ಕೊಳತ ಟೊಮ್ಯಾಟೋದಿಂದ ವಿದ್ಯತ್ ಉತ್ಪಾದನೆ ಸಾಧ್ಯ...

ಎನ್​ಎಸ್​ಆರ್​

0

ಕಸದಿಂದಲೂ ರಸ ಮಾಡಬಹುದು ಎಂಬ ವರದಿಗಳನ್ನು ನಾವು ಆಗಾಗ ಓದುತ್ತಿರುತ್ತೇವೆ. ಆದರೆ ಕೊಳೆತ ಟೊಮ್ಯಾಟೊನಿಂದ ಕರೆಂಟ್ ತಯಾರಿಸುವಂತಹ ಒಂದು ಪ್ರಯತ್ನ ಈಗ ಯಶಸ್ವಿಯಾಗಿದೆ. ಟೊಮ್ಯಾಟೋಗೆ ಬೆಲೆಯಿಲ್ಲದೆ ರಸ್ತೆಗೆ ಚೆಲ್ಲಿ ನಷ್ಟ ಅನುಭವಿಸುವ ರೈತರ ಆಕ್ರೋಶಕ್ಕೆ ಈ ಹೊಸ ಸಂಶೋಧನೆ ಸಹಾಯವಾಗಲಿದೆ. ಕೊನೆಯ ಪಕ್ಷ ಕೊಳೆತ ಟೊಮ್ಯಾಟೋಗೆ ಒಂದು ದರ ಫಿಕ್ಸ್ ಮಾಡುವಂತ ಸುದಿನ ಬೇಗ ಬರಲಿದೆ.

ರೈತ ಅತಿಹೆಚ್ಚು ಬೆಳೆಯುವ ತರಕಾರಿಗಳಲ್ಲಿ ಟೊಮ್ಯಾಟೋ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ, ವಿಶ್ವದ ಎಲ್ಲ ದೇಶದ ಜನರಿಗೂ ಅತಿ ಚಿರಪರಚಿತ ತರಕಾರಿ ಟೊಮ್ಯಾಟೋ. ಇದು ಅತೀ ಬೇಗ ಕೊಳೆತು ಹೋಗುವ ತರಕಾರಿ ಕೂಡ ಹೌದು. ಹೀಗೆ ಕೊಳೆತ ಟೊಮ್ಯಾಟೋಗಳಿಂದ ವಿದ್ಯುತ್ ಉತ್ಪಾದಿಸಬಹುದು ಎಂದು ಅಮೇರಿಕಾದ ಸಂಶೋಧಕರು ಸಾಭೀತುಪಡಿಸಿದ್ದಾರೆ. ಭಾರತ ಮೂಲದ ವಿಜ್ಞಾನಿ ಸೇರಿದಂತೆ ಸಂಶೋಧಕರ ತಂಡವೊಂದು ಕೊಳೆತ ಟೊಮ್ಯಾಟೋದಿಂದ ವಿದ್ಯುತ್ ಉತ್ಪಾದಿಸಬಹುದೆಂಬ ಪ್ರಯೋಗ ಮಾಡಿ ಯಶಸ್ವಿಯಾಗಿದೆ.

ಇದನ್ನು ಓದಿ: ಜ್ಯೂಟ್ ಬ್ಯಾಗ್ ಕಾಲದ ನಂತ್ರ, ಈಗ ಬಾಳೆನಾರಿನ ಬ್ಯಾಗ್ ..

