ಮನಸ್ಸಿದ್ದರೆ ಮಾರ್ಗ- ಟೆರೆಸ್​​ ಮೇಲಿನ ಕೈತೋಟವೇ ಸ್ವರ್ಗ..!

ನೀಲಾ ಶಾಲು

0

ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಅಷ್ಟೊಂದು ದುಡ್ಡು ಕೊಟ್ಟು, ಅದನ್ನು ತರುವುದು ಮಾತ್ರವಲ್ಲ, ಅದರ ಜತೆ ರಾಸಾಯನಿಕ ವಸ್ತುಗಳನ್ನೂ ನಾವು ಸೇವಿಸುತ್ತಿದೇವೆ. ರಾಸಾಯನಿಕ ವಸ್ತು ಮುಕ್ತವಾದ ತರಕಾರಿ ಹಣ್ಣು ಹಂಪಲುಗಳನ್ನು ನಾವು ಬಯಸುವುದಾದರೇ ನಾವೇ ಕೃಷಿ ಮಾಡಬೇಕು. ಕೃಷಿ? ನಮಗೆಲ್ಲಿದೆ ಸ್ವಾಮೀ ಕೃಷಿ ಭೂಮಿ? ಎಂದು ಮರುಪ್ರಶ್ನೆ ಕೇಳುವ ಬದಲು ಟೆರೇಸ್ ಮೇಲೆ ಅಥವಾ ಮನೆಯ ಮುಂದೆಯೇ ಪುಟ್ಟ ಕೈತೋಟವೊಂದನ್ನು ನಿರ್ಮಾಣ ಮಾಡಿ. ಎಂದು ಹೇಳ್ತಾರೆ ಬೆಂಗಳೂರಿನ ಮೈತ್ರಾ.ಟಿ

ಹೌದು ಕೈತೋಟದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಮೈತ್ರಾ ಮೂಲತಃ ದೇವನಹಳ್ಳಿ ಬಳಿ ಇರುವ ವಿಜಯಪುರದವರು. ತಂದೆ ತಮ್ಮೇಗೌಡ, ತಾಯಿ ಲಕ್ಷ್ಮೀ.. ತಂದೆ ತಾಯಿ ಇಬ್ಬರು ರೈತರು.. ಬಿ.ಎಸ್ಸಿ , ಎಮ್ ಬಿ ಎ, ಪದವಿಯನ್ನು ಪಡೆದಿರುವ ಮೈತ್ರಾಗೆ ಕೃಷಿಯ ಬಗ್ಗೆ ಹೆಚ್ಚು ಒಲವು ಜೊತೆಗೆ ಕೃಷಿಯಲ್ಲೇ ಸಾಧನೆ ಮಾಡಬೇಕು ಎಂಬುದು ಇವರ ಕನಸು.. ದೇವನಹಳ್ಳಿಯಿಂದ ಬೆಂಗಳೂರಿನಗೆ ಬಂದ ಇವರು ಮನೆಯ ಮುಂದೆಯೇ ಪುಟ್ಟ ಕೈತೋಟ ನೀರ್ಮಾಣ ಮಾಡಿಕೊಂಡ್ರು.. ನಂತರ ಇವರ ಸ್ನೇಹಿತ ಶ್ರೀಹರಿ, ಇವರಿಗೆ ತಾರಸಿ ಕೈ ತೋಟ ಮಾಡು ಎಂದು ಸಲಹೆ ನೀಡಿದ್ರು.. ಈ ಸಲಹೆಯ ಮೇರೆಗೆ ಚಿಕ್ಕ ತಾರಸಿ ತೋಟ ಮಾಡಿದ್ರು.. ಇದರಿಂದ ಸ್ಪೂರ್ತಿ ಪಡೆದ ಇವರು ತಾರಸಿ ಕೈತೋಟದಲ್ಲೇ ಏನ್ನಾದ್ರೂ ಸಾಧನೆ ಮಾಡಬೇಕೆಂದು ನಿರ್ಧಾರ ಮಾಡಿದ್ರು..

