ಫ್ರಿಚಾರ್ಜ್​ ಹಿಂದಿದೆ ಅದ್ಭುತ ಕಥೆ..!

ಟೀಮ್​​ ವೈ.ಎಸ್​​.

0

ಫ್ರೀಚಾರ್ಜ್ ಸಂಸ್ಥೆಯ ಸಹ ಸಂಸ್ಥಾಪಕರಾದ ಕುನಾಲ್ ಶಾ, ತಮ್ಮ ನಂಬುಗೆಯ ಉದ್ಯೋಗಿ ಹಾಗೂ ಫ್ರೀಚಾರ್ಜ್ ಸಂಸ್ಥೆಯ ಆಧಾರ ಸ್ಥಂಭ ಕೋರತ್ ಪೌಲ್​​ರನ್ನು ಮಿಸ್ಟರ್ ಡಿಪೆಂಟಬಲ್, ಮಿಸ್ಟರ್ ರಿಲಾಯಬಲ್, ಹಾಗೂ ಮಿಸ್ಟರ್ ಹೆಲ್ಪ್​ಫುಲ್ ಎಂದೇ ಗುರುತಿಸುತ್ತಾರೆ. ಈ ಮಾತಿನಂತೆ ಅವರು ನಂಬಿಕೆಗೆ ಅರ್ಹರು, ಅವಲಂಭನೆಗೆ ಅರ್ಹರು ಹಾಗೂ ನೆರವು ನೀಡಲೂ ಬಲ್ಲರು. ಏಕೆಂದರೆ ಅವರು ಆರಂಭಿಸಿರುವ ಉದ್ಯಮವೇ ಅಂತಹದ್ದು. ಗ್ರಾಹಕರು ಬಯಸುವಂತಹ ವಿಶ್ವಾಸಾರ್ಹ ಸೇವೆಯನ್ನು ಒದಗಿಸುವ ಮೂಲಕ ಫ್ರೀಚಾರ್ಜ್ ಸಂಸ್ಥೆ ಮಾರುಕಟ್ಟೆಯಲ್ಲಿ ತನ್ನದೇ ಚಾದ ಚಾಪು ಉಳಿಸಿಕೊಂಡಿದೆ. ಅವರ ಸಂಸ್ಥೆ ತಕ್ಷಣದ ಬಿಲ್ ಪಾವತಿ ಹಾಗೂ ತ್ವರಿತಗತಿಯ ರೀಚಾರ್ಜ್ ಅನುಕೂಲ ಕಲ್ಪಿಸಿ ಗ್ರಾಹಕರ ಹಲವು ತೊಂದರೆಗಳನ್ನು ದೂರಮಾಡಿದೆ. ಈ ಎಲ್ಲಾ ಯಶಸ್ಸಿನ ಹಿಂದೆ ಅವಿರತ ಶ್ರಮವಿದೆ.

ಕಳೆದ ಏಪ್ರಿಲ್​​ನಲ್ಲಿ ಫ್ರೀಜಾರ್ಜ್ ಸಂಸ್ಥೆಯೊಂದಿಗೆ ಸ್ನಾಪ್​​ಡೀಲ್ ಮೈತ್ರಿ ಮಾಡಿಕೊಂಡಿತು. ಫ್ರೀಚಾರ್ಜ್ ಇತ್ತೀಚೆಗಷ್ಟೆ ಹೆಚ್ಚುವರಿಗೊಳಿಸಿದ ಬಂಡವಾಳ 80 ಮಿಲಿಯನ್ ಯುಎಸ್ ಡಾಲರ್ ಸೇರಿ ಅದರ ಒಟ್ಟು ಹೂಡಿಕೆ ಮೊತ್ತ ಬರೋಬ್ಬರಿ 120 ಮಿಲಿಯನ್ ಯುಎಸ್ ಡಾಲರ್ ಆಗಿದೆ. ಪ್ರಸ್ತುತ ಸಂಸ್ಥೆಯಲ್ಲಿ ಸುಮಾರು 200 ಜನ ಉದ್ಯೋಗಿಗಳಿದ್ದಾರೆ, ಆದರೆ ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಅಧಿಕಗೊಳಿಸುವ ಯೋಜನೆ ಸಂಸ್ಥೆಯ ಮುಂದಿದೆ.

