ಪೆಟ್ರೋಲ್​, ಡಿಸೇಲ್​ ಬಳಕೆಗೆ ಬೈಬೈ- ಬಯೋ ಡಿಸೇಲ್​ಗೆ ಹಾಯ್​ ಹಾಯ್​..!

ಟೀಮ್​ ವೈ.ಎಸ್​. ಕನ್ನಡ

0

ಪೆಟ್ರೋಲ್ ಮತ್ತು ಡಿಸೇಲ್​ಗಳ ಬಳಕೆಯನ್ನು ಕಡಿಮೆ ಮಾಡಬೇಕು ಅನ್ನೋ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಆದ್ರೆ ಪೆಟ್ರೋಲ್, ಡಿಸೇಲ್ ಬಳಸದೆ ಗಾಡಿ ಮುಂದಕ್ಕೆ ಹೋಗಾದಾದ್ರೂ ಹೇಗೆ ಅಲ್ವಾ..? ಪೆಟ್ರೋಲ್ ಅಥವಾ ಡಿಸೇಲ್​ಗೆ ಪರ್ಯಾಯವಾಗಿರುವ ಇಂಧನವಾದ್ರೂ ಏನು..? ಈ ಪ್ರಶ್ನೆಗಳಿಗೆಲ್ಲಾ ಸದ್ಯಕ್ಕೆ ಉತ್ತರ ಸಿಗುವುದಿಲ್ಲ.

ಈ ಮಧ್ಯೆ ದೇಶದ ನಂಬರ್ ವನ್ ಸಾರಿಗೆ ಸಂಸ್ಥೆ ಕೆಎಸ್ಆರ್​ಟಿಸಿ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದಿದೆ. ತನ್ನ ಹೈಟೆಕ್ ಬಸ್ ಒಂದಕ್ಕೆ ಬಯೋ ಡಿಸೇಲ್ ಅನ್ನು ಪ್ರಾಯೋಗಿಕವಾಗಿ ಬಳಸಿಕೊಂಡಿದೆ. ಬೆಂಗಳೂರು- ಚೆನ್ನೈ ನಡುವೆ ಸಂಚರಿಸುವ ಐರಾವತ ಕ್ಲಬ್ ಕ್ಲಾಸ್ ಬಸ್​ಗೆ ಬಯೋ ಜೈವಿಕ ಇಂಧನವನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗಿದೆ. ಅಂದಹಾಗೇ, ಈ ಬಸ್​ಗೆ ಪೂರ್ತಿಯಾಗಿ ಜೈವಿಕ ಇಂಧವನ್ನು ಬಳಸಿಕೊಂಡಿಲ್ಲ. ಮಾಮೂಲಿ ಡಿಸೇಲ್ ಶೇ 80ರಷ್ಟಿದ್ದರೆ, ಬಯೋ ಡಿಸೇಲ್​ನ್ನು  ಶೇ. 20ರಷ್ಟನ್ನು ಬಳಸಿಕೊಳ್ಳಲಾಗಿದೆ.

ಬಯೋ ಡಿಸೇಲ್ ಬಸ್​ಗಳನ್ನು ಬಳಸಿಕೊಳ್ಳುವುದರಿಂದ ಕೆಎಸ್ಆರ್​ಟಿಸಿಗೆ ಸಾಕಷ್ಟು ಲಾಭವಿದೆ. ವಾಯಮಾಲಿನ್ಯವನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯುವ ಪ್ರಯತ್ನವೂ ಇದಾಗಿದೆ. ಬಯೋ ಡಿಸೇಲ್ ಬಳಕೆ ಸುಲಭವಾದ್ರೆ, ಇದು ಮಾಮೂಲಿ ಡಿಸೇಲ್​ಗಿಂತ ಒಂದು ಲೀಟರ್​ಗೆ 5 ರೂಪಾಯಿ ಕಡಿಮೆ ದರದಲ್ಲಿ ಸಿಗಲಿದೆ. ಕೆಎಸ್ಆರ್​ಟಿಸಿ, ಬಿಎಂಟಿಸಿ, ಎನ್ಇಕೆಎಸ್ಆರ್​ಟಿಸಿ ಮತ್ತು ಎನ್​ಡಬ್ಲ್ಯು ಕೆಎಸ್ಆರ್​ಟಿಸಿ ಒಟ್ಟು ಸೇರಿ ಒಟ್ಟು 5.43 ಲಕ್ಷ ಲೀಟರ್ ಡಿಸೇಲ್​ನ್ನು ಒಂದು ವರ್ಷಕ್ಕೆ ಬಳಸಿಕೊಳ್ಳುತ್ತಿದೆ. ಕೆಎಸ್ಆರ್​ಟಿಸಿ ಒಂದೇ ಸುಮಾರು 2.1 ಲಕ್ಷ ಲೀಟರ್ ಡಿಸೇಲ್ ಅನ್ನು ಬಳಸಿಕೊಳ್ಳುತ್ತಿದೆ.

