್ಕೋಹಾಲ್ ಇರುವುದಿಲ್ಲ, ಆದರೆ ಕೇಕ್​ಗೆ ಬಿಯರ್​ ಟೇಸ್ಟ್​ ಬರುವಂತೆ ಕೇವಲ ಹತ್ತು ಪರ್ಸೆಂಟ್​​ನಷ್ಟು ಬಿಯರ್​ನ ಸಿರಪ್ ಹಾಕಲಾಗುತ್ತೆ. ಹಾಗಾಗಿ ಇದನ್ನು ತಿನ್ನುವಾಗ ನಿಮಗೆ ಕೊಂಚ ಬಿಯರ್ ಥ್ರಿಲ್ ಸಿಗುತ್ತದೆ. ಇನ್ನು ಈ ಕೇಕ್ ತಿನ್ನಲು ಎಷ್ಟು ರುಚಿಯಾಗಿರುತ್ತೋ, ನೋಡಲು ಸಹ ಅಷ್ಟೇ ಆಕರ್ಷಕವಾಗಿರುತ್ತೆ. ಚಿಲ್ಡ್ ಬಿಯರ್ ಚೆಲ್ಲುತ್ತಿರೋ ಮಗ್​ನಲ್ಲಿ ಅಂದವಾದ ಕೇಕ್​ ಇಟ್ಟು ನಿಮಗೆ ಕೊಡುತ್ತಾರೆ. 

ಇನ್ನು ಬಿಯರ್ ಕೇಕ್ ಅನ್ನು ಮಕ್ಕಳಿಗಿಂತ ಹೆಚ್ಚು ಕಾಲೇಜು ಯುವಕರು ಲೈಕ್ ಮಾಡುತ್ತಿದ್ದಾರೆ. ಸ್ನೇಹಿತರ ಹುಟ್ಟು ಹಬ್ಬ, ಹೊಸ ವರ್ಷ, ಪಾರ್ಟಿ  ಹೀಗೆ ಎಲ್ಲಾ ಸಂದರ್ಭಗಳಲ್ಲೂ ಯುವಕ ಯುವಕಿಯರು ಈ ಬಿಯರ್ ಕೇಕ್ ಆರ್ಡರ್ ಮಾಡಿ, ಅದರ ಕಿಕ್​ ಪಡೆಯುತ್ತಿದ್ದಾರೆ. ಬಿಯರ್​ ಕೇಕ್​ ಟೇಸ್ಟ್​ಗೆ ಫುಲ್ ಫಿದಾ ಆಗಿದ್ದಾರೆ.

ಸುಡು ಬೇಸಿಗೆ, ವೀಕೆಂಡ್​ನಲ್ಲಿ ಹೊರಗೆ ಹೋದೋದು ಕಷ್ಟ. ಮನೆಯಲ್ಲಿ ಕುಳಿತು ಏನು ಮಾಡೋದು ಅಂತಾ ನೀವು ಬೇಸರ ಮಾಡಿಕೊಳ್ಳಬೇಕಿಲ್ಲ. ಮನೆ ಮಂದಿ ಹಾಗೂ ಸ್ನೇಹಿತರೆಲ್ಲ ಒಟ್ಟಾಗಿ ಕುಳಿತು ಈ ವಿಶಿಷ್ಟ ಚಿಲ್ಡ್ ಬಿಯರ್ ಕೇಕ್ ಅನ್ನು ಸವಿಯಬಹುದು. ಸ್ನೇಹಿತರ ಜೊತೆ ಕುಳಿತು ತಿಂದ್ರೆ ಅದರ ಮಜಾನೇ ಬೇರೆ. ಆದ್ರೆ ಈ ಕೇಕ್  ಸ್ಪಲ್ಪ ದುಬಾರಿ ಅನ್ನೋದು ಸುಳ್ಳಲ್ಲ. ಒಂದು ಕೆಜಿ ಬಿಯರ್​ ಕೇಕ್​ಗೆ 1750 ರೂಪಾಯಿ ಇದೆ. ಒಂದು ಕೆಜಿಗಿಂತ ಹೆಚ್ಚು ಕೇಕ್ ಬೇಕು ಅಂದ್ರೆ ಮೊದಲೇ ಫೋನ್ ಮಾಡಿ ಆರ್ಡರ್ ಮಾಡಬೇಕು. 

ಕೆಳೆದ ಐದು ವರ್ಷಗಳಿಂದ ಕೇಕ್ ಶಾಪ್ ನಡೆಯುತ್ತಿರುವ ಮೀರಾ, ಗ್ರಾಹಕರಿಂದಲೇ ಈ ಬಿಯರ್ ಕೇಕ್ ಐಡಿಯಾ ಪಡೆದ್ರು. ಇದೀಗ ಈ ಬಿಯರ್ ಕೇಕ್ ಎಷ್ಟು ಫೇಮಸ್ ಆಗಿದೆ ಅಂದ್ರೆ ಪ್ರತಿದಿನ ನೂರಾರು ಕೆಜಿ ವ್ಯಾಪಾರ ಆಗ್ತಾ ಇದೆ ಅಂತ ಮೀರಾ ಹರ್ಷ ವ್ಯಕ್ತಪಡಿಸ್ತಾರೆ. ನಿಮಗೂ ಬಿಯರ್​ ಕೇಕ್​ ತಿನ್ನುವ ಆಸೆಯಿದ್ರೆ ಈ ಕೆಳಗಿನ ವಿಳಾಸ ಮತ್ತು ಫೋನ್​ ನಂಬರ್ ನೋಟ್​ ಮಾಡ್ಕೊಳ್ಳಿ. 

ನಂ. 8, 9, 80 ಅಡಿರಸ್ತೆ, ರಘುವನಹಳ್ಳಿ, ಬನಶಂಕರಿ 6ನೇ ಹಂತ, ಕನಕಪುರ ರಸ್ತೆ

ಫೋನ್ ನಂಬರ್ : 9980017921, 9900878605

ಇದನ್ನೂ ಓದಿ...

ಓದಿದ್ದು ಎಂಬಿಎ, ಆಗಿದ್ದು ಕೋಳಿ ಫಾರ್ಮ್ ಮಾಲೀಕ..!

ಮೂರು ವರ್ಷಗಳಲ್ಲಿ 3 ಉದ್ಯಮಗಳ ಸ್ಥಾಪನೆ - ಇದು 33ರ ಹರೆಯದ ಅರ್ಪಿತಾರ ಸಾಧನೆRelated Stories

Stories by YourStory Kannada