ಕುರುಕ್ಷೇತ್ರದಲ್ಲಿ ಸೌರಶಕ್ತಿಯ ಕಮಾಲ್..!

ಟೀಮ್​ ವೈ.ಎಸ್​. ಕನ್ನಡ

2

ಸೌರಶಕ್ತಿಯನ್ನು ಬಳಸಿಕೊಳ್ಳುವ ಬಗ್ಗೆ ಸಾಕಷ್ಟು ಅರಿವು ಮೂಡುತ್ತಿದೆ. ನವೀಕರಿಸಬಹುದಾದ ಇಂಧನದ ಜನರ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿದೆ. ನೀರಿನ ಅಭಾವದಿಂದ ವಿದ್ಯುತ್ ಉತ್ಪಾದನೆ ಕೊರತೆ ಆಗಿರುವ ಹಿನ್ನಲೆಯಲ್ಲಿ ಸೌರಶಕ್ತಿಯ ಬಳಕೆ ಬಗ್ಗೆ ಹೆಚ್ಚು ಅರಿವು ಮೂಡುತ್ತಿದೆ. ಭಾರತದಲ್ಲಂತೂ ಸೌರಶಕ್ತಿಯ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ನವೀಕರಿಸಬಹುದಾದ ಇಂಧನವನ್ನು ಬಳಸಿಕೊಳ್ಳುವುದರಲ್ಲಿ ಭಾರತ ಐರೋಪ್ಯ ರಾಷ್ಟ್ರಗಳಿಗೆ ಸವಾಲೊಡ್ಡುವ ಸೂಚನೆ ನೀಡುತ್ತಿದೆ. ಸೌರಶಕ್ತಿ ಬಳಸಿಕೊಳ್ಳುವ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ.

ಧರ್ಮಶಾಲಾದ ಕುರುಕ್ಷೇತ್ರದ ಬಳಿ ಇರುವ ಗುರ್ಜರ್ ಸುಧಾರ್ ಸಭಾ ಸೋಲಾರ್ ಬಳಕೆಯಲ್ಲಿ ದೊಡ್ಡ ಸುದ್ದಿ ಮಾಡುತ್ತಿದೆ. ಇಲ್ಲಿ ಸುಮಾರು 250 ರೂಮ್​ಗಳಿಗೆ ಸೋಲಾರ್ ಬಳಕೆ ಮೂಲಕ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಈ ಪೈಕಿ 25 ರೂಮ್ ಗಳಿಗೆ ಏರ್ ಕಂಡೀಷನ್ ವ್ಯವಸ್ಥೆಗಳಿದ್ದರೆ, 45 ರೂಮ್ ಗಳಲ್ಲಿ ಕೂಲರ್ ವ್ಯವಸ್ಥೆಗಳಿವೆ. 16 ರೂಮ್ ಗಳು ಹಾಲ್ ರೀತಿಯಲ್ಲಿವೆ. ಉಳಿದ ರೂಮ್ ಗಳು ಆರ್ಡಿನರಿ ರೂಮ್ ಗಳಾಗಿವೆ. ಇದರ ಜೊತೆಗೆ 5 ಸ್ಟೋರ್ ರೂಮ್ ಗಳು ಮತ್ತು 3 ದೊಡ್ಡ ಹಾಲ್ ಗಳಿವೆ. ಈ ಸೋಲಾರ್ ಪ್ಲಾಂಟ್ ನಲ್ಲಿ 45 ಕಿಲೋ ವ್ಯಾಟ್ ವಿದ್ಯುತ್ ಪ್ರತಿದಿನವೂ ಉತ್ಪಾದನೆಯಾಗುತ್ತದೆ.

ಇದನ್ನು ಓದಿ: ಒಂದು ರೂಪಾಯಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ- ಸಿಂಪಲ್​ ಆಗಿದೆ ತರಕಾರಿಯಲ್ಲಿ ವಿಷ ಪರೀಕ್ಷೆ ಮಾಡುವ ಯಂತ್ರ

