ಲಿಕ್ಕರ್​​​​ ಲೋಕದಲ್ಲಿ ಲೇಡಿಸ್​​ ಕಿಕ್​​- ಪುರುಷರ ಉದ್ಯಮದಲ್ಲಿ ಲೀಸಾ ಕ್ವೀನ್​​​

ಟೀಮ್​​ ವೈ.ಎಸ್​​. ಕನ್ನಡ

ಲಿಕ್ಕರ್​​​​ ಲೋಕದಲ್ಲಿ ಲೇಡಿಸ್​​ ಕಿಕ್​​- ಪುರುಷರ ಉದ್ಯಮದಲ್ಲಿ ಲೀಸಾ ಕ್ವೀನ್​​​

Sunday December 13, 2015,

3 min Read

“ಮಹಿಳಾ ಉದ್ದಿಮೆದಾರರೇ ಎಲ್ಲಾ ಅಡೆತಡೆಗಳನ್ನೂ ಮೀರಿ ಹೊರಬನ್ನಿ.. ಹೊಸ ದಾರಿಯಲ್ಲಿ ಬೆಳಕು ನೋಡಿ. ಹಳೇ ಸಂಪ್ರದಾಯಗಳ ಗೋಡೆಕಟ್ಟಿಕೊಂಡು ನಿಮ್ಮನ್ನ ನೀವೇ ನಿಯಂತ್ರಿಸಿಕೊಳ್ಳದಿರಿ ” - ಲಿಸಾ ಸ್ರೋ..

ಆಕೆ ರೂಲ್ಸ್ ಗಳನ್ನ ಬ್ರೇಕ್ ಮಾಡಿ ಬೆಳೆದು ನಿಂತವಳು. ಆಕೆ ಮಹಿಳೆಯರಿಗೆ ನಿಷಿದ್ಧ ಅನ್ನೋ ಕಾನ್ಸೆಪ್ಟನ್ನೇ ತಿದ್ದಿ ಬರೆದವಳು. ಹೀಗೆ ಎಲ್ಲಾ ಮಿತಿ ಹಾಗೂ ಸಂಕಷ್ಟಗಳನ್ನ ದಾಟಿ ಲಿಕ್ಕರ್ ಬ್ಯುಸಿನೆಸ್ ನಲ್ಲಿ ಅದ್ಭುತವಾದುದನ್ನ ಸಾಧಿಸಬಹುದು ಅನ್ನುವುದನ್ನ ಸಾಬೀತು ಪಡಿಸಿರುವರು ಭಾರತೀಯ ಮೂಲದ ಮಹಿಳೆ ಲಿಸಾ ಸ್ರೋ. ಐ ಬ್ರಾಂಡ್ಸ್ ಬೆವರೇಜಸ್ ಲಿಮಿಟೆಡ್ ನ ಚೇರ್ ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಲಿಸಾ ಭಾರತದ ಲಿಕ್ಕರ್ ಇಂಡಸ್ಟ್ರಿನಲ್ಲಿ ಅದ್ವಿತೀಯವಾದುದನ್ನ ಸಾಧಿಸಿದ್ದಾರೆ. 2010ರ ಆಗಸ್ಟ್ ನಲ್ಲಿ ತಮ್ಮ ಕನಸಿನ ಉದ್ದಿಮೆ ಆರಂಭಿಸಿದ ಲಿಸಾ, ಇದೀಗ ಅಂತರಾಷ್ಟ್ರೀಯ ಗುಣಮಟ್ಟವನ್ನ ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಂಡನ್ ನಲ್ಲಿ ಬೆಳೆದು ಅಲ್ಲೇ ನೆಲೆಸಿರುವ ಲಿಸಾಳ ತವರು ಪಂಜಾಬ್. ಆಗಾಗ್ಯೆ ಭಾರತಕ್ಕೆ ಭೇಟಿ ನೀಡುತ್ತಿದ್ದ ಇವರಿಗೆ ಹೊಸ ಉದ್ದಿಮೆಯ ಕನಸಿತ್ತು. ಜೊತೆಗೆ ಭಾರತದ ಸಾಮಾನ್ಯ ಜನರ ನಾಡಿಮಿಡಿತವನ್ನು ಅರಿತ್ತಿದ್ದ ಇವರನ್ನ ಸೆಳೆದಿದ್ದು ಲಿಕ್ಕರ್ ಬ್ಯುಸಿನೆಸ್. ಲಿಸಾ ಈ ಬ್ಯುಸಿನೆಸ್ ಶುರುಮಾಡುವಾಗ ಮೊದಲು ಭಾರತದ ಮಾರುಕಟ್ಟೆ, ಬೆಲೆ ಹಾಗೂ ಬೇಡಿಕೆಗಳ ಬಗ್ಗೆ ಸೂಕ್ಷ್ಮವಾದ ಅಧ್ಯಯನ ನಡೆಸಿದ್ರು. ಇಲ್ಲಿ ಜನರು ಪ್ರೀಮಿಯಂ ಮದ್ಯದಿಂದ ಕೊಂಚ ದೂರವುಳಿದಿರುವುದನ್ನ ಅರಿತುಕೊಂಡ್ರು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಲಿಸಾ, ಲಿಕ್ಕರ್ ಬ್ಯುಸಿನೆಸನ್ನ ಶುರಮಾಡಿಯೇ ಬಿಟ್ರು.

