ಸಕುಟುಂಬಕ್ಕೂ ಸೇಮ್ ಡ್ರೆಸ್..!ಇದು ಬಾನ್ ಆರ್ಗಾನಿಕ್​​​ ಜಮಾನಾ ಗುರೂ...

ವಿಶಾಂತ್​​

ಸಕುಟುಂಬಕ್ಕೂ ಸೇಮ್ ಡ್ರೆಸ್..!ಇದು ಬಾನ್ ಆರ್ಗಾನಿಕ್​​​ ಜಮಾನಾ ಗುರೂ...

Friday November 27, 2015,

3 min Read

image


ಹೊಸ ಹೊಸ ಬಟ್ಟೆ ತೊಟ್ಟು ಮಿಂಚೋ ಆಸೆ ಎಲ್ಲರಿಗೂ ಇರುತ್ತೆ. ಅದರಲ್ಲಂತೂ ಹಬ್ಬ ಹರಿದಿನ ಬಂದ್ರೆ ಸಾಕು ಹೊಸ ಬಟ್ಟೆಗಳು ಬೇಕೇಬೇಕು. ಇನ್ನು ಬರ್ತ್‍ಡೇ ಸಂಭ್ರಮವನ್ನು ಹೊಸ ಬಟ್ಟೆ ಧರಿಸಿ ಆಚರಿಸದಿದ್ರೆ ಹೇಗ್ ಹೇಳಿ? ಹೀಗೆ ಹೊಸ ಬಟ್ಟೆ ಖರೀದಿಸಲು ಇಂಥದ್ದೇ ಕಾರಣ ಬೇಕು ಅಂತೇನಿಲ್ಲ. ಆದ್ರೆ ಸಾಮಾನ್ಯವಾಗಿ ಎಲ್ಲರೂ ಒಂದು ಸಮಸ್ಯೆ ಎದುರಿಸುತ್ತಿದ್ರು. ಅದೇನಂದ್ರೆ ಕುಟುಂಬದವರೆಲ್ಲರೂ ಒಂದೇ ರೀತಿಯ ಡ್ರೆಸ್ ಧರಿಸಬೇಕು ಅಂದ್ರೆ, ಅಂತಹ ಬಟ್ಟೆಗಳು ಸಿಗುತ್ತಿರಲಿಲ್ಲ. ಯಾವುದಾದ್ರೂ ಕಾರ್ಯಕ್ರಮಕ್ಕೆ ಹೋಗಲು ಅಪ್ಪ, ಮಕ್ಕಳು ಒಂದೇ ಬಣ್ಣದ ಶರ್ಟ್, ಪ್ಯಾಂಟ್ ಧರಿಸಬೇಕು ಅಂತಿದ್ದರೆ ಒಂದೇ ಬಗೆಯ ಬಟ್ಟೆ ಬೇರೆ ಬೇರೆ ಸೈಜ್‍ಗಳಲ್ಲಿ ಒಂದೇ ಬಟ್ಟೆ ಅಂಗಡಿಯಲ್ಲಿ ಸಿಗುವುದು ಕಷ್ಟ. ಹೀಗಾಗಿಯೇ ಮೊದಲು ಬಟ್ಟೆ ಪೀಸ್ ಖರೀದಿಸಿ, ನಂತರ ಟೇಲರ್ ಬಳಿ ಹೋಗಬೇಕಿತ್ತು. ಇನ್ನು ಟೇಲರ್ ಆ ಬಟ್ಟೆಯನ್ನು ಹೊಲೆದು ಕೊಡುವಷ್ಟರಲ್ಲಿ ಆ ಕಾರ್ಯಕ್ರಮವೇ ಮುಗಿದುಹೋಗುತ್ತಿತ್ತು. ಆದ್ರೆ ಇನ್ನು ಮುಂದೆ ಆ ಟೆನ್ಶನ್ ಬಿಡಿ. ಯಾಕಂದ್ರೆ ಅಂಥವರಿಗಾಗಿಯೇ ಇಲ್ಲಿ ಒಂದು ಕಂಪನಿ ಸಕುಟುಂಬಕ್ಕೂ ಸೇಮ್ ಡ್ರೆಸ್ ಒದಗಿಸುತ್ತಿದೆ.

