ಕೇವಲ ಸ್ನೀಫರ್ ಡಾಗ್ ಅಲ್ಲ..! ಇದು ಸೂಪರ್​​ ಡಾಗ್​..!

ಪೂರ್ವಿಕಾ

0

ಕ್ಷಣಾರ್ಧದಲ್ಲಿ ಅರಣ್ಯ ಕಳ್ಳರನ್ನ ಹಿಡಿತಾನೆ..ಯಾರಾದ್ರು ತಪ್ಪು ಮಾಡಿದ್ರೆ ಅಲ್ಲೇ ಕುತ್ತಿಗೆ ಸೀಳುತ್ತಾನೆ. . ಬಂಡಿಪುರದ ಅರಣ್ಯದ ಸಂರಕ್ಷಕ ಇವನು, ವನ್ಯಜೀವಿಗಳ ಪಾಲಿಗೆ ಪ್ರಾಣ ರಕ್ಷಕ. ಇವ ಮತ್ಯಾರು ಅಲ್ಲ ಅರಣ್ಯ ಇಲಾಖೆಗೆ ನೇಮಕ ಆಗಿರೋ ಸ್ಪೆಷಲ್ ಸ್ವ್ಕಾಡ್‍ ಲೀಡರ್​​​ ರಾಣಾ.

ನೀವು ಹೀಗಂದ ತಕ್ಷಣ ಯಾವುದಾದ್ರೂ ಖಡಕ್​​ ಫಾರೆಸ್ಟ್​ ಆಫೀಸರ್​ ಅಂತ ಅಂದುಕೊಳ್ಳಬಹುದು. ಅದು ನಿಜವಾಗಿದ್ರೆ ನಿಮ್ಮ ಊಹೆ ತಪ್ಪು. ಈ ಅರಣ್ಯ ಸಂರಕ್ಷಕ ಮನುಷ್ಯನಲ್ಲ. ಜರ್ಮನ್​​ ಶೆಫರ್ಡ್​ ತಳಿಯ ನಾಯಿ..!

ರಾಣಾ ಜರ್ಮನ್ ಶಫರ್ಡ್‍ ಜಾತಿಯ ಸ್ನೀಫರ್ ಡಾಗ್. ಬಂಡೀಪುರ ಅಂದ್ರೆ ಸಾಕು ಎಲ್ಲರಿಗೂ ತಿಳಿದಿರೋ ಹಾಗೆ ಅಲ್ಲಿನ ಪರಿಸರಕ್ಕೆ, ಅರಣ್ಯ ಸಂಪತ್ತಿಗೆ ಮಾರೋ ಹೋಗದವರಿಲ್ಲ. ಅಷ್ಟೇ ಅಲ್ಲದೆ ಶ್ರೀಗಂಧ , ತೇಗ, ಹೊನ್ನೆ ಹೀಗೆ ಸಂಪತ್​​ ಭರಿತ ಮರಗಳು ಹಾಗೂ ಪ್ರಾಣಿ ಸಂಕುಲ ಹೆಚ್ಚಾಗಿರೋ ಪ್ರದೇಶ ಬಂಡೀಪುರ ಅಂದ ತಕ್ಷಣ ಪರಿಸರ ಸ್ನೇಹಿಗಳಿಗೆ ಹೇಗೆ ಕಣ್ಣರುಳುತ್ತೋ ಅದೇ ರೀತಿ ಅರಣ್ಯ ಲೋಟಿ ಕೋರರ ಕಣ್ಣುಗಳು ಕೂಡ ಅರಳುತ್ತವೆ. ಅಂತ ಅರಣ್ಯ ಕಳ್ಳರ ಹುಟ್ಟು ಅಡಗಿಸೋಕೆ ಅಂತನೇ ಅರಣ್ಯ ಸಿಬ್ಬಂದಿಯಾಗಿ ಹೊಸದಾಗಿ ನೇಮಕಗೊಂಡಿದ್ದಾನೆ ರಾಣಾ.

ರಾಣಾ ಒಂಬತ್ತು ತಿಂಗಳು ಮಧ್ಯಪ್ರದೇಶದಲ್ಲಿ ಸ್ಪೆಷಲ್​​​​ ಟ್ರೈನಿಂಗ್ ಪಡೆದ ಡಾಗ್. ಟ್ರೈನಿಂಗ್ ಸಮಯದಲ್ಲೇ ಅಲ್ಲಿ ಬಂದಿದ್ದ ಎಲ್ಲಾ ಶ್ವಾನಗಳನ್ನ ಸೋಲಿಸಿ ತನ್ನ ಶೌರ್ಯದಿಂದ ಮೆರೆದವನು. 22 ತಿಂಗಳು ವಯಸ್ಸಿನ ರಾಣಾ ಬರೋಬ್ಬರಿ 37 ಕೆ.ಜಿ. ತೂಗುತ್ತಾನೆ. ಜರ್ಮನ್ ಶಫರ್ಡ್‍ ಜಾತಿಗೆ ಸೇರಿದ ರಾಣಾ ಸಖತ್​​ ಶಾರ್ಫ್.

