ವಿಶಿಷ್ಟವಾದ ವ್ಯಾಪಾರದಲ್ಲಿ ಯಶಸ್ಸಿನ ದಾರಿ ಹಿಡಿದ ಅರ್ಪಿತಾ..!

ಟೀಮ್​​ ವೈ.ಎಸ್​​.

0

ನೀವು ಯಾವತ್ತಾದ್ರೂ ಬಟರ್ ಕಫ್ಸ್ ಬಗ್ಗೆ ಕೇಳಿದ್ದೀರಾ..? ಸದ್ಯ ಭಾರತದಲ್ಲಿ ಅತ್ಯಂತ ನವೀನ ಒಳ ಉಡುಗೆ ಬೂಟೀಕ್ಸ್ ಗಳಲ್ಲಿ (ಆಫ್ಲೈ ನ್ ಮತ್ತು ಆನ್ಲೈ ನ್) ಇದು ಕೂಡಾ ಒಂದಾಗಿದೆ. ವಿಶ್ವದ ಅತ್ಯುತ್ತಮ ಮೇಲ್ವಿಚಾರಿತವಾಗಿರುವ ಒಳ ಉಡುಗೆಗಳ ಬ್ರಾಂಡ್ ಗಳಿಂತ ಬಟರ್ ಕಫ್ಸ್ ಒದಗಿಸುವ ಒಳ ಉಡುಗೆಯ ಬ್ಯೂಟಿಕ್ಸಗೂ ತುಂಬಾನೆ ವ್ಯತ್ಯಾಸವಿದೆ. ಗ್ರಾಹಕರ ಅವಶ್ಯಕತೆ ತಿಳಿದು ಅವರ ಗಾತ್ರಕ್ಕೆ ತಕ್ಕಂತೆ ಹಾಗೂ ಸರಿಯಾಗಿ ಫಿಟ್ ಆಗುವ ಹಾಗೆ ಸೂಕ್ಷ್ಮದರ್ಶಿ ಮಹಿಳೆಯರಿಗೆ ಇದು ಪೂರೈಸುತ್ತದೆ.

ಈ ಕಥೆಯನ್ನು ಹೇಳಲು ನಮಗೆ ಸ್ಫೂರ್ತಿಯಾದ ಬಟರ್ ಕಫ್ಸ್ ನ ಭಾವೋದ್ರಿಕ್ತ ಉದ್ಯಮಿಯ ಬಗ್ಗೆ ತಿಳಿದುಕೊಳ್ಳೋಣ.

ಅರ್ಪೀತಾ ಗಣೇಶ, ಸರ್ವೋತ್ಕೃಷ್ಟ ವಾಣಿಜ್ಯೋದ್ಯಮಿಯ ಪ್ರಯಾಣವು ಸರಳವಾಗಿರಲಿಲ್ಲ. ಇವರು ಹಲವಾರು ಏರಿಳಿತವನ್ನು ಕಂಡವರು. ಆದ್ರೂ ಸಹ ಯಾವುದಕ್ಕೂ ಹೆದರಲಿಲ್ಲ. ಮಹಿಳೆಯರು ತಮ್ಮನ್ನು ಮತ್ತು ತಮ್ಮ ದೇಹಗಳನ್ನು ಗ್ರಹಿಸುವ ರೀತಿ ಬದಲಾಯಿಸಲು ಒಂದು ಮಿಶನ್ ಮಾಡಿದ್ರು. ಚಾಂಟೆಲ್ಲೆಯಿಂದ ಔಪಚಾರಿಕ ತರಬೇತಿ ಹೊಂದಿರುವ ಅರ್ಪಿತಾ, ಭಾರತ ಮಹಿಳೆಯರ ಒಳ ಉಡುಗೆ ವಿಚಾರದಲ್ಲಿ ತಮ್ಮ ದಾರಿಯನ್ನು ಬದಲಾಯಿಸಿಕೊಳ್ಳುವಂತೆ ಮಾಡಿದ್ದಾರೆ.

ಅರ್ಪಿತಾ ಗಣೇಶ ಹಾದಿ ಸುಖಕರವಾಗಿರಲಿಲ್ಲ. ಅದು ದೀರ್ಘ ಮತ್ತು ಕಷ್ಟಕರ ಪಯಣವಾಗಿತ್ತು. ಭಾರತದಲ್ಲಿ ಇದಕ್ಕೆ ನಿಷೇಧವಿದ್ದು, ಇದೊಂದು ಸವಾಲಾಗಿತ್ತು. ಭಾರತದ ಜನರ ಮನೋಭಾವನ್ನು ಬದಲಾಯಿಸಲು ಮತ್ತು ಉನ್ನತ ಶಿಕ್ಷಣ ಪಡೆದೂ ಸಹ, ಇದರ ಬಗ್ಗೆ ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಿದ್ದ ಮಹಿಳೆಯರಿಗೆ ತಿಳುವಳಿಕೆ ಮೂಡಿಸುವ ಗುರುತರ ಜವಾಬ್ದಾರಿ ಆಕೆಯ ಮೇಲಿತ್ತು.