image


ಬಾನ್ ಆರ್ಗಾನಿಕ್(BonOrganik)

image


ಬಾನ್ ಆರ್ಗಾನಿಕ್. ಪುನೀತ್ ಹಾಗೂ ನಿಹಾರಿಕಾ ವರ್ಮಾ ದಂಪತಿಯ ಕನಸಿನ ಕೂಸು. ಪುನೀತ್ ಮೂಲತಃ ಗಾರ್ಮೆಂಟ್ ಬಟ್ಟೆಗಳನ್ನು ರಫ್ತು ಮಾಡುವ ಉದ್ಯಮಿ. ನಿಹಾರಿಕಾ ವರ್ಮಾ ನ್ಯಾಷನಲ್ ಇನ್ಸ್​​ಟಿಟ್ಯೂಟ್ ಆಫ್ ಡಿಸೈನ್‍ನಲ್ಲಿ ವ್ಯಾಸಂಗ ಮಾಡಿದವರು. ಬೆಂಗಳೂರಿನ ಈ ದಂಪತಿಗೆ ದೇಶ ವಿದೇಶಗಳಲ್ಲಿ ಪ್ರವಾಸ ಮಾಡೋದು ಅಂದ್ರೆ ಎಲ್ಲಿಲ್ಲದ ಇಷ್ಟ. ಹೆಂಡತಿ ಡಿಸೈನರ್, ಗಂಡ ಗಾರ್ಮೆಂಟ್ ಉದ್ಯಮಿ. ಇಬ್ಬರದೂ ಒಂದೇ ಫೀಲ್ಡ್ ಆದ್ದರಿಂದ ಆಗಾಗ ತಮ್ಮ ಉದ್ಯಮದ ಬಗ್ಗೆ ಮಾತನಾಡಿಕೊಳ್ಳುತ್ತಿದ್ರು. ಅಲ್ಲದೇ ತಮ್ಮ ಮಕ್ಕಳ ಡ್ರೆಸ್‍ಗೆ ಮ್ಯಾಚ್‍ಆಗುವಂತ ಬಟ್ಟೆಗಳನ್ನೇ ಧರಿಸಲು ಅಥವಾ ತಮ್ಮ ಬಟ್ಟೆಗೆ ಮ್ಯಾಚ್ ಆಗುವಂತಹ ಬಟ್ಟೆಯನ್ನೇ ತಾವೂ ಧರಿಸಲು ಟ್ರೈ ಮಡ್ತಾರೆ. ಆದ್ರೆ ಒಂದೇ ತರಹದ ಬಟ್ಟೆಗಳು ಎಲ್ಲೂ ಸಿಗುವುದಿಲ್ಲ. ಅಂತಹ ಅಮ್ಮಂದಿರು ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿಯನ್ನು ಹಲವು ಬಾರಿ ನೋಡಿದ್ದರು. ಹೀಗೇ ಒಮ್ಮೆ ಚರ್ಚಿಸುವಾಗ ಕುಟುಂಬದವರೆಲ್ಲರಿಗೂ ಒಂದೇ ಬಗೆಯ ಡ್ರೆಸ್ ಮಾಡಿದ್ರೆ ಹೇಗೆ ಅನ್ನೋ ಐಡಿಯಾ ಹೊಳೀತು. ಇನ್ನೇಕೆ ತಡ ಅಂತ 2012ರಲ್ಲಿ ಬಾನ್ ಆರ್ಗಾನಿಕ್ ಕಂಪನಿಯನ್ನು ಪ್ರಾರಂಭಿಸಿಯೇಬಿಟ್ರು ಪುನೀತ್ ಮತ್ತು ನಿಹಾರಿಕಾ. ಬಾನ್ ಆರ್ಗಾನಿಕ್ ವೆಬ್‍ಸೈಟ್ ಮೂಲಕ ತರಹೇವಾರಿ ಬಟ್ಟೆಗಳ ಮಾರಾಟಕ್ಕೆ ಮುಂದಾದ್ರು. ಇದು ಹೊಸ ಹಾಗೂ ವಿನೂತನ ಪ್ರಯತ್ನವಾದ್ದರಿಂದ ಮೊದ ಮೊದಲು ಸಾಕಷ್ಟು ಸರ್ಕಸ್ ಮಾಡಬೇಕಾಯ್ತು. ಹಲವು ಪ್ರಯತ್ನಗಳ ಬಳಿಕ ತಮ್ಮ ಬಾನ್ ಆರ್ಗಾನಿಕ್ ಪರಿಕಲ್ಪನೆಗೆ ಜೀವ ನೀಡಲು ಯಶಸ್ವಿಯಾದ್ರು ಪುನೀತ್ ಮತ್ತು ನಿಹಾರಿಕಾ ದಂಪತಿ.