ಇದನ್ನು ಓದಿ: 63 ವರ್ಷದ ವೃದ್ಧನಿಗಿರುವ ಕಳಕಳಿ ನಮಗೇಕಿಲ್ಲ..?

ಸದ್ಯಕ್ಕೆ ಈ ಪ್ರಾಜೆಕ್ಟ್​ನ್ನು ಪೈಲಟ್ ಪ್ರಾಜೆಕ್ಟ್ ಆಗಿ ಪ್ರಯೋಗ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 10 ಬಸ್​ಗಳಿಗೆ ಬಯೋ ಡಿಸೇಲ್ ಪ್ರಯೋಗ ಮಾಡಲಾಗುತ್ತದೆ. ಬಯೋ ಡಿಸೇಲ್ ಮಾದರಿ ಯಶಸ್ಸು ಕಂಡರೆ ವಾಯುಮಾಲಿನ್ಯವನ್ನು ತಡೆಯುವ ಕಾರ್ಯಕ್ಕೆ ದೊಡ್ಡ ಬ್ರೇಕ್ ಸಿಗುತ್ತದೆ.

“ ಇದು ಪೈಲಟ್ ಪ್ರಾಜೆಕ್ಟ್. ಭವಿಷ್ಯದಲ್ಲಿ ಇದನ್ನು 17 ಡಿಪೋದ 17000 ಬಸ್​ಗಳಿಗೆ ಬಯೋ ಡಿಸೇಲ್​ನ್ನು ಬಳಸುವ ಯೋಜನೆ ಇದೆ. ನಮ್ಮಲ್ಲಿ ಜೈವಿಕ ಇಂಧನ ಬೇಕಾಗುವಷ್ಟಿದೆ. ಕೆಎಸ್ಆರ್​ಟಿಸಿ ಇಡೀ ದೇಶದಲ್ಲೇ ಹೊಸ ಪ್ರಯೋಗ ಮಾಡಿದೆ.”
- ರಾಜೇಂದ್ರ ಕುಮಾರ್ ಕಠಾರಿಯಾ,ಎಂ.ಡಿ. ಕೆ.ಎಸ್.ಆರ್.ಟಿ.ಸಿ

ಡಿಸೇಲ್ ಬಸ್​ಗಳಲ್ಲಿ  ಹೆಚ್ಚು ಹೊಗೆ ಹೊರಬರುವುದು ಸಾಮಾನ್ಯ. ಆದ್ರೆ ಬಯೋ ಡಿಸೇಲ್ ಬಸ್​ನಲ್ಲಿ ಇದರ ಪ್ರಮಾಣ ಕಡಿಮೆ ಆಗಲಿದೆ. ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರತಿದಿನ 1.5 ಲಕ್ಷ ಬಸ್​ಗಳನ್ನು ರಸ್ತೆಗಿಳಿಸುತ್ತದೆ. ಕೋಟ್ಯಾಂತರ ಜನರು ಪ್ರತಿದಿನ ಬಸ್​ನಲ್ಲಿ ಸಂಚರಿಸುತ್ತಾರೆ. ಒಟ್ಟಿನಲ್ಲಿ ದೇಶದ ನಂಬರ್ ವನ್ ಸಾರಿಗೆ ಸಂಸ್ಥೆಯಾಗಿರುವ ಕೆಎಸ್ಆರ್​ಟಿಸಿ ಪ್ರಯೋಗದ ವಿಚಾರದಲ್ಲೂ ನಂಬರ್ ವನ್ ಆಗಿರೋದು ಸಂತಸದ ವಿಚಾರ.

ಇದನ್ನು ಓದಿ:

1. ಪ್ರಯಾಣಕ್ಕಾಗಿ ಮನೆಯನ್ನೇ ಮಾರಿದ್ರು.. ಹವ್ಯಾಸದಿಂದ ಕೋಟ್ಯಾಧಿಪತಿಗಳಾದ್ರು..!

2. ಮೂಕಪ್ರಾಣಿಗಳ ನೋವಿಗೆ ಸ್ಪಂದಿಸಿದ ಹೃದಯವಂತ : ಎಲ್ಲರಿಗೂ ಮಾದರಿ ಬಾಲಿವುಡ್ ನಟನ ಔದಾರ್ಯ

3. ಹಿರಿಜೀವಗಳ ಬದುಕಲ್ಲಿ ಆಶಾಕಿರಣ - ಸಂಗಾತಿ ಆಯ್ಕೆಗಾಗಿ ವಿವಾಹ ವೇದಿಕೆ

Related Stories

Stories by YourStory Kannada