ಹೂಡಿಕೆದಾರರಲ್ಲಿ ಕೆಲ ಪುರುಷರು ನಮ್ಮ ಉತ್ಪನ್ನಗಳ ಬಗ್ಗೆ ಎಂದೂ ಸಂಬಂಧ ಹೊಂದಿರುವುದಿಲ್ಲ. ಆದ್ದರಿಂದ ಅವರಿಗೆ ವಿವರಿಸಲು ಪ್ರಯತ್ನಿಸುವುದು ಸವಾಲಾಗಿತ್ತು. ಅಲ್ಲದೆ, ವ್ಯವಹಾರವನ್ನ ಲಾಭಧಾಯಕವಾಗಿ ಮತ್ತು ತ್ವರಿತವಾಗಿ ಬೆಳೆಸಲು ಗಮನ ಹರಿಸಲಾಯಿತು.

ಇದು ನನ್ನ ಪ್ರಮುಖ ಬೆಳವಣಿಗೆ ಆಗಿದ್ದು, ಇಂದು ನಾನು ಈ ಹಂತಕ್ಕೇರಲು ಕಾರಣವಾಯಿತು. ನಾನು ಬಟರ್ ಕಫ್ಸ್ ಜೀವನಕ್ಕೆ ಬೇಕೆ ಬೇಕು ಎಂದು ನಂಬುವ ಗ್ರಾಹಕರನ್ನು ಹೊಂದಿದ್ದೆನೆ. ಹಾಗೂ ಅವರು ಹೊರ ಹೋಗಿ ಏನು ಬೇಕಾದ್ರೂ ಮಾಡಬಲ್ಲರು. ಅಂತರರಾಷ್ಟ್ರೀಯ ಒಳ ಉಡುಗೆಯ ಪ್ರಪಂಚದಲ್ಲಿ ನನಗೆ ‘ಇಂಡಿಯನ್ ಬ್ರಾ ಲೇಡಿ’ ಎಂದು ಪ್ರಖ್ಯಾತಿ ಇದೆ. ನಾನದನ್ನ ಪ್ರೀತಿಸುತ್ತೇನೆ ಅನ್ನುತ್ತಾರೆ ಅರ್ಪಿತಾ ಗಣೇಶ.

ಮಹಿಳೆಯರು ಭಾರತದಲ್ಲಿ ಲಭ್ಯವಿರುವ ಬ್ರಾಂಡ್ ಮತ್ತು ತಮ್ಮ ಸರಿಯಾದ ಸೈಜ್ ಗಳ ಬಗ್ಗೆ ತಿಳಿದುಕೊಳ್ಳಲು ಒಂದು ಅಪ್ಲಿಕೇಶನ್ ಪ್ರಾರಂಭಿಸಲಾಗಿದ್ದು, ಇದು ನನ್ನ ಮುಕುಟಕ್ಕೆ ಮತ್ತೊಂದು ದೊಡ್ಡ ಗರಿಯಾಗಿತ್ತು. ನನ್ನ ಗುರಿಯನ್ನ ಕಂಡ ಮತ್ತು ಸಹಾಯ ಮಾಡಲು ಬಯಸಿದ ಉದ್ಯಮಿಗಳಿಂದ ಈ ಅಪ್ಲಿಕೇಶನ್ ನಿರ್ಮಾಣವಾಯಿತು.

ವಿಶ್ವದಾದ್ಯಂತ 3000 ಮಹಿಳೆಯರು ನನ್ನ ಬ್ಲಾಗ್ ಗೆ ಚಂದಾದಾರರಾಗಿದ್ದಾರೆ. ನನ್ನ www.abrathatfits.com ಶ್ಲಾಘನೀಯವಾಗಿದೆ. ನನ್ನ ಬ್ಲಾಗ್ ನ್ನು ನಾನೇ ನಿರ್ವಹಿಸುತ್ತೆನೆ. ಅದನ್ನ ಸೆಟ್ ಮಾಡಲು ಹಾಗೂ ಅದು ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ತೋರಿಸಲು, ಸಮಯ ನೀಡಿದ ಉದ್ಯಮಿಗಳಿಂದ ನಾನು ಕಲಿತೆ ಅನ್ನು ಅರ್ಪಿತಾ ಗಣೇಶ್.

