ಆಲ್ ಓಕೆ...ಕನ್ನಡದ ಅಲೋಕ್..!

ಪೂರ್ವಿಕಾ

1

ಅಲೋಕ್ ಬಾಬು. ಕನ್ನಡದ rapಸಾಂಗ್​​ಗಳ ಸರದಾರ. ಕನ್ನಡದ ಪ್ರತಿಭೆಗಳು ಯಾರಿಗೂ ಕಡಿಮೆ ಇಲ್ಲ. ನಾವು rap ಸಾಂಗ್​​ ಮಾಡ್ತಿವಿ ಅನ್ನೋದನ್ನರಾಜ್ಯದ ಜನತೆಗೆ ತೋರಿಸಿಕೊಟ್ಟ ನಟ, ಗಾಯಕ, ನಿರ್ದೇಶಕ ಅಲೋಕ್​​​. ಅರ್ಬನ್ ಲ್ಯಾಡ್ಸ್​​ ಅನ್ನೋ ಟೀಮ್​​ ಕಟ್ಟಿ ವಿಧವಿಧವಾದ rap ಸಾಂಗ್​​ಗಳನ್ನ ನಿರ್ದೇಶನ ಮಾಡೋದ್ರ ಜೊತೆಗೆ ಕನ್ನಡವನ್ನ ವಿಶ್ವಮಟ್ಟಕ್ಕೆ ಹರಡಬೇಕು ಅನ್ನೋ ಹಂಬಲವನ್ನ ಇಟ್ಟುಕೊಂಡಿರೋ ಕನ್ನಡದ ಕುವರ. ಈಗಾಗ್ಲೆ ಸಾಕಷ್ಟು rap ಸಾಂಗ್ ನೀಡಿರೋ ಅಲೋಕ್ ಸದ್ಯ ತಮ್ಮ ಮತ್ತೊಂದು ಟೀಂ ಆಲ್ ಓಕೆ ಮೂಲಕ ಹೆಂಗೆಂಗೋ ಅನ್ನೋ ಶೀರ್ಷಿಕೆಯಡಿಯಲ್ಲಿ ಕನ್ನಡದ rap ಹಾಡನ್ನರಿಲೀಸ್ ಮಾಡಿದ್ರು. ಇದಾದ ಬೆನ್ನಲ್ಲೆ ಈಗ ರಾಜ್ಯೋತ್ಸವದ ಅಂಗವಾಗಿ ಹೊಸದೊಂದು rap ಸಾಂಗ್‍ ಜನತೆಗಾಗಿ ರೆಡಿಯಾಗಿದೆ.

ಹ್ಯಾಷ್‍ ಟ್ಯಾಗ್‍ ಕನ್ನಡ(#ಕನ್ನಡ),ಹ್ಯಾಷ್​ ಕನ್ನಡ (#ಕನ್ನಡ)ದ ಮೂಲಕ ಕನ್ನಡವನ್ನ ವಿಶ್ವ ಮಟ್ಟಕ್ಕೆ ತಲುಪಿಸಬಹುದು ಅನ್ನೋ ಉದ್ದೇಶದಿಂದ ಈ ಹೊಸ rapಸಾಂಗ್ ಗೆ ಹ್ಯಾಷ್‍ ಟ್ಯಾಗ್‍ ಕನ್ನಡ ಅಂತ ಟೈಟಲ್‍ ಇಡಲಾಗಿದೆ. ಈ ಕಾಂನ್ಸೆಪ್ಟ್ ಸಾಕಷ್ಟು ಹಿಂದೆಯೇ ಹುಟ್ಟಿಕೊಂಡಿದ್ದು ಅದಕ್ಕೆ ಒಂದು ರೂಪ ಸಿಕ್ಕಿದ್ದು ಈಗ ಅಂತಾರೆ ಅಲೋಕ್. ಸನ್​​ನೆಟ್​​ವರ್ಕ್​ ಹಾಗೂ ವಾರ್ತಾ ಇಲಾಖೆಯ ಅಡಿಯಲ್ಲಿ ನಿರ್ಮಾವಾಗಿರೋ ಹ್ಯಾಷ್‍ಟ್ಯಾಗ್‍ಕನ್ನಡ(#ಕನ್ನಡ) ವಿಡಿಯೋದಲ್ಲಿ ಕನ್ನಡದವ್ರಿಗೆ ಕನ್ನಡದ ಪ್ರಾಮುಖ್ಯತೆಯನ್ನ ತಿಳಿಸೋ rapಸಾಂಗ್‍ ಇದಾಗಿದೆ.