image


ಜೀವಶಾಸ್ತ್ರದಿಂದ ಲಿಕ್ಕರ್ ಶಾಸ್ತ್ರ..!

“ ಬಿಎಸ್ಸಿ ಓದುತ್ತಿದ್ದಾಗ ನನಗೆ ಸಮುದ್ರ ಜೀವಶಾಸ್ತ್ರದಲ್ಲಿ ಆಸಕ್ತಿ ಇತ್ತು. ಅಲ್ಲದೆ ಶಾರ್ಕ್ ಗಳ ಬಗ್ಗೆ ವಿಶೇಷ ಗಮನ ಕೊಟ್ಟಿದ್ದೆ. ಆದ್ರೆ ಮುಂದಿನ ದಿನಗಳಲ್ಲಿ ಜೀವಶಾಸ್ತ್ರ ಸಬ್ಜೆಕ್ಟ್ ನಿಂದ ಹೊರಬಂದ ಬಳಿಕ ನಾನು ಮೀಡಿಯಾದಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿದೆ. ಯುಕೆಯಲ್ಲಿರುವ ಪ್ರಮುಖ ನ್ಯೂಸ್ ಚಾನೆಲ್ ಗಳಲ್ಲಿ ಕೆಲಸ ಮಾಡಿದೆ. ” - ಲಿಸಾ ಸ್ರೋ..

