ಅಂದು ರೆಸ್ಟೋರೆಂಟ್​ನಲ್ಲಿ ಕಸಗುಡಿಸುತ್ತಿದ್ದವ, ಇಂದು 80 ರೆಸ್ಟೋರೆಂಟ್​ಗಳ ಮಾಲಿಕ

ಟೀಮ್​ ವೈ.ಎಸ್​. ಕನ್ನಡ

ಅಂದು ರೆಸ್ಟೋರೆಂಟ್​ನಲ್ಲಿ ಕಸಗುಡಿಸುತ್ತಿದ್ದವ, ಇಂದು 80 ರೆಸ್ಟೋರೆಂಟ್​ಗಳ ಮಾಲಿಕ

Thursday December 24, 2015,

3 min Read


80 ರೆಸ್ಟೋರೆಂಟ್​ಗಳ ಮಾಲೀಕ.. ಪಿ.ರಾಜಗೋಪಾಲ್

ಮನೆಯಿಂದ ಹೊರಗಡೆ ಹೋಗಿ ಒಂದು ಒಳ್ಳೆ ಊಟ ಮಾಡಬೇಕಾದ್ರೆ, ಮೊದಲು ನಾವು ನಮ್ಮ ಸುತ್ತ-ಮುತ್ತಲಿರುವ ಉತ್ತಮಹೋ ಬಗ್ಗೆ ಯೋಚಿಸುತ್ತೇವೆ. ಅದು ಸುಂದರವಾಗಿರಬೇಕು, ಮತ್ತು ಉತ್ತಮ ಸ್ವಾಧಿಷ್ಟಕರ ಖಾದ್ಯ, ಜೊತೆಗೆ ರುಚಿ-ಶುಚಿಯಿಂದ ಕೂಡಿರಬೇಕು. ಹೀಗೇಲ್ಲಾ ಯೋಚಿಸಿದ್ರೆ ಥಟ್ ಅಂತ ನೆನಪು ಬರುವುದು ನಮ್ಮ ಮನೆಯ ಹತ್ತಿರ ವಿರುವ ಸರವಣ್ ಭವನ್. ಅಲ್ಲಿ ನಮ್ಮಿಷ್ಟದ ಎಲ್ಲ ತಿನಿಸುಗಳು ಸಿಗುತ್ತವೆ. ಇದೆಲ್ಲ ಆಗಿರುವುದು ನಿಮ್ಮ ವಿಶ್ವಾಸದಿಂದ. ಗ್ರಾಹಕರ ವಿಶ್ವಾಸಗಳಿಸುವಲ್ಲಿ ಸರವಣ್ ಭವನ್ ಯಶಸ್ವಿಯಾಗಿದೆ.

ಸರವಣ ಭವನ ಸ್ಥಾಪಿಸುವುದರಲ್ಲಿ, ಜನರ ವಿಶ್ವಾಸ ಗೆಲ್ಲುವುದರಲ್ಲಿ ಪಿ.ರಾಜಗೋಪಾಲ್ ಅವರ ಶ್ರಮವಿದೆ. ಚೆನ್ನೈನ ಟಿ ನಗರದಲ್ಲಿ ಒಂದು ಹೊಟೆಲ್ ಇಲ್ಲವೆಂಬ ಸಂಗತಿ ರಾಜಗೋಪಾಲ್ ಅವರಿಗೆ ತಿಳಿಯಿತು. ಕೆ.ಕೆ ನಗರದಲ್ಲಿ ವಾಸಿಸುತ್ತಿದ್ದ ಅವರು. ಒಂದು ರೆಸ್ಟೊರೆಂಟ್ ತೆಗೆಯುವ ನಿರ್ಧಾರ ಮಾಡಿದ್ರು. ಈ ಮೂಲಕ ಜನರ ವಿಶ್ವಾಸವನ್ನು ಗಳಿಸುವುದು ಅವರ ಗುರಿಯಾಗಿತ್ತು. ಕೆಲಸ ಕಷ್ಟಕರದಾಗಿತ್ತು ಆದರೆ ಅಸಾಧ್ಯವಾಗಿರಲಿಲ್ಲ. ಧೃಡ ಸಂಕಲ್ಪದ ಕಾರಣ ಇಂದು ರಾಜಗೋಪಾಲ್ ಯಶಸ್ವಿಯಾಗಿದ್ದಾರೆ. ಭಾರತದ ವಿವಿಧ ನಗರಗಳಲ್ಲಿ 33 ರೆಸ್ಟೋರೆಂಟ್​ಗಳ ಮತ್ತು ವಿದೇಶದಲ್ಲಿ 47 ಸರವಣ ಭವನ್ ಶಾಖೆಗಳಿವೆ.