ಈ ಹಾಡಿಗೆ ಕಾಂನ್ಸೆಪ್ಟ್, ಡೈರೆಕ್ಷನ್ ಹಾಗೂ ಸಂಗೀತ ಎಲ್ಲವೂ ಅಲೋಕ್ ಬಾಬು ಅವರೇ ಮಾಡಿದ್ದು ಈ ಹಿಂದೆ ಹೆಂಗೆಂಗೂ ಟೀಂ ನಲ್ಲಿ ಕೆಲಸ ಮಾಡಿದ್ದ ಎಲ್ಲರೂ(#ಕನ್ನಡ) ಹ್ಯಾಷ್‍ಕನ್ನಡ rap ಸಾಂಗ್‍ ತಯಾರಿಗೆ ಕೈಜೋಡಿಸಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಹಾಗೂ ಸಿಟಿಯಲ್ಲಿ ಈ ಹಾಡಿನಚಿತ್ರೀಕರಣ ನಡೆದಿದ್ದು ಕರ್ನಾಟಕ ಪ್ರಸಿದ್ದ ಪ್ರವಾಸಿ ತಾಣಗಳು ಇಲ್ಲಿ ಕಾಣ ಸಿಗುತ್ತವೆ.

ಸಾಮಾನ್ಯವಾಗಿ ರಾಜ್ಯೋತ್ಸವ ಅಂದ ತಕ್ಷಣ ಇಂತಹ ಸಾಕಷ್ಟು ಹಾಡುಗಳು ರಿಲೀಸ್‍ ಆಗ್ತಿರುತ್ತೆ. ಆದ್ರೆ ಈ ಸಾಂಗ್​​ನ ವಿಶೇಷ ಅಂದ್ರೆ ಇದು ಯೂತ್​​ ಫುಲ್‍ರ್ಯಾಪ್ ಸಾಂಗ್. ಕನ್ನಡದ rap ಸ್ಟಾರ್‍ ಅಂತಾನೇ ಫೇಮಸ್‍ ಆಗಿರೋ ಅಲೋಕ್ ಇಂದಿನ ಯುವಕರಿಗೆ ಇಷ್ಟವಾಗುವಂತ ಕಾಂನ್ಸೆಪ್ಟ್ ನಲ್ಲಿಈ ಹಾಡನ್ನ ರೆಡಿ ಮಾಡಿದ್ದಾರೆ. ಈ ಹಾಡು 5 ನಿಮಿಷ 40 ಸೆಕೆಂಡ್​​ಗಳಿದೆ. ಕನ್ನಡ ಮತ್ತು ಇಂಗ್ಲೀಷ್ ಪೇಪರ್‍ ತೂಕಕ್ಕೆ ಹಾಕುವಾಗ ಬರೋ ಡಿಫ್ರೇಷಿಯೇಶನ್​​ನಿಂದ ಹಾಡು ಪ್ರಾರಂಭವಾಗಿ ಕನ್ನಡವನ್ನ ಮೊದಲು ಕನ್ನಡಿಗರು ಮಾತನಾಡ್ಬೇಕು ಅನ್ನೋ ಸಂದೇಶದಿಂದ ಮುಕ್ತಾಯವಾಗುತ್ತೆ.

ಅದೇ ಹಳೆ ಹಾಡು ,ರೀಮಿಕ್ಸ್​​​ಗಳ ಮಧ್ಯೆ ಏನಾದ್ರು ವಿಭಿನ್ನವಾಗಿ ಕೊಟ್ರೆ ಮಾತ್ರ ಜನ ಅದನ್ನ ಸ್ವೀಕರಿಸ್ತಾರೆ ಹಾಗೆ ಹಾಡಿನಲ್ಲಿ ಹೇಳಿರೋ ವಿಚಾರವನ್ನೂ ತಿಳಿದುಕೊಳ್ತಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡವನ್ನ ಮಾತನಾಡುವ ಜನರ ಕಡಿಮೆ ಆಗಿದ್ದಾರೆ. ಅದ್ರಲ್ಲೂ ಕನ್ನಡದವರೇ ಕನ್ನಡ ಮಾತನಾಡದೇ ಬೇರೆ ಭಾಷೆ ಮಾತನಾಡಿದ್ರೆ ಬೇರೆಯವ್ರಿಗೆ ಕನ್ನಡದ ಪರಿಚಯ ಕೂಡ ಆಗಲ್ಲ. ಆದರಿಂದ ನಾವು ಕನ್ನಡ ಮಾತನಾಡ್ಬೇಕು ಅನಂತರ ಮತ್ತೊಬ್ಬರಿಗೆ ಕನ್ನಡದ ಬಗ್ಗೆ ತಿಳಿಸಬೇಕು ಅನ್ನೋದು ಅಲೋಕ್‍ ಅವರ ಮಾತು.

