ಜೈಲುವಾಸದಿಂದ ಲೇಖಕರಾದ ಚೇತನ್ ಮಹಾಜನ್ - ಬದುಕಲು ಕಲಿಸಿದ ಸೆರೆಮನೆ

ಟೀಮ್​​ ವೈ.ಎಸ್​​.

0

ಸೂಪರ್ ಸ್ಮಾರ್ಟ್ ಕಾರ್ಪೊರೇಟ್ ಯುವಕ..ಅಮೆರಿಕದ ಕೆಲ್ಲೋಗ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಎಂಬಿಎ ಪದವೀಧರ..ಕೈತುಂಬಾ ಸಂಬಳ, ದೊಡ್ಡ ಮನೆ, ಸುಂದರವಾದ ಹೆಂಡತಿ, ಇಬ್ಬರು ಮುದ್ದಾದ ಮಕ್ಕಳು, ಎರಡು ಕಾರು...ಕಣ್ಣ ತುಂಬಾ ಕನಸು. ಮೋಸಗಾರ ಅನ್ನೋ ಆರೋಪ ಬರುವವರೆಗೂ ಬಂಧನಕ್ಕೊಳಗಾಗುವವರೆಗೂ ಅವರದ್ದು ಸುಂದರ ಬದುಕು. ಆದ್ರೆ ಕೆಟ್ಟ ಘಳಿಗೆಯೊಂದು ಚೇತನ್ ಮಹಾಜನ್ ಅವರ ಬದುಕನ್ನೇ ಬದಲಾಯಿಸಿಬಿಟ್ಟಿತ್ತು.

ಸದ್ಯ ಚೇತನ್ ಎಚ್‍ಸಿಎಲ್ ಲರ್ನಿಂಗ್‍ನಲ್ಲಿ ಸಿಇಓ ಆಗಿದ್ದಾರೆ. ಅದು 1012ರ ಸಮಯ. ಚೇತನ್ ಎವರ್‍ಆನ್‍ನಲ್ಲಿ ಚೇತನ್ ಮಹಾಜನ್ ಡಿವಿಜನಲ್ ಹೆಡ್ ಆಗಿದ್ರು. ಆಗ ಜಾರ್ಖಂಡ್‍ನ ಬೊಕಾರೋದಲ್ಲಿ ಐಐಟಿ ಪ್ರವೇಶಕ್ಕೆ ಟಾಪರ್ಸ್ ಎಂಬ ಸ್ಫರ್ಧೆಯೊಂದನ್ನು ನಡೆಸಲಾಗ್ತಿತ್ತು. ಈ ವೇಳೆ ವಿದ್ಯಾರ್ಥಿಯೊಬ್ಬ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಆತನ ಪೋಷಕರು ಕಟ್ಟಿದ್ದ ಶುಲ್ಕ ವಾಪಸ್ ಕೊಡುವಂತೆ ಪಟ್ಟು ಹಿಡಿದ್ರು. ಆದ್ರೆ ಹಿರಿಯ ಅಧಿಕಾರಿಗಳ ಸಮ್ಮತಿಯಿಲ್ಲದೆ ನಿರ್ಧಾರ ಕೈಗೊಳ್ಳಲು ಸಾಧ್ಯವೇ ಇಲ್ಲ ಅಂತಾ ಚೇತನ್ ಹೇಳಿದ್ರು. ರೊಚ್ಚಿಗೆದ್ದ ಪೋಷಕರು ಗದ್ದಲ ಎಬ್ಬಿಸಿದ್ರು. ಚೇತನ್ ಅವ್ರನ್ನು ಪೊಲೀಸರಿಗೆ ಒಪ್ಪಿಸಿದ್ರು. 200 ವಿದ್ಯಾಥಿಗಳು ಕೊಟ್ಟ ದೂರಿನ ಅನ್ವಯ ಚೇತನ್ ವಿರುದ್ಧ ಎಫ್‍ಐಆರ್ ದಾಖಲಾಯ್ತು. ಚೇತನ್ ಮಹಾಜನ್‍ರನ್ನ ಬಂಧಿಸಿದ ಪೊಲೀಸರು ಬೊಕಾರೋ ಜೈಲಿಗೆ ಹಾಕಿದ್ರು. ನಿಜಕ್ಕೂ ಆಗ ಚೇತನ್ ಅದೃಷ್ಟವೇ ಸರಿ ಇರಲಿಲ್ಲ. ರಜಾ ದಿನಗಳಾಗಿದ್ರಿಂದ ಚೇತನ್‍ಗೆ ಬಿಡುಗಡೆ ಭಾಗ್ಯ ಸಿಗಲಿಲ್ಲ. ಸುಮಾರು ಒಂದು ತಿಂಗಳು ಚೇತನ್ ಜೈಲಿನಲ್ಲೇ ಬಂಧಿಯಾಗಿದ್ರು. ಜೈಲಿನಲ್ಲಿ ಬೇಸರ ಕಳೆಯಲು ತಮಗಾದ ಅನುಭವಗಳನ್ನೆಲ್ಲ ಚೇತನ್ ಬರೆದಿಡ್ತಾ ಇದ್ರು. ಅದೇ `ಬ್ಯಾಡ್ ಬಾಯ್ಸ್ ಆಫ್ ಬೊಕಾರೋ ಜೈಲ್' ಇತ್ತೀಚೆಗಷ್ಟೇ ಬಿಡುಗಡೆಯಾದ ಪುಸ್ತಕ.