ಈ ನಿಟ್ಟಿನಲ್ಲಿ ಕೆಳೆದ 3ವರ್ಷದ ಹಿಂದೆ ಹೆಬ್ಬಾಳದ ರಿಂಗ್ ರೋಡ್ ರಸ್ತೆಯಲ್ಲಿ ಪುಟ್ಟ ಜಾಗದಲ್ಲಿ ಸಾಯಿ ಪೇಟಲ್ಸ್ ಎಂಬ ಶಾಪ್ ತೆರೆದ್ರು.. ಅಲ್ಲಿ ಕೈತೋಟದಲ್ಲಿ ಬಹಳ ಸುಲಭವಾಗಿ ಬೆಳೆಯಬಹುದಾದ ಹೂವು, ಹಣ್ಣು, ತರಕಾರಿಗಳ ಗಿಡಗಳನ್ನ ಮಾರಟ ಮಾಡೋದಕ್ಕೆ ಶುರು ಮಾಡಿದ್ರು..ಜೊತೆಗೆ ಅವುಗಳನ್ನ ಬೆಳೆದಿರುವ ಮಾದರಿಗಳನ್ನ ಅಲ್ಲಿ ಪ್ರದರ್ಶನ ಮಾಡಿದ್ರು.. ನಂತರದ ದಿನಗಳಲ್ಲಿ ಇವುಗಳಿಗೆ ಬೇಡಿಕೆ ಹೆಚ್ಚಾದ ಕಾರಣ, ಅವುಗಳನ್ನ ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಮಾಹಿತಿ ನೀಡುವುದಕ್ಕೂ ಪ್ರಾರಂಭ ಮಾಡಿದ್ರು.. ಇದೀಗ ಅಲ್ಲಿ 40ಕ್ಕೂ ಹೆಚ್ಚು ಜನ್ರು ಕೆಲಸ ಮಾಡ್ತಾ ಇದ್ದಾರೆ, ಅದ್ರಲ್ಲಿ ಹತ್ತು ಜನ ಮಹಿಳೆಯರು ಸಹ ಇದ್ದಾರೆ..

ಕೈತೋಟ ಮಾಡಲು ಎಕರೆಗಟ್ಟಲೆ ಭೂಮಿ ಬೇಡ. ಮನೆಯ ಮುಂದೆ ಒಂದಷ್ಟು ಗಿಡಗಳನ್ನು ನೆಟ್ಟರೆ ಸಾಕು ಅಥವಾ ಟೆರೆಸ್ ಮೇಲೆ ಪುಟ್ಟ ಪುಟ್ಟ ಕುಂಡಗಳಲ್ಲಿ ನಮಗೆ ಬೇಕಾದ ಹೂವು, ತರಕಾರಿ ಹಾಗೂ ಮೆಡಿಸಿನ್ ಗಿಡಗಳನ್ನು ಬಹಳ ಸುಲಭವಾಗಿ ಬೆಳೆಸಬಹುದು. ಇನ್ನು ಸಸ್ಯಗಳ ಬೆಳವಣಿಗೆಗೆ ಬೇರೆಡೆಯಿಂದ ಗೊಬ್ಬರ ತರುವ ಬದಲಿಗೆ ಅಡುಗೆಮನೆಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸೆಗಣಿಯೊಂದಿಗೆ ಮಿಶ್ರ ಮಾಡಿ ಡಬ್ಬಿಯಲ್ಲಿ ಹಾಕಿದ್ರೆ. ವಾರದಲ್ಲೇ ಸಾವಯವ ಗೊಬ್ಬರ ಸಿಗುತ್ತದೆ. ಹೀಗೆ ಸುಲಭವಾಗಿ ಮನೆಯ ಮೇಲೆ ಕೈತೋಟ ನಿರ್ಮಾಣ ಮಾಡಬಹುದು ಎಂದು, ಸಾಯಿ ಪೇಟಲ್ಸ್ ಗೆ ಬಂದ ಪ್ರತಿಯೊಬ್ಬರಿಗೂ ಕೈತೋಟದ ಮಹತ್ವ ತಿಳಿಸ್ತಾರೆ ಮೈತ್ರಾ..