ಔಸಮ್ ಸ್ಟಾರ್ಟ್ ಆ್ಯಪ್​​ನಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್​ವೇರ್ ಉದ್ಯೋಗಿ ಕೊರತ್ ಪೌಲ್, 2010ರಲ್ಲಿ ಪ್ರಾರಂಭವಾದ ಸಂಸ್ಥೆ ಫ್ರೀಚಾರ್ಜ್ ಸಂಸ್ಥೆಗೆ ಸೇರಿಕೊಂಡರು. ಕೋರತ್ ತಮ್ಮ ಬಾಲ್ಯದಿಂದಲೇ ತಂತ್ರಜ್ಞಾನಗಳತ್ತ ಒಲವು ಬೆಳೆಸಿಕೊಂಡಿದ್ದವರು. ಹಾಗಾಗಿ ಅವರು ಕಂಪ್ಯೂಟರ್ ಸೈನ್ಸ್​​ನಲ್ಲಿ ಬಿ.ಟೆಕ್. ಪದವಿ ಗಳಿಸಿ, ಬಳಿಕ ಜಿಂಗಾ ಸಂಸ್ಥೆಯಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದರು. ಜಿಂಗಾದಲ್ಲಿ ಅವರು ತಂತ್ರಜ್ಞಾನ ವಿಭಾಗದ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಹೊಸ ಆಯಾಮದ ತಾಂತ್ರಿಕತೆಯ ವಾಸ್ತವ ಕಲಿಕೆ ಕಲಿಸಿದ್ದು ಮಾತ್ರ ಫ್ರೀಚಾರ್ಜ್ ಸಂಸ್ಥೆ.

2013ರ ನವೆಂಬರ್ 18ರಂದು ಕೋರತ್ ಫ್ರೀ ಚಾರ್ಚ್​ಗೆ ಸೇರಿಕೊಂಡರು. ಅದು ಅವರ ಬದುಕಿನ ನಿರ್ಣಾಯಕ ತಿರುವು ನೀಡಿದ ದಿನ. ಫ್ರೀಚಾರ್ಜ್​ನಲ್ಲಿ ಕೋರತ್ ವೆಬ್ ಡೆವೆಲಪ್​​ಮೆಂಟ್​​ ತಂಡದೊಂದಿಗೆ ಕಲೆತು ತಂತ್ರಜ್ಞಾನದ ವಿನೂತನ ವಿನ್ಯಾಸಗಳನ್ನು ಅರಿತು ಅಭಿವೃದ್ಧಿಪಡಿಸುವ ಕೆಲಸಕ್ಕೆ ನೇಮಕವಾದರು.

ಕೋರತ್​ರ ಕಾರ್ಯಶ್ರದ್ಧೆಯನ್ನು ಶ್ಲಾಘಿಸುವ ಕುನಾಲ್ ಫ್ರೀಚಾರ್ಜ್​ನ ಸುಗಮ ಕಾರ್ಯಾಚರಣೆಗೆ ಕೋರತ್ ಬದ್ಧತೆಯ ಕೆಲಸವೂ ಮುಖ್ಯ ಕಾರಣ ಎಂದಿದ್ದಾರೆ. ತಮ್ಮ ಕಠಿಣ ಪರಿಶ್ರಮ ಹಾಗೂ ವೃತ್ತಿಪರತೆಯ ಜೊತೆ ಕೋರತ್ ಅನೇಕ ಸೃಜನಾತ್ಮ ಆಲೋಚನೆಗಳನ್ನೂ ಹೊಂದಿದ್ದರು. ಹಾಗಾಗಿ ಬಹುಬೇಗನೆ ಅವರನ್ನು ಸೀನಿಯರ್ ಸಾಫ್ಟ್​​ವೇರ್ ಎಂಜಿನಿಯರ್​ರಾಗಿ ಭಡ್ತಿ ನೀಡಿ ಹೆಚ್ಚಿನ ಜವಬ್ದಾರಿ ವಹಿಸಲಾಯಿತು. ಆದರೂ ದಣಿವರಿಯದೇ ನಿರಂತರವಾಗಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಫ್ರೀಚಾರ್ಜ್​ನ ಶೀಘ್ರ ಪಾವತಿ ಹಾಗೂ ತ್ವರಿತಗತಿಯ ರೀಚಾರ್ಜ್ ಸೇವೆಗೆ ಕೋರತ್​ರಂತಹ ಉದ್ಯೋಗಿಗಳ ಬದ್ಧತೆಯೇ ಕಾರಣ ಅನ್ನುವುದು ಕುನಾಲ್​​ರ ಮೆಚ್ಚುಗೆಯ ಮಾತುಗಳು.