ಲಂಡನ್ ನಲ್ಲಿ ಅವರ ತಂದೆ 15 ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಬಿಯರ್ ಫ್ಯಾಕ್ಟರಿಯ ತಯಾರಿಕಾ ಘಟಕದಲ್ಲಿ ಕೆಲಸ ಮಾಡಿದ ಅನುಭವ ಲಿಸಾಗೆ ಇತ್ತು. ಅಲ್ಲದೆ ಭಾರತದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಮದ್ಯದ ಸರಬರಾಜು ಹಾಗೂ ಪ್ರೀಮಿಯಂ ಮದ್ಯದ ಸರಬರಾಜು ಕಡಿಮೆ ಇರುವುದನ್ನ ಅನುಭವಕ್ಕೆ ತಂದುಕೊಂಡ್ರು. ಗ್ರಾಹಕರ ಈ ಕೊರತೆಯನ್ನ ನೀಗಿಸಲು ಲಿಸಾ ತಮ್ಮ ಐ ಬ್ರಾಂಡ್ ಡ್ರಿಂಕ್ಸನ್ನ ಮಾರುಕಟ್ಟೆಗ ಪರಿಚಯಿಸಿದ್ರು. ನಂತ್ರದ ಎರಡು ವರ್ಷಗಳಲ್ಲೇ ಗ್ರಾಂಟೆಡ್ ವಿಸ್ಕಿಯನ್ನ ಬಿಡುಗಡೆಗೊಳಿಸಿದ್ರು. ಇದೀಗ ಲಿಕ್ಕರ್ ಬ್ರಾಂಡ್ ಗಳಲ್ಲೇ ಅತೀ ಹೆಚ್ಚು ಚಾಲ್ತಿಯಲ್ಲಿರುವ ಐ ಬ್ರಾಂಡ್ ಗೆ ಪ್ರಶಸ್ತಿಯೂ ಸಿಕ್ಕಿರೋದು ವಿಶೇಷ. ಸದ್ಯ ಲಿಸಾ ಮಾಲಿಕತ್ವದಲ್ಲಿ ಪ್ರೀಮಿಯಂ ವಿಸ್ಕಿ, ಮೂರು ರಾಯಲ್ಸ್ ಹಾಗೂ ಡಿಲಕ್ಸ್ ವಿಸ್ಕಿ ಹಾಗೂ ಗ್ರಾಂಟನ್ ವಿಸ್ಕಿ ಲಿಕ್ಕರ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಖ್ಯಾತಿಪಡೆದಿವೆ. ತಮ್ಮ ಪ್ರಯತ್ನಕ್ಕೆ ಪ್ರಶಸ್ತಿ ರೂಪದಲ್ಲಿ ಮನ್ನಣೆ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

“ ನಾನು ಈ ಉದ್ದಿಮೆಯಲ್ಲೇ, ಉದ್ದಿಮೆಗಾಗೇ ಹುಟ್ಟಿದವಳು ಅಂತ ನಂಬಿದ್ದೇನೆ.. ನನಗೆ ಸವಾಲುಗಳನ್ನ ಎದುರಿಸುವುದು ತುಂಬಾ ಇಷ್ಟ. ಅದ್ರಲ್ಲೂ ಪುರುಷರು ಪಾರುಪತ್ಯ ಹೊಂದಿರುವ ಸ್ಪಿರಿಟ್ ಬ್ಯುಸಿನೆಸ್ ನಲ್ಲಿ ಸಂಪ್ರದಾಯಗಳನ್ನ ಮುರಿದಿರುವ ಬಗ್ಗೆ ಹೆಮ್ಮೆ ಇದೆ.” ಅಂತ ಲಿಸಾ ಸ್ರೋ ತಮ್ಮ ಉದ್ದಿಮೆ ಬಗ್ಗೆ ಸಂತೋಷ ವ್ಯಕ್ತಪಡಿಸ್ತಾರೆ. ಇನ್ನು ಐ ಬ್ರಾಂಡ್ ಡ್ರಿಂಕ್ಸ್ ಪ್ರಾಡೆಕ್ಟ್ ಉತ್ಪಾದನೆಯ ಎಲ್ಲಾ ಹಂತದಲ್ಲೂ ಲಿಸಾ ತಮ್ಮನ್ನುತಾವು ತೊಡಗಿಸಿಕೊಂಡಿದ್ದಾರೆ. ಸೇಲ್ಸ್, ಬ್ರಾಂಡಿಂಗ್, ಮಾರ್ಕೆಟಿಂಗ್, ಪ್ರಾಡಕ್ಟ್ ಡಿಸೈನಿಂಗ್ ಹಾಗೂ ಪ್ಯಾಕಿಂಗ್ ಸೇರಿದಂತೆ ಪ್ರತಿಯೊಂದರಲ್ಲೂ ಇವರು ಪಳಗಿದ್ದಾರೆ. ಆರಂಭದ ದಿನಗಳಲ್ಲಿ ತಮ್ಮ ಕೈಯಾರೆ ಡಿಸೈನ್ ಸ್ಕೆಚ್ ಗಳನ್ನ ತಯಾರು ಮಾಡಿಕೊಟ್ಟಿರೋದು ವಿಶೇಷ. ಅಲ್ಲದೆ ಗುಣಮಟ್ಟವನ್ನ ಕಾಯ್ದುಕೊಳ್ಳುವುದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲೀ ಲಿಸಾ ಸಲಹೆಗಾರರನ್ನ ಹೊಂದಿದ್ದಾರೆ.