image


ಬಾನ್ ಆರ್ಗಾನಿಕ್‍ನಲ್ಲಿ ಏನೇನು ಸಿಗುತ್ತೆ?

ಆರಂಭದಲ್ಲಿ ಕೇವಲ ಮಕ್ಕಳಿಗಾಗಿಯೇ ನೈಸರ್ಗಿಕ ಕಾಟನ್ ಬಟ್ಟೆಗಳನ್ನು ಮಾರಾಟ ಮಾಡತೊಡಗಿದ್ರು. ಕ್ರಮೇಣ ಈ ಮೂರು ವರ್ಷಗಳಲ್ಲಿ ಐದು ವಿಭಾಗಗಳಲ್ಲಿ ಬಟ್ಟೆಗಳನ್ನು ಮಾರಾಟ ಮಾಡಲಾಗುತ್ತಿದೆ. ಜಸ್ಟ್ ಲೈಕ್ ಮಾಮ್ (ಅಮ್ಮ ಮತ್ತು ಮಕ್ಕಳ ಡ್ರೆಸ್), ಜಸ್ಟ್ ಲೈಕ್ ಡ್ಯಾಡ್ (ಅಪ್ಪ ಮತ್ತು ಮಕ್ಕಳ ಡ್ರೆಸ್), ಫ್ಯಾಮಿಲಿ ಫಾರೆವರ್ (ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ಬಣ್ಣದ ಬಟ್ಟೆ), ಸೂಪರ್ ಸಿಬ್ಲಿಂಗ್ಸ್ (ಅಕ್ಕ – ತಮ್ಮ, ಅಣ್ಣ – ತಂಗಿ, ಅಕ್ಕ – ತಂಗಿ, ಅಣ್ಣ – ತಮ್ಮ ಹೀಗೆ ಮಕ್ಕಳಿಗೆ ಒಂದೇ ತರಹದ ಬಟ್ಟೆ), ಮೈ ಬೇಬಿ (ಮಗು ಮತ್ತು ಪೋಷಕರ ಬಟ್ಟೆ) ಇಷ್ಟು ಮಾತ್ರವಲ್ಲ ಪೋಷಕರು ಮತ್ತು ಮಕ್ಕಳಿಗೆ ಒಂದೇ ರೀತಿಯ ಟೈಗಳು, ಟೋಪಿ ಹಾಗೂ ಸ್ಕಾರ್ಫ್‍ಗಳೂ ಬಾನ್ ಆರ್ಗಾನಿಕ್‍ನಲ್ಲಿ ದೊರೆಯುತ್ತವೆ.

