ಬುರ್ಜ್ ಖಲೀಪಾದ ಎತ್ತರಕ್ಕೆ ಚಾಲೆಂಜ್- ಮುಂಬೈನಲ್ಲಿ ತಯಾರಾಗಿದೆ ಸೂಪರ್ ಪ್ಲಾನಿಂಗ್

ಟೀಮ್​ ವೈ.ಎಸ್​. ಕನ್ನಡ

ಬುರ್ಜ್ ಖಲೀಪಾದ ಎತ್ತರಕ್ಕೆ ಚಾಲೆಂಜ್- ಮುಂಬೈನಲ್ಲಿ ತಯಾರಾಗಿದೆ ಸೂಪರ್ ಪ್ಲಾನಿಂಗ್

Thursday April 20, 2017,

2 min Read

ದುಬೈನಲ್ಲಿರುವ "ಬುರ್ಜ್ ಖಲೀಫಾ" ಬಗ್ಗೆ ಎಲ್ಲರಿಗೂ ಗೊತ್ತು. 163 ಅಂತಸ್ತುಗಳನ್ನು ಹೊಂದಿರುವ "ಬುರ್ಜ್ ಖಲೀಫಾ" ವಿಶ್ವದ ಅತೀ ಎತ್ತರದ ಕಟ್ಟಡ ಅನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಅರಬ್ ದೇಶದ ಪ್ರಸಿದ್ಧ ಪ್ರವಾಸಿ ಸ್ಥಳಗಳ ಪೈಕಿ   "ಬುರ್ಜ್ ಖಲೀಫಾ" ಕೂಡ ಒಂದು. ಆದ್ರೆ ಈಗ ಈ "ಬುರ್ಜ್ ಖಲೀಫಾ"ದ ಎತ್ತರವನ್ನೂ ಮೀರಿಸುವ ಕಟ್ಟಡವನ್ನು ಕಟ್ಟಲು ತಯಾರಿಗಳು ನಡೆಯುತ್ತಿವೆ. ಮುಗಿಲೆತ್ತರದ "ಬುರ್ಜ್" ಅನ್ನು ಮೀರಿಸುವ ಕಟ್ಟದ ಕಟ್ಟಲು ಪ್ಲಾನ್ ಮಾಡಿರುವುದು ಮುಂಬೈನಲ್ಲಿ. ಕೇಂದ್ರ ಸಚಿವ ನಿತಿನ್ ಗಡ್ಕರಿ, ಭಾರತದ ಹಣಕಾಸು ರಾಜಧಾನಿ ಎಂದೇ ಪ್ರಸಿದ್ಧಿ ಪಡೆದಿರುವ ಮುಂಬೈನಲ್ಲಿ ವಿಶ್ವದ ಎತ್ತರದ ಕಟ್ಟಡ ಕಟ್ಟಲು ಯೋಜನೆ ರೂಪಿಸಿದ್ದಾರೆ. ಮುಂಬೈನಲ್ಲಿ ಪಾಳು ಬಿದ್ದಿರುವ ಸ್ಥಳಗಳಲ್ಲಿ ಈ ಮುಗಿಲೆತ್ತರದ ಕಟ್ಟಡ ತಲೆ ಎತ್ತಲಿದೆ. ಮುಂಬೈನಲ್ಲಿ ನಿರ್ಮಾಣವಾಗಲಿರುವ ವಿಶ್ವದ ಅತೀ ಎತ್ತರದ ಕಟ್ಟಡ, ಈಗಿರುವ ಮರೀನ್ ಡ್ರೈವ್​ಗಿಂತಲೂ ಹೆಚ್ಚು ಪ್ರಸಿದ್ಧಿ ಪಡೆಯಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.

image


ಮುಂಬೈನ ಪೂರ್ವಭಾಗದಲ್ಲಿರುವ ಇಂಡಸ್ಟ್ರೀಯಲ್ ವಾಟರ್​ಲ್ಯಾಂಡ್ "ಮುಂಬೈ ಪೋರ್ಟ್ ಟ್ರಸ್ಟ್​"ಗೆ ಸೇರಿಕೊಂಡಿದೆ. ಹೀಗಾಗಿ "ಮುಂಬೈ ಪೋರ್ಟ್ ಟ್ರಸ್ಟ್" ಅನ್ನು ಮುಂಬೈನ ಶ್ರೀಮಂತ ಭೂಮಾಲೀಕ ಎಂದು ಕರೆಯಲಾಗುತ್ತಿದೆ. ಹೀಗಾಗಿ ಈ ಪ್ರದೇಶದಲ್ಲಿ ವಿಶ್ವದ ಅತೀ ಎತ್ತರದ ಕಟ್ಟಡವನ್ನು ನಿರ್ಮಾಣ ಮಾಡಲು ಯೋಜನೆಗಳನ್ನು ರೂಪಿಸಲಾಗಿದೆ.