ಕೋರತ್ ಸಧ್ಯ ಫ್ರೀಚಾರ್ಜ್​ನ ಶೀಘ್ರ ಪಾವತಿ ಹರಿವು (ಪೇಯ್ಮೆಂಟ್ ಫ್ಲೋ) ವಿಭಾಗದಲ್ಲಿ ತಮ್ಮ ತಂಡದೊಂದಿಗೆ ಕಾರ್ಯನಿರತರಾಗಿದ್ದಾರೆ. ಪರಿಣಾಮಕಾರಿಯಾಗಿ ದೊಡ್ಡ ಪ್ರಮಾಣದಲ್ಲಿ ಮಾಪನ ಪಾವತಿಯ ಮಾಡುವುದು ಫ್ರೀಚಾರ್ಜ್​ನ ಸಧ್ಯದ ಅತಿ ದೊಡ್ಡ ಸವಾಲು. ಆದರೆ ಈ ಒತ್ತಡದ ವಾತಾವರಣವನ್ನು ಕೋರತ್ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇಂತಹ ಒತ್ತಡ ಹಾಗೂ ಸವಾಲುಗಳ ವಾತಾವರಣದಲ್ಲಿಯೇ ದೊಡ್ಡ ದೊಡ್ಡ ಅವಕಾಶಗಳು ಕಾದಿವೆ. ಕೋರತ್​​ರಂತಹ ಸಿಬ್ಬಂಧಿವರ್ಗ ಈ ಅವಕಾಶಗಳನ್ನು ಪರಿಪೂರ್ಣವಾಗಿ ನಿಭಾಯಿಸುವ ವಿಶ್ವಾಸ ತಮಗಿದೆ ಅಂತಾರೆ ಕುನಾಲ್.

ನಮಗೆ ಅತ್ಯುತ್ತಮವಾದ ಪಾರದರ್ಶಕ ಹಾಗೂ ಸರಾಗವಾದ ಕಾರ್ಯಪರಿಸರದ ಅನುಕೂಲತೆಯಿದೆ. ನಮ್ಮ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಿ ತಮ್ಮ ಬಳಿಯಿರುವ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ವಿವಿಧ ಬಗೆಯ, ವಿವಿಧ ಕ್ಷೇತ್ರಗಳ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸುವತ್ತ ಹಾಗೂ ಮಾರುಕಟ್ಟೆಯ ಸದ್ಯದ ಅಗತ್ಯತೆಗಳನ್ನು ಒದಗಿಸುವತ್ತ ಗಮನಹರಿಸಿದ್ದೇವೆ ಅನ್ನುವುದು ಕುನಾಲ್​​ರ ವಿವರಣೆ.

ಫ್ರೀಚಾರ್ಜ್ ಸಂಸ್ಥೆಯ ಎಲ್ಲಾ ಆಗುಹೋಗುಗಳು ಏರಿಳಿತಗಳನ್ನು ಚರ್ಚೆ ಮಾಡಿ ಪರಿಹರಿಸಲು ಮುಖ್ಯವಾಗಿ ನಾಲ್ವರು ಪರಿಣಿತರ ತಂಡವಿದೆ. ಈ ತಂಡದಲ್ಲಿ ಸೂಕ್ತವಾಗಿ ಯೋಜಿಸಿ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕಾರ್ಯ ಸಾಧಿಸುವ ಯೋಜನೆ ರೂಪಿಸಲಾಗುತ್ತದೆ.