“ ಗುಣಮಟ್ಟ ನಮ್ಮ ಮೊದಲ ಗುರಿ. ಅದ್ಭುತವಾದ ಪ್ಯಾಕಿಂಗ್ ಮೂಲಕ ಗ್ರಾಹಕರನ್ನ ತಲುಪಿರುವ ಖುಷಿ ನಮಗಿದೆ. ಕಂಪನಿ ಇನ್ನೂ ಆರಂಭಿಕ ಹಂತದಲ್ಲಿದ್ರೂ, ವೇಗವಾದ ಬೆಳವಣಿಗೆ ಹೊಂದಿದೆ. ಇದೀಗ ನಮ್ಮ ಉತ್ಪನ್ನಗಳಿಗೆ ಪ್ಯಾರಾಮಿಲಿಟರಿಯಿಂದಲೂ ಬೇಡಿಕೆ ಬಂದಿರುವುದು ಹೆಮ್ಮೆ ತಂದಿದೆ. ” ಐ ಬ್ರಾಂಡ್ಸ್ ಬೆವರೇಜಸ್ ಲಿಮಿಟೆಡ್ ನ ಚೇರ್ ಮನ್

ವೇಗವಾಗಿ ಬೆಳೆಯುತ್ತಿರುವ ಐ ಬ್ರಾಂಡ್ಸ್..

ಭಾರತದ ಮದ್ಯದ ಮಾರುಕಟ್ಟೆಯನ್ನು ವೇಗವಾಗಿ ಆಕ್ರಮಿಸಿಕೊಳ್ಳುತ್ತಿರುವ ಐ ಬ್ರಾಂಡ್ಸ್ ಬೆವರೇಜಸ್ ಲಿಮಿಟೆಡ್ ಪಂಜಾಬ್, ಹರಿಯಾಣ, ಚಂಡೀಗಢ, ಅಸ್ಸಾಂ, ಅರುಣಾಚಲ ಪ್ರದೇಶ, ಉತ್ತರಖಂಡ್ ಹಾಗೂ ಗೋವಾ ಸೇರಿದಂತೆ ಭಾರತದ 5000 ಕೇಂದ್ರಗಳಲ್ಲಿ ಮಾರಾಟವಾಗುತ್ತಿದೆ. ಸದ್ಯದಲ್ಲೇ ದೆಹಲಿ, ರಾಜಸ್ತಾನ, ತ್ರಿಪುರ ಹಾಗೂ ಮೇಘಾಲಯದಲ್ಲೂ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು ಲಿಸಾ ಕಂಪನಿಯ ಮುಂದಿನ ಯೋಜನೆ. ಈ ಮೂಲಕ ಭಾರತ ಅಗ್ರ ಲಿಕ್ಕರ್ ಕಂಪನಿಗಳೊಂದಿಗೆ ಸ್ಪರ್ಧೆಗಿಳಿದಿರುವ ಐ ಬ್ರಾಂಡ್ ಮುಂದಿನ 3 ವರ್ಷಗಳಲ್ಲಿಕನಿಷ್ಠ 100 ಕೋಟಿ ಲಾಭಗಳಿಸುವ ಲೆಕ್ಕಾಚಾರದಲ್ಲಿದೆ. ಇನ್ನು ಐ ಬ್ರಾಂಡ್ ನ ಮದ್ಯಗಳಿಗೆ ಜನರು ಮಾರುಹೋಗುತ್ತಿರುವುದು ಕಂಪನಿಯ ವಿಶ್ವಾಸವನ್ನ ಇನ್ನಷ್ಟು ಹೆಚ್ಚಿಸಿದೆ. ಹೀಗಾಗಿ ತಮ್ಮ ಉತ್ಪನ್ನ ಹಾಗೂ ಗುಣಮಟ್ಟವನ್ನ ಹೆಚ್ಚಿಸಿಕೊಳ್ಳಲು ಉತ್ಸಾಹಿ ಯುವ ತಂಡವನ್ನೂ ಐ ಬ್ರಾಂಡ್ ನಿಯೋಜಿಸಿಕೊಂಡಿದೆ.