ನಾನು ಕಳೆದ ಆರು ವರ್ಷಗಳಿಂದ ಅತ್ಯಂತ ಪ್ರಸಿದ್ಧ ಒಳ ಉಡುಗೆಗಳ ಕಂಪನಿಗಳು ಮತ್ತು ಬ್ರಾಂಡ್ ಗಳನ್ನ (ಎಂ & ಎಸ್ Fredericks) ಸಂಪರ್ಕಿಸಿ ಸಾಕಷ್ಟು ಜ್ಞಾನ ಪಡೆದುಕೊಂಡೆ. ನಾನು ಸಾಮಾಜಿಕ ನಿಯಂತ್ರಣ ಮತ್ತು ಒಳ ಉಡುಗೆಗಳ ಬಗ್ಗೆ ಮಾತನಾಡುವ ‘ಭಾರತೀಯ ಮಹಿಳೆ’ ಎಂಬುದು ನನ್ನ ಗಮನಾರ್ಹ ಸಾಧನೆಯಾಗಿದೆ.

ಈ ಪ್ರಯಾಣವು ಕಷ್ಟದಿಂದ ಕೂಡಿದ್ದು, ಚಿಲ್ಲರೆ ವ್ಯಾಪಾರ ಅಷ್ಟೊಂದು ಸುಲಭವಾಗಿರಲಿಲ್ಲ. ಆದ್ರೆ ಎರಡು ಸಂಗತಿಗಳು ನನ್ನನ್ನು ಗುರಿ ತಲುಪಿಸಿದವು. ಅವುಗಳೆಂದರೆ ನನ್ನ ಸುತ್ತಮುತ್ತಲಿನ ಜನರ ಬೆಂಬಲ ಮತ್ತು ನನ್ನಲ್ಲಿದ್ದ ಉತ್ಸಾಹ. ನಾನು ಹಲವು ವಿಶಿಷ್ಟ ಜನರನ್ನು, ಗ್ರಾಹಕರನ್ನು, ಉದ್ಯಮಿಗಳನ್ನು, ಹೂಡಿಕೆದಾರರನ್ನು ಮತ್ತು ಮಾರ್ಗದರ್ಶಕರನ್ನು ಭೇಟಿ ಮಾಡಿದ್ದೆನೆ. ಇವರೆಲ್ಲಾ ನನಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯವಾದ್ರು.

ನಾನು ನನ್ನ ಕೆಲಸವನ್ನ ಪ್ರೀತಿಸ್ತಿದ್ದೆ ಹಾಗೂ ಪ್ರತೀ ಸ್ತನಬಂಧಕಗಳು ಉತ್ತಮವಾಗಿರುವಂತೆ ನೋಡಿಕೊಳ್ಳುತ್ತಿದ್ದೆ. ಇದೊಂತರ ಒಬ್ಬ ಬಾಣಸಿಗ ಅಸಾಮಾನ್ಯ ಭಕ್ಷ್ಯ ತಯಾರಿಸಿದಾಗ ಅವನಿಗೆ ಬೇರೆಯವರಿಂದ ಸಿಗುತ್ತಿದ್ದ ಹೊಗಳಿಕೆಯಂತಿತ್ತು ನನಗೆ. ಯಾಕೆಂದರೆ ಸರಿಯಾದ ಮತ್ತು ಬಿಗಿಯಾದ ಸ್ತನಬಂಧದಿಂದಾಗಿ ನಮ್ಮ ಜೀವನವು ಬದಲಾಗಬಹುದು.

ಭಾರತದ ಪ್ರತಿಯೊಬ್ಬ ಮಹಿಳೆಯೂ ಉತ್ತಮ ಬಿಗಿಯಾದ ಸ್ತನಬಂಧಗಳ ಅನುಭವ ಪಡೆಯಬೇಕು. ಮಹಿಳೆಯರು ತೊಡುವ ಬ್ರಾದಿಂದಾಗಿ ಮತ್ತು ಹೊಸ ಹಂತಕ್ಕೆ ತೆಗೆದುಕೊಂಡು ಹೋಗುವ ನಿರೀಕ್ಷೆಯಿಂದ ಸಂಗ್ರಹಿಸಲು ಮುಂದಾಗಬಹುದು. ನನ್ನ ಅಪ್ಲಿಕೇಶನ್, ಬ್ಲಾಗ್ ಮತ್ತು ಎಫ್.ಬಿ.ಪೇಜ್​​​ ನಾನು ಮಹಿಳೆಯರಿಂದ ಅನಿಸಿಕೆಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.