ಕೋರತ್ ಫ್ರೀಚಾರ್ಜ್​ನ ಹಲವು ಮಹತ್ತರ ಘಟ್ಟವನ್ನು ಹೇಳಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾದುದ್ದು, ಒಂದು ಕ್ಲೌಡ್ ಸೇವೆಯಿಂದ ಇನ್ನೊಂದು ಎ.ಡಬ್ಲ್ಯೂ.ಎಸ್. ಸರ್ವರ್​​ಗೆ ಅಪ್ಲೋಡ್ ಮಾಡಬಲ್ಲ ಸರ್ವರ್ ಮೈಗ್ರೇಷನ್. ಇದೊಂದು ಕ್ಲಿಷ್ಟಕರವಾದ ಆಯಾಮ. ಇಂತದ್ದೊಂದು ಮಹತ್ವದ ನಿರ್ಣಯ ಕೈಗೊಂಡಿದ್ದು ಮಧ್ಯರಾತ್ರಿಯಲ್ಲಿ. ಕೂಡಲೇ ಜಾರಿಗೆ ತರಲು ಮುಂದಾಗಿ ಎಲ್ಲಾ ಬಗೆಯ ತಂತ್ರಜ್ಞಾನಗಳ ಅನುಕೂಲವನ್ನು ಪಡೆದು ಕಾರ್ಯ ಸಾಧಿಸಲಾಯಿತು. ಅದು ನಿಜಕ್ಕೂ ಅತ್ಯಂತ ದೊಡ್ಡ ಸವಾಲು ಹಾಗೂ ಅತಿ ಒತ್ತಡದ ಕ್ಷಣಗಳು. ಆದರೆ ಆ ಸವಾಲನ್ನು ಸಮರ್ಪಕವಾಗಿ ಸ್ವೀಕರಿಸಿ ಯಶಸ್ವಿಯಾಗಿದ್ದು ಮುಂದೆ ಎಂತಹ ಸವಾಲನ್ನಾದರೂ ಸ್ವೀಕರಿಸಬಲ್ಲೆವು ಅನ್ನುವ ಆತ್ಮವಿಶ್ವಾಸ ಮೂಡಿಸಲು ಸಹಕಾರಿಯಾಯಿತು. ಆ ಘಟ್ಟವನ್ನು ಮರೆಯಲು ಸಾಧ್ಯವೇ ಇಲ್ಲ ಅಂತಾರೆ ಕೋರತ್.

ಕೋರತ್​​ರ ಆತ್ಮಸ್ಥೈರ್ಯ ಹಾಗೂ ಸವಾಲುಗಳನ್ನು ಎದುರಿಸುವ ಕ್ಷಮತೆಯನ್ನು ಕುನಾಲ್ ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ಪ್ರತಿಯೊಂದು ಆರಂಭಿಕ ಸಂಸ್ಥೆಗಳಿಗೆ ತನ್ನದೇ ಆದ ಅವಕಾಶಗಳಿರುತ್ತವೆ ಹಾಗೂ ಅದರ ಜೊತೆ ಅಷ್ಟೇ ಮಹತ್ವದ ಸವಾಲುಗಳಿರುತ್ತವೆ. ತ್ವರಿತಗತಿಯಲ್ಲಿ ಪ್ರತಿಕ್ರಯಿಸದಿದ್ದರೆ ಆ ಅವಕಾಶಗಳು ಬೇರೆಯವರ ಪಾಲಾಗುತ್ತವೆ. ಆದರೆ ಕೋರತ್​ರಂತಹ ಆಧಾರ ಸ್ಥಂಭಗಳಿರುವ ತನಕ ಫ್ರೀಚಾರ್ಜ್ ಅಂತಹ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಅನ್ನುವುದು ಕುನಾಲ್​​ರ ಅದಮ್ಯ ನಂಬಿಕೆ.

Related Stories