ಒಬ್ಬ ಅವಿದ್ಯಾವಂತ ಆದಿವಾಸಿ, ಇತರ ಆದಿವಾಸಿ ಮಕ್ಕಳನ್ನ ಶಿಕ್ಷಿತರನ್ನಾಗಿ ಮಾಡಲು ತೆಗೆದುಕೊಂಡ ಪ್ರತಿಜ್ಞೆ..!

ಟೀಮ್​ ವೈ.ಎಸ್​. ಕನ್ನಡ

ಒಬ್ಬ ಅವಿದ್ಯಾವಂತ ಆದಿವಾಸಿ, ಇತರ ಆದಿವಾಸಿ ಮಕ್ಕಳನ್ನ ಶಿಕ್ಷಿತರನ್ನಾಗಿ ಮಾಡಲು ತೆಗೆದುಕೊಂಡ ಪ್ರತಿಜ್ಞೆ..!

Thursday December 17, 2015,

3 min Read

ಒಂದು ದಿನ ಭೀಲ್ ವಿಚಾನ್ ಭಾಯಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಬಸ್ಸಿನಲ್ಲಿ ಕಂಡೆಕ್ಟರನಿಂದ 8 ರೂಪಾಯಿಯ ಟಿಕೆಟ್ ಕೊಳ್ಳಲು 10 ರೂಪಾಯಿಯ ನೋಟನ್ನು ನೀಡಿದ್ದರು. ದುಡ್ಡು ತಗೊಂಡ ಕಂಡಕ್ಟರ್ ಚಿಲ್ಲರೆ 2 ರೂಪಾಯಿಯನ್ನು ತನ್ನ ಬಳಿಯೇ ಉಳಿಸಿಕೊಂಡ. ಇವರಿಗಷ್ಟೇ ಅಲ್ಲಾ, ಇತರೆ ಯಾವ ಪ್ರಯಾಣಿಕರಿಗೂ ಚಿಲ್ಲರೆ ವಾಪಸ್ಸ್ ನೀಡಿರಲಿಲ್ಲ. ವಿಚಾನ್ ಭಾಯಿಯವರು ಅವಿದ್ಯಾವಂತರಾದರೂ, ಅಲ್ಪಸ್ವಲ್ಪ ಲೆಕ್ಕಾಚಾರಗಳನ್ನು ತಿಳಿದಿದ್ದರು. ಆದ್ದರಿಂದ ನಿರ್ವಾಹಕರಿಗೆ ಚಿಲ್ಲರೆ ಕೊಡುವಂತೆ ಕೇಳಿದ್ರು. ಇದನ್ನು ಕಂಡ ಉಳಿದವರು ಸಹ ಕಂಡೆಕ್ಟರ್‍ಗೆ ಚಿಲ್ಲರೆ ಕೊಡಿ ಅಂತ ಕೇಳೋಕ್ಕೆ ಆರಂಭಿಸಿದ್ರು. ಆಗ ವಿಚಾನ್ ಬಾಯ್‍ರವರಿಗೆ, ಇಲ್ಲಿನ ಜನರು ಸುಶಿಕ್ಷತರಾಗಿದ್ದರೆ ಈ ರೀತಿಯ ಮೋಸ ಹೋಗುತ್ತಿರಲಿಲ್ಲ ಎನ್ನಿಸಿತು. ಈ ಘಟನೆಯ ನಂತರ ಅವರು ತಮ್ಮ ಪ್ರದೇಶದಲ್ಲಿ ಒಂದು ಶಾಲೆಯನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಂಡರು. ಆ ಪ್ರದೇಶದಲ್ಲಿರುವ ಮಕ್ಕಳು ಅಕ್ಷರವನ್ನು ಕಲಿತು ಈ ರೀತಿಯ ತೊಂದರೆಯಿಂದ ಮುಕ್ತರಾಗುವಂತಾಗಲಿ ಎಂದು ನಿರ್ಧರಿಸಿದರು.

