ರಜಾ ದಿನಗಳಿಗೆ ಸಿಂಪಲ್​ ಆಗಿ ಪ್ಲಾನ್​ ಮಾಡಿ...

ವಿಸ್ಮಯ

0

ಇನ್ನೇನು ಶಾಲಾ ಕಾಲೇಜು ಮುಗಿದು ಬೇಸಿಗೆ ರಜಾ ಆರಂಭವಾಗುತ್ತದೆ. ಈ ಬಾರಿಯ ಬೇಸಿಗೆ ರಜಾದಲ್ಲಿ ಎಲ್ಲಿಗಪ್ಪ ಹೋಗುದು ಅನ್ನೋದು? ಪೋಷಕರ ಹಾಗೂ ಮಕ್ಕಳ ಯೋಚನೆ ಆಗಿರುತ್ತದೆ. ಮಕ್ಕಳಿಗೆ ಆಟವಾಡಿದಂತೆ ಇರಬೇಕು ಜೊತೆಗೆ ಅವರ ಮೈಂಡ್​​ಗೂ ಸ್ವಲ್ಪ ಚುರುಕು ಬರಬೇಕು ಅನ್ನೋದು ಪೋಷಕರ ಆಸೆ. ಇನ್ನು ಈಗೀಗ ಮಕ್ಕಳು ಹೆಚ್ಚಾಗಿ ಶಿಬಿರಗಳಿಗೆ ಸೇರಿ ಅಲ್ಲೂ ಅದೇ ಪಾಠಗಳ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾರೆ. ಇವರಿಗಾಗಿ ಬೆಂಗಳೂರಿನಲ್ಲಿ ಕೆಲ ಮೈಂಡ್ ಗೇಮ್ಸ್ ಗಳು, ರಿಲ್ಯಾಕ್ಸ್ ಗೇಮ್ ಗಳು ಇವೆ. 

ಸಿಲಿಕಾನ್ ಸಿಟಿ ಬೆಂಗಳೂರು ಆಗಾಗ ಬದಲಾಗುತ್ತಲೇ ಇರುತ್ತೆ. ಹೊಸತನಕ್ಕೆ ಹೆಸರುವಾಸಿಯಾಗಿರೋ ಬೆಂಗಳೂರು ಹೊಸದೊಂದು ವಿಭಿನ್ನವಾದ ಅಡ್ವೆಂಚರ್ ಗೇಮ್ಸ್ ಗಳ ತಾಣವಾಗಿಯೂ ಬದಲಾಗಿದೆ. ಎಕ್ಸಾಂ ಮುಗಿಸಿರೋ ಮಕ್ಕಳ ತಲೆಯಲ್ಲಿ, ಈ ಬಾರಿ ನಾವು ನೋಡದೆ ಉಳಿದ ಜಾಗಗಳು, ಆಡದೇ ಉಳಿದ ಆಟಗಳು ಎಷ್ಟಿವೆ ಅನ್ನೋ ಯೋಚನೆ ಕಾಡುತ್ತಾ ಇರುತ್ತೆ.. ಅದಕ್ಕಾಗಿ ಯುವರ್ ಸ್ಟೋರಿ ನಿಮಗೆ ಬೆಂಗಳೂರಿನಲ್ಲಿರೋ ಕೆಲ ಪ್ರಮುಖ ಅಡ್ವೆಂಚರಸ್​​ ತಾಣವನ್ನು ಪರಿಚಯಿಸುತ್ತಿದೆ.

ಬೆಂಗಳೂರಿನ ಹೃದಯ ಭಾಗವಾಗಿರೋದು ಇಂದಿರಾನಗರ. ಎಚ್ಎಎಲ್ ಎರಡನೇ ಹಂತದಲ್ಲಿ ಲೇಸರ್ ಕ್ಯಾಸಲ್ ಇದೆ. ಇಲ್ಲಿ 6 ವರ್ಷಕ್ಕಿಂತ ಮೇಲ್ಪಟ್ಟು 60 ವರ್ಷದ ಒಳಗಿನ ಯಾರು ಬೇಕಾದರೂ ಹೋಗಿ ಆಟ ಆಡಿ ಬರಬಹುದಾದ ಸೂಪರ್ ಗೇಮ್ ಸ್ಪಾಟ್. ಲೇಸರ್ ಗನ್ ಹಿಡಿದು ಆಟ ಖುಷಿಪಡಬಹುದು.