ತಂತ್ರಜ್ಞಾನ ನನ್ನ ಎರಡನೇಯ ಪ್ರೀತಿ ಎನ್ನಬಹುದು. ಯಾಕೆಂದರೆ ಇದರಿಂದಾಗಿ ಬ್ರಾ ಫಿಟ್ಟಿಂಗ್ ಮುಂತಾದ ವಿಷಯಗಳನ್ನು ಲಕ್ಷಾಂತರ ಜನರಿಗೆ ತಲುಪುವಂತೆ ಮಾಡಬಹುದು. ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ಇನ್ನಷ್ಟು ಹೊಸ ಅವಿಷ್ಕಾರಗಳೊಂದಿಗೆ ಮತ್ತಷ್ಟು ಮಹಿಳೆಯರನ್ನು ತಲುಪುವ ಉದ್ದೇಶವಿದೆ ಅನ್ನುತ್ತಾರೆ.

ಮಾರುಕಟ್ಟೆಯ ಬಗ್ಗೆ ನಿಮ್ಮ ಅಬಿಪ್ರಾಯವೇನು..?

ಕಳೆದ ಆರು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ನಂಬಲಸಾಧ್ಯವಾದಂತಹ ಬದಲಾಗಿದೆ. ಅದರಲ್ಲೂ ಆನ್​​ಲೈನ್ ಶಾಪಿಂಗ್ ಹೆಚ್ಚಾಗಿ ಆವರಿಸಿಕೊಂಡಿದೆ. ಹಲವು ವರ್ಷಗಳಿಂದ ಭಾರತೀಯ ಮಹಿಳೆಯರ ವಿಕಸನವನ್ನ, ಪ್ರಗತಿ, ಮತ್ತು ಬೇಕಾದ ಉತ್ತಮ ವಸ್ತುಗಳ ಬಗ್ಗೆ ಪೂರಕವಾದ ಮಾಹಿತಿ ನೀಡುತ್ತಿದೆ. ಹೀಗಾಗಿ ಮಹಿಳೆಯರು ಉತ್ತಮವಾಗಿ ಕಾಣುವುದರಲ್ಲಿ ಒಂದು ಮೈಲಿ ಮುಂದೆ ಹೋಗಿದ್ದಾರೆ ಎನ್ನಬಹುದು. ಅವರು ಸರಾಸರಿ ಉತ್ಪನ್ನಗಳ ಜೊತೆ ರಾಜಿ ಮತ್ತು ಕೊಂಡುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಅವರಿಗೆ ಯಾವತ್ತಿದ್ರೂ ಉತ್ತಮವಾಗಿರುವುದನ್ನೆ ಬಯಸ್ತಾರೆ, ಇದು ಬಟರ್ ಕಫ್ಸ್ ಗೆ ಸರಿಯಾದ ಸಮಯವಾಗಿದೆ ಎಂದು ಅರ್ಪಿತಾ ಗಣೇಶ ಇಂದಿನ ಯಶಸ್ಸಿನ ಬಗ್ಗೆ ಖುಷಿ ಪಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ತೀವ್ರ ಪೈಪೋಟಿ ಎದುರಾಗಿದ್ದರೂ ಕೂಡ ಸಮರ್ಥವಾಗಿ ಎದುರಿಸುತ್ತಿದ್ದೇನೆ. ಉತ್ಪನ್ನಗಳ ಜ್ಞಾನ ಮತ್ತು ಅನುಭವ ಇದ್ದರೆ ಯಾವುದೇ ಜಾಗದಲ್ಲಿ ಬಂಡವಾಳ ಹೂಡಿದರೂ ಆ ಉದ್ಯಮಿ ಮೇಲುಗೈ ಸಾಧಿಸಬಹುದು. ನಾನು ಭಾರತದ ಏಕೈಕ ಬ್ರಾ ಫಿಟ್ಟರ್ ಹಾಗೂ ಇಲ್ಲಯವರೆಗೆ 3000ಮಹಿಳೆಯರ ಬ್ರಾ ಫಿಟ್ ಮಾಡಿದ್ದೇನೆ. ಉತ್ತಮ ಉತ್ಪನ್ನ ತಿಳಿವಳಿಕೆ,ಅನುಭವವೂ ನನಗೆ ತುಂಬಾ ಸಹಾಯಕಾರಿಯಾಗಿದೆ ಎನ್ನುತ್ತಾರೆ ಅರ್ಪಿತಾ.

ಇತ್ತೀಚಿನ ಪ್ರಚಾರ ಯಾವುದು..?

