ರೈತರಿಗೆ ಎಲ್ಲವೂ ಗೊತ್ತು..ಆದ್ರೆ..?

ಟೀಮ್​ ವೈ.ಎಸ್​. ಕನ್ನಡ

1

ವಿಕ್ರಂ ಶಂಕರನಾರಾಯಣನ್ ಸನ್​ಲಾಕ್ ಆಗ್ರೋ ಇಂಡಸ್ಟ್ರೀಸ್ ಸಂಸ್ಥಾಪಕ ಮತ್ತು ಆರ್ಥಿಕ ತಜ್ಞ. ಇತ್ತೀಚೆಗೆ ವಿಕ್ರಂ ಕೊಟ್ಟ ಅಂಕಿ ಅಂಶ ನಿಜಕ್ಕೂ ಶಾಕಿಂಗ್ ಆಗಿತ್ತು. ಭಾರತದ ಜನಸಂಖ್ಯೆಯಲ್ಲಿ ಶೇಕಡಾ 60ರಷ್ಟು ಜನರು ಕೃಷಿಯನ್ನೇ ಮೂಲ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಆದ್ರೆ ಈ ಪೈಕಿ ಕೇವಲ ಶೇಕಡಾ 2ರಷ್ಟು ಜನರು ಮಾತ್ರ ಕೃಷಿಯಿಂದ ಜೀವನವನ್ನು ಸಮೃದ್ಧವನ್ನಾಗಿ ಮಾಡಿಕೊಂಡಿದ್ದಾರೆ. ದೇಶದ ಜಿ.ಡಿ.ಪಿ.ಗೆ ಕೊಡಗೆ ನೀಡಿದ್ದಾರೆ. ಆದ್ರೆ ಉಳಿದ ಶೇಕಡಾ 58ರಷ್ಟು ಕೃಷಿಕರ ಕಥೆ ಏನು.. ? ದೇಶದ ಜನರ ಹೊಟ್ಟೆ ತುಂಬಿಸುವ ಕೃಷಿಕರ ಸ್ಥಿತಿ ಹೇಗಿದೆ ಅನ್ನೋದನ್ನ ನಾವೇ ಯೋಚನೆ ಮಾಡಬಹುದು.

ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸಿರಿಧಾನ್ಯ ಮೇಳದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ರೈತರು ಬಂದು ಉತ್ತಮ ಕೃಷಿ ಚಟುವಟಿಕೆ ಹೇಗೆ ನಡೆಸಬೇಕು ಅನ್ನುವುದನ್ನು ತಿಳಿದುಕೊಂಡಿದ್ದಾರೆ. ತಾನು ಬೆಳೆದ ಬೆಳೆಗೆ ಉತ್ತಮ ಮಾರ್ಕೆಟ್ ಪಡೆಯುವುದು ಹೇಗೆ ಅನ್ನುವುದನ್ನು ಕೂಡ ಕಲಿತುಕೊಂಡಿದ್ದಾರೆ. ಯುವರ್ ಸ್ಟೋರಿ ಈ ರೈತರನ್ನು ಮಾತಾನಾಡಿಸಿದಾಗ ಮತ್ತಷ್ಟು ವಿಷಯಗಳು ಹೊರಬಿದ್ದವು. ಧಾನ್ಯಗಳನ್ನು ಬೆಳೆದ್ರೂ, ಗ್ರಾಹಕರು ಅದನ್ನು ತಿರಸ್ಕರಿಸುತ್ತಿದ್ದಾರೆ. ಬರದ ನಡುವೆಯೂ ಪರಿಶ್ರಮಪಟ್ಟು ಧಾನ್ಯಗಳನ್ನು ಬೆಳೆದ್ರೂ ಅದನ್ನು ಕೊಳ್ಳುವವರು ಕೆಲವೇ ಬೆರಳಿಣಿಕೆಯಷ್ಟು ಜನ ಮಾತ್ರ ಇದ್ದಾರೆ ಅನ್ನುವುದು ಅಚ್ಚರಿ ಆದ್ರೂ ಸತ್ಯ.

ಮಳೆಯ ಕೊರತೆ ನಡುವೆ..