image


ಬಾಲ್ಯ ಮತ್ತು ಬಡತನದ ದಿನಗಳು

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ವರ್ಷದಲ್ಲಿ ರಾಜಗೋಪಾಲ್ ಅವರ ಜನ್ಮ ತಮಿಳುನಾಡಿನ ಸಣ್ಣ ಗ್ರಾಮದಲ್ಲಾಯ್ತು. ತಂದೆ ಬಡ ರೈತನಾಗಿದ್ರು. ಒಂದೊತ್ತು ಊಟಕ್ಕೆ ಹೇಗೆ ಏನ್ನುವಂತ ಕುಟುಂಬ ಅವರದಾಗಿತ್ತು. ಹೇಗೋ ತಂದೆ ಕಷ್ಟಪಟ್ಟು ರಾಜಗೋಪಾಲ್ ಅವರನ್ನು 7ನೇ ತರಗತಿವರೆಗೆ ವ್ಯಾಸಾಂಗ ಮಾಡಿಸಿದ್ರು. ಮನೆಯಲ್ಲಿ ಕಿತ್ತು ತಿನ್ನುವ ಬಡತನದ ಹಿನ್ನಲೆ ಅವರು ಶಾಲೆ ಬಿಟ್ಟು. ಸಣ್ಣ ವಯಸ್ಸಿನಲ್ಲೇ ಹೋಟೆಲ್​ವೊಂದರಲ್ಲಿ ಪಾತ್ರೆ ತೊಳೆಯುವ, ಕಸಗುಡಿಸುವ ಕೆಲಸಕ್ಕೆ ಸೇರಿಕೊಂಡ್ರು. ಹಾಗೇ ಚಹಾ ಮತ್ತು ಹಲವು ಖಾದ್ಯಗಳನ್ನು ಮಾಡುವುದನ್ನು ಕಲಿತರು. ಆನಂತರ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಿದ್ರು. ಆದೇ ಸಮಯದಲ್ಲಿ ಒಂದು ಸಣ್ಣ ಸನ್ನೆಯನ್ನು ಬೇಗ ಅರಿತ ಅವರು. ಅವರ ತಂದೆ ಸಂಬಂಧಿಗಳಿಂದ ಹಣ ಪಡೆದು ಕಿರಾಣಿ ಅಂಗಡಿಯನ್ನು ಆರಂಭಿಸಿದ್ರು. ಅದ್ಯಾಕೋ ಅವರಿಗೆ ಅದು ಆಗಿ ಬರಲಿಲ್ಲ. ಆರಂಭದಲ್ಲೇ ತುಂಬಾ ನಷ್ಟ ಅನುಭವಿಸಿದ್ರು. ಆದರೆ ಅವರು ಎಂದೂ ಛಲ ಮತ್ತು ವಿಶ್ವಾಸ ಬಿಡಲಿಲ್ಲ. ಏನೇ ಆಗಲಿ ಏನಾದರೂ ಸಾಧಿಸುತ್ತೇನೆ ಎಂಬ ವಿಶ್ವಾಸ ರಾಜಗೋಪಾಲ್ ಅವರ ಕೈ ಹಿಡಿಯಿತು.

ತಮ್ಮ ನಂಬಿಕೆಯನ್ನು ನಿಜ ಮಾಡುವ ಕಾಲ ಸಮೀಪವಾಗಿತ್ತು. ನಾವು ಹೇಳುತ್ತಿರುವುದು 1979ರ ಮಾತು. ಆಗವೊಬ್ಬ ಸೆಲ್ಸ್ಮ್ಯಾನ್ ಕೆ.ಕೆ ನಗರದಲ್ಲಿ ತಿನ್ನಲು ಹೋದರೆ ಒಂದು ಹೋಟೆಲ್ ಕೂಡ ಇಲ್ಲವೆಂದು, ಮಾತ್-ಮಾತ್ನಲ್ಲೇ ಹೇಳಿದ್ರು. ಅದೇ ರಾಜಗೋಪಾಲ್ ಅವರ ಅದೃಷ್ಟವನ್ನು ಬದಲಿಸಿತು. 1981ರಲ್ಲಿ ಅಂದರೆ ಎರಡು ವರ್ಷದಲ್ಲೇ ಅವರು ಸರವಣ ಭವನವನ್ನು ಆರಂಭಿಸಿದ್ರು. ಆ ಕಾಲದಲ್ಲಿ ಜನರು ಅಷ್ಟಾಗಿ ಹೊರಗಡೆ ಬಂದು ತಿಂಡಿ-ತಿನಿಸುಗಳನ್ನು ತಿನ್ನುತ್ತಿರಲಿಲ್ಲ. ಅಂತಹ ಸಮಯದಲ್ಲಿ ಹೊಸ ಬ್ಯುಸಿನೆಸ್​ನಲ್ಲಿ ದಾಪುಗಾಲು ಹಾಕಿದ್ರು.

ಕೆಲಸ ಮತ್ತು ಕೆಲಸಗಾರರಿಗೆ ಕೆಲ ನಿಯಮಗಳು

ರೆಸ್ಟೊರೆಂಟ್ ನಡೆಸುವ ಸಲುವಾಗಿ ಪಿ .ರಾಜಗೋಪಾಲ್ ಕೆಲ ವಿಷಯಗಳಲ್ಲಿ ಸಖತ್ ಕಠಿಣ ಕ್ರಮ ಕೈಗೊಂಡ್ರು. ಯಾವ ಕೆಲಸಗಾರರು ಕಳಪೆ ಗುಣಮಟ್ಟದ ಮಸಾಲೆ ಬಳಸಿದ್ರು ಅವರ ಸಂಬಳವನ್ನು ಕಟ್ ಮಾಡುತ್ತಿದ್ರು. ಯಾರು ಗುಣಮಟ್ಟದಲ್ಲಿ ಸ್ವಲ್ಪ ಚೌಕಾಸಿ ಮಾಡಿದ್ರೆ ಹೆಚ್ಚು ಲಾಭಗಳಿಸಬಹುದು ಎಂದು ಸಲಹೆ ಕೊಟ್ಟವರನ್ನು, ಕೆಲಸದಿಂದ ಹೊರಹಾಕಿದ್ರು. ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವುದು ಅವರ ಮುಖ್ಯ ಧ್ಯೇಯವಾಗಿತ್ತು. ಆದರೆ ಅವರು ಇದಕ್ಕೆ ತುಂಬಾ ನಷ್ಟ ಅನುಭವಿಸಬೇಕಾಯ್ತು. ಪ್ರತಿ ತಿಂಗಳಿಗೆ 10 ಸಾವಿರ ರೂಪಾಯಿ ಸಾಲ ಮಾಡಿ, ಸರವಣ ಭವನ ನಡೆಸುವಂತಹ ಪರಿಸ್ಥಿತಿ ಬಂತು. ಆದರೆ ಕಷ್ಟಪಡುವವರಿಗೆ ದೇವರು ತಡವಾಗಿಯಾದ್ರು ಕೈ ಹಿಡಿಯುತ್ತಾನೆಂಬುದು ಸಾಭೀತು ಆಯ್ತು. ನಷ್ಟದಲ್ಲಿದ್ದ ರೆಸ್ಟೊರೆಂಟ್ ಸಖತ್ ಲಾಭದಲ್ಲಿ ನಡೆಯಿತು. ಆಗ ಲಾಭದ ಸುರಿಮಳೆಯೇ ಆಗಲು ಆರಂಭಿಸಿತು.

ಕೇವಲ ಸ್ವಚ್ಚತೆಯೊಂದೇ ಸರವಣ ಭವನದ ಯಶಸ್ಸಿನ ಗುಟ್ಟಲ್ಲ. ಪಿ.ರಾಜಗೋಪಾಲ್ ತಮ್ಮ ಕೆಲಸಗಾರರನ್ನು ತಮ್ಮ ಕುಟುಂಬದವರಂತೆ ನೋಡಿಕೊಳ್ತಾರೆ. ಯಾಕಂದ್ರೆ ಕೆಲಸಗಾರರು ಖುಷಿಯಾಗಿದ್ರೆ, ರೆಸ್ಟೋರೆಂಟ್​ ವಾತಾವರಣವು ಚೆನ್ನಾಗಿರುತ್ತದೆ. ಹಾಗಾಗಿ ಅವರ ಯೋಗ ಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂತಾರೆ ರಾಜಗೋಪಾಲ್​. ಇದಕ್ಕೆ ಉದಾಹರಣೆಯೆಂದರೆ ಸರವಣ ಭವನದಲ್ಲಿ ತಟ್ಟೆಯ ಬದಲಿಗೆ ಬಾಳೆ ಎಲೆಯ ಮೇಲೆ ಊಟ ಬಡಿಸಲಾಗುತ್ತೆ. ಇಲ್ಲಿ ಯಾರು ಪ್ಲೇಟ್ ಎತ್ತುವ, ತೊಳೆಯುವ ಅವಶ್ಯಕತೆಯಿಲ್ಲ. ಜೊತೆಗೆ ಯಾವ ಕಾರ್ಮಿಕರು ತಡರಾತ್ರಿಯವರೆಗೆ ಸಿನಿಮಾ ನೋಡಲು ಬಿಡುವುದಿಲ್ಲ. ಯಾಕಂದ್ರೆ ಇದರಿಂದ ಕೆಲಸಗಾರರ ಕಾರ್ಯದಕ್ಷತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತಿಂಗಳಿಗೆ ಒಂದು ಸಲ ಎಲ್ಲ ಕಾರ್ಮಿಕರು ಹೇರ್ ಕಟಿಂಗ್ ಮಾಡಲೇ ಬೇಕು. ಇದರಿಂದ ನೋಡಲು ಚೆನ್ನಾಗಿ ಕಾಣಿಸುತ್ತಾರೆ. ಜೊತೆಗೆ ಊಟದಲ್ಲಿ ಕೂದಲು ಬೀಳುವಂತಹ ಸಾಧ್ಯತೆ ಕೂಡ ಕಮ್ಮಿಯಿರುತ್ತದೆ. ಎಲ್ಲಾ ಕಾರ್ಮಿಕರಿಗೂ ಇರಲು ಮನೆಯ ವ್ಯವಸ್ಥೆ ಮಾಡಿಕೊಡಲಾಗಿದೆ. ಜೊತೆಗೆ ಅವರು ಊರಿಗೆ ಹೋಗುವಾಗ ಹಣ ಕೂಡ ನೀಡಲಾಗುತ್ತದೆ. ಮದುವೆಯಾದವರಿಗೆ ಆಗುವವರಿಗೆ ಆರ್ಥಿಕ ಸಹಾಯ ಕೂಡ ಮಾಡಲಾಗುತ್ತದೆ. ಇಬ್ಬರು ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ರಾಜಗೋಪಾಲ್ ನೋಡಿಕೊಳ್ತಾರೆ. ಜೊತೆಗೆ ಯಾರಾದ್ರು ಹುಷಾರು ತಪ್ಪಿದ್ರೆ ಅವರು ಸಂಪೂರ್ಣ ಚೇತರಿಕೆ ಆಗುವ ತನಕ ಅವರನ್ನು ನೋಡಿಕೊಳ್ಳ;ಉ ಇಬ್ಬರು ಇರ್ತಾರೆ.