ಯಾವುದೇ ಡಿಸ್ಟರ್ಬೆನ್ಸಸ್​​​​​ ಇಲ್ಲ ಅಂದ್ರೆ ರಾಣಾ, ಅರಣ್ಯ ಕಳ್ಳತನ ಆದ ಕೇವಲ 24 ಗಂಟೆಗಳ ನಂತ್ರವೂ ಕೇವಲ ವಾಸನೆಯಲ್ಲೇ ಕಳ್ಳರನ್ನ ಹಿಡಿಯೋ ಸಾಮರ್ಥ್ಯವನ್ನ ಹೊಂದಿದ್ದಾನೆ. ಇನ್ನೂಕಾಡಿನ ಒಳಗೆ 50 ಕಿಲೋ ಮೀಟರ್‍ ದೂರ ಹೋಗಿ ಕಳ್ಳರನ್ನ ಹಿಡಿದು ತರುತ್ತಾನೆ ರಾಣಾ . ಟ್ರೈನಿಂಗ್ ಸಮಯದಲ್ಲಿ ರಾಣಾನ ಚಾಣಾಕ್ಷತನವನ್ನ ನೋಡಿ ಸ್ಪೆಷಲ್‍ ಟೈಗರ್ ಪ್ರೋಟೆಕ್ಷನ್ ಸಿಬ್ಬಂದಿ ಪ್ರಕಾಶ್ ಮತ್ತು ಮಣಿ, ರಾಣಾನನ್ನು ಆಯ್ಕೆ ಮಾಡಿಕೊಂಡಿದ್ರು. .ರಾಣಾ, ಪ್ರಕಾಶ್ ಹಾಗೂ ಮಣಿ ಅವರ ಮಾತನ್ನ ಬಿಟ್ಟರೆ ಇನ್ಯಾರ ಮಾತನ್ನು ಕೇಳಲ್ಲ. ಅಷ್ಟೇ ಅಲ್ಲ, ಇವ್ರಿಬ್ರನ್ನ ಬಿಟ್ಟು ಮತ್ಯಾರು ಕೊಟ್ಟಆಹಾರವನ್ನು ಸೇವಿಸೋದಿಲ್ಲ.

ಇನ್ನೂ ರಾಣಾನನ್ನ ಸದ್ಯ ಕಂಪ್ಲೀಟ್ ಆಗಿ ಕಂಟ್ರೋಲ್ ಮಾಡುತ್ತಿರೋದು ಪ್ರಕಾಶ್. ಪ್ರಕಾಶ್‍ ರಾಣಾನಿಗೆ ಯಾವುದಾದ್ರು ವಸ್ತು ತೋರಿಸಿ ಗಾರ್ಡ್​ ಅಂದ್ರೆ ಸಾಕು ಆ ವಸ್ತುವನ್ನಅಲುಗಾಡಲು ಕೂಡ ಬಿಡುವುದಿಲ್ಲ. ಇನ್ನು ಕಳ್ಳರನ್ನ ತೋರಿಸಿ ಗಾರ್ಡ್​ ಅಂದ್ರೆ ಅವ್ರ ಕತೆ ಮುಗಿದೇ ಹೋಯ್ತು .ಗಾರ್ಡ್​ ಅಂದ ತಕ್ಷಣ ರಾಣಾ ಮೊದಲಿಗೆ ಬಾಯಿ ಹಾಕೋದು ಕೈಗೆ. ಅಪ್ಪಿತಪ್ಪಿ ಕೈ ತಪ್ಪಿ ಹೋಯ್ತು ಅಂದ್ರೆ ರಾಣಾನ ಮುಂದಿನ ಟಾರ್ಗೆಟ್​​​​​​​​ ಕತ್ತು. ಈಗಾಗಲೇ ಬಂಡೀಪುರದಲ್ಲಿ ಆಗುತ್ತಿರೋ ಮರಗಳ್ಳರನ್ನ ಹಿಡಿಯೋದ್ರಲ್ಲಿ ತನ್ನ ಚಾಣಾಕ್ಷತನವನ್ನ ತೋರಿಸಿ ಅಲ್ಲಿಯ ಜನರ ಮೆಚ್ಚುಗೆ ಗಳಿಸಿದ್ದಾನೆ.

ರಾಣಾ ಸ್ಪೆಷಲ್​ ನೌಕರ..!