ದೇವಪ್ಪ, ಕೊಪ್ಪಳ ಜಿಲ್ಲೆಯ ರೈತ. ತನಗಿದ್ದ ಎರಡು ಎಕರೆ ಭೂಮಿಯಲ್ಲಿ ಲಾಭಕೊಡಬಹುದು ಅನ್ನುವ ಉದ್ದೇಶದಿಂದ ಹತ್ತಿ ಬೆಳೆಯನ್ನು ಬೆಳೆದ್ರು. ಅದಕ್ಕಾಗಿ ದೇವಪ್ಪ 20,000 ರೂಪಾಯಿ ಬಂಡವಾಳ ಕೂಡ ಹೂಡಿದ್ರು. ಆದ್ರೆ ಬಿತ್ತನೆ ಕಟಾವಿಗೆ ಬರಲೇ ಇಲ್ಲ. ಕನಸುಗಳೆಲ್ಲವೂ ಕಮರಿ ಹೋಗಿದ್ದವು. ದೇವಪ್ಪ ಕೈಯಲ್ಲಿದ್ದ 10 ಎಕರೆ ಭೂಮಿ, ಕೂಡ ರಾಸಾಯನಿಕ ಗೊಬ್ಬರ ಬಳಸಿದ್ದರಿಂದ ಫಲವತ್ತಾಗಿತ್ತು. ಆದ್ರೆ ಹತ್ತಿ ಬೆಳೆ ಯಾಕೆ ವೈಫಲ್ಯ ಕಂಡಿತ್ತು..?

ಆದ್ರೆ ಇದಕ್ಕೆ ಉತ್ತರ ವೆರಿ ಸಿಂಪಲ್. ಭೂಮಿ ಫಲಭರಿತವಾಗಿದ್ದರೂ ಒಂದು ಹನಿ ಮಳೆಯೂ ಬರಲಿಲ್ಲ. ಹತ್ತಿಗೆ ಮಳೆಯ ಅವಶ್ಯಕತೆ ಅಥವಾ ನೀರಿನ ಅವಶ್ಯಕತೆ ಇತ್ತು. ಅದು ಸಿಗಲಿಲ್ಲ. ಅಂತರ್ಜಲದ ಮಟ್ಟ ಕುಸಿದಿತ್ತು. ಹೆಚ್ಚಿನ ಲಾಭದ ಆಸೆಯಿಂದ ಬಿತ್ತಿದ ಹತ್ತಿ ಬೆಳೆಯ ಕನಸು ಎಲ್ಲವೂ ಕನಸಾಗೇ ಉಳಿಯಿತು.

“ ಬೋರ್​ವೆಲ್ ಕೊರೆದ್ರೆ ಕೇವಲ ಒಂದು ತಿಂಗಳಿಗೆ ಅದು ಬತ್ತಿ ಹೋಗುತ್ತದೆ. ಮತ್ತೊಂದು ಬೋರ್​ವೆಲ್ ಕೊರೆಯಬೇಕಾಗುತ್ತದೆ. ಮಳೆ ಅನ್ನುವುದು ಇಲ್ಲಿ ಇಲ್ಲ. ನಮ್ಮ ಭೂಮಿ ಬರಡಾಗಿದೆ.”

ಅಂತ ಹೇಳುತ್ತಾರೆ ಧನಂಜಯ ರೆಡ್ಡಿ. ಧನಂಜಯ ರೆಡ್ಡಿ ಚಿತ್ರದುರ್ಗ ಜಿಲ್ಲೆಯ ರೈತ. ಚಿತ್ರದುರ್ಗವನ್ನು ಕಳೆದ ಕೆಲವು ವರ್ಷಗಳಿಂದ ಬರಪೀಡಿತ ಜಿಲ್ಲೆ ಅಂತ ಕರೆಯಲಾಗಿದೆ. ಈ ಜಿಲ್ಲೆಯಿಂದ ಈ ವರ್ಷ 67, 532 ಕೃಷಿಕರು ಬರಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬೆಳೆಹಾನಿ ಈ ಜಿಲ್ಲೆಯಲ್ಲಿ ಅತೀ ಹೆಚ್ಚಾಗಿದೆ.

ಧಾನ್ಯಗಳನ್ನು ಬೆಳೆಯಬೇಕೇ..? ಬೇಡ್ವೇ..?

ದೇವಪ್ಪ, ಧನಂಜಯರಂತೆ ಹಲವು ಕೃಷಿಕರು ಬರ ಪೀಡಿತ ಪ್ರದೇಶಗಳಲ್ಲಿ ನೀರನ್ನು ಅತೀ ಹೆಚ್ಚಾಗಿ ಬೇಡುವ ಕೃಷಿಯನ್ನೇ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಮಹೇಶ್ 3 ಎಕರೆ ಜಮೀನು ಹೊಂದಿದ್ದಾರೆ. ಅದರಲ್ಲಿ ಅವರು ನೀರಾವರಿ ಮೂಲಕ ಕಬ್ಬಿನ ಬೆಳೆಯನ್ನು ಬೆಳೆಯುತ್ತಿದ್ದಾರೆ. ಭತ್ತ ಮತ್ತು ಸೋಯಾಬಿನ್ ಕೂಡ ಬೆಳೆಯುತ್ತಿದ್ದರೂ ಅದಕ್ಕೆ ಮಳೆಯನ್ನೇ ಅವಲಂಭಿಸಬೇಕಾಗಿದೆ. ಮಹೇಶ್ ಪ್ರತೀವರ್ಷ ಸುಮಾರು 40 ರಿಂದ 50 ಸಾವಿರ ರೂಪಾಯಿ ಬಂಡವಾಳ ಹೂಡುತ್ತಾರೆ. ಆದ್ರೆ ಅದನ್ನು ಮರಳಿ ಪಡೆಯುವ ಬಗ್ಗೆ ಗ್ಯಾರೆಂಟಿ ಇಲ್ಲ. ಹಲವು ಬಾರಿ ನೀರಿನ ಕೊರತೆಯಿಂದ ಬೆಳೆ ಕೈಕೊಟ್ಟು ಸಾಲದ ಹೊರೆ ಹೊತ್ತಿದ್ದೂ ಉಂಟು.

