ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು 10 ದಾರಿಗಳು

ಟೀಮ್​​ ವೈ.ಎಸ್​​.

ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು 10 ದಾರಿಗಳು

Wednesday November 04, 2015,

3 min Read

ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ ಪಡಿಸುವ ಕ್ಷೇತ್ರ 2015ರಲ್ಲಿ ಬರೊಬ್ಬರಿ 40.50 ಬಿಲಿಯನ್ ಯೂರೋಗಳಷ್ಟು ವ್ಯಾಪಾರ ವಹಿವಾಟು ನಡೆಸಲಿದೆ. 2007ರಲ್ಲಿ ಐಫೋನ್‍ನೊಂದಿಗೆ ಪ್ರಾರಂಭವಾದ ಈ ಮೊಬೈಲ್ ಅಪ್ಲಿಕೇಶನ್ ಯುಗ, 2008ರಲ್ಲಿ ಆಪಲ್ ಸ್ಟೋರ್ ಮೂಲಕ ಮತ್ತಷ್ಟು ವೇಗ ಪಡೆಯಿತು. ಆನಂತರ ಈ ವಲಯ ಎಂದೂ ಹಿಂದಿರುಗಿ ನೋಡಿಲ್ಲ. ದಿನೇ ದಿನೇ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಮೊಬೈಲ್ ಅಪ್ಲಿಕೇಶನ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಕೆಲ ಮೂಲಗಳ ಪ್ರಕಾರ 2016 ಒಂದು ವರ್ಷದಲ್ಲೇ ಬರೊಬ್ಬರಿ 310 ಬಿಲಿಯನ್‍ನಷ್ಟು ವಿವಿಧ ಅಪ್ಲಿಕೇಶನ್‍ಗಳು ಡೌನ್‍ಲೋಡ್ ಆಗುತ್ತವೆಂದು ಅಂದಾಜಿಸಲಾಗಿದೆ.

ಅದೇನೇ ಇರಲಿ, ಈ ಆರ್ಥಿಕ ವಲಯದ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುವುದು ದೈತ್ಯ ರಾಕ್ಷಸನನ್ನು ಕಟ್ಟಿ ಹಾಕುವಷ್ಟು ಕಷ್ಟಕರ ಅನ್ನೋದಂತೂ ನಿಜ. ಆದ್ರೆ ಅಮೃತ್ ಸಂಜೀವ್, ಇದನ್ನು ಸಾಮಾನ್ಯ ಜನರಿಗೆ ಅರ್ಥ ಮಾಡಿಸುವ ನಿಟ್ಟಿನಲ್ಲಿ ಯುವರ್ ಸ್ಟೋರಿಯ ಮೊಬೈಲ್‍ಸ್ಪಾರ್ಕ್ಸ್​​ 2015ರಲ್ಲಿ ವಿಶಿಷ್ಟ ಪ್ರಯತ್ನ ಮಾಡಿದರು.

ಈ ಆಂಡ್ರಾಯ್ಡ್ ಗುರು ತಂತ್ರಜ್ಞಾನದ ಕುರಿತು ಪುಸ್ತಕಗಳನ್ನು ಬರೆದಿರೋದು ಮಾತ್ರವಲ್ಲ, ಐಬಿಎಂನಂತಹ ಬಹುರಾಷ್ಟ್ರೀಯ ಕಂಪನಿಗಳಿಗಾಗಿ ಆಂಡ್ರಾಯ್ಡ್ ಅಭಿವೃದ್ಧಿ ಪಡಿಸಿಕೊಟ್ಟ ಅತ್ಯಂತ ಕಿರಿಯ ಆರ್ಕಿಟೆಕ್ಟ್ ಅನ್ನೋ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಸದ್ಯ ಗೂಗಲ್‍ನಲ್ಲಿ ಕೆಲಸ ಮಾಡುತ್ತಿರುವ ಅಮೃತ್ ಸಂಜೀವ್, ಗ್ರಾಹಕರ ಸಂಪರ್ಕ ಸಾಧನಗಳ ಬಳಕೆ ಹಾಗೂ ಅನುಭವಗಳಿಗೆ ಹೆಚ್ಚು ಒತ್ತು ನೀಡುತ್ತಾರೆ.

