Google ಇನ್ನು ಮುಂದೆ ವಿದ್ಯುತ್​ ಬಳಸಲ್ಲ..!

ಟೀಮ್​ ವೈ.ಎಸ್. ಕನ್ನಡ

Google ಇನ್ನು ಮುಂದೆ ವಿದ್ಯುತ್​ ಬಳಸಲ್ಲ..!

Sunday December 18, 2016,

1 min Read

ಇಂಟರ್​ನೆಟ್ ಲೋಕದಲ್ಲಿ ಗೂಗಲ್ ತನ್ನದೇ ಪ್ರಾಬಲ್ಯ ಹೊಂದಿದೆ. ಗೂಗಲ್ ಬಳಸುವ ವಿದ್ಯುತ್ ಶಕ್ತಿಯೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿದೆ. ಅಮೆರಿಕಾದ ಸ್ಯಾನ್​ಫ್ರಾನ್ಸಿಸ್ಕೋ ನಗರಕ್ಕೆ ಬೇಕಾದಷ್ಟು ವಿದ್ಯುತ್ ಗೂಗಲ್​ಗೆ ಬೇಕಾಗಿದೆ. ಆದ್ರೆ ವಿದ್ಯುತ್ ಉಪಯೋಗದ ಬಗ್ಗೆ ಗೂಗಲ್ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. 2017ರಿಂದ ಗೂಗಲ್ ವಿದ್ಯುತ್ ಬಳಸುವುದಿಲ್ಲ. ಬದಲಾಗಿ ಗಾಳಿ ಮತ್ತು ಸೋಲಾರ್​ನಿಂದ ಉತ್ಪಾದಿಸಿದ ವಿದ್ಯುತ್ ಅನ್ನು ಬಳಸಲು ನಿರ್ಧಾರ ಕೈಗೊಂಡಿದೆ.

ಗೂಗಲ್ ಡೇಟಾ ಸೆಂಟರ್ಸ್ ಮತ್ತು ಆಫೀಸ್​ಗಳು ವಿಶ್ವದಾದ್ಯಂತ ಹರಡಿಕೊಂಡಿದೆ. ಹೊಸ ವರ್ಷದಿಂದ ಗೂಗಲ್ ಸುಮಾರು 60,000 ಉದ್ಯೋಗಿಗಳು ಕ್ಲೀನ್ ಅಂಡ್ ಗ್ರೀನ್ ಪವರ್ ಎನರ್ಜಿಯನ್ನು ಬಳಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ.

image


ಈಗಾಗಲೇ ಗೂಗಲ್ ಶೇಕಡಾ 44ರಷ್ಟು ವಿದ್ಯುತ್ ಶಕ್ತಿಯನ್ನು ನವೀಕರೀಸಬಹುದಾದ ಮೂಲಗಳಿಂದ ಪಡೆಯುತ್ತಿದೆ. ವಿಶ್ವದಲ್ಲೇ ಗೂಗಲ್ ದೊಡ್ಡ ಮಟ್ಟದಲ್ಲಿ ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್ ಅನ್ನು ಉತ್ಪಾದಿಸಿಕೊಂಡು ಬಳಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ ಬೇರೆ ಬೇರೆ ಕಡೆಗಳಿಂದ ನವೀಕರಿಸಬಹುದಾದ ವಿದ್ಯುತ್ ಅನ್ನು ಉತ್ಪಾದಿಸುವವರಿಂದ ವಿದ್ಯುತ್ ಅನ್ನು ಖರೀದಿ ಮಾಡುವ ಕೆಲಸವನ್ನು ಕಳೆದ ಒಂದು ದಶಕದಿಂದ ಮಾಡಿಕೊಂಡು ಬರುತ್ತಿದೆ. ಅಷ್ಟೇ ಅಲ್ಲ ಪರಿಸರದಲ್ಲೇ ಸಿಗುವ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಲು ಗೂಗಲ್ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ.

ಗೂಗಲ್ ಸದ್ಯ ಯೂ ಟ್ಯೂಬ್, ಜಿ ಮೇಲ್ ಸೇರಿದಂತೆ ಹಲವು ಸರ್ಚ್ ಎಂಜಿನ್​ಗಳನ್ನು ಹೊಂದಿದೆ. ಗೂಗಲ್​ನ 8 ಉದ್ದಿಮೆಗಳು 1 ಬಿಲಿಯನ್​ಗಿಂತಲೂ ಅಧಿಕ ಗ್ರಾಹಕರನ್ನು ಹೊಂದಿದೆ. 13 ದೊಡ್ಡ ಡೇಟಾ ಸೆಂಟರ್​ಗಳಲ್ಲಿ ಲಕ್ಷಗಟಗಟ್ಟಲೆ ಕಂಪ್ಯೂಟರ್​ಗಳಿವೆ. ಇದಕ್ಕೆಲ್ಲಾ ವಿದ್ಯುತ್ ಶಕ್ತಿ ಎಷ್ಟು ಬೇಕು ಅನ್ನೋದನ್ನ ನಾವೇ ಊಹಿಸಬಹುದು. ಈಗ ಗೂಗಲ್ ಹೊಸ ಸಾಹಸಕ್ಕೆ ಕೈ ಹಾಕಿದೆ. ನವೀಕರಿಸಬಹುದಾದದ ಶಕ್ತಿಗಳನ್ನು ಬಳಸಿಕೊಂಡು ಪರಿಸರವನ್ನು ಉಳಸಿಕೊಳ್ಳಲು ಹೊರಟಿದೆ.

ಇದನ್ನು ಓದಿ:

1. KSRTC ಬಸ್​ಗಳಿಗೆ ಬಯೋ ಟಾಯ್ಲೆಟ್ ಭಾಗ್ಯ..!-ದೇಶದ ನಂಬರ್​ ವನ್​ ಸಾರಿಗೆ ಸಂಸ್ಥೆಯಿಂದ ಹೊಸ ಪ್ರಯೋಗ

2. ಬೈಕ್ ಏರಿ ಮಹಿಳಾಮಣಿಗಳ ಹಿಮಾಲಯ ಸವಾರಿ!

3. ಮನೆ ಕೆಲಸಗಳ ತಲೆನೋವಿಗೆ "ಐಡೋ" ರೋಬೋದ ಪರಿಹಾರ..!