ತರಕಾರಿ ಮಾರುಕಟ್ಟೆ ಎಂದರೆ ಸಾಕೂ ಅಲ್ಲಿ ಕೊಳೆತು ನಾರುವ ಟೊಮ್ಯಾಟೋಗೆನು ಬರವಿರುವುದಿಲ್ಲ. ನಾನಾ ಕಾರಣಗಳಿಂದ ಎಷ್ಟೋ ಸಲ ಟೊಮ್ಯಾಟೋ ಕೊಳೆತು ಹೋಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ತರಕಾರಿ ಮಾರುಕಟ್ಟೆಯಲ್ಲಿ ಕೊಳೆತ ಟೊಮ್ಯಾಟೋ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಕೊಳೆತ, ಹಾನಿಗೊಳಗಾದ ಟೊಮ್ಯಾಟೋಗಳನ್ನು ಬಯಾಲಾಜಿಕಲ್ ಅಥವಾ ಮೈಕ್ರೋಬಿಯಲ್ ಇಲೆಕ್ಟ್ರೋ ಕೆಮಿಕಲ್ ಸೆಲ್​​ಗಳಲ್ಲಿ ಬಳಸಿದಾಗ ಅವುಗಳು ವಿದ್ಯುತ್ ಉತ್ಪಾದನೆಗೆ ಸ್ಪಂದಿಸುವ ಮೂಲಗಳಾಗಿ ವರ್ತಿಸುತ್ತದೆ, ಹೀಗಂತ ಅಮೆರಿಕದ ದಕ್ಷಿಣ ಡಕೇಟ್ ಸ್ಕೂಲ್ ಆಫ್ ಮೈನ್ಸ್ ಆ್ಯಂಡ್ ಟೆಕ್ನಾಲಜಿಯ ವಿಜ್ಞಾನಿ ನಮಿತಾ ಶ್ರೇಷ್ಠ ತಮ್ಮ ಪ್ರಯೋಗದ ಮೂಲಕ ಸಾಬೀತು ಮಾಡಿ ತೋರಿಸಿದ್ದಾರೆ.

ಈ ಸಂಶೋಧನೆಗೆ ಪ್ರೇರಣೆಯಾದ ಕಥೆ ಕೂಡ ಅದ್ಭುತವಾಗಿದೆ. ‘ಅಮೇರಿಕಾದ ಫ್ಲೋರಿಡಾದ ಪ್ರಧಾನ ಬೆಳೆ ಟೊಮ್ಯಾಟೋ . ಪ್ರತೀ ವರ್ಷ ಇಲ್ಲಿ 396,000 ಟನ್ ಟೊಮ್ಯಾಟೋ ಹಾನಿಗೊಳಗಾಗುತ್ತಿತ್ತು. ಹೀಗೆ ಹಾನಿಯಾದ ಟೊಮ್ಯಾಟೋಗಳನ್ನು ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಇಂತಹವೊಂದು ಹಲವು ಯೋಚನೆಗಳು ಬಂದವಂತೆ. ಇವುಗಳನ್ನು ನೀರಿನಲ್ಲಿ ವಿಸರ್ಜಿಸಿದರೆ, ನೀರು ಮಾಲಿನ್ಯಕ್ಕೆ ಕಾರಣವಾಗುತ್ತದೆ.ಇವುಗಳನ್ನು ಮಣ್ಣಿನಲ್ಲಿ ಹೂತು ಹಾಕಿದರೆ ಇವು ಗ್ರೀನ್‌ಹೌಸ್ ಗ್ಯಾಸ್ (ಹಸಿರುಮನೆ ಅನಿಲ)ವಾದ ಮೀಥೇನ್​ನ್ನು  ಹೊರಸೂಸುತ್ತವೆ. ಹಾಗಾಗಿ ಇವುಗಳನ್ನು ಸೂಕ್ತವಾಗಿ ಬಳಸಿಕೊಂಡು ಏನಾದ್ರು ಮಾಡಿ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಯೋಚಿಸುತ್ತಿರುವಾಗಲೇ, ವಿದ್ಯುತ್ ಕಂಡುಹಿಡಿಯುವ ಪ್ರಯೋಗ ಯಶಸ್ವಿಯಾಯ್ತು ಎಂತಾರೆ ನಮಿತಾ’..