ಮೊಬೈಲ್ ಹೇಗೆ ನಮ್ಮ ಜೀವನದ ಒಂದು ಅಂಗವಾಗಿದ್ಯೋ ಅದೇ ರೀತಿ ಆಂಡ್ರಾಯ್ಡ್ ಅಪ್ಲಿಕೇಶನ್‍ಗಳೂ ಇವತ್ತು ಮೊಬೈಲ್ ಫೋನ್‍ಗಳ ಅವಿಭಾಜ್ಯ ಅಂಗವಾಗಿದೆ. ಹೀಗಾಗಿಯೇ ಅಮೃತ್ ಸಂಜೀವ್, ಒಂದು ಉತ್ತಮ ಅಪ್ಲಿಕೇಶನ್ ನಿರ್ಮಿಸಲು ಏನೆಲ್ಲಾ ಮಾಡಬೇಕು ಎಂಬ ಅಂಶಗಳನ್ನು ತಿಳಿಹೇಳಿದ್ದಾರೆ. ಡೆವಲಪರ್, ಈ ಅಂಶಗಳನ್ನು ಒಂದೊಂದಾಗಿ ನೋಡದೇ, ಎಲ್ಲ ಅಂಶಗಳನ್ನೂ ಒಗ್ಗೂಡಿಸಿ ಸಂಪೂರ್ಣವಾಗಿ ಅರ್ಥ ಮಾಡಿಕೊಂಡರೆ ಒಂದೊಳ್ಳೆ ಅಪ್ಲಿಕೇಶನ್ ನಿರ್ಮಾಣಕ್ಕೆ ಹಾಗೂ ಅದರ ಮೂಲ ನೈರ್ಮಲ್ಯಕ್ಕೆ ಒಳ್ಳೆಯದು.

image


10. ಜವಾಬ್ದಾರಿ

‘ನೀವು ಒಬ್ಬ ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ, ಎಲ್ಲಿಗೋ ಹೋಗಬೇಕು ಬನ್ನಿ ಅಂತ ಹೇಳ್ತೀರಿ. ಆದ್ರೆ ನಿಮ್ಮ ಮಾತು ಮುಗಿಯುವದರೊಳಗೆ ಆತ ಕರೆ ಸ್ಥಗಿತಗೊಳಿಸಿಬಿಡ್ತಾನೆ. ಆಗ ಆ ಟ್ಯಾಕ್ಸಿ ಚಾಲಕ ನಿಮ್ಮನ್ನು ಕರೆದೊಯ್ಯಲು ಮನೆಗೆ ಬರುವವರೆಗೂ ಆತ ಬರುತ್ತಾನೋ ಇಲ್ಲವೋ ಎಂಬ ಗೊಂದಲದಲ್ಲೇ ಇರ್ತೀರಿ. ಇವತ್ತಿನ ಮೊಬೈಲ್ ಅಪ್ಲಿಕೇಶನ್‍ಗಳ ಕಥೆಯೂ ಹೀಗೆ ಆಗಿದೆ’ ಅಂತಾರೆ ಅಮೃತ್ ಸಂಜೀವ್.

ಮೊಬೈಲ್ ಅಪ್ಲಿಕೇಶನ್ ಡೆವೆಲಪರ್‍ಗಳಲ್ಲಿ ಅಮೃತ್ ಒತ್ತಾಯಿಸುವುದೇನಂದ್ರೆ, ಮೊಬೈಲ್ ಬಳಸುವಾಗ ಬಳಕೆದಾರರು ತಮ್ಮ ಮೊಬೈಲ್ ಕೂಡ ತಮ್ಮಷ್ಟೇ ವೇಗವಾಗಿ ಪರಿಣಾಮಕಾರಿ ಪ್ರತಿಕ್ರಿಯೆ ನೀಡಲಿ ಎಂದು ನಿರೀಕ್ಷಿಸುತ್ತಾರೆ. ಹಾಗಿದ್ದರೆ ಮಾತ್ರ ಅಪ್ಲಿಕೇಶನ್‍ಅನ್ನು ಸುದೀರ್ಘ ಕಾಲದವರೆಗೆ ಬಳಕೆ ಮಾಡಲಾಗುತ್ತದೆ.