“ ಮುಂಬೈನಲ್ಲಿ ಮುಂಬೈ ಪೋರ್ಟ್ ಟ್ರಸ್ಟ್ ಅತೀ ಹೆಚ್ಚು ಮೌಲ್ಯ ಹೊಂದಿರುವ ಜಮೀನುಗಳನ್ನು ಹೊಂದಿದೆ. ಐತಿಹಾಸಿಕ ತಾಜ್ ಹೊಟೇಲ್, ಬಲಾರ್ಡ್ ಎಸ್ಟೇಟ್ ಮತ್ತು ರಿಲಯನ್ಸ್ ಬಿಲ್ಡಿಂಗ್ ಇರುವ ಸ್ಥಳದ ಮಾಲೀಕರೂ ಕೂಡ ನಾವೇ. ನಮ್ಮ ಬಳಿ ಇನ್ನೂ ಹಲವು ಎಕರೆಗಳಷ್ಟು ಜಮೀನು ಇದೆ. ಅಲ್ಲಿ ಅಭಿವೃದ್ಧಿ ಕಾರ್ಯ ಮಾಡಬೇಕಿದೆ. ”
- ನಿತಿನ್ ಗಡ್ಕರಿ, ಕೇಂದ್ರ ಸಚಿವ

ಈಗಾಗಲೇ ವಿಶ್ವದ ಅತೀ ಎತ್ತರದ ಕಟ್ಟಡವನ್ನು ನಿರ್ಮಿಸಲು ನೀಲಿ ನಕ್ಷೆ ಮತ್ತು ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಕೇಂದ್ರ ಸರಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ತಕ್ಷಣ ಕೆಲಸ ಆರಂಭಿಸಲಾಗುತ್ತದೆ. "ಮುಂಬೈ ಪೋರ್ಟ್ ಟ್ರಸ್ಟ್" ಬಿಲ್ಡರ್ಸ್ ಮತ್ತು ಹೂಡಿಕೆದಾರರಿಗೆ ಈ ಜಮೀನು ಕೊಡಲು ಹಿಂದೇಟು ಹಾಕುತ್ತಿದೆ. ಹೀಗಾಗಿ "ಪೋರ್ಟ್ ಟ್ರಸ್ಟ್" ತನ್ನದೇ ಯೋಜನೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲಿದೆ. ಹಸಿರು ನಿರ್ವಹಣೆಗೆ ಮಹತ್ವ ನೀಡಲಾಗಿದ್ದು, ಈಗಿರುವ ಮರೀನ್ ಡ್ರೈವ್​ಗಿಂತಲೂ ಅದ್ಭುತ ವಾತಾವರಣ ಸೃಷ್ಟಿ ಮಾಡುವ ಉದ್ದೇಶವನ್ನು ಹೊಂದಿದೆ. ದುಬೈನ ಪ್ರಸಿದ್ಧ "ಬುರ್ಜ್ ಖಲೀಫಾ"ಗಿಂತಲೂ ಎತ್ತರದ ಕಟ್ಟಡ ನಿರ್ಮಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ.

ಇದನ್ನು ಓದಿ: ಫೋಟೋಗಳೇ ಮಾತಾಗಿ ಕಥೆ ಹೇಳುತ್ತವೆ..!

ಮುಂಬೈ "ಪೋರ್ಟ್ ಟ್ರಸ್ಟ್ "1873ರಿಂದ ಬಂದರು ವಹಿವಾಟುಗಳನ್ನು ನೋಡಿಕೊಳ್ಳುತ್ತಿದೆ. ಅಷ್ಟೇ ಅಲ್ಲ ಭಾರತದಲ್ಲಿ ಅತೀ ಹೆಚ್ಚು ಸಾರ್ವಜನಿಕ ಆಸ್ತಿ ಹೊಂದಿದ ಹೆಗ್ಗಳಿಕೆಯನ್ನು ಕೂಡ ಪಡೆದುಕೊಂಡಿದೆ. ಹೀಗಾಗಿ 500 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಯೋಜನೆ ರೂಪಿಸಿದೆ. ಹೊಸದಾಗಿ ಸಜ್ಜುಗೊಳ್ಳಲಿರುವ ಕ್ಯಾಂಪಸ್​ನಲ್ಲಿ ಸಿನೆಮಾ ಹಾಲ್, ವ್ಯಾಪಾರಿ ಕೇಂದ್ರಗಳು ಸೇರಿದಂತೆ ಹಲವು ರೀತಿಯಲ್ಲಿ ಜನರನ್ನು ಸೆಳೆಯುವ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಮಳಗಾಂವ್ ನಿಂದ ವಡಾಲಾ ತನಕ ಸುಮಾರು 7 ಕಿಲೋಮೀಟರ್ ಉದ್ದದ ಮರೀನ್ ಡ್ರೈವ್ ಕೂಡ ಈ ಯೋಜನೆಯ ಭಾಗವಾಗಿದೆ.

ಒಟ್ಟಿನಲ್ಲಿ ದುಬೈನ "ಬುರ್ಜ್ ಖಲೀಫಾ" ವಿಶ್ವದ ಅತೀ ಎತ್ತರದ ಕಟ್ಟಡ ಅನ್ನುವ ಖ್ಯಾತಿಯನ್ನು ಶೀಘ್ರದಲ್ಲೇ ಕಳೆದುಕೊಳ್ಳಲಿದೆ. ಅದಕ್ಕೆ ಕಾರಣ ಭಾರತವೇ ಆಗಲಿದೆ.

ಇದನ್ನು ಓದಿ:

1. ಮಂಗಳಮುಖಿಯರ ಜ್ಞಾನರ್ಜನೆಗೆ ಹೊಸ ವ್ಯವಸ್ಥೆ- MSUನಿಂದ ತೃತೀಯ ಲಿಂಗಿಗಳಿಗೆ ಸಪ್ರೈಸ್

2. ಕೇರಳ ರಾಜ್ಯದಿಂದ ಮತ್ತೊಂದು ದಾಖಲೆ- ತೃತೀಯ ಲಿಂಗಿಗಳಿಗೆ ಕ್ರೀಡಾಕೂಟ ಆಯೋಜನೆ..!

3. ಅಂಕಿಅಂಶದ ಕಡೆಗೆ ಗಮನ- ಪಕ್ಕಾ ಲೆಕ್ಕ ಕೊಡ್ತಾರೆ ರೇಣುಕಾ ಮತ್ತು ಅರ್ಚನಾ..!