ಕ್ಯಾಶ್ ಬ್ಯಾಕ್ ನಲ್ಲಿ ಕ್ಯಾಶ್ ಕರೋ ಕಮಾಲ್.. ! ಇದು ಗಣಿತದ ಮಾಸ್ಟರ್ ಮೈಂಡ್.. !

ಟೀಮ್​ ವೈ.ಎಸ್​. ಕನ್ನಡ

ಕ್ಯಾಶ್ ಬ್ಯಾಕ್ ನಲ್ಲಿ ಕ್ಯಾಶ್ ಕರೋ ಕಮಾಲ್.. !  ಇದು ಗಣಿತದ ಮಾಸ್ಟರ್ ಮೈಂಡ್..  !

Thursday January 14, 2016,

3 min Read

ಎಲ್ಲಿ ನೋಡಿದ್ರೂ ಈಗ ಆನ್ ಲೈನ್ ಶಾಪಿಂಗ್ ನದ್ದೇ ದರ್ಬಾರು. ಯಾರನ್ನೋ ನೋಡಿದ್ರೂ ಮೊಬೈಲ್ ಅಥವಾ ಲ್ಯಾಪ್ ಟಾಪ್ ನಲ್ಲೇ ಶಾಪಿಂಗ್ ನಲ್ಲಿ ಮುಳುಗಿರುತ್ತಾರೆ. ಇನ್ನು ಈ ಕಾಮರ್ಸ್ ಗಳ ಬಗ್ಗೆ ಕೇಳಬೇಕಾ, ಅದೂ ಇದೂ ಅಂತ ಮೇಲಿಂದ ಮೇಲೆ ಆಫರ್ ಗಳನ್ನ ನೀಡೋದ್ರಲ್ಲಿ ಪೈಪೋಟಿಗಿಳಿದಿವೆ. ಇನ್ನು ಕೆಲವು ಕಂಪನಿಗಳಂತೂ ವಿಭಿನ್ನವಾದ ಆಫರ್ ಗಳನ್ನ ನೀಡಿ ಗ್ರಾಹಕರಿಗೆ ಗಾಳ ಹಾಕಲು ಪ್ರಯತ್ನಿಸುತ್ತಿವೆ. ಅದ್ರಲ್ಲೂ ಗ್ರಾಹಕರು ತುಂಬಾ ಮನಸೋತಿರೋದು ಕ್ಯಾಶ್ ಬ್ಯಾಕ್ ಆಫರ್ ಗೆ. ಖರ್ಚು ಮಾಡಿದ ಹಣದಲ್ಲೇ ಇಂತಿಷ್ಟು ಪರ್ಸೆಂಟ್ ಹಣ ವಾಪಸ್ ಬರುತ್ತೆ ಅನ್ನೋದು ಕಣ್ಣಿಗೆ ಬಿದ್ರೆ ಸಾಕು ಗ್ರಾಹಕರು ಮುಗಿಬೀಳ್ತಾರೆ. ಹೀಗಾಗಿ ಈ ಕ್ಯಾಶ್ ಬ್ಯಾಕ್ ತಂತ್ರವನ್ನ ಹಲವು ಕಂಪನಿಗಳು ಯಶಸ್ವಿಯಾಗಿ ಪ್ರಯೋಗಿಸುತ್ತಿವೆ. ಅಲ್ಲದೆ ಕ್ಯಾಶ್ ಬ್ಯಾಕ್ ಕಾನ್ಸೆಪ್ಟನ್ನಷ್ಟೇ ಹೊತ್ತು ಬಂದಿರುವ ವಿವಿಧ ಕಂಪೆನಿಗಳು ದೊಡ್ಡ ಮಟ್ಟದಲ್ಲಿ ಲಾಭಗಿಟ್ಟಿಸುತ್ತಿವೆ. ಇಂತಹ ಕ್ಯಾಶ್ ಬ್ಯಾಕ್ ಬ್ಯುಸಿನೆಸ್ ನಲ್ಲಿ ‘ಕ್ಯಾಶ್ ಕರೋ’ ಕಂಪನಿ ಸಾಕಷ್ಟು ಗಮನ ಸೆಳೆದಿದೆ.

image


ಯುನೈಟೆಡ್ ಕಿಂಗ್ ಡಮ್ ನಲ್ಲಿ ತನ್ನ ಪತಿ ಜೊತೆ ಕೈಜೋಡಿಸಿ ಯಶಸ್ವಿಯಾಗಿ ಕ್ಯಾಶ್ ಬ್ಯಾಕ್ ಬ್ಯುಸಿನೆಸ್ ನಡೆಸಿರುವ ಸ್ವಾತಿ ಭಾರ್ಗವ್ ಇದೀಗ ಭಾರತದ ಮಾರುಕಟ್ಟೆಯಲ್ಲೂ ಕ್ಯಾಶ್ ಕರೋ ಅನ್ನೋ ಹೆಸರಿನಲ್ಲಿ ಅದೃಷ್ಠ ಪರೀಕ್ಷೆಗಿಳಿದಿದ್ದಾರೆ. ಇನ್ನು ಈ ಬ್ಯುಸಿನೆಸ್ ನ ರೂವಾರಿ ಸ್ವಾತಿ ಭಾರ್ಗವ ಅವರ ವೈಯುಕ್ತಿಕ ಸಾಧನೆ ನೋಡಿದ್ರೆ ಅಚ್ಚರಿ ಎನಿಸುತ್ತದೆ. ಸ್ವಾತಿ ಗಣಿತ ಲೆಕ್ಕಾಚಾರದಲ್ಲಿ ಅತ್ಯದ್ಭುತ ಪ್ರತಿಭೆ ಹೊಂದಿದ್ದಾರೆ. ಇವರ ಪ್ರತಿಭೆಗೆ ತಕ್ಕಂತೆ ಗವರ್ನಮೆಂಟ್ ಆಫ್ ಸಿಂಗಾಪುರ್, ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ( ಎಲ್ ಎಸ್ ಇ ) ಸ್ಕಾಲರ್ ಶಿಪ್ ನೀಡಿ ಗೌರವಿಸಿವೆ. ಇನ್ನು ಲಂಡನ್ ನಲ್ಲಿರುವ 3000 ಸಾವಿರಕ್ಕೂ ಹೆಚ್ಚು ಬ್ಯುಸಿನೆಸ್ ಗಳ ನಡುವೆಯೂ ಸ್ವಾತಿ ಭಾರ್ಗವ ತಮ್ಮ ಕ್ಯಾಶ್ ಬ್ಯಾಕ್ ಬ್ಯುಸಿನೆಸ್ ನಲ್ಲಿ ಸಕ್ಸಸ್ ಆಗಿದ್ದಾರೆ. ಇನ್ನು ಲಂಡನ್ ನಲ್ಲೇ ತಮ್ಮ ಸಂಗಾತಿಯನ್ನ ಹುಡುಕಿಕೊಂಡ ಸ್ವಾತಿ, ಅಲ್ಲೇ ಬ್ಯುಸಿನೆಸ್ ಶುರುಮಾಡಿದ್ರು. ಇದೀಗ ಆ ಯಶಸ್ಸಿನ ಓಟವನ್ನ ಭಾರತದಲ್ಲೂ ಮುಂದುವರಿಸಿದ್ದಾರೆ. ವಿಶೇಷ ಅಂದ್ರೆ ತಾವೆಷ್ಟೇ ಬ್ಯುಸಿ ಇದ್ರೂ ಸ್ವಾತಿ ಯೋಗವನ್ನ ಯಾವತ್ತೂ ಮರೆತಿಲ್ಲ.

image


ಅದ್ಭುತ ಪ್ರತಿಭೆಯ ಸ್ವಾತಿ..

ಸ್ವಾತಿ ಮೂಲತಃ ಅಂಬಾಲದಲರು. “ ನಾನು ಆಕ್ಸ್ ಫರ್ಡ್ ಡಿಕ್ಷನರಿ ಹೊಂದಿದ್ದಾಗ ತುಂಬಾ ಚಿಕ್ಕವಳು. ಆದ್ರೆ ನನಗೆ ಅದು ತುಂಬಾ ಮುಖ್ಯ ಅಂತ ಅನಿಸುತ್ತಿತ್ತು. ಕ್ರಮೇಣ ನಾನು ಆಕ್ಸ್ ಫರ್ಡ್ ಯುನಿವರ್ಸಿಟಿ ಬಗ್ಗೆ ತಿಳಿದುಕೊಂಡಾಗ ನಾನು ಅಲ್ಲೇ ಓದಲೇಬೇಕು ಅಂತ ನಿರ್ಧರಿಸಿದ್ದೆ. ” ಅಂತ ಸ್ವಾತಿ ಹಳೆಯ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ. ಇನ್ನು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಸ್ಕಾಲರ್ ಶಿಪ್ ಪಡೆದಾಗ ಆಕೆ ಆಯ್ಕೆ ಮಾಡಿಕೊಂಡಿದ್ದು ಎಲ್ ಎಸ್ ಇ ಸಂಸ್ಥೆಯನ್ನ. ಯಾಕಂದ್ರೆ ಲಂಡನ್ ನಲ್ಲಿ ಇರುವುದಕ್ಕೆ ಆಕೆ ಇಚ್ಛಿಸಿದ್ದರು. ಅಲ್ಲದೆ ಅವರಿಗೆ ಸಿಕ್ಕಿದ್ದ ಸ್ಕಾಲರ್ ಶಿಪ್ ಕೂಡ ಅತೀ ದೊಡ್ಡ ಮೌಲ್ಯದ್ದಾಗಿತ್ತು. ನಂತ್ರ ಓದು ಮುಗಿಸಿ ಕಾಲೇಜಿನಲ್ಲಿ ಗಣಿತ ಲೆಕ್ಚರರ್ ಆಗಿ ಸೇರಿಕೊಂಡು ಅಂಕಿ ಸಂಖ್ಯೆಗಳೊಂದಿಗೆ ಮೋಜಿನ ಆಟವಾಡಿದ್ರು.