9. ವಿನ್ಯಾಸ

ಪ್ರತಿ ಅಪ್ಲಿಕೇಶನ್‍ನಲ್ಲೂ, ಅದರ ವಿನ್ಯಾಸ ಅವಿಭಾಜ್ಯ ಹಾಗೂ ವಿಶೇಷ ಲಕ್ಷಣ ಹೊಂದಿರುತ್ತದೆ. ಅಮೃತ್ ಸಂಜೀವ್ ಹೇಳೋ ಪ್ರಕಾರ ಪ್ರತಿ ವಿನ್ಯಾಸ ಕೂಡ ಅದರದೇ ಆದಂತಹ ತತ್ವಜ್ಞಾನ ಹೊಂದಿರಬೇಕು. ವಸ್ತು ವಿನ್ಯಾಸದ ಬಗ್ಗೆ ಪ್ರಚುರಪಡಿಸುತ್ತಾ, ಎಲ್ಲಾ ಫೋನ್‍ಗಳೂ ಒಂದೇ ರೀತಿಯ ಉತ್ತಮ ಅನುಭವ ನೀಡುವಂತಿರಬೇಕು.

ಆಂಡ್ರಾಯ್ಡ್ ಬಳಕೆದಾರರಿಗೆ ಮೊಬೈಲ್ ಗುರು ಅಮೃತ್ ಹೇಳುವುದೇನೆಂದರೆ,

• ಅಪ್ಲಿಕೇಶನ್ ಬಾರ್‍ಅನ್ನು ಬಳಸಿದರೆ ಉತ್ತಮ

• ನ್ಯಾವಿಗೇಷನ್ ಮೋಡ್‍ಅನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಂತರವಷ್ಟೇ ಆಯ್ಕೆ ಮಾಡಿಕೊಳ್ಳಬೇಕು. ಹತ್ತಾರು ನ್ಯಾವಿಗೇಷನ್ ಮಾದರಿಗಳು ಬಳಕೆದಾರರನ್ನು ಗೊಂದಲಕ್ಕೀಡು ಮಾಡಬಹುದು ಹಾಗೂ ಕೆಟ್ಟ ಅನುಭವ ನೀಡಬಹುದು.

• ದಿನಕ್ಕೊಂದು ಹೊಸ ಅಪ್ಲಿಕೇಶನ್ ಬರುತ್ತಿದ್ದು, ಹಳೆಯ ಅಪ್ಲಿಕೇಶನ್‍ಅನ್ನು ಮತ್ತೊಮ್ಮೆ ಅರ್ಥ ಮಾಡಿಕೊಳ್ಳುವುದಕ್ಕಿಂತ ಹೊಸ ಆವೃತ್ತಿಯ ಅಪ್ಲಿಕೇಶನ್‍ಗೆ ಅಪ್‍ಗ್ರೇಡ್ ಆಗುವುದೇ ಒಳಿತು ಅಂತ ಮೊಬೈಲ್ ಬಳಕೆದಾರರು ಅತ್ತ ಮುಖ ಮಾಡುವುದುಂಟು. ಹೀಗಾಗಿಯೇ ಹಿಂದುಳಿದ ಹೊಂದಾಣಿಕಾ ವಿಧಾನಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು.

8. ನಿರೀಕ್ಷೆ

ಇವತ್ತು ಮೊಬೈಲ್ ಬಳಕೆದಾರರು ಏನು ನಿರೀಕ್ಷಿಸುತ್ತಾರೆ ಅನ್ನೋದನ್ನು ಅಪ್ಲಿಕೇಶನ್ ಡೆವೆಲಪರ್‍ಗಳು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಮೊಬೈಲ್ ಪ್ರಿಯರು ಯಾವ ರೀತಿಯ ಅಪ್ಲಿಕೇಶನ್ ಮಾದರಿಗಳನ್ನು ಇಷ್ಟ ಪಡುತ್ತಾರೋ, ಅದನ್ನವರು ನಿರೀಕ್ಷಿಸುತ್ತಿದ್ದಂತೆಯೇ ಅವರಿಗೆ ಒದಗಿಸುವ ಜಾಣ್ಮೆ ಇರಬೇಕು. ಗೂಗಲ್ ನೌ ಅನ್ನೇ ನೋಡಿ, ಬಳಕೆದಾರರು ನಿರೀಕ್ಷಿಸುವ ವಿಷಯವನ್ನು ಸರಿಯಾದ ಸಮಯಕ್ಕೆ ಅವರಿಗೆ ಒದಗಿಸುವ ಸಾಮರ್ಥ್ಯವೇ ಅದರ ಯಶಸ್ಸಿಗೆ ಕಾರಣವಾಗಿದೆ.