image


ವಿಚಾನ್ ಭಾಯಿಯವರು ಗುಜಾರಾತಿನ ವಡೋದರ ಜಿಲ್ಲೆಯ ಆದಿವಾಸಿ ಜನಾಂಗ ವಾಸವಾಗಿರುವ ‘ಪಿಸ್ತಿಯಾ’ ಎಂಬ ಹಳ್ಳಿಯಲ್ಲಿ ವಾಸವಾಗಿದ್ದರು. ಹಲವು ದಶಕಗಳಿಂದ ಆ ಹಳ್ಳಿಯ ಜನ ಅವಿದ್ಯಾವಂತರಾಗಿದ್ದರು. ಆ ಗ್ರಾಮದ ಸುತ್ತಮುತ್ತಲಿಲ್ಲಿ ಯಾವುದೇ ಶಾಲೆ ಇರಲಿಲ್ಲ. ಗ್ರಾಮದ ಮಕ್ಕಳು ನದಿಯಲ್ಲಿ ಮೀನು ಹಿಡಿಯುವುದು, ಎಲ್ಲೆಂದರಲ್ಲಿ ತಿರುಗಾಡುವುದರ ಮೂಲಕ ಕಾಲ ಕಳೆಯುತ್ತಿದ್ದರು. ಆಗ ವಿಚಾನ್ ಬಾಯಿಗೊಂದು ಯೋಚನೆ ಹೊಳೆಯಿತು. ಗ್ರಾಮದಲ್ಲೊಂದು ಶಾಲೆಯಿದ್ದರೆ ಮಕ್ಕಳು ಈ ರೀತಿಯಾಗಿ ಸಮಯವನ್ನು ಹಾಳು ಮಾಡುವುದಿಲ್ಲ, ವಿದ್ಯಾವಂತರಾಗಿ ನಾಗರೀಕತೆಯತ್ತ ದಾಪುಗಾಲಿಡಲು ಸಾಧ್ಯವಾಗುತ್ತದೆ. ವಿಶೇಷವಾಗಿ ಹೆಚ್ಚಿನ ಜನರು ಕೆಲಸವನ್ನರಸಿ ಆಗಾಗ ಸೌರಾಷ್ಟ್ರಕ್ಕೆ ವಲಸೆ ಹೋಗುತ್ತಿದ್ದರು. ಸುಮಾರು 6-8 ತಿಂಗಳು ಅಲ್ಲಿಯೇ ವಾಸ ಮಾಡುತ್ತಿದ್ದರು. ಈ ಕಾರಣದಿಂದ ಮಕ್ಕಳು ಸಹ ತಂದೆ-ತಾಯಿಯರೊಡನೆ ಕೆಲಸ ಮಾಡಿಕೊಂಡಿರಬೇಕಾಗಿತ್ತು.

image


ಕೂಲಿ ಕೆಲಸ ಮಾಡುವವರ ಮಕ್ಕಳಿಗೆ ತಮ್ಮಲ್ಲೇ ಉಳಿಯುವ ವ್ಯವಸ್ಥೆ ಮಾಡಿ, ವಿದ್ಯಾಭ್ಯಾಸ ಕೊಡಿಸಿದರೆ, ಅವರ ಪೋಷಕರು ಯಾವುದೇ ಚಿಂತೆಯಲ್ಲಿದೆ ಅವರ ಪೋಷಕರು ಕೂಲಿಗೆ ಹೋಗ್ತಾರೆ ಅಮತ ವಿಚಾನ್ ಬಾಯ್ ಯೋಚಿಸಿದ್ರು. ಇಡೀ ಆದಿವಾಸಿ ಜನಾಂಗದ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಲು, ಈ ಅವಿದ್ಯಾವಂತ ಆದಿವಾಸಿ ನಿರ್ಧಾರ ಮಾಡಿಯಾಗಿತ್ತು. 2005ರಲ್ಲಿ ಹಾಸ್ಟೆಲನ್ನು ಪ್ರಾರಂಭಿಸಿ ಆ ಆದಿವಾಸಿ ಜನಾಂಗದ ಮಕ್ಕಳನ್ನು ತಮ್ಮಲ್ಲಿ ಬಿಡುವಂತೆ ಮಕ್ಕಳ ಪೋಷಕರಿಗೆ ತಿಳಿ ಹೇಳಿದರು. ಅಲ್ಲಿ ಮಕ್ಕಳಿಗೆ ಆಟ-ಪಾಠಗಳ ಜೊತೆಗೆ ವಿವಿಧ ರೀತಿ-ನೀತಿಗಳನ್ನು ಕಲಿಸಿಕೊಡಲಾಗುವುದೆಂದು ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಪ್ರಾರಂಭದಲ್ಲಿ 17 ಮಕ್ಕಳೊಂದಿಗೆ ಹಾಸ್ಟೆಲ್ ಪ್ರಾರಂಭವಾಯಿತು. ಆ ಮಕ್ಕಳಿಗೆ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಮುಂದಿನ ದಿನಗಳಲ್ಲಿ ಅಲ್ಲಿನ ಜನರಿಗೆ ಈ ವ್ಯವಸ್ಥೆ ಬಗ್ಗೆ ವಿಶ್ವಾಸ ಮೂಡಿತು. ಇಂದು 111 ಮಕ್ಕಳ ಮೇಲ್ವಿಚಾರಣೆ ಮಾಡುತ್ತಾ ಎಲ್ಲಾ ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಹಾಗೂ ಮೌಲಿಕ ಜೀವನದ ಬಗ್ಗೆ ಕಲಿಸಿಕೊಡುವ ಕೆಲಸವನ್ನ ಮಾಡ್ತಿದ್ದಾರೆ ವಿಚಾನ್ ಭಾಯಿ. ಹಾಸ್ಟೆಲ್‍ನಲ್ಲಿ 35 ಹೆಣ್ಣುಮಕ್ಕಳು ಹಾಗೂ 75 ಗಂಡು ಮಕ್ಕಳ ಜೊತೆಗೆ ಕೆವು ಅನಾಥ ಆದಿವಾಸಿ ಮಕ್ಕಳು ಮತ್ತು ಭೂರಹಿತ ಮಕ್ಕಳು ಸಹ ವಾಸವಾಗಿದ್ದಾರೆ. ಪ್ರಾರಂಭದಲ್ಲಿ ಹೆಚ್ಚಿನ ಮಕ್ಕಳು ಪ್ರಾಥಮಿಕ ಶಾಲೆಗೆ ಸೇರಿಸಿದ್ದಲ್ಲದೇ ಊಟ ಮತ್ತು ವಸತಿಯ ವ್ಯವಸ್ಥೆಯನ್ನೂ ಸಹ ಮಾಡಿದರು. ಇವರ ಪರಿವಾರದವರು ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರಲಿಲ್ಲ ಮತ್ತು ಅವರು ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು.