“ ನಾನು ಚಿಕ್ಕವಳಾಗಿದ್ದಾಗ ಏನು ಮಾಡಬೇಕು ಅನ್ನುವುದರ ಅರಿವು ನನಗಿರಲಿಲ್ಲ. ಅಲ್ಲದೆ ಗಣಿತ ಭವಿಷ್ಯದಲ್ಲಿ ನನಗೆ ಯಾವ ರೀತಿಯ ನೆರವು ನೀಡುತ್ತದೆ ಅನ್ನುವುದರ ಕಲ್ಪನೆಯೂ ಇರಲಿಲ್ಲ. ಆದ್ರೆ ನಾನು ಸ್ಕಿಲ್ಸ್ ಗಳನ್ನ ಕಲೆಯುತ್ತಲೇ ಇದ್ದೆ” - ಸ್ವಾತಿ ಭಾರ್ಗವ್, ಕ್ಯಾಶ್ ಕರೋ ಸಹ ಸಂಸ್ಥಾಪಕಿ

ಪ್ರೀತಿಯಲ್ಲಿ ಸ್ವಾತಿ..!

ಸ್ವಾತಿ ತಮ್ಮ ಪತಿ ರೋಹನ್ ಅವರನ್ನ ಮೊದಲು ಭೇಟಿಯಾಗಿದ್ದು ಎಲ್ ಎಸ್ ಇನಲ್ಲಿ. ನಂತ್ರ ಹೊಸ ಉದ್ಯೋಗ ಪಡೆದ ರೋಹನ್ ವಾಶಿಂಗ್ಟನ್ ಗೆ ತೆರಳಿದ್ರು. ಬಳಿಕ ಸ್ವಾತಿ ಕೂಡ ಹೊಸ ಕೆಲಸಕ್ಕೆ ಸೇರಿಕೊಂಡ್ರು. ಹೀಗಿದ್ರೂ ನಂತ್ರದ ಮೂರು ವರ್ಷಗಳ ಕಾಲ ಇವರಿಬ್ಬರ ಪ್ರೀತಿ ಹಾಗೇ ಮುಂದುವರಿಯಿತು. ರೋಹನ್ ಅವರನ್ನ ಅತಿಯಾಗಿ ಮೆಚ್ಚಿಕೊಂಡಿದ್ದ ಸ್ವಾತಿ ಸದಾ ಅವರ ನೆನಪಿನಲ್ಲೇ ಇರುತ್ತಿದ್ದರು. ಬಳಿಕ 2009ರಲ್ಲಿ ಇವರಿಬ್ಬರೂ ಮದುವೆಯಾಗಿ 2011ರಲ್ಲಿ ಪೌರಿಂಗ್ ಪೌಂಡ್ ಅನ್ನೋ ಹೆಸರಿನಲ್ಲಿ ಉದ್ದಿಮೆ ಶುರುಮಾಡಿದ್ರು.

“ ರೋಹನ್ ಒಬ್ಬ ಬೆಸ್ಟ್ ಬ್ಯುಸಿನೆಸ್ ಪಾರ್ಟನರ್. ನಾವಿಬ್ಬರು ಸದಾ ನಮ್ಮಿಂದ ಸಾಧ್ಯವಾಗಬಹುದಾದ ಶ್ರಮವನ್ನ ಬ್ಯುಸಿಸ್ ನಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ವು. ಹೀಗಾಗಿ ಪರಸ್ಪರ ಅಹಂ ಭಾವವನ್ನ ದೂರ ಇಟ್ಟೆವು. ಇನ್ನು ರೋಹನ್ ನನಗೆ ಅತೀ ದೊಡ್ಡ ಸ್ಫೂರ್ತಿ ಹಾಗೂ ನನ್ನ ಯಶಸ್ಸಿನ ರೂವಾರಿ. ಉದ್ಯಮದಲ್ಲಿ ಅದ್ಭುತ ಪಾರ್ಟನರ್ ಕೂಡ ಆಗಿದ್ದು, ಅವರೊಂದಿಗಿನ ಈ ಪಯಣ ಖುಷಿ ಕೊಟ್ಟಿದೆ. ” - ಸ್ವಾತಿ ಭಾರ್ಗವ್, ಕ್ಯಾಶ್ ಕರೋ ಸಹ ಸಂಸ್ಥಾಪಕಿ