ಮತ್ತೊಂದು ಬೆಂಗಳೂರಿನ ಕೋರಮಂಗಲದಲ್ಲಿ ಬ್ರೇಕ್ ಔಟ್ ಗೇಮ್ ಇದೆ. ಜೈಲಿನಿಂದ ಎಸ್ಕೇಪ್ ಆಗೋ ಸಿನಿಮಾಗಳನ್ನು ನೋಡಿರುತ್ತೀರಿ. ಅದೇ ಥರದ ಗೇಮ್ ಅನ್ನು ಇಲ್ಲಿ ಆಡಬಹುದು. ಯೋಚನೆ ಮಾಡಿ ಆಡಬೇಕಾದ ಆಟ ಇದು..!

ಹಾಗೇ ಡರ್ಟ್ ಮೇನಿಯಾ ಗೇಮ್ .  ಇದರ ಬಗ್ಗೆ ಜಾಸ್ತಿ ಹೇಳಬೇಕಿಲ್ಲ. ಕ್ವಾಡ್ ಬೈಕ್ ಓಡಿಸುವವರು ಇಲ್ಲಿ ಹೋಗಬಹುದು. ಮಾಮುಲಿ ಬೈಕ್ ಓಡಿಸಿ ಬೋರ್ ಆಗಿದ್ದರೆ ಟ್ರೈ ಮಾಡಿ.

ಎಸ್ಕೇಪ್ ರೂಮ್. ಇದು ಮಕ್ಕಳ ಮೆದುಳಿಗೆ ಕೆಲಸ ಕೊಡುವ ಗೇಮ್ ಸ್ಪಾಟ್. ಜೊತೆಗೆ ದೊಡ್ಡವರ ಗೇಮ್ ಇದಾಗಿದ್ದು, ಅವ್ರ ಮೆದುಳಿಗೆ ಕೆಲಸ ಕೊಡುವ ಮತ್ತೂಂದು ಗೇಮ್ ಸ್ಪಾಟ್ ಇದು. ತುಂಬಾ ಯೋಚನೆ ಮಾಡಿ ಗೇಮ್ನಲ್ಲಿ ಗೆಲ್ಲಬಹುದು.

ರಿಡಲ್ ರೂಮ್. ಇದರ ಹೆಸರೇ ವಿಭಿನ್ನವಾಗಿ ಇದೆ. ಆದ್ರೂ ಈ ಗೇಮ್ವೊಂದು ಡಿಟೆಕ್ಟಿವ್ ಕತೆಗಳನ್ನು ಓದಿರಬಹುದು. ಡಿಟೆಕ್ಟಿವ್ ಸಮಸ್ಯೆ ಬಿಡಿಸೋ ಥರ ನೀವು ಆಟ ಆಡಬಹುದು. ಇದು ಕೂಡ ಶಾಪಿಂಗ್ ಸೆಂಟರ್​​ಗೆ ಫೇಮಸ್ ಆಗಿರೋ ಕೋರಮಂಗಲದಲ್ಲಿ ಇದೆ.

ಇನ್ನು ಸಾಕಷ್ಟು ಮಜಾ ಕೊಡುವ ಥ್ರಿಲ್ಲಿಂಗ್​​ ಅನಿಸುವುದು, ರೇಸ್ ವೇ ಮೋಟಾರ್ ಸ್ಪೋರ್ಟ್ಸ್. ಫಾರ್ಮುಲಾ ಒನ್ ರೇಸ್ ನೋಡಿರುವವರಿಗೆ, ಅಂಥದೇ ಕಾರ್ ಓಡಿಸುವ ಆಸೆ ಇರುವವರು ಇಲ್ಲಿ ಹೋಗಿ ಕಾರ್ ಓಡಿಸಬಹುದು. ಪರೀಕ್ಷೆ ಮುಗಿಯುತ್ತಿದಂತೆ ನಿಮ್ಮ ಫ್ರೆಂಡ್ಸ್ ಜೊತೆ ಈ ಅಡ್ವೆಂಚರ್ ಗೇಮ್ಸ್ ಗಳನ್ನು ಆಡಿಬನ್ನಿ... ಆಲ್​ ದಿ ಬೆಸ್ಟ್​​.. ಎಂಜಾಯ್​ ಮಾಡಿ..

ಇದನ್ನು ಓದಿ:

1. ಕ್ಯಾನ್ಸರ್ ಪತ್ತೆಗೆ ನ್ಯಾನೋ ಚಿಪ್..! 

2. ವರ್ತಕರ ಸಮಸ್ಯೆಗೆ ಪರಿಹಾರ ಒದಗಿಸಿಲಿದೆ ರೋಡ್ ರನ್ನರ್

3. ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿದೆ ಮಣ್ಣಿನ ಹೂಜಿಗೆ ಡಿಮ್ಯಾಂಡ್