ಭಾರತದ 6 ಸುಪ್ರಸಿದ್ಧ ಉದ್ಯಮಿಗಳು ಇವರು..!

ಟೀಮ್​ ವೈ.ಎಸ್​. ಕನ್ನಡ

ಭಾರತದ 6 ಸುಪ್ರಸಿದ್ಧ ಉದ್ಯಮಿಗಳು ಇವರು..!

Friday July 07, 2017,

2 min Read

ಭಾರತೀಯ ಮಾರುಕಟ್ಟೆಗಳಲ್ಲಿ ಕೆಲವೊಂದು ವಸ್ತುಗಳು ಸಾಮಾನ್ಯ ಜೀವನದಲ್ಲಿ ಅನಿವಾರ್ಯವಾಗಿ ಬಿಟ್ಟಿದೆ. ಆದರೆ ಈ ಉದ್ಯಮಗಳು ಹೇಗೆ ಆರಂಭವಾದವು ಅನ್ನುವ ಬಗ್ಗೆ ಕಥೆಗಳಿವೆ. ಅಷ್ಟೇ ಅಲ್ಲ ಭಾರತದ 6 ಪ್ರಸಿದ್ಧ ಉದ್ಯಮಗಳ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಇದೆ.

image


ಹಿಮಾಲಯನ್ ಡ್ರಗ್- ಎಂ. ಮನಾಲ್

ಎಂ. ಮನಾಲ್ ಹಿಮಾಲಯನ್ ಡ್ರಗ್ ಕಂಪನಿಯನ್ನು 1930ರಲ್ಲಿ ಆರಂಭಿಸಿದ್ದರು. ಸಸ್ಯಜನ್ಯಗಳಿಂದ ಔಷಧಿ ಆರಂಭಿಸಬಹುದು ಅನ್ನುವ ಲೆಕ್ಕಾಚಾರದೊಂದಿಗೆ ಇದನ್ನು ಆರಂಭಿಸಿದ್ದರು. ಕಳೆದ 87 ವರ್ಷಗಳಲ್ಲಿ ಹಿಮಾಲಯನ್ ಫಾರ್ಮಸುಟಿಕಲ್ ಕಂಪನಿ ಭಾರತೀಯ ಆಯುರ್ವೇದ ಔಷಧಿಗಳ ಪೈಕಿ ಅಗ್ರಗಣ್ಯವಾಗಿದೆ. 92 ದೇಶಗಳಲ್ಲಿ ಹಿಮಾಲಯನ್ ಡ್ರಗ್ಸ್ ಲಭ್ಯವಿದೆ.

image


ಪ್ರೆಸ್ಟಿಜ್- ಟಿಟಿ ಕೃಷ್ಣಮಾಚಾರಿ

ಟಿಟಿ ಕೃಷ್ಣಮಾಚಾರಿ ಚೆನ್ನೈನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಟಿಟಿಕೆ ಗ್ರೂಪ್ ಉದ್ಯಮವನ್ನು 1928ರಲ್ಲಿ ಆರಂಭಿಸಿದ್ರು. ಟಿಟಿಕೆ ಗ್ರೂಪ್ ಉದ್ಯಮಗಳ ಪೈಕಿ, ಹೋಮ್ ಅಪ್ಲೈಯನ್ಸಸ್ ಗಳು ಹೆಚ್ಚು ಪ್ರಸಿದ್ಧಿ ಪಡೆದೆವು. ಪ್ರೆಸ್ಟಿಜ್ ಅನ್ನುವ ಹೋಮ್ ಅಪ್ಲೈಯನ್ಸಸ್ ಗಳು ಟಿಟಿಕೆ ಗ್ರೂಪ್ ಪ್ರಾಡಕ್ಟ್ ಆಗಿತ್ತು. ಪ್ರೆಸ್ಟಿಜ್ 2014ರಲ್ಲಿ 1000 ಕೋಟಿ ರೂಪಾಯಿಗಳ ಆದಾಯ ಸಂಪಾದಿಸಿತ್ತು. ನಾವೆಲ್ಲಾ ಪ್ರೆಸ್ಟಿಜ್ ಪ್ರೆಷರ್ ಕುಕ್ಕರ್, ಸ್ಟೋವ್ ಅಥವಾ ಪಾನ್ ಗಳನ್ನು ನೋಡಿದ್ದೇವೆ. ಇದಕ್ಕೆಲ್ಲಾ ಕಾರಣವಾಗಿರುವುದು ಟಿಟಿ ಕೃಷ್ಣಮಾಚಾರಿಯವರು.