ಕ್ಯಾಶ್ ಬ್ಯಾಕ್..

image


ಸ್ವಾತಿ ಹಾಗೂ ರೋಹನ್ ನೇತೃತ್ವದ ಕ್ಯಾಶ್ ಬ್ಯಾಕ್ ಸ್ಟಾರ್ಟ್ ಅಪ್ ಪೌರಿಂಗ್ ಪೌಂಡ್, ಇತರೆ ದೇಶಗಳಲ್ಲೂ ಭರ್ಜರಿ ಯಶಸ್ಸು ಕಂಡಿತು. ವಿಶೇಷ ಅಂದ್ರೆ ಇವರ ಈ ಕಂಪೆನಿ ಯುಎಸ್ ಎನಲ್ಲೇ ಅತೀ ದೊಡ್ಡ ಕ್ಯಾಶ್ ಬ್ಯಾಕ್ ವೆಬ್ ಸೈಟ್ ಆಗಿ ಬೆಳೆದಿದೆ. ಜೊತೆಗೆ ಜಪಾನ್ ಮೂಲದ ಕಂಪನಿಯೊಂದಿಗೂ 1 ಬಿಲಿಯನ್ ಯುಎಸ್ ಡಾಲರ್ ಮೌಲ್ಯಕ್ಕೆ ಟೈ ಅಪ್ ಮಾಡಿಕೊಂಡ್ರು. ಇದರಿಂದಾಗಿ ಯುನೈಟೆಡ್ ಕಿಂಗ್ ಡಮ್ ನ ಈ ಕಾಮರ್ಸ್ ಒಟ್ಟು ಮಾರುಕಟ್ಟೆಯಲ್ಲಿ ಶೇ 3-4ರಷ್ಟು ಪ್ರಭುತ್ವ ಸಾಧಿಸಲು ಸಹಕಾರಿಯಾಯ್ತು.

ಆದ್ರೆ ಯುನೈಟೆಡ್ ಕಿಂಗ್ ಡಮ್ ನಲ್ಲಿ 750,000 ಯುಎಸ್ ಡಿ ಹೂಡಿಕೆಯೊಂದಿಗೆ ಪೌರಿಂಗ್ ಪೌಂಡ್ ಶುರುಮಾಡುವ ವೇಳೆ ಭಾರತದಲ್ಲಿ ಈ ಕಾಮರ್ಸ್ ಅಷ್ಟೆನೂ ಚಾಲನೆಗೆ ಬಂದಿರಲಿಲ್ಲ. ಆದ್ರೆ 2013ರಲ್ಲಿ ಕ್ಯಾಶ್ ಕರೋ ಕಂಪೆನಿಯನ್ನ ಭಾರತದಲ್ಲಿ ಸ್ವಾತಿ ಭಾರ್ಗವ್ ಶುರುಮಾಡಿದ್ರು. ಈ ಕಂಪನಿ ಇದೀಗ ಭಾರತದಲ್ಲೇ ಅತೀ ದೊಡ್ಡ ಕ್ಯಾಶ್ ಬ್ಯಾಕ್ ಕಂಪನಿಯಾಗಿ ಗುರುತಿಸಿಕೊಂಡಿದೆ. ಅಮೆಜಾನ್, ಸ್ಯ್ನಾಪ್ ಡೀಲ್, ಜಬಾಂಗ್ ನಂತಹ 500 ಕಂಪನಿಗಳೊಂದಿಗೆ ಕ್ಯಾಶ್ ಕರೋ ಟೈ ಅಪ್ ಮಾಡಿಕೊಂಡಿದೆ. ಭಾರತದಲ್ಲಿ ಆರಂಭದಲ್ಲಿ ಉದ್ದಿಮೆ ಶುರು ಮಾಡಲು ಕಷ್ಟವೆನಿಸಿದ್ರೂ ಸ್ವಾತಿ ಭಾರ್ಗವ್ ಎಲ್ಲವನ್ನೂ ಮೀರಿ ಸಕ್ಸಸ್ ಕಂಡಿದ್ದಾರೆ.

ಲೇಖಕರು - ಫ್ರಾನ್ಸಿಸ್ಕಾ ಫೆರ್ರಾರಿಯೋ

ಲೇಖನ – ಬಿ ಆರ್ ಪಿ, ಉಜಿರೆ