ಸಂಶೋಧಕರ ತಂಡ ಮೈಕ್ರೋಬಿಯಲ್ ಇಲೆಕ್ಟ್ರೋಕೆಮಿಕಲ್ ಸೆಲ್ ತಯಾರಿಸಿದ್ದು, ಈ ಸೆಲ್ ಟೊಮ್ಯಾಟೋ ತ್ಯಾಜ್ಯವನ್ನು ವಿದ್ಯುತ್ ಆಗಿ ಮಾರ್ಪಡಿಸುತ್ತದೆ.ಟೊಮ್ಯಾಟೋದಲ್ಲಿರುವ ಆಕ್ಸಿಡೈಸ್ ಆರ್ಗಾನಿಕ್ ವಸ್ತುಗಳನ್ನು ವಿಭಜನೆ ಮಾಡಲು ಬ್ಯಾಕ್ಟೀರಿಯಾಗಳನ್ನು ಬಳಸುತ್ತಾರೆ. ಆಕ್ಸಿಡೇಷನ್ ಕ್ರಿಯೆಯಲ್ಲಿ ಬ್ಯಾಕ್ಟೀರಿಯಾಗಳು ಟೆಮ್ಯಾಟೋ ತ್ಯಾಜಗಳೊಂದಿಗೆ ಸಂಯೋಗವಾಗುವಾಗ ಅಲ್ಲಿ ಇಲೆಕ್ಟ್ರಾನ್‌ಗಳು ಬಿಡುಗಡೆಯಾಗಿ ಅದರಿಂದ ವಿದ್ಯುತ್ ಉತ್ಪಾದನೇಯಾಗುತ್ತಿದೆ.

ವಿಜ್ಞಾನಿಗಳ ಪ್ರಕಾರ ಟೊಮ್ಯಾಟೋಗಳಲ್ಲಿರುವ ಪಾಕೃತಿಕ ಲೈಕೋಪೇನ್ ಪಿಗ್ಮಂಟ್‌ಗಳು ಕೊಳೆತ ಹಣ್ಣುಗಳಿಂದ ವಿದ್ಯುತ್ ಉತ್ಪಾದನೆ ಮತ್ತು ಪ್ರವಹಿಸುವುದಕ್ಕೆ ಸಹಾಯವಾಗುತ್ತದೆ. 10 ಮಿಲ್ಲಿಗ್ರಾಂ ಟೊಮ್ಯಾಟ್ ತ್ಯಾಜ್ಯದಿಂದ 0.3 ವಾಟ್ಸ್ ವಿದ್ಯುತ್‌ನ್ನು ಉತ್ಪಾದಿಸಬಹುದಾಗಿದೆ, ಒಂದುವೇಳೆಈ ಪ್ರಯೋಗವನ್ನು ಮತ್ತಷ್ಟೂ ಅಭಿವೃದ್ಧಿ  ಪಡಿಸಿದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲು ಸಾಧ್ಯ ಎಂತಾರೆ ವಿಜ್ಞಾನಿಗಳು. ಆದಷ್ಟೂ ಬೇಗ ಈ ಪ್ರಯೋಗ ಭಾರತದಲ್ಲೂ ನಡೆಯಲಿದೆ. ಒಂದುವೇಳೆ ಹೀಗೆ ಆದಲ್ಲಿ ಟೊಮ್ಯಾಟೋ ಬೆಳೆದು ನಷ್ಟ ಅನುಭವಿಸುವ ರೈತರ ಸಮಸ್ಯೆಗೆ ಪರಿಹಾರವಾಗಲಿದೆ.

ಇದನ್ನು ಓದಿ

1. ರಾಜಸ್ಥಾನಿ ಪುಲ್ಕಾಸ್​​ ಟೇಸ್ಟ್​​ ನೋಡಿ.. ಅಮ್ಮ ಮಗಳ ಕಥೆ ಕೇಳಿ..!

2. ಪೊಲೀಸ್ ಅಧಿಕಾರಿಗೆ ಫ್ಯಾನ್ ಫಾಲೋವರ್ಸ್ ಇದ್ದಾರೆ..!

3. ಬಡವರ ಹಸಿವು ನೀಗಿಸೋ ‘ಅನ್ನಕೂಟ’

Related Stories