image


ಬಾಟಾ- ಥಾಮಸ್ ಬಾಟ

ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಗೂ ಬಾಟಾ ಶೂ ಗಳ ಬಗ್ಗೆ ಅರಿವಿದೆ. ಸ್ಕೂಲ್ ಯೂನಿಫಾರ್ಮ್ ಗಳ ಪೈಕಿ ಮಕ್ಕಳ ಕಪ್ಪು ಶೂಗಳು ಕೂಡ ಒಂದು ಭಾಗವಾಗಿವೆ. ಇದನ್ನು ಒದಗಿಸುತ್ತಿರುವ ಕಂಪನಿ ಬಾಟ. ಬಾಟಾ ಕಂಪನಿಯನ್ನು ಹುಟ್ಟುಹಾಕಿದ್ದು ಥಾಮಸ್ ಬಾಟ. ಥಾಮಸ್ ಬಾಟಾ ಹಳೆಯ ಆಸ್ಟ್ರೋ ಹಂಗೇರಿಯನ್ ರಾಜ್ಯ(ಈಗಿನ ಜೆಕ್ ರಿಪಬ್ಲಿಕ್)ನಲ್ಲಿ 1876ರಲ್ಲಿ ಜನಿಸಿದರು. ಈಗ ಬಾಟಾ ಕಂಪನಿ ಭಾರತದಲ್ಲಿ ಸುಮಾರು 73800 ಕೋಟಿ ರೂಪಾಯಿ ವಹಿವಾಟು ಹೊಂದಿದೆ. ತನ್ನ ಹಾಲ್ ಮಾರ್ಕ್ ಶೂಗಳು, ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಸುಮಾರು 70 ದೇಶಗಳಲ್ಲಿ ಮಾರಾಟ ಮಾಡುತ್ತಿದೆ.

image


ಬೊರೊಲೈನ್- ಗೌರ್ ಮೋಹನ್ ದತ್ತಾ

ಭಾರತದಲ್ಲಿ ಬ್ರಿಟಿಷ್ ಆಡಳಿತವಿದ್ದಾಗ ಬೋರೋಲಿನ್ ಎಂಬ ಭಾರತೀಯ ಆ್ಯಂಟಿ ಸೆಪ್ಟಿಕ್ ಕ್ರೀಮ್ ಮನೆಮಾತಾಗಿತ್ತು. 1929ರಲ್ಲಿ ಬೆಂಗಾಲಿ ಉದ್ಯಮಿ ಗೌರ್ ಮೋಹನ್ ದತ್ತಾ ಕೊಲ್ಕತ್ತಾದಲ್ಲಿ ಬೋರೋಲೈನ್ ಆರಂಭಿಸಿದ್ರು. ಬೋರೋಲೈನ್ ಭಾರತೀಯ ಮಾರುಕಟ್ಟೆಗಳಲ್ಲಿ ಸಾಕಷ್ಟು ಸಂಚಲನವನ್ನೇ ಸೃಷ್ಟಿಸಿತ್ತು. ಬೋರೋಲೈನ್ ಸದ್ಯಕ್ಕೆ ಜಿಡಿ ಫಾರ್ಮ ಕಂಪನಿಯ ಅಧೀನಕ್ಕೆ ಸೇರಿದೆ. 2015-16ರಲ್ಲಿ ಇದು ಸುಮಾರು 150 ಕೋಟಿ ಆದಾಯವನ್ನು ಪಡೆದುಕೊಂಡಿತ್ತು.