ಯಶಸ್ಸಿನ ಗುಂಗಿನಲ್ಲಿರುವ ಲಿಸಾ ಸ್ರೋ ತಮ್ಮ ಸಾಧನೆಯ ಹಿಂದಿರುವ ಬಲ ಹಾಗೂ ಸಾಗಿ ಬಂದ ಹೆಜ್ಜೆಗಳನ್ನ ನೆನಪಿಸಿಕೊಳ್ಳುತ್ತಾರೆ. “ ನನ್ನ ಅಪ್ಪ ಅಮ್ಮನಿಗೆ ಹುಟ್ಟಿದ್ದು ಇಬ್ಬರು ಹೆಣ್ಣುಮಕ್ಕಳಾದ್ರೂ, ನನ್ನನ್ನು ಗಂಡುಮಗನಂತೆ ಬೆಳೆಸಿದ್ರು. ಅದೇ ರೀತಿ ಜವಾಬ್ದಾರಿಗಳನ್ನ ತುಂಬಿದ್ರು. ಇದೇ ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದು, ನನ್ನ ತಂದೆ ಸಾಕಷ್ಟು ಬೆಂಬಲ ನೀಡ್ತಾ ಇದ್ರು. ಮದುವೆ ನಂತರ ಪತಿ ಕೂಡ ನನಗೆ ಸಹಕಾರ ಕೊಟ್ಟಿದ್ದು ನನ್ನ ಕನಸಿನ ಹಾದಿಯಲ್ಲಿ ಸಾಗಲು ಸಾಧ್ಯವಾಯ್ತು.” ಅಂತ ಲಿಸಾ ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಲಿಸಾ ತಮ್ಮ ಉದ್ದಿಮೆಯ ಆರಂಭದ ದಿನಗಳಲ್ಲಿ ಸಾಕಷ್ಟು ಸವಾಲುಗಳನ್ನೂ ಎದುರಿಸಿದ್ರು. ಐ ಬ್ರಾಂಡ್ಸ್ ಬೆವರೇಜಸ್ ಲಿಮಿಟೆಡ್ ಶುರುಮಾಡುವಾಗ ಹಲವಾರು ಮಂದಿ ಆಕೆಯನ್ನ ಹಿಮ್ಮೆಟಿಸಲು ಪ್ರಯತ್ನಿಸಿದ್ರು. ಕೆಲವು ಇನ್ವೆಸ್ಟರ್ಸ್ ತಮ್ಮ ಕಂಪೆನಿಯೊಂದಿಗೆ ಸೇರಿಕೊಳ್ಳುವಂತೆ ಬಲವಂತದ ಆಫರ್ ಗಳನ್ನ ನೀಡಿದ್ರು. ಒಬ್ಬಳು ಮಹಿಳೆಯಾಗಿ ಪುರುಷರು ನಡೆಸುವ ಉದ್ದಿಮೆಯನ್ನ ಆಯ್ದುಕೊಂಡಾ ಅದೆಷ್ಟೋ ಜನ ನಕ್ಕು ಬಿಟ್ಟಿದ್ರು. ಆದ್ರೆ ಸದಾ ಹೊಸತನವನ್ನ ನೋಡಲು ಹಾಗೂ ಸಾಧಿಸಲು ಬಯಸುವ ಲಿಸಾ ಸ್ರೋ ಇವತ್ತು ಅದ್ಭುತವಾದುದನ್ನ ಸಾಧಿಸಿದ್ದಾರೆ. ಭಾರತದ ಲಿಕ್ಕರ್ ದುನಿಯಾವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಲೇಖಕರು: ತಾನ್ವಿ ದುಬೇ

ಅನುವಾದಕರು: ಬಿ ಆರ್ ಪಿ ಉಜಿರೆ