image


ಪುನೀತ್ ಮತ್ತು ನಿಹಾರಿಕಾ ವರ್ಮಾ ದಂಪತಿಯ ಈ ವಿನೂತನ ಪ್ರಯತ್ನಕ್ಕೆ ಬೆಂಗಳೂರಿನಲ್ಲಂತೂ ಅಭೂತಪೂರ್ವ ಯಶಸ್ಸು ದೊರೆತಿದೆ. ಮೂರು ವರ್ಷಗಳಲ್ಲೇ ಒಂದು ಬಗೆಯ ಡ್ರೆಸ್‍ನಿಂದ ಐದು ಬಗೆಯ ಡ್ರೆಸ್‍ಗಳನ್ನು ಮಾರಾಟ ಮಾಡುತ್ತಿರುವುದೇ ಅದಕ್ಕೆ ಕಾರಣ. ಮೊದಲ ಕೇವಲ ಬೆಂಗಳೂರಿಗರಿಗೆ ಸೀಮಿತವಾಗಿದ್ದ ಬಾನ್ ಆರ್ಗಾನಿಕ್ ಈಗ ಭಾರತದಾದ್ಯಂತ ತನ್ನ ಉದ್ಯಮವನ್ನು ವಿಸ್ತರಿಸಿಕೊಂಡಿದೆ. ಅಲ್ಲದೇ ವಿದೇಶಗಳಿಗೂ ತಮ್ಮ ಬ್ರ್ಯಾಂಡ್‍ಅನ್ನು ಕೊಂಡೊಯ್ಯುವ ಪ್ರಯತ್ನವೂ ನಡೆದಿದೆ.

image


ಟಿ ಶರ್ಟ್‍ಗಳು, ಪಾಶ್ಚಿಮಾತ್ಯ ಉಡುಪುಗಳು, ಬಾಡಿ ಸೂಟ್ಸ್ ಮತ್ತು ಎಥ್ನಿಕ್/ ಟ್ರೆಡಿಷನಲ್ ಬಟ್ಟೆಗಳೂ ಇಲ್ಲಿ ದೊರೆಯುತ್ತವೆ. ಗ್ರ್ರಾಹಕರ ಅಗತ್ಯಕ್ಕೆ ತಕ್ಕಂತೆ, ಕೈಗೆಟುಕುವ ಬೆಲೆಯಲ್ಲಿಯೇ ಬೇರೆ ಬೇರೆ ಗುಣಮಟ್ಟದ, ಹಲವು ಸ್ಟೈಲ್‍ನ ಬಟ್ಟೆಗಳು ಬಾನ್ ಆಗ್ರ್ಯಾನಿಕ್ ಒದಗಿಸುತ್ತದೆ.

image


ಇಂತಹ ತರಹೇವಾರಿ ಬಟ್ಟೆಗಳನ್ನು ನೀವೂ, ನಿಮ್ಮ ಕುಟುಂಬದ ಸದಸ್ಯರೆಲ್ಲರೂ ಧರಿಸಿ ಮಿಂಚಬೇಕು, ಖುಷಿ ಪಡಬೇಕು ಅಂದ್ರೆ ನೀವೂ www.bonorganik.comಗೆ ಭೇಟಿ ಕೊಡಬಹುದು. ಇಲ್ಲಿರುವ ಕಲೆಕ್ಷನ್‍ಅನ್ನು ನೋಡಿ ನಿಮಗಿಷ್ಟವಾದ ಬಟ್ಟೆಯನ್ನು ಬುಕ್ ಮಾಡಿದ್ರೆ ಕೇವಲ ಒಂದು ವಾರದೊಳಗೆ ನೀವು ಬುಕ್ ಮಾಡಿದ ಡ್ರೆಸ್‍ಗಳು ನಿಮ್ಮ ಮನೆ ಬಾಗಿಲಿಗೇ ಬರುತ್ತವೆ. ಭಾರತದಾದ್ಯಂತ ಈ ಬ್ರ್ಯಾಂಡ್ ದೊರೆಯುತ್ತದೆ.