7. ಮೊಬೈಲ್ ಇಂಟರ್‍ನೆಟ್ / ಡೇಟಾ

ಇದು ಕೊಂಚ ದುಬಾರಿ. ಇವತ್ತು ಪ್ರತಿ ಅಪ್ಲಿಕೇಶನ್ ಸಹ ಮೊಬೈಲ್ ಇಂಟರ್‍ನೆಟ್ ಬಳಕೆ ಕುರಿತು ಮಾಹಿತಿ ಹೊಂದರಿಬೇಕು. ಅಗತ್ಯಕ್ಕಿಂತ ಹೆಚ್ಚು ಇಂಟರ್‍ನೆಟ್ ಬಳಸಿಕೊಂಡು, ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿ ಫಲಿತಾಂಶ ನೀಡದ ಅಪ್ಲಿಕೇಶನ್‍ಅನ್ನು ಯಾರೂ ಮೂಸಿಯೂ ನೋಡಲ್ಲ.

6. ವೆಬ್‍ಪಿ (WebP)

ವೆಬ್‍ಪಿ (WebP). ಗೂಗಲ್ ಅಭಿವೃದ್ಧಿ ಪಡಿಸಿರುವ ಮುಕ್ತ ಮೂಲ ಚಿತ್ರ ವ್ಯವಸ್ಥೆಯ ಶೈಲಿ. ಇದರಲ್ಲಿ ಮತ್ತಷ್ಟು ಬದಲಾವಣೆ ತರಲು ಮೊಬೈಲ್ ಅಪ್ಲಿಕೇಶನ್‍ನ ಆವರ್ತನ ಶ್ರೇಣಿಯನ್ನು ಕಡಿಮೆ ಮಾಡಿ ಬಳಸಿಕೊಳ್ಳಲಾಯ್ತು. ವಿಶೇಷ ಅಂದ್ರೆ ಈ ಶೈಲಿಯಲ್ಲಿ ಫೋಟೋಗಳನ್ನು ಜೆಪಿಇಜಿ (jpeg) ಗಿಂತ ಶೇಕಡಾ 24-30ರಷ್ಟು ಉತ್ತಮವಾಗಿ ಕಂಪ್ರೆಸ್ ಮಾಡಲಾಯ್ತು.

5. ಎಪಿಕೆಯನ್ನು ಪಥ್ಯಕ್ಕೊಳಪಡಿಸಿ

4. ಅಪ್ಲಿಕೇಶನ್‍ಅನ್ನು ಬೆಣ್ಣೆಯಂತೆ ಮೃದುಗೊಳಿಸಿ

ಅಪ್ಲಿಕೇಶನ್‍ಅನ್ನು ಅಭಿವೃದ್ಧಿಪಡಿಸುವಾಗ ಪ್ರತಿಯೊಬ್ಬ ಡೆವೆಲಪರ್ ಕೂಡ 60ಎಫ್‍ಪಿಎಸ್ ಗುರಿ ಹೊಂದಿರಬೇಕು ಅಂತಾರೆ ಅಮೃತ್. ವಿನ್ಯಾಸದ ವಿಸ್ತಾರ ಹಾಗೂ ಆಳವನ್ನು ತಗ್ಗಿಸುವಂತೆ ಅವರು ಸಲಹೆ ನೀಡ್ತಾರೆ. ಹಾಗೇ ಜಿಪಿಯು ಪ್ರೊಫೈಲಿಂಗ್‍ನಂತಹ ಉಪಕರಣಗಳನ್ನು ಬಳಸುವಂತೆಯೂ ಸೂಚಿಸುತ್ತಾರೆ.

