ಅತ್ಯಮೂಲ್ಯ ಸಲಹೆಗಳ ಭಂಡಾರ: ಜನರಿಗೆ ದಾರಿದೀಪವಾದ ಅಥೆನಾ ಇನ್ಫೋನೋಮಿಕ್ಸ್

ಟೀಮ್​​ ವೈ.ಎಸ್​​.

ಅತ್ಯಮೂಲ್ಯ ಸಲಹೆಗಳ ಭಂಡಾರ: ಜನರಿಗೆ ದಾರಿದೀಪವಾದ ಅಥೆನಾ ಇನ್ಫೋನೋಮಿಕ್ಸ್

Friday October 16, 2015,

2 min Read

ಸ್ಪಷ್ಟವಾದ ಗುರಿ ಅದಕ್ಕೆ ತಕ್ಕಂತಹ ಪರಿಶ್ರಮ ಇದ್ರೆ ಯಶಸ್ಸು ಅರಸಿ ಬರುತ್ತೆ. ಒಂದು ವಿಷಯದ ಮೇಲೆ ಸಾವಿರ ಗಂಟೆಗಳನ್ನು ವ್ಯಯಿಸಿದ್ರೆ ನೀವು ಅದರಲ್ಲಿ ಪರಿಣಿತರಾಗುವುದರಲ್ಲಿ ಸಂಶಯವೇ ಇಲ್ಲ. ಇದೇ ತತ್ವವನ್ನು ಅಳವಡಿಸಿಕೊಂಡು ದೀಪಾ ಕಾರ್ತಿಕೇಯನ್ ಹಾಗೂ ವಿಜಯ್ ಬಾಲಕಿ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ. ಚೆನ್ನೈ ಮೂಲದ ಇವರು ಲೊಯೋಲಾ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಮಾಸ್ಟರ್ಸ್ ಮುಗಿಸಿದ್ದಾರೆ. ಪಿಎಚ್‍ಡಿ ಮಾಡುವ ಅವಕಾಶವಿದ್ದರೂ ಓದು ಮುಂದುವರಿಸದೆ ದೀಪಾ ಹಾಗೂ ವಿಜಯ್ ಉದ್ಯಮ ಕ್ಷೇತ್ರಕ್ಕೆ ಎಂಟ್ರಿ ಕೊಟ್ರು. 2010ರಲ್ಲಿ ಅಥೆನಾ ಇನ್ಫೋನೋಮಿಕ್ಸ್​​ಗೆ ಅಡಿಗಲ್ಲು ಹಾಕಿದ್ರು. ಕಾರ್ಯನೀತಿ ಬಗ್ಗೆ ಸಲಹೆ ಮತ್ತು ಮಾರುಕಟ್ಟೆ ಕುರಿತ ಸಂಶೋಧನೆಗಾಗಿಯೇ ಸ್ಥಾಪಿಸಿದ ಸಂಸ್ಥೆ ಇದು. ಸದ್ಯ ಭಾರತದಲ್ಲಿ ಅಸ್ತಿತ್ವದಲ್ಲಿರುವ ಕನ್ಸಲ್ಟಿಂಗ್ ಗ್ರೂಪ್‍ಗಳ ಏಕಸ್ವಾಮ್ಯತೆಗೆ ಸವಾಲು ಹಾಕುವ ಪ್ರಯತ್ನ ದೀಪಾ ಹಾಗೂ ವಿಜಯ್ ಅವರದ್ದಾಗಿತ್ತು. ಈ ಪ್ರಯತ್ನದಲ್ಲಿ ಒಂದು ಹಂತದಲ್ಲಿ ಅವರು ಯಶಸ್ವಿಯಾಗಿದ್ದಾರೆ. ವಿಶೇಷ ಅಂದ್ರೆ ಭಾರತದ ಪ್ರಧಾನಿಯೊಬ್ಬರಿಗೆ ಆರ್ಥಿಕ ಸಲಹೆಗಾರರಾಗಿದ್ದ ಎಸ್.ನಾರಾಯಣನ್, ದೀಪಾ ಹಾಗೂ ವಿಜಯ್ ಅವರಿಗೆ ವಿಶ್ವಸನೀಯ ಸಲಹೆಗಾರರಾಗಿದ್ದಾರೆ.