ಇನ್ನು ಇವರ ಈ ಸಾಧನೆಗೆ ಲಾಲ್ ಬಾಗ್ ನಿಂದ 2014ರಲ್ಲಿ ಬೆಂಗಳೂರು ಯುಥ್ ಅವಾರ್ಡ್ ಸಹ ದೊರೆತಿದೆ.. ಒಟ್ನಲ್ಲಿ ಬಹಳಷ್ಟು ಮಹಿಳೆಯರಿಗೆ ಪ್ರೇರಣೆಯಾಗಿರುವ ಮೈತ್ರಾ, ಮಹಿಳೆಯರಿಗೆ ಕೆಲಸ ಕೊಡುವುದಲ್ಲದೇ, ಸ್ವಾವಂಲಬಿಯಾಗಿದ್ದಾರೆ.. ಅಷ್ಟೇ ಅಲ್ಲದೇ ಬೇರೆ ದೇಶಗಳಿಂದ ತರಹೇವಾರಿ ಹೂವು ಹಣ್ಣು ಗಿಡಗಳನ್ನ ತಂದು ಬೆಂಗಳೂರಿನ ವಾತಾವರಣಕ್ಕೆ ಬೆಳೆಯಬಹುದು ಎಂದು ತೋರಿಸಿ ಕೊಟ್ಟಿದ್ದಾರೆ… ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಮಹಿಳೆಯರಿಗೆ ಕೆಲಸ ನೀಡಬೇಕು ಜೊತೆಗೆ ಅವರು ಕೃಷಿಯಲ್ಲಿ ಸಾಧನೆಯನ್ನ ಮಾಡುಬೇಕು.. ಮಹಿಳೆಯರು ಬರೀ ಮನೆಯ ಕೆಲಸಕ್ಕೆ ಮಾತ್ರ ಸೀಮಿತವಲ್ಲ ಸಾಧನೆ ಮಾಡುವ ಹಕ್ಕು ಅವರಿಗಿದೆ.. ಮಹಿಳೆಯರು ಹೆಚ್ಚು ಸ್ವಾವಲಂಬಿಯಾಗಬೇಕು ಎನ್ನುವುದು ಇವರ ಹೆಬ್ಬಯಕೆ..

ಮೈತ್ರಾ ಮಾತುಗಳು : 

ಮೆನೆಯ ಮಳಿಗೆಯಲ್ಲಿ ಹೆಚ್ಚು ಗಿಡ ಬೆಳೆಸಿದ್ರೆ ಒತ್ತಡ ಕಡಿಮೆ ಮಾಡುತ್ತದೆ ಗಿಡಮರಗಳ ಆರೈಕೆ ಮಾಡಿದರೆ ಮಾನಸಿಕ ಉಲ್ಲಾಸ ಸಿಗುತ್ತದೆ. ಅವುಗಳಿಗೆ ನೀರು, ಗೊಬ್ಬರ ಹಾಕುವುದು. ಅವು ಬೆಳೆದಂತೆ ಅದನ್ನು ನೋಡಿ ಖುಷಿ ಪಡುವುದು. ಹೂವು ಹಣ್ಣು ಬಿಟ್ಟಾಗ ನಾವು ನೆಟ್ಟ ಗಿಡದಲ್ಲಿ ಫಲ ಬಂತು ಎಂಬ ನೆಮ್ಮದಿ. ಕೃಷಿ ನಮ್ಮ ಹವ್ಯಾಸವಾಗಿಬಿಟ್ಟರೆ ಅದು ನೀಡುವಷ್ಟು ಸಂತೃಪ್ತಿ ಬೇರೊಂದಿಲ್ಲ. ಗಿಡ ಮರಗಳ ಒಡನಾಟ, ಏಕಾಂತವನ್ನು ದೂರ ಮಾಡುವುದಲ್ಲದೆ ನಮ್ಮಲ್ಲಿನ ಏಕತಾನತೆಯನ್ನೂ ಹೋಗಲಾಡಿಸುತ್ತದೆ, ಅಂತಾರೆ ಮೈತ್ರಾ..