ನಿಮ್ಮೂರಿನ ಬ್ರೇಕ್​​ಫಾಸ್ಟ್​​ ನಿಮ್ಮ ಮನೆ ಅಂಗಳಕೆ..!

ಟೀಮ್​​ ವೈ.ಎಸ್​​.

1

ಆಹಾ! ರುಚಿಯಾದ ಬಿಹಾರದ ಲಿಟ್ಟಿಚೋಖಾ! ಇಂಧೋರ್​​ನ ಮಸಾಲಪೋಹಾ! ವಾರಾವ್ಹಾ! ದೆಹಲಿಯ ಕಚೋರಿಪಲ್ಯ. ಇದೆಲ್ಲವನ್ನುನಿಮ್ಮಮನೆಯಲ್ಲೇ ಅಚ್ಚುಕಟ್ಟಾಗಿ ಮಾಡೋ ಸವಿ ಹೇಗಿರಬಹುದು ಅಲ್ವಾ? ಅದು ಕೂಡ ಇಂಥ ಅಡುಗೆಗೆ ಅಗತ್ಯವಾದ ಸಾಮಗ್ರಿಗಳನ್ನು ಆಯಾ ಸ್ಥಳದಿಂದಲೇ ತರಿಸಿಕೊಂಡು ತಯಾರಿಸೋದಂತೂ ಇನ್ನಷ್ಟು ಅಧ್ಭುತ.! ಏನು ಬಾಯಲ್ಲಿ ನೀರೂರುತಿದ್ಯಾ..?

ಹೌದು, ಆನ್​​​ಲೈನ್​​ ಮೂಲಕ ಈರೀತಿಯಾಗಿ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವ ಸಂಸ್ಥೆಯೇ "ಈಟ್ ಅಂಡ್ ​​ಗೋ ". ಬ್ಯುಸಿಲೈಫ್​​ ಸ್ಟೈಲ್​​ನಲ್ಲಿ ಬ್ರೇಕ್​​ಫಾಸ್ಟ್​ ಮಾಡೋ ಬೆಂಗಳೂರಿನ ಮಂದಿಗೆ ಬೆಳಗಿನ ಉಪಹಾರವನ್ನು ತಯಾರಿಸೋ ಸಂಸ್ಥೆ ಇದು.

2015 ರಲ್ಲಿ ಉದಿತ್​​​ ಸರಣ್​​ ಮತ್ತು ತರುರಾಜ್​​ ಅಗರ್ವಾಲ್​​ ಸ್ವಂತ ವ್ಯಾಪಾರ ಆರಂಭಿಸೋ ಯೋಚನೆ ಮಾಡಿದ್ರು. ವಿವಿಧ ಆಹಾರ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿತ್ತು. ಜೊತೆಗೆ ಮಿಂತ್ರ ಮತ್ತು ಕ್ಯಾಪಿಲರಿ ಟೆಕ್ನಾಲಜಿಯಲ್ಲಿ ದುಡಿಮೆಫಲ ನೀಡಿತ್ತು.

ಹಸಿವು ಒಳ್ಳೆಯದು

ಈ ಇಬ್ಬರು ಮಿತ್ರರು ಬೆಂಗಳೂರಿನಲ್ಲಿ ಒಟ್ಟಿಗೆ ಕೆಲಸಮಾಡುವಾಗ ಸತ್ಯದರ್ಶನವಾದ ಈ ಘಟನೆಯೇ ಆಶ್ಚರ್ಯಕರ. ಕೆಲಸದ ಹೊರೆ ಜೊತೆಗೆ ಕಡಿಮೆ ನಿದ್ದೆ, ಅಡುಗೆ ಮಾಡಿಕೊಳ್ಳಲು ಸಮಯದ ಅಭಾವದಿಂದ ಗೆಳೆಯರಿಬ್ಬರು ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಆಫೀಸ್​​ಗೆ ಹೋಗಬೇಕಿತ್ತು. ತಮ್ಮಂತೆ ಎಷ್ಟೋ ಜನ ಬ್ರೇಕ್​​ಫಾಸ್ಟ್​​​ ಮಿಸ್​​ ಮಾಡೋದನ್ನು ಕಂಡು ಎಲ್ಲರ ಫಾಸ್ಟಿಂಗ್ ಅನ್ನು ಬ್ರೇಕ್​​ಮಾಡಲು ನಿರ್ಧರಿಸಿದರು. ಆ ಕ್ಷಣದಲ್ಲೇ ಬೆಲ್​​ ಬಾರಿಸಿದಂತೆ ಹೊಳೆದ ಐಡಿಯಾ "ಈಟ್ ಅಂಡ್​​ ಗೋ "!