image


ಒಮ್ಮೆ ಉದ್ಯಮ ಲೋಕಕ್ಕೆ ಕಾಲಿಟ್ಟ ಮೇಲೆ ಮತ್ತೆ ಹಿಂತಿರುಗಿ ನೋಡಬಾರದು ಅನ್ನೋದು ದೀಪಾರ ಅಭಿಪ್ರಾಯ. ಕೌಶಲ್ಯಾಭಿವೃದ್ಧಿಯಲ್ಲಿನ ವೇಗ ಕಾರ್ಯ ಕುಶಲತೆಯ ಸಂಶೋಧನೆಗೆ ಮತ್ತಷ್ಟು ಒತ್ತು ನೀಡುತ್ತಿದೆ. ಸಾರ್ವಜನಿಕ ವಲಯದಲ್ಲಿನ ಹೊಣೆಗಾರಿಕೆ ಕೊರತೆಯಿಂದ ಅಥೆನಾ ಇನ್ಫೋನೋಮಿಕ್ಸ್​​ಗೆ ಆರಂಭದಲ್ಲಿ ಪ್ರಾಜೆಕ್ಟ್‍ಗಳು ಸಿಗುವುದು ಕಷ್ಟವಾಗಿತ್ತು. ಇಂಧನ, ನಗರಗಳಲ್ಲಿ ಮೂಲಸೌಕರ್ಯ ಹಾಗೂ ಶೈಕ್ಷಣಿಕ ವಲಯದಲ್ಲಿ ಅಥೆನಾ ಸೇವೆ ಸಲ್ಲಿಸುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಕಂಪನಿ 60 ಪ್ರಾಜೆಕ್ಟ್​​ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ, ಪ್ರಧಾನಮಂತ್ರಿ ಸಲಹಾ ಮಂಡಳಿ ಹೀಗೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದೆ. ಕಳೆದ ಮೂರು ವರ್ಷಗಳಿಂದಲೂ ಅಥೆನಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ದೀಪಾ ಹಾಗೂ ವಿಜಯ್ ತಮ್ಮ ಕಂಪನಿಯಲ್ಲಿ ಯುವ ಪ್ರತಿಭೆಗಳಿಗೆ ಅವಕಾಶದ ಬಾಗಿಲು ತೆರೆದಿದ್ದಾರೆ. ಹಾಗಾಗಿ ಕಂಪನಿಗೆ ಸಿಬ್ಬಂದಿ ನೇಮಕ ತಲೆನೋವಿನ ಕೆಲಸವೇ ಆಗಿರಲಿಲ್ಲ. ಈ ಯಶಸ್ಸಿನ ನಡುವೆಯೂ ಕೆಲ ಸವಾಲುಗಳು ಸಂಸ್ಥೆಯ ಮುಂದಿವೆ.

ಬಂಡವಾಳದ ಕೊರತೆ :

ಆರಂಭಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಸಂಸ್ಥೆಗೆ ಸ್ವಲ್ಪ ಸಮಯ ಹಿಡಿದಿತ್ತು. ಈಗ ವರ್ಷದಿಂದ ವರ್ಷಕ್ಕೆ ಕಂಪನಿಯ ಆದಾಯ ದುಪ್ಪಟ್ಟಾಗುತ್ತಿದೆ. ಆರ್ಥಿಕವಾಗಿ ಅಥೆನಾ ಸಬಲವಾಗಿರೋದ್ರಿಂದ ಭವಿಷ್ಯದ ಹಾದಿ ಸುಗಮವಾಗಿದೆ.

ಸಂಘಟನಾ ಕಾರ್ಯ : 

ಸಂಸ್ಥೆಯನ್ನು ಸೂಕ್ತವಾಗಿ ಸಂಘಟಿಸುವ ಕಾರ್ಯ ಇನ್ನೂ ನಡೆಯುತ್ತಲೇ ಇದೆ. ದೀಪಾ ಹಾಗೂ ವಿಜಯ್ ಇದರ ಜವಾಬ್ಧಾರಿ ಹೊತ್ತಿದ್ದಾರೆ.

ಸಾರ್ವಜನಿಕ ನೀತಿ :

ಯಾವುದೇ ಒಂದು ವ್ಯವಸ್ಥೆಗೆ ಹೊಂದಿಕೊಂಡು ಸರಿಯಾದ ಪಾಲುದಾರಿಕೆಯನ್ನು ಪಡೆಯಲು ಸಹನೆ ಬೇಕು ಎನ್ನುತ್ತಾರೆ ದೀಪಾ ಕಾರ್ತಿಕೇಯನ್. ಸಾರ್ವಜನಿಕ ನೀತಿ ಹಾಗೂ ಸ್ವ ಅನುಭವದಿಂದ ತಿಳಿದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಜನರೇ ನಿರ್ಣಾಯಕ :

ಉದ್ಯಮದ ದೃಷ್ಟಿಕೋನ ತೀಕ್ಷ್ಣವಾಗಿಲ್ಲದಿದ್ದರೆ ಜನರು ಅದನ್ನು ಕಡೆಗಣಿಸುತ್ತಾರೆ. ಯಾರು ತಮ್ಮ ಸಾಮಥ್ರ್ಯದ ಮೇಲೆ ನಂಬಿಕೆಯಿಡುತ್ತಾರೋ ಅವರು ನಿಸ್ಸಂಶಯವಾಗಿ ಯಶಸ್ವಿಯಾಗುತ್ತಾರೆ.

image


ಹುಡುಕಾಟವೇ ಕೀಲಿಕೈ : 

ಮಾಹಿತಿ ಹಕ್ಕು ಕಾಯ್ದೆಯಂತಹ ನಿಯಮಗಳು ಪರಿಸರ ವ್ಯವಸ್ಥೆಯನ್ನೇ ಬದಲಾಯಿಸುತ್ತವೆ. ನೀತಿ-ನಿಯಮಗಳಿಂದ ತಮ್ಮ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ತಿಳಿಯಲು ಜನರು ದಿಢೀರನೆ ಆಸಕ್ತಿ ತೋರುತ್ತಾರೆ. ಇದು ಅಥೆನಾದ ಕಾರ್ಯವೈಖರಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಹೊಸ ಹೊಸ ಪ್ರಯತ್ನಕ್ಕೆ ಕೈಹಾಕಲು ಧೈರ್ಯ ತುಂಬಿದೆ.

ವಯಸ್ಸು ನಿರ್ಣಾಯಕವಲ್ಲ : 

ಅಥೆನಾ ಇನ್ಫೋನೋಮಿಕ್ಸ್​​ನ ನಿಯಮವೇ ಹಾಗೆ. ಇಲ್ಲಿ ವಯಸ್ಸು ನಿರ್ಣಾಯಕವಲ್ಲ. ಪ್ರತಿಭೆ ಹಾಗೂ ಪ್ರಯತ್ನಕ್ಕೆ ಮಾತ್ರ ಬೆಲೆಯಿದೆ. ಪ್ರಾಜೆಕ್ಟ್ ನಿರ್ವಹಣೆಗೆ ಅತಿಯಾದ ಪುರಸ್ಕಾರ , ಹಣ, ಗುಣಮಟ್ಟ ಹಾಗೂ ಜನರ ಮೇಲೆ ಸಂಸ್ಥೆ ಹೆಚ್ಚಿನ ಗಮನ ಹರಿಸಬೇಕು. ಪ್ರಾಜೆಕ್ಟ್ ಯಶಸ್ವಿಯಾಗಬೇಕೆಂದರೆ ಇದು ಅತ್ಯವಶ್ಯ.

image


ಹೀಗೆ ತಮ್ಮ ಉದ್ಯಮ ಪಯಣದ ಅನುಭವಗಳನ್ನು ಹಂಚಿಕೊಳ್ಳುವ ದೀಪಾ ಅವರಿಗೆ ಅವರೇ ಪ್ರೇರಣೆ. ಪಾಲಿಸಿ ಕನ್ಸಲ್ಟಿಂಗ್ ಸಂಸ್ಥೆಯನ್ನು ಆರಂಭಿಸಬೇಕೆಂದು ಕನಸು ಕಂಡಿದ್ದ ದೀಪಾ ತಮ್ಮ ಕೆಲಸದ ಮೂಲಕವೇ ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂದು ಹಂಬಲಿಸಿದ್ದರು. ಅಥೆನಾ ಇನ್ಫೋನೋಮಿಕ್ಸ್ ಮೂಲಕ ಅವರ ಕನಸು ನನಸಾಗಿದೆ. ಕಂಪನಿಯನ್ನು ದೀಪಾ ಹಾಗೂ ವಿಜಯ್ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಅಥೆನಾವನ್ನು ನಿಯಮಬದ್ಧ ಸಂಸ್ಥೆಯನ್ನಾಗಿ ರೂಪಿಸುವುದು ಅವರ ಮುಂದಿರುವ ಬಹುದೊಡ್ಡ ಸವಾಲು. ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಕೂಡ ದೀಪಾರ ಮುಂದಿನ ಗುರಿ. ಇದು ಅಥೆನಾ ಇನ್ಫೋನೋಮಿಕ್ಸ್ ಭವಿಷ್ಯವನ್ನೂ ಉಜ್ವಲವಾಗಿಸಲಿದೆ.