3. ಬ್ಯಾಟರಿಯ ಸದ್ಬಳಕೆ

ಕೇವಲ 2 ತಾಸುಗಳಲ್ಲೇ ನಿಮ್ಮ ಮೊಬೈಲ್ ಬ್ಯಾಟರಿಯನ್ನು ಸಂಪೂರ್ಣವಾಗಿ ಖಾಲಿ ಮಾಡುವ ಅಪ್ಲಿಕೇಶನ್‍ಅನ್ನು ಬಳಸಲು ನೀವು ಇಷ್ಟ ಪಡ್ತೀರಾ? ಖಂಡಿತ ಇಲ್ಲ. ಪ್ರತಿ ಅಪ್ಲಿಕೇಶನ್‍ನ ಯೂಸರ್ ಇಂಟರ್‍ಫೇಸ್‍ಅನ್ನು ಒಂದು ಕೋಡ್‍ಗೆ ಸಂಪರ್ಕ ಕಲ್ಪಿಸಿರಲಾಗುತ್ತೆ. ಮತ್ತೊಂದೆಡೆ ಇದೇ ಕೋಡ್ ಮೊಬೈಲ್‍ನ ಗಣನಾ ಕಾರ್ಯದ ಮೇಲೆ ಪರಿಣಾಮ ಬೀರುತ್ತೆ. ಇದು ನೇರವಾಗಿ ಬ್ಯಾಟರಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿಯೇ ಹೆಚ್ಚು ಗಣನಾ ಕಾರ್ಯ ಕೇಳದ ಸರಳ ಕೋಡ್ ನಿರ್ಮಿಸುವುದು ಅತ್ಯವಶ್ಯಕ.

2. ಮೆಮೊರಿ ಬಳಕೆ

ಪ್ರತಿ ಅಪ್ಲಿಕೇಶನ್ ಕಾರ್ಯನಿರ್ವಹಣೆಗೂ ಅದರದೇ ಆದ ಮೆಮೊರಿ ಜಾಗ ಬೇಕು. ಆ ಅಪ್ಲಿಕೇಶನ್ ಹೆಚ್ಚು ಮೆಮೊರಿ ಬಳಸುವಂತೆಯೇ, ಜಾಸ್ತಿ ಜಂಕ್​​​ ಸೃಷ್ಟಿಯಾಗುತ್ತದೆ. ಇದರ ಫಲಿತಾಂಶವೇ, ‘ಔಟ್ ಆಫ್ ಮೆಮೊರಿ’ ಅಂತ ಕೆಲಸ ಮಾಡದಿರವುದು, ಮತ್ತು ಅಪ್ಲಿಕೇಶನ್ ಸ್ಥಗಿತಗೊಳ್ಳುವ ಮೂಲಕ ಬಳಕೆದಾರರಿಗೆ ಕೆಟ್ಟ ಅನುಭವ ಸಿಗುವುದು.

1. ಅಪ್ಲಿಕೇಶನ್ ವಾಸ್ತುಶಿಲ್ಪ

ಬಳಕೆದಾರರ ನಿರೀಕ್ಷೆಗೆ ತಕ್ಕಂತೆ ಮೋಬೈಲ್ ವೇಗವಾಗಿ ಪ್ರತಿಕ್ರಿಯೆ ಪಡೆಯಬೇಕೆಂದರೆ ಅಪ್ಲಿಕೇಶನ್‍ನ ವಾಸ್ತುಶಿಲ್ಪ ಪ್ರಮುಖ ಪಾತ್ರ ವಹಿಸುತ್ತದೆ. ಇದರ ವಾಸ್ತುಶಿಲ್ಪ ಶಕ್ತಿಯುತವಾಗಿರದಿದ್ದರೆ, ಅಪ್ಲಿಕೇಶನ್ ಒತ್ತಡಕ್ಕೆ ಮಣಿದು ಬೀಳುವ ಸಂಭಾವ್ಯತೆ ಹೆಚ್ಚಿರುತ್ತದೆ. ಹೀಗಾಗಿಯೇ ಇಂದಿನ ಡೆವೆಲಪರ್‍ಗಳು ನಾವು ಅಭಿವೃದ್ಧಿಪಡಿಸುತ್ತಿರುವ ಅಪ್ಲಿಕೇಶನ್ ಶಾಶ್ವತವಲ್ಲ, ಬದಲಿಗೆ ಭವಿಷ್ಯದಲ್ಲಿ ಹಲವು ರೀತಿಯ ಬದಲಾವಣೆ ಕಾಣುತ್ತಿರುತ್ತೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು.