ಮೊಬೈಲ್​ನಲ್ಲೇ ಪಿಯುಸಿ ಪ್ರಶ್ನೆ ಪತ್ರಿಕೆ..!

ಉಷಾ ಹರೀಶ್​​

1

ಇತ್ತಿಚಿನ ದಿನಗಳಲ್ಲಿ ಯಾರ ಕೈಯಲ್ಲಿ ನೋಡಿದರೂ ಮೊಬೈಲ್ ಇರುತ್ತದೆ. ಏಳೆಂಟು ವರ್ಷಗಳ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳ ಕೈಯಲ್ಲಿ ಸ್ಮಾರ್ಟ್ ಫೋನ್ ಇರುತ್ತದೆ. ಮೊಬೈಲ್​​ನಿಂದಾಗಿ ಮಕ್ಕಳು ಸರಿಯಾಗಿ ಓದುತ್ತಿಲ್ಲ ಎಂದು ಎಲ್ಲರ ಮನೆಯಲ್ಲೂ ಮಕ್ಕಳನ್ನು ದೂರುತ್ತಾರೆ. ಮಕ್ಕಳು ಸಹ ಪರಿಕ್ಷೆ ಹತ್ತಿರ ಬಂದರೂ ಮೊಬೈಲ್ ಸಹವಾಸ ಬಿಡದೆ ಯಾವಾಗಲೂ ಫೇಸ್ಬುಕ್, ವಾಟ್ಸ್ ಆ್ಯಪ್ಗಳಲ್ಲೇ ಬ್ಯುಸಿಯಾಗಿರುತ್ತಾರೆ. ಇದರಿಂದ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂಬ ಆತಂಕ ಪಾಲಕರದ್ದು. ಆದರೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ದೀಕ್ಷಾ ಕಾಲೇಜು ಆ ಮೊಬೈಲ್ನಿಂದಲೇ ಶಿಕ್ಷಣ ಕಲಿಯುವ ಹೊಸ ವಿಧಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿದೆ.

ಜನವರಿಯಿಂದ ಮಾರ್ಚ್ ತಿಂಗಳವರೆಗ ಸಾಲು ಸಾಲು ಪರೀಕ್ಷೆಗಳಿರುತ್ತವೆ. ಈ ತಿಂಗಳಿನಲ್ಲಿ ಪಿಯುಸಿ ವಿದ್ಯಾರ್ಥಿಗಳಂತೂ ಪ್ರತಿ ದಿನ ಆತಂಕದಲ್ಲೇ ದಿನ ದೂಡುತ್ತಾರೆ. ಪಿಯುಸಿ ಇವರ ಜೀವನದ ಬಹು ಮುಖ್ಯ ಘಟ್ಟ. ಈ ಹಂತವನ್ನು ಯಶಸ್ವಿಯಾಗಿ ಪೂರೈಸಿಕೊಂಡರೆ ವಿದ್ಯಾರ್ಥಿಗಳ ಭವಿಷ್ಯ ಗಟ್ಟಿಯಾದಂತೆಯೇ ಸರಿ. ಇಂತವರ ಆತಂಕವನ್ನು ಸ್ವಲ್ಪ ಮಟ್ಟಿಗೆ ದೂರ ಮಾಡುವ ಉದ್ದೇಶದಿಂದ ದೀಕ್ಷಾ ಕಾಲೇಜು ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ‘ದೀಕ್ಷಾ ಪಾಲ್’ ಎಂಬ ಆಂಡ್ರಾಯ್ಡ್ ಅಪ್ಲಿಕೇಶನ್ ಒಂದನ್ನು ಅಭಿವದ್ಧಿಪಡಿಸಿದೆ.

ಇದನ್ನು ಓದಿ

ನೇಕಾರರ ಬದುಕು ಬದಲಿಸಿದ "ಹೀಯಾ"..!

ಪಿಯುಸಿ ಪರೀಕ್ಷೆಯನ್ನು ಗುರಿಯಾಗಿಟ್ಟುಕೊಂಡು ಸಿದ್ಧ ಪಡಿಸಿರುವ ಈ ಆಪ್ಲಿಕೇಷನ್​ನಲ್ಲಿ ಪ್ರಶ್ನೆಗಳ ಬ್ಯಾಂಕಗಳು ಇದೆ. ವಿದ್ಯಾರ್ಥಿಗಳಿಗೆ ಸಮಯ ಬಹಳ ಮುಖ್ಯವಾಗಿದ್ದು, ನೋಟ್ಸ್​​ನಲ್ಲಿನ ಯಾವುದೋ ಪ್ರಶ್ನೆಗೆ ಉತ್ತರ ಹುಡುಕಲು ಸಮಯ ವ್ಯರ್ಥ ಮಾಡುಬೇಕಿಲ್ಲ. ತಮ್ಮ ಮೊಬೈಲ್​​ನಲ್ಲಿ ಈ ಆ್ಯಪ್ ಹಾಕಿಕೊಂಡು ಬ್ರೌಸ್ ಮಾಡಿದರೆ ಸಾಕು ಕ್ಷಣ ಮಾತ್ರದಲ್ಲಿ ವಿದ್ಯಾರ್ಥಿಗಳು ಹುಡುಕುವ ಯಾವುದೇ ಪ್ರಶ್ನೆಗೆ ಉತ್ತರ ದೊರೆಯುತ್ತದೆ. ಈ ಆ್ಯಪ್​ನಲ್ಲಿ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗೆ ಉತ್ತರ ಸಿಗುವುದರ ಜೊತೆಗೆ ವಿದ್ಯಾರ್ಥಿಗಳ ಜೊತೆಗೆ ಉತ್ತಮ ಸಂಪರ್ಕ ಹೊಂದಲು ಮತ್ತು ಅವರಿಗೆ ಮೊಬೈಲ್ ಮೂಲಕ ವಿಷಯವನ್ನು ಪರಿಣಾಮಕಾರಿಯಾಗಿ ಮುಟ್ಟಿಸಲು ಸಹಾಯಕವಾಗುತ್ತದೆ.

ಆ್ಯಪ್​ನಲ್ಲಿ ಏನಿದೆ..?

ಈ ಆ್ಯಪ್​ನಲ್ಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪಠ್ಯಕ್ರಮದಲ್ಲಿರುವಂತೆ ಕನ್ನಡ, ಹಿಂದಿ,ಸಂಸ್ಕೃತ,ಇಂಗ್ಲೀಷ್ ಮತ್ತು ವಿಜ್ಞಾನ ವಿಷಯಗಳ ಪಠ್ಯಗಳು ಮತ್ತು ಪ್ರಶ್ನೆ ಬ್ಯಾಂಕ್​​ಗಳು ಸಿಗುತ್ತದೆ. ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಣ ನೀಡುತ್ತಿರುವುದರಲ್ಲಿ ಆ್ಯಪ್ ಅಭಿವೃದ್ಧಿ ಪಡಿಸಿರುವುದು ದೀಕ್ಷಾ ಪಾಲ್ ಆ್ಯಪ್ ಒಂದೇ. ತಂತ್ರಜ್ಞಾನ ಆಧಾರಿತ ಶಿಕ್ಷಣ ಮಾರುಕಟ್ಟೆಯಲ್ಲಿರುವ ಏಕ ಮಾತ್ರ ಆ್ಯಪ್ ಇದಾಗಿದೆ. ಈ ಆ್ಯಪ್​​ನಲ್ಲಿ ಒಂದು ಅಂಕದ ಪ್ರಶ್ನೆ, ರ್ಯಾಂಕ್ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಹೀಗೆ ಎರಡು ರೀತಿಯ ಪ್ರಶ್ನೆ ಬ್ಯಾಂಕ್ ಸಿಗುತ್ತದೆ. ಪ್ರತಿ ಪಾಠವನ್ನು ಸಮಗ್ರವಾಗಿವ ವಿವರಿಸುವ ವಿಡಿಯೋ ಸಹ ಈ ಆ್ಯಪ್​​ನಲ್ಲಿ ಲಭ್ಯವಾಗುತ್ತದೆ. ಸುಮಾರು ಐದಾರು ವರ್ಷಗಳ ಪ್ರಶ್ನೆಪತ್ರಿಕೆಗಳು ಅದಕ್ಕೆ ಉತ್ತರಗಳು ಎಲ್ಲವೂ ಇದರಲ್ಲಿ ಸಿಗುವಂತೆ ಅಭಿವೃದ್ಧಿಪಡಿಸಿದ್ದಾರೆ ಇದರಲ್ಲಿ ಸಿಗುತ್ತದೆ.