ಇನ್ನೂ ಈ rap ಸಾಂಗ್​​ನಲ್ಲಿ ಅಲೋಕ್ ಬಾಬು ಸೇರಿದಂತೆ ಚಿತ್ರನಟ ಪ್ರಶಾಂತ್ ಸಿದ್ದಿ ,ಎಂ. ಸಿ. ಬಿಜ್ಜು, ಮಾರ್ಟಿನ್‍ಯೋ, ಇನ್ನೂಅನೇಕರು ಕಾಣಿಸಿಕೊಂಡಿದ್ದಾರೆ. ಕನ್ನಡವನ್ನೇ ಮಾತನಾಡಲು ಹಿಂದು ಮುಂದು ನೋಡೋ ಅಂತಹವರು ಒಮ್ಮೆ ಈ ಹಾಡನ್ನ ನೋಡಲೇ ಬೇಕು..ಅಷ್ಟರ ಮಟ್ಟಿಗೆ ಕನ್ನಡವನ್ನ ಸ್ವಷ್ಟವಾಗಿ ಹಾಗೂ ವೇಗವಾಗಿ ಹಾಡಬಹುದು ಅಂತ ಈ ಹಾಡನ್ನ ನೋಡಿದ ನಂತ್ರ ಆಶ್ಚರ್ಯ ಆಗೋದ್ರಲ್ಲಿ ಅನುಮಾನವಿಲ್ಲ.

ಇನ್ನೂ rapಸಾಂಗ್ ನಲ್ಲಿ ಕನ್ನಡ ಹಾಗೂ ಕರ್ನಾಟಕದ ಇತಿಹಾಸವನ್ನೂ ಕೂಡ ಹೇಳಲಾಗಿದೆ. ಎಲ್ಲಾ ಭಾಷೆಯನ್ನ ಪ್ರೀತಿಸಿ ,ಆದ್ರೆ ಕನ್ನಡಕ್ಕೆ ಪ್ರಾಮುಖ್ಯತೆ ನೀಡಿ ಅನ್ನೋದನ್ನ rap ಶೈಲಿಯಲ್ಲಿ ತಮ್ಮದೇಯಾದ ಸ್ಟೈಲ್​​ನಲ್ಲಿ ಹೇಳಿದ್ದಾರೆ. ರನ್ನ ,ಪಂಪ ಅವರಿಂದ ಹಿಡಿದು ಹಾಡಿನಲ್ಲಿ ರಾಜ್​​ಕುಮಾರ್ ವರೆಗೂ ಎಲ್ಲರೂ ನೆನಪಿಗೆ ಬಂದು ಹೋಗ್ತಾರೆ. ಹ್ಯಾಷ್‍ಕನ್ನಡ(#ಕನ್ನಡ) rap ಸಾಂಗ್‍ ಅಪ್​ಲೋಡ್‍ ಆದ ಒಂದೇ ದಿನದಲ್ಲಿ 14 ಸಾವಿರ ಜನ ಮೆಚ್ಚಿಕೊಂಡಿದ್ದಾರೆ. ಹೊಸ ರೀತಿಯ rap ಸಾಂಗ್ ಸದ್ಯ ಯೂಟ್ಯೂಬ್​​ನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯೋದು ಖಾತ್ರಿ ಆಗಿದೆ.

ಅಲೋಕ್ ಬಾಬು ಮಾತು

ಈ ಹಿಂದೆಯೂ ಸಾಕಷ್ಟು ಹಾಡುಗಳನ್ನ ಮಾಡಿದ್ದೇನೆ. ಆದ್ರೆ ಕನ್ನಡ rap ಸಾಂಗ್ ಮಾಡಬೇಕು ಅಂತ ಅಂದಾಗ ಅದು ವಿಶ್ವಮಟ್ಟಕ್ಕೆ ಫೇಮಸ್‍ ಆಗ್ಬೇಕು ಅನ್ನೋ ಆಸೆ ಇತ್ತು. ಇದೇಕಾರಣದಿಂದ ಹ್ಯಾಷ್‍ಟ್ಯಾಗ್‍(#ಕನ್ನಡ) ಇಟ್ಟು ಮಾಡಿದ್ರೆ ಸರ್ಚ್ ಮಾಡೋ ಎಲ್ಲರಿಗೂ ಉಪಯೋಗ ಆಗುತ್ತೆ ಅನ್ನೋದು ಗೋತ್ತಾಯ್ತು. ಆದ್ರಿಂದ ಟೀಮ್​​ನ ಎಲ್ಲರೂ ಸೇರಿ ಈ rapಸಾಂಗ್‍ ಅನ್ನ ಮಾಡಿದ್ದೀವಿ. ಈಗ ಜನ ಕೂಡ ಮೆಚ್ಚಿಕೊಂಡಿದ್ದಾರೆ, ತುಂಬಾ ಖುಷಿ ಆಗುತ್ತಿದೆ. ಈ ಅಭಿಮಾನ ಪ್ರೀತಿ ಇನ್ನೂ ಈ ರೀತಿ ಸಾಕಷ್ಟು rap ಸಾಂಗ್​​ಗಳನ್ನ ಮಾಡೋಕೆ ಸ್ಪೂರ್ತಿ ಸಿಕ್ಕಂತಾಗಿದೆ ಅಂತ ಮಾತು ಮುಗಿಸುತ್ತಾರೆ ಅಲೋಕ್​​ ಬಾಬು.