ಜೈಲಿನಲ್ಲಿ ಕಳೆದ ಒಂದು ತಿಂಗಳು ಚೇತನ್ ಮಹಾಜನ್‍ರಿಗೆ ಭಯಂಕರ ಅನುಭವವನ್ನೇ ಮಾಡಿಸಿತ್ತು. ಜೈಲಿನ ಕಠಿಣ ನಿಯಮಗಳು ಒಂದ್ಕಡೆಯಾದ್ರೆ ಅಲ್ಲಿನ ಚಿತ್ರವಿಚಿತ್ರ ಖೈದಿಗಳನ್ನು ನೋಡಿ ಚೇತನ್ ಆಶ್ಚರ್ಯಪಟ್ಟಿದ್ರು. ಕೊಲೆ, ದರೋಡೆ, ವಂಚನೆ ಹೀಗೆ ವಿವಿಧ ಅಪರಾಧ ಮಾಡಿ ಜೈಲು ಸೇರಿದ ಅವರನ್ನೆಲ್ಲಾ ನೋಡಿ ಚೇತನ್, ಜೀವನದಲ್ಲಿ ಹೊಸ ಪಾಠವನ್ನೇ ಕಲಿತ್ರು. ಅಲ್ಲಿ ತಾವು ಕಲಿತ ಪಾಠವನ್ನ ಚೇತನ್ ಹೇಳಿಕೊಂಡಿದ್ದಾರೆ.

ಜೈಲುವಾಸದ ಬಳಿಕ ನಿಮ್ಮ ಕಾರ್ಯವೈಖರಿ ಬದಲಾಯ್ತಾ..?

ಯಾವುದೋ ಒಂದು ದೃಷ್ಟಿಕೋನವನ್ನಿಟ್ಕೊಂಡು ನಾನು ಜನರನ್ನು ಅಳೆಯೋದಿಲ್ಲ, ಬರೀ ದಾಖಲೆಗಳನ್ನಾಧರಿಸಿ ನಿರ್ಧಾರ ತೆಗೆದುಕೊಳ್ಳೋದು ತಪ್ಪು ಎನ್ನುತ್ತಾರೆ ಚೇತನ್. ಜೈಲು ವಾಸದ ಅನುಭವದ ಬಳಿಕ ಚೇತನ್ ಮನಸ್ಸು ಮತ್ತಷ್ಟು ಗಟ್ಟಿಯಾಗಿದೆಯಂತೆ. ಯಾವುದೇ ಹಿಂಜರಿಕೆಯಿಲ್ಲದೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ ಈಗ ಅವರಲ್ಲಿದೆ. ಕೆಲಸ ಕಳೆದುಕೊಳ್ಳೋದೇ ನಿಮ್ಮ ಜೀವನದ ಕೆಟ್ಟ ಘಳಿಗೆ ಎಂದುಕೊಳ್ಬೇಡಿ ಅನ್ನೋದು ಅವರ ಸಲಹೆ.

ಕೆಲ್ಲೊಗ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಕಲಿಯದಂಥ ನೀವು ಜೈಲಿನಲ್ಲಿ ಕಲಿತಂಥ ಮೂರು ಪಾಠಗಳ ಬಗ್ಗೆ ಹೇಳಿ..

- ಯಾರಾದ್ರೂ ನಿಮ್ಮ ಲ್ಯಾಪ್‍ಟಾಪ್, ಸೆಲ್‍ಫೋನ್ ಅನ್ನು ಕದ್ದು ನಿಮ್ಮನ್ನು ಯಾರಾದ್ರೂ ಜೈಲಿಗೆ ತಳ್ಳಿದ್ರೆ ಪರಿಣಾಮ ಒಳ್ಳೆಯದೇ ಆಗುತ್ತೆ ಯಾಕಂದ್ರೆ ನೀವು ಬರೆದ ಪುಸ್ತಕ ಪ್ರಕಟವಾಗುತ್ತೆ.

- ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರದ ಜೊತೆ ಹೋರಾಡುವ ಪರಿಣಾಮಕಾರಿ ಮಾರ್ಗ.

- ಕಂಪನಿಯ ಉದ್ಯೋಗಿಯಾದಾಕ್ಷಣ ಅಲ್ಲಿನ ನಿಯಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ ಅನ್ನೋದನ್ನು ಜಾರ್ಖಂಡ್ ಪೊಲೀಸರಿಗೆ ಮನವರಿಕೆ ಮಾಡಿಕೊಡುವುದು, ಜೊತೆಗೆ ಒಬ್ಬ ಅಮಾಯಕನನ್ನು ಬಂಧಿಸಲು ಮಾಧ್ಯಮಗಳ ಒತ್ತಡ ಕಾರಣವಾಗಬಾರದು.

ನಿಮ್ಮ ದೈನಂದಿನ ಕಾರ್ಯದ ಮೇಲೆ ಜೈಲು ಜೀವನ ಎಂತಹ ಪರಿಣಾಮ ಬೀರಿದೆ..?

- ನಿರ್ಧಾರ ತೆಗೆದುಕೊಳ್ಳುವಾಗ ಹೆಚ್ಚಿನ ಸ್ಪಷ್ಟತೆ ಇದೆ.

- ಚೆನ್ನಾಗಿ ಬರೆಯುವುದನ್ನು ಕಲಿತಿದ್ದೇನೆ.

ನಿಮ್ಮ ವೃತ್ತಿ ಜೀವನದಲ್ಲಾದ ಕಹಿ ಅನುಭವ ಯಾವುದು..?

ಪ್ರಕರಣವೊಂದರಲ್ಲಿ ಸಿಲುಕಿ ವಿಚಾರಣೆ ಎದುರಿಸುತ್ತಿರುವವರಿಗೆ ಯಾರೂ ಸುಲಭವಾಗಿ ಉದ್ಯೋಗ ಕೊಡುವುದಿಲ್ಲ. ಅದೃಷ್ಟವಶಾತ್ 2013ರಲ್ಲಿ ನಾನು ವಂಚನೆ ಪ್ರಕರಣದಿಂದ ಖುಲಾಸೆಗೊಂಡೆ. ತಕ್ಷಣ ಎಚ್‍ಸಿಲ್ ಸಂಸ್ಥೆಯನ್ನು ಸೇರಿಕೊಂಡೆ. ನಾನು ಜೈಲಿಗೆ ಹೋಗಿ ಬಂದಾಗಿನಿಂದ ಕೆಲವರು ನನ್ನನ್ನು ತೀರಾ ವಿಚಿತ್ರವಾಗಿ ನೋಡುತ್ತಿದ್ದಾರೆ. ನನ್ನ ಕಣ್ಣಲ್ಲಿ ಕಣ್ಣಿಡಲು ಹಿಂಜರಿಯುತ್ತಿದ್ದಾರೆ. ಅವರು ಕೂಡ ಒಮ್ಮೆ ಜೈಲು ಸೇರಿದ್ರೆ ಜೀವನದಲ್ಲೇನನ್ನಾದ್ರೂ ಸಾಧಿಸುತ್ತಿದ್ರೇನೋ.

ಜೈಲುವಾಸ ಸಮಸ್ಯೆಗಳನ್ನು ಎದುರಿಸುವ ಬಗೆಯನ್ನು ನಿಮ್ಮಲ್ಲಿ ಹೇಗೆ ಬದಲಾಯಿಸಿದೆ..?

ಚಿಕ್ಕಚಿಕ್ಕ ವಿಚಾಗಳಿಗೂ ನಾನು ಈಗ ಹೆಚ್ಚು ಮಹತ್ವ ಕೊಡ್ತಿದ್ದೇನೆ. ನನ್ನ ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದೇನೆ. ಅಪಾಯವನ್ನು ಎದುರಿಸಲು ಈಗ ನನ್ನನ್ನು ನಾನೇ ಸಜ್ಜು ಮಾಡಿಟ್ಟುಕೊಳ್ಳುತ್ತೇನೆ. ಭವಿಷ್ಯವನ್ನು ಯೋಚಿಸದೆ ಖುಷಿಯಾಗಿರ್ತೇನೆ.

ನಿಮ್ಮ ಪುಸ್ತಕದ ಮೂಲಕ ಓದುಗರಿಗೆ ಏನು ಹೇಳಲು ಬಯಸುತ್ತೀರಿ..?

ನನ್ನ ಪುಸ್ತಕ ಒಂದು ಡೈರಿಯಂತಿದೆ. ಅದರಲ್ಲಿ ಕಥೆಯಿಲ್ಲ, ಕ್ಲೈಮಾಕ್ಸ್ ಇಲ್ಲ. ಬರೀ ಸಂದರ್ಭಗಳಿವೆ. ಹಾಗಾಗಿ ಪುಸ್ತಕದ ಮೂಲಕ ನಾನು ಸಂದೇಶ ಹೇಳಿಲ್ಲ. ಸದಾ ನಾವು ಕಲಿಯಬೇಕಾದದ್ದು ಅಂದ್ರೆ ಮಾನವೀಯತೆ. ಜೈಲಿನಲ್ಲಿರುವವರೆಲ್ಲ ಕ್ರೂರಿಗಳಲ್ಲ. ಅವರು ಕೂಡ ನಮ್ಮಂತೆ ಮನುಷ್ಯರೇ. ಅವರಿಗೂ ಕರುಣೆ, ಅನುಕಂಪದಂತಹ ಭಾವನೆಗಳಿವೆ. ನಾವೆಲ್ಲರೂ ಒಂದು ಹಂತದವರೆಗೆ ಜೈಲಿನಲ್ಲಿ ಬದುಕಬಹುದು ಅನ್ನೋದು ನನಗೀಗ ಅರ್ಥವಾಗಿದೆ. ಜೀವನದ ಬಗ್ಗೆ ಭಿನ್ನವಾಗಿ ಯೋಚಿಸಿದ್ರೆ ಜೈಲಿನಿಂದ ಬಿಡುಗಡೆಯಾಗುವುದು ಅಸಾಧ್ಯವೇನಲ್ಲ.