ಅನುಭವಿ ಶಿಕ್ಷಕರಿಂದ ತಯಾರಾದ ಪ್ರಶ್ನೆ ಬ್ಯಾಂಕ್

ಈ ಆ್ಯಪ್​ನಲ್ಲಿ ಇರುವ ಪ್ರತಿಯೊಂದು ಪ್ರಶ್ನೆ ಬ್ಯಾಂಕ್ ಮತ್ತು ಉತ್ತರವನ್ನು ಸಿದ್ಧಪಡಿಸಿರುವುದು ಅನುಭವಿ ಶಿಕ್ಷಕರಿಂದ . ವಿದ್ಯಾರ್ಥಿ ಸ್ನೇಹಿಯಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಆ್ಯಪ್ ಮೂಲಕ ಶಿಕ್ಷಕರೊಂದಿಗೆ ನೇರವಾಗಿ ಮಾತನಾಡಿ ಸಮಸ್ಯೆ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಅಭಿವದ್ಧಿ ಹೊಂದುತ್ತಿರುವ ತಂತ್ರಜ್ಞಾನ ತನ್ನ ವ್ಯಾಪ್ತಿಯನ್ನು ಎಲ್ಲ ಕ್ಷೇತ್ರಕ್ಕೂ ವಿಸ್ತಾರ ಮಾಡಿಕೊಳ್ಳುತ್ತಿದೆ. ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ದೀಕ್ಷಾ ಪಾಲ್ ಈ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಈ ಮೂಲಕ ಸಂಸ್ಥೆ ವಿದ್ಯಾರ್ಥಿಗಳ ವಿಕಸನದ ಅಗತ್ಯಗಳನ್ನು ಪೂರೈಸುವ ನವೀನ ಶೈಲಿಯನ್ನು ಆರಂಭಿಸಿದೆ.

ಆ್ಯಪ್​ ಬಗ್ಗೆ ಯಾರು ಏನನ್ನುತ್ತಾರೆ..?

ಇತ್ತೀಚಿನ ದಿನಗಳಲ್ಲಿ ಎಲ್ಲ ವಿದ್ಯಾರ್ಥಿಗಳ ಕೈಯಲ್ಲೂ ಸ್ಮಾರ್ಟ್ ಫೋನ್​​ಗಳಿರುತ್ತವೆ. ಆ ಫೋನ್​ಗಳು ಶಿಕ್ಷಣವನ್ನು ನೀಡಲು ಒಂದು ಉತ್ತಮ ಮಾಧ್ಯಮವಾಗಿದೆ. ಈ ಅವಕಾಶವನ್ನು ಬಳಸಿಕೊಂಡ ನಾವು ಈ ಆ್ಯಪ್​ನ್ನು ಅಭಿವೃದ್ದಿಗೊಳಿಸಿದೆವು. ಈ ದೀಕ್ಷಾ ಪಾಲ್ ಆ್ಯಪ್ ವಿದ್ಯಾರ್ಥಿ ಸ್ನೇಹಿಯಾಗಿ ಕೆಲಸ ಮಾಡುತ್ತದೆ, ಅಷ್ಟೇ ಅಲ್ಲದೇ ಇದು ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂವಹನ ನಡೆಸಿ ಕಲಿಯಲು ಸಹಕಾರಿಯಾಗುತ್ತದೆ. ಈ ಆ್ಯಪ್​ನಿಂದಾಗಿ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಲು ಅನುಕೂಲವಾಗುತ್ತದೆ. ಈ ಆ್ಯಪ್​​ನಲ್ಲಿರುವ ಪ್ರತಿಯೊಂದು ಪ್ರಶ್ನೆಯೂ ಅನುಭವಿಗಳಿಂದ ತಯಾರದದ್ದು.

-ಡಾ. ಶ್ರೀಧರ್, ಎಂಡಿ, ಎಸಿಇ ಕ್ರಿಯೆಟೀವ್ ಲರ್ನಿಂಗ್

ಇದನ್ನು ಓದಿ

1. "ಹೇ" ಟ್ಯಾಕ್ಸಿ...!

2. ರಿಟೈರ್ಡ್​ಮೆಂಟ್ ಲೈಫ್ ನಲ್ಲೂ ಕಾಣಬಹುದು ಅದ್ಭುತಗಳ ಕನಸು.. !

3. ರೊಟ್ಟಿ ಮಾಡುವ ರೋಬೋಟ್...

Related Stories

Stories by usha harish