ನೀರಿನ ಬರ ಇರುವ ಪ್ರದೇಶಗಳಲ್ಲಿ ರೈತರು ಯಾಕೆ ನೀರನ್ನೇ ಅವಲಂಬಿಸುವ ಕೃಷಿಗೆ ಮೊರೆ ಹೋಗುತ್ತಾರೆ ಅನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಸಾವಯವ ಸಿರಿಧಾನ್ಯಗಳನ್ನು ಕಡಿಮೆ ನೀರಿನಿಂದ ಬೆಳೆಯ ಬಹುದಾದರೂ ಅವುಗಳನ್ನು ಜನರು ಖರೀದಿ ಮಾಡುವುದು ತುಂಬಾ ಕಡಿಮೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುವ ಕ್ವಿನೊ ಮತ್ತು ಓಟ್ಸ್​ಗಳಿಗೆ ಮಾತ್ರ ಬೇಡಿಕೆ ಇದೆ. ರಾಗಿ, ಜೋಳ, ಕಡೊ ಬೆಳೆಯಲ್ಲಿ ಕಡಿಮೆ ಬಂಡವಾಳ ಮತ್ತು ಕಡಿಮೆ ನೀಡುವ ಸಾಕು. ಆದ್ರೆ ಇದನ್ನು ರೈತರು ಪ್ರಾಣಿಗಳ ಆಹಾರದ ಉದ್ದೇಶಕ್ಕಾಗಿ ಮಾತ್ರ ಬೆಳೆಯುತ್ತಾರೆ. ಅಷ್ಟೇ ಅಲ್ಲ ಕೆಲವೇ ಕೆಲವು ಗುಂಟೆಗಳ ಲೆಕ್ಕದಲ್ಲಿ ಮಾತ್ರ ಇವುಗಳನ್ನು ಬೆಳೆಯಲಾಗುತ್ತದೆ.

ಇದನ್ನು ಓದಿ: ವಕೀಲ ವೃತ್ತಿಗೆ ಗುಡ್ ಬೈ ಹೇಳಿದ್ರು- ಸಾವಯವ ಕೃಷಿಕನಾಗಿ ಯಶಸ್ಸಿನ ಹೆಜ್ಜೆ ಇಟ್ರು..!

ಧನಂಜಯರಂತಹ ರೈತ ಸುಮಾರು 15 ವರ್ಷಗಳಿಂದ ಕೇವಲ ರಾಗಿಯನ್ನು ಮಾತ್ರ ಬೆಳೆಯುತ್ತಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಸುರೇಶ್ ಬಾಬು ಕೂಡ ರಾಗಿಯನ್ನು ಮಾತ್ರ ಬೆಳೆಯುತ್ತಿದ್ದಾರೆ. ರಾಗಿಯನ್ನು ಅತೀ ಕಡಿಮೆ ನೀರಿನಿಂದ ಬೆಳೆಯಬಹುದು. ಅಷ್ಟೇ ಅಲ್ಲ ಮಳೆ ಅತ್ಯಂತ ಕಡಿಮೆ ಮಳೆ ಆದಗಲೂ ಇದನ್ನು ಬೆಳೆಯಬಹುದು ಅಂತ ಹೇಳುತ್ತಾರೆ ಸುರೇಶ್. ಬರಪೀಡಿತ ಪ್ರದೇಶದಲ್ಲೂ ಇದು ಬೆಳೆಯಲು ಸಾಧ್ಯವಿರುವುದರಿಂದ ರೈತರು ಬೆಳೆಹಾನಿ ಮಾಡಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ.

ಈ ಒಂದೇ ಒಂದು ಪ್ರಶ್ನೆಗೆ ಉತ್ತರ ಬೇಕು..

ಜೈವಿಕ ಧಾನ್ಯಮೇಳದಲ್ಲಿ ಕೃಷಿಕರು ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದ್ರೆ ರೈತರ ಸಾಮಾನ್ಯ ಪ್ರಶ್ನೆ ಸಿರಿಧಾನ್ಯಕ್ಕೆ ಬೆಲೆಸಿಗುತ್ತಾ ಅನ್ನುವುದು. ಕರ್ನಾಟಕ ರಾಜ್ಯ ಫಾರ್ಮರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಪ್ರಕಾಶ್ ಪ್ರಕಾರ, ಒಂದು ಎಕರೆಯಲ್ಲಿ ರಾಗಿ ಬೆಳೆಯಲು ಕೇವಲ 2000 ರೂಪಾಯಿ ಬಂಡವಾಳ ಸಾಕಾಗುತ್ತದೆ. ಆದ್ರೆ ಉತ್ತಮ ಬೆಳೆ ಬಂದ್ರೆ ರೈತರು 5000 ರೂಪಾಯಿ ಪಡೆಯಬಹುದು. ಆದ್ರೆ ಇದು ಸದ್ಯಕ್ಕೆ ಅಪರೂಪವಾಗಿದೆ. ರೈತರಿಗೆ ಸರಕಾರ ನೀಡುವ ಸಬ್ಸಿಡಿ ಬೇಡ, ಸರಕಾರದ ಕಾರ್ಯಕ್ರಮಗಳು ಬೇಡ, ಆದ್ರೆ ನಮಗೆ, ನಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಮಾತ್ರ ಬೇಕಾಗಿದೆ. ಇಂತಹ ಸಿರಿಧಾನ್ಯ ಮೇಳಗಳು ರೈತರಿಗೆ ಹೆಚ್ಚು ಸಹಾಯಕವಾಗುತ್ತದೆ.

“ಇಲ್ಲಿ ತನಕ ನನಗೆ ನಾವು ಬೆಳೆದ ಧಾನ್ಯವನ್ನು ಎಲ್ಲಿ ಮಾರಾಟ ಮಾಡಬೇಕು ಅನ್ನುವುದು ತಿಳಿದಿರಲಿಲ್ಲ. ಆದ್ರೆ ಈಗ ನಾವು ಬೆಳೆದ ಧಾನ್ಯಕ್ಕೆ ಬೇಡಿಕೆ ಇದೆ. ಅದನ್ನು ಹೇಗೆ ಮಾರಾಟಬೇಕು ಅನ್ನುವುದು ಗೊತ್ತಾಗಿದೆ” 

- ಅಂತ ಹೇಳುತ್ತಾರೆ ಬಿಜಾಪುರ ಜಿಲ್ಲೆಯ ರೈತ ರಫೀಕ್ ಅಹ್ಮದ್. ಇದಕ್ಕೆ ಪ್ರೇರಣೆ ಅನ್ನುವಂತೆ ಧನಂಜಯ ಕಳೆದ ವರ್ಷ ಒಂದು ಕ್ವಿಂಟಾಲ್ ರಾಗಿಗೆ 2000 ರೂಪಾಯಿ ಪಡೆದಿದ್ದರು. ಈ ವರ್ಷ ಒಂದು ಕ್ವಿಂಟಾಲ್​ಗೆ  3000 ರೂಪಾಯಿ ಪಡೆದಿದ್ದಾರೆ.

ಬೆಂಗಳೂರು ದೇಶದ ಮೊತ್ತ ಮೊದಲ ಸಾವಯವ ಕೃಷಿ ಧಾನ್ಯಗಳ ಮೇಳವನ್ನು ಆಯೋಜಿಸಿದೆ. ಈ ಮೂಲಕ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಿದೆ. ಜೈವಿಕ ಕೃಷಿ ಮತ್ತು ಸಿರಿಧಾನ್ಯಗಳ ಕೃಷಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ಆದ್ರೆ ಬದಲಾವಣೆಗೆ ಇದು ಮೊದಲ ಹೆಜ್ಜೆ . 

ಇದನ್ನು ಓದಿ:

1. ಪರಿಸರ ಸಂರಕ್ಷಣೆಗೆ ಬೇಕಿದೆ ಜೈವಿಕ ಕೃಷಿ- ಸಾವಯವ ಪದ್ಧತಿಯಿಂದ ಜೀವನಕ್ಕೆ ಸಿಗುತ್ತದೆ ಖುಷಿ

2. ಮಣ್ಣಿನ ಗುಣಮಟ್ಟ ಕಾಪಾಡಲು ಬೇಕು ಸಾವಯವ ಕೃಷಿ - ಸಿರಿಧಾನ್ಯಗಳಲ್ಲಿದೆ ಉತ್ತಮ ಆರೋಗ್ಯದ ಸೀಕ್ರೆಟ್

3. ರಾಗಿ ಮುದ್ದೆಯಿಂದ ಬಿಗ್​ಬಾಸ್ಕೆಟ್ ತನಕ- ಗ್ರಾಹಕ, ರೈತರಿಗೆ ಲಾಭದ ಮಾರ್ಗ

Related Stories