image


ಪ್ರಾರಂಭದಲ್ಲಿ ವಿಚಾನ್ ಭಾಯಿಯವರು ತಮ್ಮ ಹಾಸ್ಟೆಲ್ ಕಾರ್ಯವನ್ನು ಮನೆಯಲ್ಲೇ ಪ್ರಾರಂಭಿಸಿದರು. ತದನಂತರದಲ್ಲಿ ಮಕ್ಕಳಿಗಾಗಿ ಶಾಲೆಯನ್ನೂ ಸಹ ಪ್ರಾರಂಭಿಸಿದರು. ಇಂದು ಅವರ ಶಾಲೆಯಲ್ಲಿ 1 ರಿಂದ 8 ನೇ ತರಗತಿಯವರೆಗೂ ನಡೆಯುತ್ತಿದೆ. ಇಲ್ಲಿ ಓದುವ ಮಕ್ಕಳಿಗೆ ಪ್ರತ್ಯೇಕ ಕಟ್ಟಡಗಳಿವೆ. ಅದರ ಹೆಸರು “ಶ್ರೀರಾಮಲೀಲಾ ಛಾತ್ರಾಲಯ”. ಅದರಲ್ಲಿ ಒಂದು ಕಟ್ಟಡದಲ್ಲಿ ಹುಡುಗಿಯರ ವಾಸ ಹಾಗೂ ಮತ್ತೊಂದರಲ್ಲಿ ಹುಡುಗರ ವಾಸಕ್ಕೆ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಯಾವುದೇ ಮಕ್ಕಳು ಅನಾರೋಗ್ಯಕ್ಕೀಡಾದಾಗ ಅಲ್ಲೇ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ಈ ಶಾಲೆಯು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ನಡೆಯುತ್ತದೆ.

image


ವಿಚಾನ್ ಭಾಯಿಯವರು ತಮ್ಮ ಶಾಲೆಯ ಮಕ್ಕಳನ್ನು ತುಂಬಾ ಮುತುವರ್ಜಿಯಿಂದ ನೋಡಿಕೊಂಡಿದ್ದಾರೆ. ಹಲವು ಬಾರಿ ಇವರು ಆರ್ಥಿಕ ಮುಗ್ಗಟ್ಟನ್ನು ಅನುಭವಿಸಿದ್ದೂ ಉಂಟು. ಇವರದ್ದು, ತಂದೆ, ತಾಯಿ, ಹೆಂಡತಿ ಹಾಗೂ ಇಬ್ಬರು ಗಂಡು ಮಕ್ಕಳುಳ್ಳ ಕುಟುಂಬ. ತಮ್ಮ ಕುಟುಂಬದ ಎಲ್ಲಾ ಸದಸ್ಯರು ವಿಚಾನ್ ಭಾಯಿಯವರ ಕೆಲಸದಲ್ಲಿ ಕೈ ಜೋಡಿಸಿದ್ದಾರೆ. ಅವರ ಮೊದಲ ಮಗ ಮುಖೇಶ್. ಇವರು ಬಿ.ಎಡ್. ಮುಗಿಸಿರುವುದರಿಂದ, ತಮ್ಮ ತಂದೆಯ ಎಲ್ಲಾ ಕೆಲಸಗಳಲ್ಲಿ ಭಾಗಿಯಾಗಿ ಮಕ್ಕಳಿಗೆ ಪಾಠ ಪ್ರವಚನ ಮಾಡುತ್ತಾ, ಅವರ ಏಳಿಗೆಗಾಗಿ ಶ್ರಮಿಸುತಿದ್ದಾರೆ. ಮುಖೇಶ್‍ರವರು ಹೇಳುವ ಪ್ರಕಾರ ಆದಿವಾಸಿ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸಬೇಕೆಂಬುದು ತಮ್ಮ ತಂದೆಯ ಕನಸು, ಅವರ ಎಲ್ಲಾ ಕನಸುಗಳನ್ನು ನನಸು ಮಾಡುವ ಗುರಿ ನನ್ನ ಮುಂದಿದೆ ಎನ್ನುತ್ತಾರೆ. ನನ್ನ ಮನೆಯ ಕೆಲಸ ನಾನು ಮಾಡದೇ ಮತ್ತ್ಯಾರು ಮಾಡುತ್ತಾರೆ ಎನ್ನುತ್ತಾರೆ. ವಿಚಾನ್‍ರ ಎರಡನೆಯ ಮಗ ಇಂದು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

image


‘ಶ್ರೀರಾಮಲೀಲಾ ಛಾತ್ರಾಲಯದಲ್ಲಿ ಕಂಪ್ಯೂಟರ್ ಹಾಗೂ ಗ್ರಂಥಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಶಾಲೆ ಮತ್ತು ಹಾಸ್ಟೆಲ್‍ನ ವಾಸಿಗಳು ಎಷ್ಟು ಖುಷಿಯಾಗಿದ್ದಾರೆಂದರೆ, ಅಲ್ಲಿನ ಮಕ್ಕಳು ತಮ್ಮ ಮನೆಯ ವಾಸಕ್ಕಿಂತ ಇಲ್ಲಿನ ವಾಸವನ್ನು ಇಷ್ಟ ಪಡುತ್ತಾರೆ. ಅಲ್ಲಿನ ಆದಿವಾಸಿಗಳೂ ಸಹ ತಮ್ಮ ಮಕ್ಕಳ ಬಗ್ಗೆ ಹೆಮ್ಮೆ ಪಡುತ್ತಾ, ಅವರ ವಿದ್ಯಾಭ್ಯಾಸವು ಚಿನ್ನಾಗಿ ನಡೆಯುತ್ತಿದೆಯೆಂಬ ಅರಿವು ಅವರಿಗಾಗಿದೆ. ಇಲ್ಲಿ ಓದುತ್ತಿರುವ ಮಕ್ಕಳಿಗೆ ಉಚಿತವಾಗಿ ಊಟ, ವಸತಿ, ಪುಸ್ತಕ, ಹಾಗೂ ಸಮವಸ್ತ್ರಗಳ ಸಮೇತವಾಗಿ ನೀಡಲಾಗುತ್ತಿದೆ. ವಿಚಾನ್ ಭಾಯಿಯವರು ಹೇಳುವ ಪ್ರಕಾರ ಈ ರೀತಿಯ ಕೆಲಸಗಳಲ್ಲಿ ತೊಡಗುವುದು ಹೊರಗಿನವರಿಂದ ಸಾಧ್ಯವಾಗದೇ ಇರಬಹುದು. ಆದರೆ ತಮಗೆ ಮಾತ್ರ ಕೆಲಸದಲ್ಲಿ ಆತ್ಮ ತೃಪ್ತಿಯಿದೆ ಎಂದು ಹೇಳುತ್ತಾರೆ.

ಲೇಖಕರು: ಹರೀಶ್​ ಬಿಶ್ತ್​​

ಅನುವಾದಕರು: ಬಾಲು