ಅಂತಿಮವಾಗಿ ಭಾರತಕ್ಕೆ ಉತ್ತಮ ಬ್ರಾ ಪರಿಚಯಿಸಬೇಕಾಗಿತ್ತು. ಸುಮಾರು ಒಂದು ವರ್ಷಗಳ ಕಾಲ ಸರಿಯಾದ ಡಿಸೈನರ್ ಹುಡುಕಾಡಲು ತೆಗೆದುಕೊಂಡೆ. ಜರ್ಮನಿ ಮತ್ತು ಇತರ ದೇಶಗಳಲ್ಲೂ ಡಿಸೈನರ್ ಗಳನ್ನ ನೇಮಿಸಿಕೊಂಡೆ. ವಸ್ತುಗಳ ಸೋರ್ಸಿಂಗ್ ನಲ್ಲಿ ಮತ್ತು ವಿನ್ಯಾಸದ ಸಂಶೋಧನೆಗಳಿಗೆ ಸಹಾಯ ಮಾಡುತ್ತಿದ್ದರು. ಹಾಂಕಾಂಗ್ ನಲ್ಲಿರುವ ಡಿಸೈನರ್ ನಾನು ಬಯಸುವ ಗುಣಮಟ್ಟ ನೀಡುತ್ತಿದ್ದ ಮತ್ತು ಉತ್ಪಾದನೆಯ ಘಟಕವನ್ನು ಸಹ ಹೊಂದಿದ್ದ. ಇಲ್ಲಿಂದ ನನ್ನ ಎಲ್ಲ ಸಂಪನ್ಮೂಲಗಳನ್ನ ಪಡೆದುಕೊಳ್ಳುತ್ತಿದ್ದೆ. ನನಗೆ ಈ ಹಂತದಲ್ಲಿ ಎರಡು ವಸ್ತುಗಳ ಅಗತ್ಯವಿತ್ತು. ಬಟರ್ ಕಫ್ಸ್ ನ ಬ್ರಾಂಡ್ ನ ಬ್ರಾ ಗಳನ್ನು ಮಾರುಕಟ್ಟೆಗೆ ಬಿಡಲು ಹಣ ಮತ್ತು ನಾನು ನೀಡುತ್ತಿರುವ ಉತ್ಪನ್ನಗಳ ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವುದಾಗಿತ್ತು. ಈ ಪ್ರಚಾರದಲ್ಲಿ ಎರಡು ನನ್ನ ಕೈ ಹಿಡಿಯಿತು ಮತ್ತು ಇದರಿಂದ ನಾನು ಸಂತೋಷವಾಗಿದ್ದೆ. ಮುಂದೆ ಉತ್ಪನ್ನದ ಆರಂಭಿಕ ಪ್ರತಿಕ್ರಿಯೆಯನ್ನು ನೋಡಿ ಸಂತಸವಾಯಿತು.

ಅರ್ಪಿತಾ ಉದ್ಯಮಿ ಆಗಿದ್ದು ಹೇಗೆ..?

ನನ್ನ ಬದುಕಿನಲ್ಲಿ ಸ್ಪೂರ್ತಿಯಾಗಿರೋದು ಐರ್ಲೆಂಡ್​​ನ atlas shruggedನ ಮುಖ್ಯಪಾತ್ರ. ಜಗತ್ತೇ ಮೆಚ್ಚುವ ಅವರ ತತ್ವ ಶಾಸ್ತ್ರದಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ಅವರ ಪುಸ್ತಕದಲ್ಲಿ, ನಿಜವಾದ ಪ್ರಪಂಚದಲ್ಲಿನ ನಿರಾಶೆಗಳನ್ನು ನಿರ್ವಹಿಸಿದರ ಬಗ್ಗೆ ಉಲ್ಲೇಖವಿದೆ.

ಪ್ರಪಂಚದಾದ್ಯಂತ ಸಂಚರಿಸಬೇಕು ಎನ್ನುವುದು ನನ್ನ ಕನಸಾಗಿದೆ. ಇನ್ನೂ ಅನೇಕ ಅದ್ಭುತ ಜನರನ್ನ ಭೇಟಿ ಮಾಡಿ, ಹೊಸ ಹೊಸ ಅನುಭವವನ್ನ ಪಡೆಯಬೇಕು ಎನ್ನುವ ಭರವಸೆಯಲ್ಲಿ ಬದುಕುತ್ತಿದ್ದೇನೆ ಅನ್ನುತ್ತಾರೆ ಅರ್ಪಿತಾ ಗಣೇಶ್.

Related Stories

Stories by YourStory Kannada