ಇಷ್ಟಕ್ಕೂ ರಾಣಾ ಅರಣ್ಯ ಇಲಾಖೆಗೆ ಸ್ಪೆಷಲ್‍ ಅನ್ನಿಸೋದಕ್ಕೆ ಸಾಕಷ್ಟು ಕಾರಣಗಳಿವೆ. ಎಲ್ಲರಂತೆ ರಾಣಾ ಇಲ್ಲಿ ಶ್ವಾನದಳಕ್ಕೆ ಸೇರಿದವನಲ್ಲ ರಾಣಾ ಅರಣ್ಯಇಲಾಖೆಯ ಸ್ಪೆಷಲ್ ಸಿಬ್ಬಂದಿ. ಈತನಿಗಾಗಿ ಇಲಾಖೆಯಲ್ಲಿ ಸರ್ವಿಸ್‍ ರೆಕಾರ್ಡ್ ಬುಕ್‍ಅನ್ನ ಮೇಂಟೈನ್ ಮಾಡಲಾಗ್ತಿದೆ. ಇದ್ರಲ್ಲಿ ರಾಣಾ ಮಾಡೋ ಕೆಲಸವನ್ನ ಹಾಗೂ ಅವನ ಬಗ್ಗೆ ಬರೆಯಲಾಗುತ್ತೆ. ಅಷ್ಟೇ ಅಲ್ಲದೆ ರಾಣಾನಿಗೆ ಪೊಲೀಸ್ ಅಧಿಕಾರಿಗಳಷ್ಟೆ ಅಲ್ಲದೆ ಜನಸಾಮಾನ್ಯರು ಸಾಕಷ್ಟು ಫ್ಯಾನ್ಸ್​​​ ಇದ್ದಾರೆ. ಅದು ಹೇಗೆ ಅಂದ್ರೆ ರಾಣಾ ಫೇಸ್ ಬುಕ್ ನಲ್ಲಿ ತನ್ನದೇ ಆದ ಪೇಜ್‍ ಇಟ್ಟುಕೊಂಡಿದ್ದಾನೆ. ಪ್ರಕಾಶ್ ಹಾಗೂ ಮಣಿ ಇದನ್ನ ಮೇಂಟೈನ್ ಮಾಡ್ತಿದ್ದಾರೆ. ಜನರು ರಾಣಾನನ್ನ ನೋಡಿ ಫುಲ್ ಫಿದಾ ಆಗಿ ಅವನ ಪೇಜ್‍ಅನ್ನ ಮೆಚ್ಚಿಕೊಂಡಿದ್ದಾರೆ. ಪೊಲೀಸ್‍ ಇಲಾಖೆಯಲ್ಲಿ ಸ್ಪೆಷಲ್‍ ಸರ್ವಿಸ್‍ ರಿಜಿಸ್ಟರ್ ಹಾಗೂ ಫೇಸ್‍ಬುಕ್‍ಅಕೌಂಟ್‍ ಇರೋ ಏಕೈಕ ಡಾಗ್‍ ರಾಣಾ ಅಂದ್ರೆತಪ್ಪಾಗಲಾರದು.

ಇನ್ನೂ ವಿಶೇಷ ಅಂದ್ರೆ ತಕ್ಷಣ ಭಾರತದ ಅರಣ್ಯಇಲಾಖೆಯಲ್ಲಿ ಇರೋ ಏಕೈಕ ಡಾಗ್‍ ಅಂದ್ರೆ ರಾಣಾ ಒಬ್ಬನೆ. ರಾಣಾ ಬಂಡಿಪುರ, ಬಿಳಿಗಿರಿ ರಂಗನ ಬೆಟ್ಟ, ಮಲೆಮಹದೇಶ್ವರ ಅರಣ್ಯಪ್ರದೇಶ, ತಮಿಳುನಾಡು ಹಾಗೂ ಕೇರಳದ ಅರಣ್ಯ ಪ್ರದೇಶದಲ್ಲಿಯೂ ಕೆಲಸ ನಿರ್ವಹಿಸುತ್ತಾನೆ. ಇಷ್ಟೆಲ್ಲ ಅಧಿಕಾರ ನೀಡಿರೋ ರಾಣಾನಿಗಾಗಿ ಇಲಾಖೆಯಿಂದ ಸ್ಪೆಷಲ್‍ ಜೀಪ್‍ ಅನ್ನ ನೀಡಲಾಗಿದೆ. ಪ್ರತಿನಿತ್ಯ ರಾಣಾತನ್ನ ಕೆಲಸಕ್ಕೆ ಹೊರಡೋದು ಇದೇ ಜೀಪ್​​ನಲ್ಲಿ. ಇನ್ನೂರಾಣಾನಿಗಾಗಿ ಇಲಾಖೆ ಒಂದು ತಿಂಗಳಿಗೆ 8 ಸಾವಿರಖರ್ಚು ಮಾಡುತ್ತೆ. ಪ್ರತಿನಿತ್ಯ 6 ಗಂಟೆಗೆ ಏಳೋ ರಾಣಾ ಟ್ರೈನಿಂಗ್ ಮುಗಿಸಿ ಫ್ರೆಶ್‍ಅಪ್ ಆಗಿ ನಂತ್ರ ತಮ್ಮ ಕೆಲಸವನ್ನ ಸ್ಟಾರ್ಟ್ ಮಾಡುತ್ತಾನೆ. ವಿಶ್ವವನ್ಯ ಜೀವಿ ನಿಧಿಯಲ್ಲಿ ರಾಣಾನಿಗೆ ತರಬೇತಿ ನೀಡಲಾಗ್ತಿದೆ. ಒಟ್ಟಾರೆ ರಾಣಾ ಸದ್ಯ ಅರಣ್ಯ ಸಂಪತ್ತನ್ನರಕ್ಷಣೆ ಮಾಡೋದಕ್ಕಾಗಿ ಪಣತೊಟ್ಟುನಿಂತಿದ್ದಾನೆ.