ಹರ್ಯಾಣ ಸರಕಾರದ ನವೀಕರಿಸಬಹುದಾದ ಇಂಧನ ಇಲಾಖೆ ಮತ್ತು ಸು-ಕಾಮ್ ಜಂಟಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿವೆ. 30 ಕಿಲೋ ವ್ಯಾಟ್ ಗ್ರಿಡ್ ಟೈ ಇನ್ ವರ್ಟರ್ ಜೊತೆಗೆ 30 ಕಿಲೋವ್ಯಾಟ್ ಸೋಲಾರ್ ಪ್ಯಾನಲ್ ಗಳನ್ನು ನೆಟ್ ಮೀಟರ್ ಏರಿಯಾದಲ್ಲಿ ಅಳವಡಿಸಲಾಗಿದೆ. ಸರಕಾರ ಈ ಯೋಜನೆಗೆ ಸಬ್ಸಿಡಿಯನ್ನು ನೀಡಿದೆ. ಗ್ರಿಡ್ ಟೈ ಇನ್ ವರ್ಟರ್ ಮೂಲಕ ಪ್ರತಿದಿನ ಸುಮಾರು 150 ಯೂನಿಟ್ ವಿದ್ಯುತ್ ತಯಾರಿಸಲಾಗುತ್ತದೆ.

“ ಸೋಲಾರ್ ಶಕ್ತಿಯಲ್ಲಿ ಅದ್ಭುತವಿದೆ. ಇದು ಕೇವಲ ಪರಿಸರವನ್ನು ಮಾತ್ರ ಕಾಪಾಡುತ್ತಿಲ್ಲ. ಬದಲಾಗಿ ಗ್ರಾಹಕರ ಬಜೆಟ್ ಕೂಡ ಉಳಿಸುತ್ತದೆ. ಸೋಲಾರ್ ಪವರ್ ಪ್ಲಾಂಟ್ ನಿಂದ ವಿದ್ಯುತ್ ತಯಾರಿ ಮಾಡುವುದನ್ನು ಆರಂಭಿಸಿದ ಮೇಲೆ ನಮ್ಮ ವಿದ್ಯುತ್ ಬಿಲ್ ನಲ್ಲಿ ಸಾಕಷ್ಟು ಇಳಿಕೆ ಕಂಡುಬಂದಿದೆ. ಸೋಲಾರ್ ಶಕ್ತಿ ಭವಿಷ್ಯದ ಶಕ್ತಿಯಾಗಲಿದೆ. ”
- ಗ್ಯಾನ್ ಸಿಂಗ್, ಅಡ್ವಾಕೇಟ್, ಗುರ್ಜರ್ ಸುಧಾರ್ ಸಭಾ

ಇಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ಗುರ್ಜರ್ ಸಭಾ ಬಳಸಿಕೊಳ್ಳುತ್ತದೆ. ಉಳಿಕೆ ವಿದ್ಯುತ್ ಅನ್ನು ಪವರ್ ಗ್ರಿಡ್ ಮೂಲಕ ಇಂಧನ ಇಲಾಖೆಗೆ ನೀಡಿ ಆ ಮೂಲಕವೂ ಹಣ ಸಂಪಾದನೆ ಮಾಡುತ್ತಿದೆ. ಇತ್ತೀಚೆಗೆ ರೈಲ್ವೈ ಸಚಿವ ಸುರೇಶ್ ಪ್ರಭು “ಮಿಷನ್ 41ಕೆ” ಮೂಲಕ ರೈಲ್ವೇಯಲ್ಲಿ ಸುಮಾರು 41000 ಕೋಟಿ ರೂಪಾಯಿಗಳನ್ನು ವಿದ್ಯುತ್ ಬದಲು ಸೌರಶಕ್ತಿ ಬಳಸಿಕೊಳ್ಳುವ ಮೂಲಕ ಉಳಿತಾಯ ಮಾಡುವ ಯೋಜನೆ ಆರಂಭಿಸಿತ್ತು. ಒಟ್ಟಿನಲ್ಲಿ ಸೌರಶಕ್ತಿಯ ಬಳಕೆ ಪರಿಸರ ಸಂರಕ್ಷಣೆಗೂ ಸಹಾಯ ಮಾಡುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ಮಹಿಳಾ ಕ್ರಿಕೆಟ್​ನ ಸಚಿನ್ ತೆಂಡುಲ್ಕರ್- ವಿಶ್ವಕಪ್ ಎತ್ತುವ ಕನಸು ಕಾಣ್ತಿದ್ದಾರೆ ಮಿಥಾಲಿ ರಾಜ್

2. ಟ್ರಿಪ್​​ ಹೋಗಲು ಟಿಪ್ಸ್​​ ಹೇಳುವ ಎಕ್ಸ್​ಪರ್ಟ್​ ಇವರು..!

3. ಪತ್ರಕರ್ತನ ಸ್ಟಾರ್ಟ್​ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ

Related Stories