ಪ್ರಕರಣ ದಾಖಲು

ಸಾವಿರಾರು ಕೆಲಸಗಾರರನ್ನು ನೋಡಿಕೊಳ್ಳುವ, ರಾಜಗೋಪಾಲ್​​ಗೆ 2009 ತುಂಬಾ ಕೆಟ್ಟದಾಗಿತ್ತು. ಕೊಲೆಯ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಾಯ್ತು. ತಮ್ಮ ಮ್ಯಾನೇಜರ್ ಮಗಳು ಜೀವಾಜ್ಯೋತಿ ಎಂಬಾಕೆ ಸಂತರಾಮ ಎಂಬ ಹುಡುಗನನ್ನು ಲವ್ ಮಾಡುತ್ತಿದ್ರು. ಆದರೆ ರಾಜಗೋಪಾಲ್ ಜೀವಜ್ಯೋತಿಯನ್ನು ಬೇರೆಯವರೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ರು. ಆದರೆ ಸಂತರಾಮ ಅವರ ಅಪಹರಣ ಆಯ್ತು. ಕೆಲ ದಿನಗಳ ನಂತರ ಸಂತರಾಮ ಶವ ಸಿಕ್ತು. ಈ ಹಿನ್ನಲೆ ಪೊಲಿಸರ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು, ಬಂಧಿಸಲಾಯ್ತು. ಯಾವುದೇ ಸಾಕ್ಷಿ ಸಿಗದ ಕಾರಣ ಅವರನ್ನು ಜಾಮೀನಿನ ಮೇಲೆ ಬೀಡಲಾಯ್ತು.

ಒಂದೊಮ್ಮ ಒಬ್ಬ ಪತ್ರಕರ್ತ ಸರವಣ ಭವನದ, ಓರ್ವ ಅಧಿಕಾರಿ ಬಳಿ ಬಂದು ಹೀಗೆ ಕೇಳಿದ್ರು. ಸರವಣ ಭವನದಲ್ಲಿ ಊಟ ಮಾಡಿ ಬಿಲ್ ಕೊಡುವುದೆಂದರೆ. ಕೊಲೆಗಡುಕನ ಜೇಬು ತುಂಬಿಸಿದಂತೆಂದು. ಅದಕ್ಕುತ್ತರಾವಾಗಿ ಅಧಿಕಾರಿ ಹೀಗೆ ಹೇಳಿದ್ರು. ನಾವು ಜೀವನದಲ್ಲಿ ಎಷ್ಟೋ ಅಪರಿಚಿತರ ಮಧ್ಯೆ ಬದುಕುತ್ತೇವೆ ಅವರೊಂದಿಗೆ ವ್ಯವರಿಸುತ್ತೇವೆ. ಅವರು ಎಂಬುವುದೇ ನಮ್ಮಗೆ ತಿಳಿದಿರುವುದಿಲ್ಲ. ಆದರೂ ಅವರ ಮಧ್ಯೆ ನಾವು ಬದುಕುತ್ತೇವೆ. ಇಂತಹದರಲ್ಲಿ ಉತ್ತಮ ಸೇವೆ ಮತ್ತು ರುಚಿ-ಶುಚಿಯಾದ ತಿಂಡಿ ತಿನಿಸು ಪೂರೈಸುತ್ತಿರುವ ಸರವಣ ಭವನವನ್ನು ಕಡೆಗಣಿಸಲು, ಅಲ್ಲಿ ಹೋಗದೆ ಇರಲು ಸಾಧ್ಯವೇ ಇಲ್ಲ ಎಂತಾರೆ..


ಲೇಖಕರು: ಧೀರಜ್ ಸಾರ್ಥಕ್

ಅನುವಾದಕರು: ಎನ್.ಎಸ್. ರವಿ