image


ಬಜಾಜ್- ಜಮ್ನಾಲಾಲ್ ಬಜಾಜ್

ಬಜಾಜ್ ಚೇತಕ್ ಸ್ಕೂಟರ್ ಭಾರತೀಯರ ಪಾಲಿಗೆ 1970ರಿಂದ 3 ದಶಕಗಳ ಕಾಲಾ ಮಾದರಿ ಸ್ಕೂಟರ್ ಆಗಿತ್ತು. ಬಜಾಜ್ ಆಟೋ ಲಿಮಿಟೆಡ್ ಕಂಪನಿ ಸದ್ಯ 80, 000 ಕೋಟಿ ವಹಿವಾಟು ಹೊಂದಿದೆ. ಜಮ್ನಾಲಾಲ್ ಬಜಾಜ್ ಈ ಕಂಪನಿಯನ್ನು 1926 ರಲ್ಲಿ ಆರಂಭಿಸಿದ್ದರು. ಜಮ್ನಾಲಾಲ್ 1889ರಲ್ಲಿ ಬಡ ಮಾರ್ವಾಡಿ ಕುಟುಂಬದಲ್ಲಿ ಜನಸಿದ್ದರು. ಇವರನ್ನು ಶ್ರೀಮಂತ ರಾಜಸ್ತಾನಿ ಕುಟುಂಬ ದತ್ತು ಪಡೆದುಕೊಂಡಿತ್ತು. ಯಶಸ್ವಿ ಉದ್ಯಮಿ ಅನ್ನುವ ಖ್ಯಾತಿಯ ಜೊತೆಗೆ ಜಮ್ನಾಲಾಲ್ ಸಾಮಾಜಿಕ ಹೋರಾಟಗಾರ, ರಾಜಕೀಯ ನೇತಾರ ಮತ್ತು ಸ್ವಾತಂತ್ರ್ಯ ಹೋರಾಟಗಾರನೂ ಆಗಿದ್ದರು.

image


ಅಮರ್ ಚಿತ್ರಕಥಾ ಮತ್ತು ಟಿಂಕಲ್- ಅನಂತ್ ಪೈ

ಅನಂತ್ ಪೈ, ತನ್ನ ಎರಡನೇ ವರ್ಷದಲ್ಲೇ ಅನಾಥರಾಗಿದ್ದರು. ಆದರೆ ವಿಜ್ಞಾನದಲ್ಲಿ ಪದವಿ ಪಡೆದುಕೊಂಡಿದ್ದರು. ಇವರು ಬರೆದ ಎರಡು ಕಾಮಿಕ್ ಸರಣಿಯ ಪುಸ್ತಕಗಳನ್ನು ಚಿಕ್ಕಿಂದಿನಲ್ಲಿ ಪ್ರತಿಯೊಬ್ಬ ಭಾರತೀಯ ಕೂಡ ಓದಿರುತ್ತಾರೆ. ಅಮರ್ ಚಿತ್ರಕಥಾ, ಜನಪದ ಕಥೆಗಳು, ಐತಿಹಾಸಿಕ ಜೀವನ ಕಥೆಗಳು ಮತ್ತು ಹಿಂದೂ ಪುರಾಣಗಳ ಕಥೆಯನ್ನು ಹೊಂದಿದ್ದು, ಸುಮಾರು 86 ಮಿಲಿಯನ್ ಕಾಪಿಗಳು ಮಾರಾಟವಾಗಿದ್ದವು. ಟಿಂಕಲ್, ಪೈಯವರ ಎರಡನೇಯ ರಚನೆಯಾಗಿದ್ದು, ಇದು ಚಿಕ್ಕ ಕಥೆಗಳನ್ನು ಹೊಂದಿದ್ದ ಮಕ್ಕಳ ಕಥಾ ಸಂಕಲವಾಗಿದೆ. ಸದ್ಯಕ್ಕೆ ಇದು 669ನೇ ಸಂಚಿಕೆಯಾಗಿದೆ. 

ಇದನ್ನು ಓದಿ:

1. ಏರ್​ಫೋರ್ಸ್ ಸೇರಲು ಬಹು ರಾಷ್ಟ್ರೀಯ ಕಂಪನಿಯ ಕೆಲಸ ಕೈಬಿಟ್ಟ ಮಹಿಳಾಮಣಿ..!

2. 8ನೇ ವರ್ಷಕ್ಕೆ ಮದುವೆಯಾದ್ರೂ ಹಠ ಬಿಡಲಿಲ್ಲ- ಡಾಕ್ಟರ್ ಆಗಲು ಸಿದ್ಧರಾಗಿದ್ದಾರೆ ರೂಪಾ..!

3. ಜಲಚರ ಸಂರಕ್ಷಣೆಗಾಗಿ ಹುಟ್ಟಿಕೊಂಡಿದೆ ಈ ಟೀಮ್​..!