ಈಟ್ ಅಂಡ್​​ ಗೋ ಜರ್ನಿ

ಆರಂಭದ ದಿನಗಳಲ್ಲಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಆರ್ಥಿಕ ನೆರವಿನಿಂದ ಪ್ರಾರಂಭವಾದ ಈಟ್ ಅಂಡ್​ ಗೋ ! ಸದ್ಯ ಜಿಎಸ್ಎಫ್ ಆಕ್ಸಲೇಟರ್ಸ್​ನ ರಾಜೇಶ್​​ ಸಾವ್ನಿ, ವರುಣ್​​ ಜವಾರ್​​ ಮತ್ತು ಶೆಫ್​​ ಬಾಸ್ಕೆಟ್​​ನ ನಿತಿನ್​​​​​​​​​​​ ಕಟಿಯಾಲ್​​​ ಸಹಕಾರದಿಂದ ಮುನ್ನಡೆಯುತ್ತಿದೆ.

ಫೆಬ್ರವರಿಯಲ್ಲಿ ಸುಮಾರು 8 ಜನರೊಂದಿಗೆ ಆರಂಭವಾದ ಸಂಸ್ಥೆಯಲ್ಲಿ ಈಗ 30 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. 12 ಜನ ಡೆಲಿವರಿಬಾಯ್ಸ್​​ ಮತ್ತು 12 ಶೆಫ್​​ಗಳು ಕೆಲಸ ನಿರ್ವಹಿಸುತ್ತಿದ್ದಾರೆ.

ಒಂದು ವಾರದಲ್ಲೇ 100-150 ಆರ್ಡರ್​​ಗಳಿಗೆ ಬಂದ ಬೇಡಿಕೆ ಆತ್ಮವಿಶ್ವಾಸವನ್ನುಹೆಚ್ಚಿಸಿತು. ಅಂದಿನಿಂದ ಪ್ರಾರಂಭವಾದ ಈಟ್ ಅಂಡ್​ ಗೋ ಜರ್ನಿ ವಾರಕ್ಕೆ 2,500 ಆರ್ಡರ್​​ಗಳನ್ನು ನಿಭಾಯಿಸುವಷ್ಟು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದೆ. ತಿಂಗಳಿಂದ ತಿಂಗಳಿಗೆ 50 % ಅಭಿವೃದ್ಧಿಯಾಗುತ್ತಲೇ ಇದೆ. ಇವತ್ತಿಗೆ 3,000 ಜನ ಗ್ರಾಹಕರನ್ನು ಒಳಗೊಂಡಿದೆ. ಅದರಲ್ಲೂ 60% ಹಳೆಯ ಗ್ರಾಹಕರದೇ ಮೇಲುಗೈ. ಅಷ್ಟೇ ಅಲ್ಲದೇ ಕಂಪನಿ 8 ಲಕ್ಷ ಆದಾಯಗಳಿಸುತ್ತಿರೋ ದಾಖಲೆ ಇದೆ.

ಮುಂದಿನ ಆಗಸ್ಟ್​​​ ಹೊತ್ತಿಗೆ ಮೊದಲ ಸುತ್ತಿನ ಫಂಡಿಂಗ್​​ಗೆ ಮುಕ್ತಾಯ ಹಾಡುತ್ತಿದೆ. ಮುಂದಿನ ದಿನಗಳಲ್ಲಿ ಒಂದು ಮಿಲಿಯನ್​​ ಪಂಡಿಂಗ್​​ನ ನಿರೀಕ್ಷೆಯಲ್ಲಿದ್ದಾರೆ. ಆ ಮೂಲಕ ಉದ್ಯೋಗ ಅವಕಾಶ, ಮಾರುಕಟ್ಟೆಯಲ್ಲಿ ಸೇವೆ ಹೆಚ್ಚಿಸೋ ಯೋಜನೆಯಲ್ಲಿದ್ದಾರೆ. ಕಳೆದ 2 ತಿಂಗಳಲ್ಲಿ 8 ಹೊಸ ಬಗೆಯ ರುಚಿಯನ್ನು ಪರಿಚಯಿಸಿದ್ದಾರೆ, ಅಲ್ಲದೇ 36 ಖಾದ್ಯಗಳನ್ನು ತನ್ನ ಮೆನು ಕಾರ್ಡಿನಲ್ಲಿ ನೀಡುತ್ತಿದೆ ಈಟ್ ಅಂಡ್​​ ಗೋ.

ಹೀಗೆ ಯಶಸ್ಸಿನ ಹಾದಿಯಲ್ಲಿರುವ ಈಟ್ ಅಂಡ್​​ ಗೋ ತನ್ನ ಸಂಸ್ಥೆಯನ್ನು ಬೆಂಗಳೂರಿನ ದಕ್ಷಿಣ ಭಾಗಕ್ಕೂ ವಿಸ್ತರಿಸೋ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ. ಮಾರತ್ತಳ್ಳಿ, ಹೆಚ್ಎಸ್ಆರ್​​ ಲೇ ಔಟ್, ಕೋರಮಂಗಲ, ಎಲೆಕ್ಟ್ರಾನಿಕ್​​ಸಿಟಿ, ಸರ್ಜಾಪುರ್ರೋಡ್​​ ಮತ್ತು ವೈಟ್​​ಫೀಲ್ಡ್​​ಗೆ ಸಪ್ಲೈ ಕೊಡುವ ಯೋಚನೆಯಲ್ಲಿದೆ. ಸದ್ಯ ಇಂದಿರಾನಗರ, ಹಲಸೂರ್, ಕೋಡಿಹಳ್ಳಿ, ಮುರುಗೇಶಪಾಳ್ಯ, ದೊಮ್ಮಲೂರಿನ ಜನರಿಗೆ ಈ ಸೌಲಭ್ಯ ಸಿಗುತ್ತಿದೆ. ಇದರೊಟ್ಟಿಗೆ ಮೊಬೈಲ್ ಆ್ಯಪ್​​​ ಆಂಡ್ರಾಯ್ಡ್​​ ಮತ್ತು ಓಎಸ್​​ನಲ್ಲಿ ಮೊಬೈಲ್ ಆ್ಯಪ್​​ ತರುವ ಚಿಂತನೆಯಲ್ಲಿದೆ.

ಉಳಿದವರಿಗಿಂತ ಈಟ್ ಅಂಡ್​​ ಗೋ ಭಿನ್ನ ಅನ್ನೋದನ್ನ ಸಹ ಸಂಸ್ಥಾಪಕ ತರು ಹೇಳೋದು ಹೀಗೆ, ಅತ್ಯುತ್ಕೃಷ್ಟ ಅಡುಗೆಗಳು ಮತ್ತು ಅದಕ್ಕೆ ಬಳಸುವ ಪದಾರ್ಥಗಳು ನಮ್ಮನ್ನ ವಿಭಿನ್ನವಾಗಿ ನಿಲ್ಲಿಸಿದೆ ಎನ್ನುತ್ತಾರೆ. ನಾವು ನೀಡುವ ಖಾದ್ಯಗಳನ್ನು ಕೆಡದಂತೆಯೂ ಇಡಬಹುದು. ಅಲ್ಲದೇ ಬಳಸುವ ಮಸಾಲೆ ಪದಾರ್ಥಗಳು ಕೂಡ ಮನೆಯಲ್ಲೇ ಮಾಡಿದ್ದಾಗಿದೆ. ಆದ್ದರಿಂದ ಶೆಫ್​​ಗಳು ಬದಲಾದರೂ ಅಡುಗೆಯ ರುಚಿ ಮತ್ತು ಗುಣಮಟ್ಟದಲ್ಲಿ ವ್ಯತ್ಯಾಸವಾಗುವುದಿಲ್ಲ. ಇನ್ನು ಖಾದ್ಯಗಳನ್ನು ಡೆಲಿವರಿ ಮಾಡುವುದರಲ್ಲೂ ಯಾವುದೇ ರಾಜಿ ಇಲ್ಲ. ಆ ಮೂಲಕ ಗ್ರಾಹಕರ ಬೇಡಿಕೆಗಳನ್ನುಅರಿತು ಸ್ಪಷ್ಟವಾಗಿ ನೀಡುತ್ತೇವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನಾವು ಬಳಸುವ ಪದಾರ್ಥಗಳು ಅದರ ಮೂಲ ಸ್ಥಳದಿಂದಲೇ ತರಿಸಿಕೊಳ್ಳುತ್ತೇವೆ. ಉದಾಹರಣೆಗೆ ಲಿಟ್ಟಿಚೋಖಾಕ್ಕೆ ಬೇಕಾದ ಪದಾರ್ಥವನ್ನು ಬಿಹಾರ್​​ನಿಂದ , ಪೋಹಾಗೆ ಅಗತ್ಯವಾದ ಮಸಾಲೆಯನ್ನು ಮತ್ತು ಅಕ್ಕಿಯನ್ನುಇಂಧೋರ್​​ನಿಂದ ತರಿಸಿಕೊಳ್ಳುತ್ತೇವೆ. ಇದು ರುಚಿಗೆ ಒಂದು ಸ್ಪಷ್ಟ ಸ್ವಾದವನ್ನು ತಂದುಕೊಡುತ್ತದೆ.

ಕಲಿಕೆ ನಿರಂತರ

"ತಪ್ಪುಗಳು ಮತ್ತು ಅದರಿಂದ ಕಲಿಯುವುದು ಸಂಸ್ಥೆಯನ್ನು ಮತ್ತಷ್ಟು ಸಮೃದ್ಧಿಗೊಳಿಸಿದೆ. ಸಂಸ್ಥೆಯನ್ನು ಇನ್ನಷ್ಟು ವಿಭಿನ್ನವಾಗಿ ನಡೆಸೋ ಯತ್ನದಲ್ಲಿ ಬಹಳಷ್ಟು ಜನ ಶೇರುದಾರರನ್ನು ಒಳಗೊಂಡು ಅವರಿಂದ ತುಂಬಾ ಕಲಿತಿದ್ದೇವೆ ಎನ್ನವುದು ಈಟ್​ ಅಂಡ್​ ಗೋ ಫೌಂಡರ್​​ಗಳ ಅಭಿಮತ.

" ನಮ್ಮ ಸಂಸ್ಥೆ ದಿನದಿನಕ್ಕೂ ಬೆಳವಣಿಗೆ ಹೊಂದುತ್ತಿರುವುದನ್ನು ನೋಡುವುದು ನಿಜಕ್ಕೂ ಅಧ್ಭುತ ಅನುಭವ. ಸುತ್ತಲೂ ಈ ವಾತಾವರಣವನ್ನು ಒಮ್ಮೆ ಗಮನಿಸಿದರೆ ನಿಜಕ್ಕೂ ಪಾಸಿಟಿವಿಟಿ ಕಾಣುತ್ತದೆ. ಅಸಾಧ್ಯವಾದ ಸಾಧ್ಯತೆಗಳನ್ನು ಮಾಡುವ ಹುಮ್ಮಸ್ಸು ಮೂಡುತ್ತೆ. ಇಷ್ಟೇ ಅಲ್ಲದೇ ಬ್ರೇಕ್​ಫಾಸ್ಟ್​​ಗೆ ಮತ್ತೊಂದು ಹೆಸರೇ ಈಟ್ ಅಂಡ್​​ ಗೋ ಆಗಬೇಕು. ಈ ನಿಟ್ಟಿನಲ್ಲಿ ಯೋಚನೆಯಲ್ಲಿದ್ದೆವೆ. ಜೊತೆಗೆ ಸ್ನ್ಯಾಕ್ಸ್​​ಗಳನ್ನು ಪಾಲುದಾರಿಕೆಯಲ್ಲಿ ಆರಂಭಿಸೋ ಯೋಚನೆಯಲ್ಲಿದ್ದೆವೆ.

ನಾವೂ ಇದ್ದೇವೆ..!

ಏಪ್ರಿಲ್​​ನಲ್ಲಿ 17 ಆಹಾರ ಸಂಸ್ಥೆಗಳು ಆರಂಭವಾಗಿವೆ. ಫುಡ್​​ ಟೆಕ್ನಾಲಜಿಗೆ ಬೆಂಗಳೂರಿನಲ್ಲಿ ತುಂಬಾ ಸ್ಪರ್ಧೆಗಳಿವೆ. ಇಲ್ಲಿ ಸ್ವಲ್ಪ ಕಷ್ಟ ಆದ್ರೂ ಮನಸಿದ್ದರೆ ಮಾರ್ಗವಿದೆ. ಟೈನಿಔಲ್, ಫ್ರೆಶ್​​ಮೆನು ನಂತಹ ಫುಡ್​​ ಟ್ರೆಂಡ್​​ ಸೆಟ್ಟರ್​​ಗಳು ದೊಡ್ಡ ಸ್ಪರ್ಧೆಯಲ್ಲಿದ್ದಾರೆ. ಆದರೆ ಸಾಂಪ್ರದಾಯಿಕ ಆಹಾರಗಳಿಗೆ ಬೇಡಿಕೆ ಇದ್ದೇ ಇರುತ್ತದೆ.